ಇಂಡಿಗೋ ಏರ್ ಇಂಡಿಯಾನವರು 500-500 ಏರ್ ಕ್ರಾಫ್ಟ್ ಖರೀದಿಸಿದ ಸುದ್ದಿ, ಇದು ಸರ್ಕಾರದ ಸಾಧನೆ ಎಂಬಂತೆ ಇಡೀ ದೇಶದಲ್ಲಿ ಡಂಗೂರ ಸಾರಿದಂತಿದೆ. ದೇಶದಲ್ಲಿ ಏರ್ ಟ್ರಾಫಿಕ್ ಹೆಚ್ಚುತ್ತಿದೆಯಾದರೆ ಬಸ್ಸು, ರೈಲು ಮಾರ್ಗದ ಪ್ರಯಾಣ ಈಗಲೂ ದುಬಾರಿಯಾಗಿದ್ದು, ಹೆಚ್ಚು ಸಮಯಾವಕಾಶ ಕೇಳುವಂಥದ್ದು. ಯಾರ ಬಳಿ ಹಣವಿದೆಯೋ ಅವರು ಪುರ್ರೆಂದು ಗಗನದಲಿ ಹಾರುತ್ತಾರೆ.
ಏರ್ ಪೋರ್ಟ್‌ಏರ್ ಜರ್ನಿ ಇದೀಗ ಲಗ್ಶುರಿ ಅಲ್ಲ, ನಮ್ಮಂಥ ದೊಡ್ಡ ದೇಶಕ್ಕೆ ಅನಿವಾರ್ಯ ಆಗಿದೆ.
ಕೆಲವು ದಿನಗಳ ರೈಲು ಪ್ರಯಾಣ, ಹಲವು ಗಂಟೆಗಳಲ್ಲಿ ಮುಗಿಯಬಹುದಾದರೆ, ಹೆಚ್ಚುವರಿ ಹಣ ನೀಡಲೇಬೇಕು, ಅದು ಹೆಚ್ಚು ಎನಿಸದು. ದೊಡ್ಡ ದೇಶಗಳಲ್ಲಿ ಜನ ಅಲ್ಲಿಂದ ಇಲ್ಲಿಗೆ ಸದಾ ವಿಮಾನದಲ್ಲೇ ಓಡಾಡುವುದು ಮಾಮೂಲಿ. ನೌಕರಿ, ವ್ಯಾಪಾರದ ಕಾರಣ ಜನ ಹೀಗೆ ಹೆಚ್ಚು ಮೊಬೈಲ್ ಆಗಿ ಪ್ರಯಾಣಿಸುವುದು ಸಾಮಾನ್ಯವಾಗಿದೆ.
ಇದೀಗ ಏರ್ ಲೈನ್ಸ್ ಸಂಪೂರ್ಣವಾಗಿ ಖಾಸಗೀಕರಣಗೊಂಡಿದೆ. ಎಲ್ಲಾ ಏರ್ ಕ್ರಾಫ್ಟ್ಸ್, ಖಾಸಗಿಯವರ ಕೈವಶ. ಏರ್ ಪೋರ್ಟ್ ಗಳೂ ಈಗ ಖಾಸಗಿ ಗುತ್ತಿಗೆದಾರರದಾಗಿದೆ. ಖಾಸಗಿ ಆಯ್ತು ಎಂದ ಮಾತ್ರಕ್ಕೆ ಪೈಪೋಟಿ ಕಾರಣ ಪ್ರಯಾಣಿಕರಿಗೆ ಲಾಭ ಎಂದೇನಲ್ಲ. ಗ್ರಾಹಕರು ತಮ್ಮ ಬಳಿಯೇ ಬರುತ್ತಿದ್ದಾರೆ ಎಂದು ಪ್ರತಿಯೊಬ್ಬ ಏರ್ ಲೈನ್ಸ್ ಗೂ ಗೊತ್ತಿದೆ. ಹೀಗಾಗಿ ಖಾಸಗಿಯವರ ಸೇವೆಗಳು ಸರ್ಕಾರಿ ಸೇವೆಗಿಂತ ಹೀನಾಯ ಆಗತೊಡಗಿವೆ!
