ಬಹಳ ದಿನಗಳ ನಂತರ ನುಸ್ರತ್‌ ಭರೂಜಾ `ಅಕೇಲಿ’ ಚಿತ್ರದಲ್ಲಿ ಕಾಣಿಸಿದ್ದಾಳೆ. ಟ್ರೇಲರ್‌ ಅಂತೂ ಪವರ್‌ ಫುಲ್! ಆದರೆ ಈ ಚಿತ್ರದಲ್ಲಿ ಅದೆಷ್ಟು ದಮ್ ಇದೆಯೋ ಬಿಡುಗಡೆ ನಂತರ ಗೊತ್ತಾಗುತ್ತೆ. ಇರಲಿ,  ನುಸ್ರತ್‌ ಳ ವಿಚಾರ ಗಮನಿಸಿ. ಬೊಹ್ರಾ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ನುಸ್ರತ್‌ ತನ್ನ ಕೆರಿಯರ್‌ ನ್ನು ಟಿವಿಯಿಂದ ಆರಂಭಿಸಿದಳು. ಆದರೆ ಆಕೆಗೆ ಐಡೆಂಟಿಟಿ ಸಿಕ್ಕಿದ್ದು `ಲವ್, ಸೆಕ್ಸ್ ಧೋಕಾ’ ಚಿತ್ರದಿಂದ. ನಂತರ `ಪ್ಯಾರ್‌ ಕಾ ಪಂಚ್‌ ನಾಮಾ, ಸೋನೂ ಕೀ ಟಿಟ್ಟು ಕೇ ಸ್ವೀಟಿ, ಡ್ರೀಂ ಗರ್ಲ್’ ಚಿತ್ರಗಳಲ್ಲಿ ಇವಳ ನಟನೆ ಗಮನ ಸೆಳೆಯಿತು. ತಾನೀಗ ಕೇವಲ ನಾಯಕಿ ಪಾತ್ರ ಮಾತ್ರ ಮಾಡುವುದು ಎಂದು ಡಿಮ್ಯಾಂಡಿಂಗ್‌ ಮಟ್ಟಕ್ಕೆ ಬೆಳೆದಿರು ಈಕೆ, ತನ್ನ ಸಮಕಾಲೀನರನ್ನು ಎಂದೋ ಹಿಂದಿಕ್ಕಿದ್ದಾಳೆ. ಇದು ಇವಳನ್ನು ಬೆಳೆಸುತ್ತದೋ, ಇಲ್ಲವೋ ಈಗಲೇ ಹೇಳಲಾಗದು. ಆದರೆ ಇವಳ ಆತ್ಮವಿಶ್ವಾಸ ಮೆಚ್ಚತಕ್ಕದ್ದು!

1692191757003

ನನಗೂ ಒಳ್ಳೆ ಕಾಲ ಬರಲಿದೆ!

ಧರ್ಮೇಂದ್ರ ಮಕ್ಕಳು ವಾಪಸ್ಸು ಬಾಲಿವುಡ್‌ ಗೆ ಬಂದಿದ್ದಾಯಿತು, ಶಾರೂಖ್‌ ಖಾನ್‌ ಸಹ ವಾಪಸ್ಸು ಬಂದು ಯಶಸ್ವಿ ಎನಿಸಿದ, ಆದರೆ ಛೋಟಾ ಬಚ್ಚನ್‌ ಈಗಲೂ ಸಂಘರ್ಷದ ಹಾದಿಯಲ್ಲೇ ಇದ್ದಾನೆ! ಅಭಿಷೇಕ್‌ ನ ಹಿಂದಿನ ಚಿತ್ರ `ದಸ್ವೀ’ ಏನೇನೂ ಹೆಸರು ಮಾಡಲಿಲ್ಲ. ಮುಂದಿನ `ಘೂಮರ್‌’ ಚಿತ್ರದಲ್ಲಿ ಈತ ಕೋಚ್‌ ಆಗಲಿದ್ದಾನೆ. ಈತನ ಜೊತೆಗೆ ಸೈಯಾಮಿ ಖೇರ್‌ ಸಹಾ ಇದ್ದಾಳೆ, ಅವಳೂ ಬಹಳ ಹೆಣಗುತ್ತಿದ್ದಾಳೆ. ಈ `ಘೂಮರ್‌’ ಚಿತ್ರವಾದರೂ ಈತನ ಕೈ ಹಿಡಿದು ಮೇಲೆತ್ತುವುದೋ ಇಲ್ಲವೋ…. ಗೊತ್ತಿಲ್ಲ. ಆದರೆ ಈತ ನಿರಾಶಾವಾದಿಯಲ್ಲ. ತನಗೆಂಥ ಸಣ್ಣ ಪಾತ್ರ ದೊರಕಿದರೂ ಬಲು ಪ್ರಾಮಾಣಿಕತೆಯಿಂದ ನಿಭಾಯಿಸುತ್ತಾನೆ. ಮರಳಿ ಯತ್ನ ಮಾಡು… ಎಂಬುದನ್ನು ಈತ ಮರೆತಿಲ್ಲ.

