ವಿಭಾ*

ಟ್ರೋಲ್ ಆಗೋದಿಕ್ಕೂ ಪುಣ್ಯ ಮಾಡಿರಬೇಕು ಎಂದು ಸಿನಿಮಾದವರು ತಮಾಷೆ ಮಾಡೋದುಂಟು..ಟ್ರೋಲ್ ಪೇಜ್ ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಒಂದೊಂದ್ಸಲ ಟ್ರೋಲ್ಗಳು ನಗಿಸುವುದುಂಟು.. ಇತ್ತೀಚೆಗೆ ಚೈತ್ರಾ ಆಚಾರ್ ಒಂದು ಫೋಟೋ ಸಖತ್ ಟ್ರೋಲ್ ಆಯಿತು. ಆಕೆಯ ಓವರ್ ಎಕ್ಸ್ ಪೋಸ್ ಫೋಟೋ ಸೋಷಿಯಲ್ ಮೀಡಿಯಾಗೆ ಆಹಾರವಾಯಿತು.. ಚೈತ್ರಾ ಇಂಥವುದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೆಯೇ ತಿರುವುತ್ತರ ಕೊಡಬಲ್ಲಳು..ನಾನು ನನ್ನಷ್ಟಕ್ಕೆ ಡ್ರೆಸ್ ತೊಡುತ್ತೇನೆ.. ಅದು ನನ್ನಿಷ್ಟ.. ತಂಟೆಗೆ ಬಂದರೆ ಹೇಗೆ ಹ್ಯಾಂಡಲ್ ಮಾಡಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ ಎಂದು ಆಂಗ್ಲ ದೈನಿಕವೊಂದಕ್ಕೆ ಸಂದರ್ಶನ ಮೂಲಕ ಬಿಸಿ ಮುಟ್ಟಿಸಿದ್ದಾಳೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