ಸರ್ಕಾರ ಕಾನೂನು ರಚಿಸಿ, ಪ್ರತಿ ಪ್ರಾಡಕ್ಟ್ ಗೂ ಒಂದು ನಿಗದಿಪಡಿಸಿದೆ. ಆದರೆ ವಿಮಾನ ಪ್ರಯಾಣದ ಟಿಕೆಟ್ ಗೆ ಅಂಥದ್ದೇನಿಲ್ಲ. ಹೀಗಾಗಿ ಈ ಖಾಸಗಿ ಏರ್ ಲೈನ್ಸ್ ಆಡಿದ್ದೇ ಆಟವಾಗಿ, ಈ ಭೇದಭಾವ ಏಕಪ್ರಕಾರವಾಗಿದೆ. ಕಾರ್ಟೆವ್ ಮಾಡಿಕೊಂಡು ಅಂದ್ರೆ, 45 ಏರ್ ಲೈನ್ಸ್ ಕೂಡಿಕೊಂಡು, ಯಾವುದೇ ಸೆಕ್ಟರ್ ನ್ನು ದುಬಾರಿ ಮಾಡುತ್ತವೆ. ಬೆಲೆ 20% ನಿಂದ 100% ಏರಿಸಬಹುದು. ಕನಿಷ್ಠ ಚಲಾವಣೆಯ ಸೆಕ್ಟರ್ ನ್ನು ಕ್ಯಾನ್ಸಲ್ ಮಾಡುವುದೂ ಸುಲಭ ಸಾಧ್ಯ.
ಈಗ ಏರ್ ಲೈನ್ಸ್ ನವರಿಗೆಂದು ಯಾವ ಫಿಕ್ಸ್ಡ್ ಟೈಂಟೇಬಲ್ ಸಹ ಇಲ್ಲ. ಒಂದು ಏರ್ ಲೈನ್ಸ್ ಒಂದು ಸೆಕ್ಟರ್ ನಲ್ಲಿ 1 ದಿನಕ್ಕೆ 5 ಸಲ ಹಾರಾಟ ನಡೆಸಬಹುದು, ಮಾರನೇ ದಿನ ಎರಡೇ ಸಹ! ಇದೀಗ ಬುಕಿಂಗ್ ಗಳು ವೆಬ್ ಸೈಟ್ ನಲ್ಲಿ ಆಗುವುದರಿಂದ, ಗ್ರಾಹಕರಿಗೆ ಯಾವ ಫ್ಲೈಟ್ ಕ್ಯಾನ್ಸಲ್ ಆಗಿದೆ ಎಂದು ಗೊತ್ತೇ ಆಗುವುದಿಲ್ಲ.
500-500 ಏರ್ ಕ್ರಾಫ್ಟ್ ಖರೀದಿಸುವ ಉದ್ದೇಶ, ಹೆಚ್ಚು ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣಿಸಬಹುದು ಅಂತ. ಆದರೆ ಗ್ರಾಹಕರು ಅದಕ್ಕಾಗಿ ದುಬಾರಿ ಆಹಾರ, ಕುಡಿಯುವ ನೀರು ಖರೀದಿಸ ಬೇಕಾಗುತ್ತದೆ. ಸೆಕ್ಯುರಿಟಿ ಕಾರಣ, ಹೊರಗಿನ ನೀರಿನ ಬಾಟಲಿ ಒಳಗೆ ಕೊಂಡೊಯ್ಯುವಂತಿಲ್ಲ, ಹೀಗಾಗಿ ಒಳಭಾಗದಲ್ಲಿ ನೀರು ಮಾರುವವರಿಗೆ ಸದಾ ಸುಗ್ಗಿ! ಇದೇ ತರಹ ಅಲ್ಲಿ ಆಹಾರ ಬಲು ದುಬಾರಿ. ಎಷ್ಟೋ ಕಂಪನಿಗಳು ಇದನ್ನು ಕಡಿಮೆ ಮಾಡುವುದೇ ಇಲ್ಲ, ಏಕೆಂದರೆ ಗ್ರಾಹಕರು ಈ ಕುರಿತಾಗಿ ಬೇಡಿಕೆ ಮುಂದಿಡುವತ್ತಿಲ್ಲ.