Filmose_feature

ಬಾಲಿವುಡ್ಫ್ಯಾಷನ್ಎಂಬ ಸಂತೆ

ಇಂಡಿಯಾ ಕೋತೂರ್‌ ವೀಕ್‌ ನಲ್ಲಿ ಕೇವಲ ನಟೀಮಣಿಯರ ಫ್ಯಾಷನ್‌ ಮಾತ್ರವಲ್ಲದೆ, ಅನನ್ಯಾಳ ಭಾವಭಂಗಿ, ಸಾರಾಳ ಸರಳತೆ, ದಿಶಾ ವಾಣಿಯವರ ಫಿಗರ್‌, ಶ್ರದ್ಧಾಳ ತುಂಟತನ, ಭೂಮೀಯ ವೈಯಾರ ಇತ್ಯಾದಿಗಳೂ ಮೇಳೈಸಿದ್ದವು. ಈ ಪಾರ್ಟಿ ಗರ್ಲ್ಸ್ ಗೆ ತಮ್ಮ ಹೊಸ ಫ್ಯಾಷನ್‌ ಟ್ರೆಂಡ್‌ ತೋರಿಸಿಕೊಳ್ಳಲು, ಹೊಸ ಹೊಸ ಡ್ರೆಸ್‌ ಗಳ ಐಡಿಯಾಗಳೂ ಚೆನ್ನಾಗಿಯೇ ಹೊಳೆದಿವೆ. ಟೋನ್ಡ್ ಥೈಸ್‌ ಇದ್ದರೆ ಅನನ್ಯಾಳ ಡ್ರೆಸ್‌ ಚೆನ್ನಾಗಿರುತ್ತಿತ್ತು, ಟ್ರೆಡಿಶನ್‌ ಲುಕ್ಸ್ ಹೊಂದಲು ಸಾರಾಳ ಲೆಹಂಗಾ ಚೆನ್ನಾಗಿತ್ತು, ವೆಡ್ಡಿಂಗ್‌ ಸಂಗೀತ್‌ ಪಾರ್ಟಿಯಲ್ಲಿ ಶ್ರದ್ಧಾಳ ಡ್ರೆಸ್‌ ಹೆಚ್ಚು ಸೆಕ್ಸಿ ಆಗಿತ್ತು, ಎಂದು ಎಲ್ಲರೂ ಆಡಿಕೊಂಡರು. ಇಂಥವನ್ನು ನೀವು ಏಕೆ ಟ್ರೈ ಮಾಡಬಾರದು?

OMG_nahi_macha_pai_Gadar

ನೆನೆಸಿದಂತೆ ನಡೆಯಲಿಲ್ಲ

ಸನ್ನಿ ಡಿಯೋಲ್ ನ `ಗದರ್‌’ ಚಿತ್ರದ ಎದುರು ಅಕ್ಷಯ್‌ ಕುಮಾರನ ಮೋಡಿ ಸಂಪೂರ್ಣ ತೋಪಾಯಿತು. ಉತ್ತಮ ಥಿಯೇಟರ್‌ ಅಥವಾ ಪ್ರೇಕ್ಷಕರ ಬೆಂಬಲ ಎರಡೂ ಸಿಗಲಿಲ್ಲ. ಈ ಚಿತ್ರಕ್ಕೆ ಸಿಕ್ಕಿದ ಒಂದೇ ಸಪೋರ್ಟ್‌ ಎಂದರೆ ಉತ್ತಮ ರಿವ್ಯೂ. ಇಂಥ ವಿಮರ್ಶಕರಿಗೆ ಈಗ ಅಕ್ಷಯ್‌ ನ ತಾರಾಬಲ ಕುಂಟುತ್ತಿದೆ ಎಂದು ತಿಳಿಹೇಳುವವರಾರು? ಅವನಿಗೆ ಬೇಕಿರುವುದು ಉತ್ತಮ ಪ್ರೇಕ್ಷಕ ಸಮೂಹವೇ ಹೊರತು ಬಿಟ್ಟಿ ಚಿತ್ರ ನೋಡುವ ವಿಮರ್ಶಕರಲ್ಲ. ಸನ್ನಿ ಡಿಯೋಲ್ ‌ನ ಚಿತ್ರ ಬಿಡುಗಡೆ ಆಗಲಿದೆ ಎಂದು ಗೊತ್ತಿದ್ದರೂ ನಿರ್ಮಾಪಕರೇಕೆ ಅದೇ ದಿನ ಈ ಚಿತ್ರ ರಿಲೀಸ್‌ ಮಾಡಿದರು? ಈಗ ಕರ್ಮ ಅನುಭವಿಸುವುದೊಂದೇ ದಾರಿ. ಚಿತ್ರ ಏನೋ ಚೆನ್ನಾಗಿರಬಹುದು, ಹಾಗೇಂತ ಉತ್ತಮ ಥಿಯೇಟರ್ಸ್‌ ಬೇಡವೇ? ಅದಕ್ಕಾಗಿ ಪ್ರೇಕ್ಷಕರು ಮತ್ತೆ ಮತ್ತೆ 300-400 ಖರ್ಚು ಮಾಡಿಕೊಂಡು ಚಿತ್ರ ನೋಡಲು ಬರ್ತಾರೇನು? ತಾಳಿದನು ಬಾಳಿಯಾನು ಎಂದು ತುಸು ಕಾದಿದ್ದರೆ ಚೆನ್ನಾಗಿರುತ್ತಿತ್ತೇನೋ….