ಏರ್ ಪೋರ್ಟ್ ನಿರ್ಮಿಸಿ, ಏರ್ ಲೈನ್ಸ್ ನಿರ್ವಹಿಸುವುದು, ಇದಕ್ಕಾಗಿ ಅನುಮತಿ ಪಡೆಯುವುದು ಒಂದು ಕಷ್ಟದ ಕೆಲಸ! ಒಳಗೊಳಗೇ ಸರ್ಕಾರ ಇದನ್ನು ಕಷ್ಟಕರವಾಗಿಯೇ ಇರಲಿ ಎನ್ನುತ್ತದೆ. ಆಗ ಕೇವಲ ವಿಶೇಷ ಮಂದಿ ಮಾತ್ರ ಹಾರಾಟ ನಡೆಸಬಹುದು. ಈ ವಿಶೇಷ ಮಂದಿ ಖಂಡಿತಾ ಯಾವುದೇ ದೂರು ನೀಡರು, ಏಕೆಂದರೆ ಇವರ ಬಳಿ ಸಮಯ ಇಲ್ಲ, ಆದರೆ ಖರ್ಚು ಮಾಡಲು ಧಾರಾಳ ಹಣ ಇದೆ. ಹೀಗಾಗಿ ಮಾಮೂಲಿ ಜನ ಮತ್ತಷ್ಟು ಬಡವರಾಗುತ್ತಿದ್ದಾರೆ, ಅದೇ ಸಂದರ್ಭದಲ್ಲಿ ಇಲ್ಲಿ ದುಬಾರಿ ಡೀಲಿಂಗ್ಸ್ ನಡೆಯುತ್ತದೆ.
ನಮ್ಮ ದೇಶದಲ್ಲಿ ಬಡವ ಬಲ್ಲಿದರ ವ್ಯತ್ಯಾಸ ಎಷ್ಟು ಹೆಚ್ಚುತ್ತಿದೆ ಅಂದ್ರೆ, ಅದು ಒಂದು ಹೊಸ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಗೆ ದಾರಿ ಮಾಡುತ್ತಿದೆ. ಈಗ ಉನ್ನತ ಜಾತಿಯರಲ್ಲಿ, ಅತಿ ಶ್ರೀಮಂತರು ಹಾಗೂ ಸಾಧಾರಣ ಶ್ರೀಮಂತರು ಎಂಬ ಉಪಜಾತಿಗಳಾಗುತ್ತಿವೆ. ವರ್ಣ ವ್ಯವಸ್ಥೆಯ ಕಾರಣ ಈ 500-500 ಏರ್ ಕ್ರಾಫ್ಟ್ಸ್ ಖರೀದಿ ಕುರಿತು ಖುಷಿ ಹೆಚ್ಚುತ್ತಿದ್ದರೆ, ಅಸಲಿಗೆ ಪೌರಾಣಿಕ ವ್ಯವಸ್ಥೆ ಮಜಬೂತಾಗುತ್ತಿದೆ ಎನ್ನಬಹುದು.
ಹೆಂಗಸರಿಗಾಗಿ ಅತ್ಯಗತ್ಯ ಸೇವೆಗಳು
ದೇಶವಿಡೀ ಆಟೋ ಬಳಸುವವರಿಗೆ ಸದಾ ಕಾಡು ಒಂದು ಕಷ್ಟವೆಂದರೆ, ಗ್ರಾಹಕರು ಹೋಗುವ ಕಡೆ ಆಟೋದವರು ಬರಲು ಸಿದ್ಧರಿರುವುದಿಲ್ಲ. ಆಟೋಗೆ ಮೀಟರ್ ಇರುವುದೇ ಇಲ್ಲ ಅಥವಾ ಹೆವಿ ಚಾರ್ಜ್ ಹೇರುತ್ತಾರೆ. ಇದಕ್ಕಾಗಿ ಸದಾ ಆಟೋ ಚಾಲಕರನ್ನು ದೋಷಿಗಳೆನ್ನಲಾಗುತ್ತದೆ. ಅವರ ಸೇವೆಗೆ ಮಹತ್ವ ನೀಡದೆ, ಅವರನ್ನು ಮನದಲ್ಲೇ ಬೈದುಕೊಳ್ಳುತ್ತಾರೆ.
ನಗರಗಳನ್ನು ಸದಾ ಚಟುವಟಿಕೆಯಿಂದಿಡುವ ಈ ಸೇವೆ ನೀಡುವವರು ಅಪ್ರಾಮಾಣಿಕರಾದರೆ, ಇದರ ಸಂಪೂರ್ಣ ಹೊರೆ ಸರ್ಕಾರದ್ದು. ನಗರದಲ್ಲಿ ಯಾವ ಆಟೋ ಕೂಡ ಸರ್ಕಾರದ ಪರ್ಮಿಟ್ ಇಲ್ಲದೆ ನಡೆಯದು. ಇದನ್ನು ಪ್ರತಿ ವರ್ಷ ನವೀಕರಿಸಬೇಕು. ಯಾವ ಕಾರಣಕ್ಕೆ ಸುಪ್ರೀಂ ಕೋರ್ಟ್ ನಗರಗಳಲ್ಲಿ ಆಟೋ ಸಂಖ್ಯೆಗೆ ಕಡಿವಾಣ ಹಾಕಿದೆಯೋ ಗೊತ್ತಿಲ್ಲ, ದೆಹಲಿಯಲ್ಲಂತೂ ಅದು 1 ಲಕ್ಷಕ್ಕೆ ಮಾತ್ರ ಸೀಮಿತ. ಪರ್ಮಿಟ್ ಇಶ್ಯು ಮಾಡುವವರಿಗೆ ಇದು ನೇರ ಮಾರ್ಗ. ಪ್ರತಿ ವರ್ಷ ರಿನ್ಯೂಯೆಲ್ ಒಂದು ವರದಾನವೇ ಸರಿ. ಇದರಿಂದ ಅಪ್ರಾಮಾಣಿಕವಾಗಿ ಧಾರಾಳ ಹಣದ ಲೂಟಿ ಆಗುತ್ತದೆ.
ಈ ಪರ್ಮಿಟ್ ಪಡೆಯುವುದಕ್ಕಾಗಿ ಧಾರಾಳ ಹಣ ಖರ್ಚು ಮಾಡಬೇಕು. ನಗರ ಬೆಳೆಯುತ್ತಿದೆ, ಆದರೆ ಪರ್ಮಿಟ್ ಗಳ ಸಂಖ್ಯೆ ಅಲ್ಲ. ಹೀಗಾಗಿ ಹಳೆಯ ಪರ್ಮಿಟ್ ಗಳ ವ್ಯಾಪಾರ ಜೋರಾಗಿರುತ್ತದೆ. ಅಕಸ್ಮಾತ್ ಯಾರಾದರೂ ಪರ್ಮಿಟ್ ಹೋಲ್ಡರ್ ತೀರಿಕೊಂಡರೆ, ಅವರ ಪರ್ಮಿಟ್ ನ್ನು ಇನ್ನೊಬ್ಬರ ಹೆಸರಿಗೆ ವರ್ಗಾಯಿಸುವುದಕ್ಕೆ 15-20 ಲಕ್ಷ ಖರ್ಚಾದೀತು. ಇದರಲ್ಲಿ ಆತನ ಮನೆಯವರಿಗೆ ಹೆಚ್ಚೆಂದರೆ 10 ಸಾವಿರ ಪರಿಹಾರ ಧನ ಸಿಗಬಹುದು.