Gun_Se_Niklega_Gulab

ಗನ್ನಿಂದ ಸಿಡಿಯಲಿದೆ ಗುಲಾಬಿ

ರಾಜ್‌ ಕುಮಾರ್‌ ರಾವ್, ದುಲ್ಕರ್‌ ಸಲ್ಮಾನ್‌, ಸತೀಶ್‌ ಕೌಶಿಕ್‌ ರಂಥ ಘಟಾನುಘಟಿಗಳಿಂದ ಕೂಡಿದ ವೆಬ್‌ ಸೀರೀಸ್‌ ‘ಗನ್ಸ್ ಗುಲಾಬ್ಸ್’ ಕಾಮಿಡಿ ಥೀಂ ಆಧರಿಸಿದೆ. ನೆಟ್‌ ಫ್ಲಿಕ್ಸ್ ಈ ಸೀರೀಸ್‌ ಖಂಡಿತಾ ಸಕ್ಸೆಸ್‌ ಆಗಲಿದೆ ಎಂದು ಬೊಬ್ಬೆ ಹೊಡೆಯುತ್ತಿದೆ.  ಏನು ಕರ್ಮವೋ… ಏನೋ…? ಇತ್ತೀಚೆಗೆ OTT ಸಹ ಕುಂಟುತ್ತಾ, ಎಡವತ್ತಾ ಸಾಗುತ್ತಿದೆ, ಹೊಸ ಕಂಟೆಂಟ್‌ ಇಲ್ಲದೆ ಸೊರಗುತ್ತಿದೆ. ಮಹಾನ್‌ ತಾರೆಯರು OTTಗೆ ಬರುವುದು ಮಾಮೂಲಿ ಆಗಿಹೋಗಿದೆ. ಇಂಥ ದೊಡ್ಡ ತಾರೆಯರು ನಟಿಸಿದ ಮೇಲೆ ದೊಡ್ಡ ಬಜೆಟ್‌ ಇಲ್ಲದಿದ್ದರೆ ಆದೀತೇ? ಇದರ ಅರ್ಥ, OTT ಮೊದಲು ಧಮಾಕಾ ಮಾಡಿದಂತೆ, ಈಗ ದೊಡ್ಡ ಮಟ್ಟದಲ್ಲಿ ಮೆರೆಯುತ್ತಿಲ್ಲ. ಕಂಟೆಂಟ್‌, ಲೇಖಕರು, ತಾರೆಯರು…. ಯಾರೂ ಅಗ್ಗ ಅಲ್ಲ! ಹೆಚ್ಚುತ್ತಿರುವ ಬಜೆಟ್‌ ನ ಲೋಡ್‌ ಇದೀಗ ನಿಧಾನವಾಗಿ ಸಬ್‌ ಸ್ಕ್ರೈಬರ್ಸ್‌ ಹೇಗಿರುತ್ತಿದೆ. ಹಾಗಿರುವಾಗ ನೀವು ಉತ್ತಮ, ಜನಪ್ರಿಯ ಕಂಟೆಂಟ್‌ ಹುಡುಕುತ್ತಿದ್ದೀರಾದರೆ, ಪತ್ರಿಕೆಗಳಿಗೆ ಮೊರೆ ಹೋಗಿ. ಅಂತೂ ಖಂಡಿತಾ ಇಷ್ಟು ದುಬಾರಿಯಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