ಊಬರ್, ಓಲಾಗಳು ಈ ನಿಯಮ ಮುರಿದು, ಟೆಕ್ನಾಲಜಿ ಬಲದಿಂದ ಟ್ಯಾಕ್ಸಿಗಳನ್ನೇನೋ ರಸ್ತೆಗೆ ಇಳಿಸಿದರು. ಆದರೆ ಅವರು ಆಟೋಗಳನ್ನು ಮಾತ್ರ ಹೆಚ್ಚಿಸಲಿಲ್ಲ. ದಿನೇದಿನೇ ಹಿಗ್ಗುತ್ತಿರುವ ಬೆಂಗಳೂರಿನಂಥ ನಗರಗಳಿಗೆ ಅಗತ್ಯವಿರುವ ಇಂಥ ಸೇವೆಗಳಿಗೆ ಸರ್ಕಾರ ಸಬ್ಸಿಡಿ ನೀಡಬೇಕು. ಆದರೆ ಸರ್ಕಾರ ಹಾಗೂ ಅದರ ಸಿಬ್ಬಂದಿ ಇಡೀ ದೇಶದಲ್ಲಿ ಹಣ ಬಾಚಿಕೊಳ್ಳುವುದೇ ಆಗಿದೆ. ಈ ಹಣವನ್ನು ಆಟೋದವರು ಗ್ರಾಹಕರಿಂದ ಸೆಳೆಯುತ್ತಾರೆ, ಸಿಡುಕು, ಸಿಟ್ಟು ಪ್ರದರ್ಶಿಸುತ್ತಾರೆ.
ಇಂಥ ಆಟೋ ಅತಿ ಕೊಳಕು, ಮುರುಕಲು, ದುರ್ನಾತ ಬೀರುತ್ತಿದ್ದರೆ ಅದಕ್ಕೆ ಕಾರಣ, ಸರ್ಕಾರಿ ಅಧಿಕಾರಿಯಿಂದ ಸ್ಲಂ ಏರಿಯಾದ ಟ್ರಾಫಿಕ್ ಪೊಲೀಸ್ ವರೆಗೂ, ಎಲ್ಲರೂ ನಿಯಮಗಳ ಹೆಸರಲ್ಲಿ ಇವರಿಂದ ಲಂಚದ ಹಣ ಕೀಳುತ್ತಾರೆ. ಹೀಗಾಗಿ ಆಟೋದವರ ಬಳಿ ಹಣ ಉಳಿಯಬೇಕು ಹೇಗೆ?
ಆಟೋ ಡ್ರೈವಿಂಗ್ ನಲ್ಲಿ ಲೆಕ್ಕದ ಪ್ರಕಾರ 50% ಹೆಂಗಸರಿಗೂ ಬರಬೇಕು. ಆಗ ಮಹಿಳಾ ಪ್ರಯಾಣಿಕರು ಅವರೊಂದಿಗೆ ನಿರಾತಂಕವಾಗಿ ಪ್ರಯಾಣ ಮಾಡಬಹುದು. ಇಂದು ಹೆಂಗಸರಿಗೂ ಈ ಉದ್ಯಮ ಸಹಜ, ಸುಲಭ. ಇದರಲ್ಲಿ ತಮ್ಮಿಷ್ಟದಂತೆ ಅವರು ಗಂಟೆಗಟ್ಟಲೆ ಕೆಲಸ ಮಾಡಬಹುದು. ಇವರುಗಳೂ ಸಹ ರಸ್ತೆಯ ಇಕ್ಕಟ್ಟು, ಟ್ರಾಫಿಕ್ ಕಿರಿಕಿರಿ ಎದುರಿಸುತ್ತಾ ಟ್ರಾನ್ಸ್ ಪೋರ್ಟ್ ಅಥಾರಿಟಿಯ ಮಾಫಿಯಾದ ಸಂಕೋಲೆಯಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಾರೆ. ಹೀಗಾಗಿ ಅತಿ ಕನಿಷ್ಠ ಹೆಂಗಸರು ಈ ದಂಧೆಗೆ ಇಳಿಯುತ್ತಾರೆ. ಎಲ್ಲೋ ಒಮ್ಮೊಮ್ಮೆ 10-20 ಹೆಂಗಸರಿಗೆ ಪರ್ಮಿಟ್ ಸಿಗಬಹುದು, ಅದೂ ಎಷ್ಟೋ ಸಲ ಮಾರಾಟವಾಗಿ ಹೋಗುತ್ತದೆ.
ಆಟೋದ ಸೇವೆ ಸಾಮಾನ್ಯ ಹೆಂಗಸರಿಗೆ ಅತಿ ಅಗತ್ಯವಾದುದು. ಅದು ಮನೆಯ ಉಸಿರುಗಟ್ಟು ವಾತಾವರಣದಿಂದ ತುಸು ರಿಲೀಫ್ ನೀಡುತ್ತದೆ. ಆದರೆ ಈ ಸೇಲೆ ಸರಿಹೋಗುವವರೆಗೆ, ನಗರಗಳು ಸುರಕ್ಷಿತವಲ್ಲ. ಆದರೆ ಕರೆಯುವ ಹಸುವಾದ ಈ ಸೇವೆ, ಸರ್ಕಾರಿ ಅಧಿಕಾರಿಗಳ ಜೇಬು ತುಂಬಿಸುವುದಕ್ಕಷ್ಟೇ ಮೀಸಲಾಗಿದೆ.
ನಮ್ಮ ಮನೆ ಎಂಬ ಕನಸು
ತಮ್ಮದೇ ಸ್ವಂತ ಮನೆ ಹೊಂದಿರಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಲು ಲಕ್ಷಾಂತರ ಜನ, ಸೊಸೈಟಿ (ಖಾಸಗಿ ಅಪಾರ್ಟ್ ಮೆಂಟ್ಸ್)ಗಳ ಮೂಲಕ ಪಡೆಯುತ್ತಾರೆ. ಇಲ್ಲಿ ಸುರಕ್ಷತೆ, ತಮ್ಮ ಇಚ್ಛೆಯ ಮಂದಿ, ಕೆಲವು ಸಾರ್ವಜನಿಕ ಸೌಲಭ್ಯ, ಸ್ಟೇಟಸ್ ಸಿಗುತ್ತವೆ. ನಗರದ ಹೊರ ಭಾಗದಲ್ಲಿನ ಹೊಲಗದ್ದೆ ಪ್ರದೇಶಗಳೂ ಸೈಟುಗಳಾಗಿ ಮಾರ್ಪಟ್ಟು, ಕಟ್ಟಡಗಳೇಳುತ್ತಿವೆ. ಲೋನ್ ಸೌಲಭ್ಯದಿಂದ ಯುವ ಜೋಡಿ ಇಂಥ ಮನೆಗಳ ಹುಡುಕಾಟದಲ್ಲಿರುತ್ತದೆ. (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ವರದಿ ಪ್ರಕಾರ, 2023ರ ಜನವರಿ ಮಾರ್ಚ್ ವರೆಗೆ ಸುಮಾರು 21.6% ನಷ್ಟು ಮನೆಗಳ ಮಾರಾಟ ಹೆಚ್ಚಿತು. ಹೀಗಾಗಿ ಗೃಹಸಾಲ ಹೆಚ್ಚಾಗಿ 19,76,428 ಕೋಟಿ ದಾಟಿತು.
ಆರ್ಥಿಕ ದೃಷ್ಟಿಯಿಂದ ಇದು ಒಳ್ಳೆ ವಿಚಾರ, ಜನ ತಮ್ಮದೇ ಸ್ವಂತ ಮನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರುಗಳು ಇದನ್ನು ತಮ್ಮ ಉಳಿತಾಯದಿಂದಲ್ಲ, ಸಾಲದಿಂದ ಕೊಳ್ಳುತ್ತಿದ್ದಾರೆ. ಲೋನ್ ಹೆಸರಲ್ಲಿ ಕೊಂಡ ಮನೆ ಅಂದ್ರೆ, ಬ್ಯಾಂಕರ್ ನ್ನು ಸದಾ ತಮ್ಮ ಮನೆಯಲ್ಲಿ 24 ತಾಸು ಅತಿಥಿ ಮಾಡಿಕೊಂಡಂತೆ ಲೆಕ್ಕ. ಆತನ ಮಾಡುವುದೇನೂ ಇಲ್ಲ, ಸದಾ ತಿಂದುಹಾಕಿ, ಗುರಾಯಿಸುವುದಷ್ಟೇ. ಮನೆ ಕೊಡಿಸಿದ ಕಾರಣ ಈ ಬ್ಯಾಂಕರ್ ಮನೆ ಮಾಲೀಕನಿಗಿಂತ ಹೆಚ್ಚಾದ. ಏಕೆಂದರೆ ಒಂದೇ ಒಂದು ಕಂತಿನ ತಡವಾದರೂ, ಪೀನ್ ಇಂಟ್ರೆಸ್ಟ್ ಶುರು! ಇಂಥ ಬ್ಯಾಂಕರ್ ಗಳು ಮಹಾಮಾರಿಯಾಗಿ ಪ್ರಾಣ ಹಿಂಡುತ್ತಾರೆ.
ಸಾಮಾನ್ಯ ಬ್ಯಾಂಕಿನ ಕಡಿಮೆ ಬಡ್ಡಿಯ ಸಾಲವನ್ನು ಕಂತಿನಲ್ಲಿ ತೀರಿಸಲಾಗದಿದ್ದರೆ, ಮಾರ್ಕೆಟ್ ನಿಂದ ಹೆಚ್ಚಿನ ಬಡ್ಡಿಯ ಸಾಲ ಪಡೆದು ಇದನ್ನು ತೀರಿಸಬೇಕಾದೀತು. ಉತ್ತಮ ಮನೆ ಹೊಂದಬೇಕೆಂಬ ಆಸೆ ಬೆಳೆಯುತ್ತಿದ್ದಂತೆ, ಹೆಚ್ಚಿನ ಬಡ್ಡಿ ದರದ ಸಾಲಗಳೂ ಹುಟ್ಟಿಕೊಳ್ಳುತ್ತಿವೆ.
ನಮ್ಮದೇ ಫ್ಲಾಟ್ ಎಂಬುದು ಒಂದು ಉತ್ತಮ ಸೊಸೈಟಿಯಲ್ಲಿ ಸಿಗುವಂತಾಗಲು ದೊಡ್ಡ ಕನಸನ್ನೇ ಕಾಣಬೇಕು. ಇದಕ್ಕಾಗಿ ಸರ್ಕಾರ, ಬಿಲ್ಡರ್, ಪ್ರಾಪರ್ಟಿ ಏಜೆಂಟ್, ಬ್ಯಾಂಕುಗಳು ಸಾಮಾನ್ಯ ಜನರನ್ನು ಲೂಟಿ ಮಾಡುತ್ತವೆ. ಅದರಿಂದಾಗಿ ಈ ಕನಸು ಚೂರಾಗುವುದರಲ್ಲಿ ತಡವಾಗದು. ಎಲ್ಲಾ ನಗರಗಳಲ್ಲೂ ಸಾವಿರಾರು ಕಟ್ಟಡಗಳಲ್ಲಿ ಇದೀಗ ಬೀಗ ಜಡಿದ ಫ್ಲಾಟುಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಇವು ಅಲಾಟ್ ಆಗಿದ್ದರೂ, ಪೂರಾ ಹಣ ವಸೂಲಾಗದೆ, ಅದನ್ನು ಹೊಂದಲು ಅನುಮತಿ ಸಿಗುತ್ತಿಲ್ಲ.
ಸರ್ಕಾರ ರೇರಾ ಎಂಬ ಹೆಸರಿನ ಒಂದು ಸಂಸ್ಥೆ ಸ್ಥಾಪಿಸಿದ್ದು, ಇದು ಬಿಲ್ಡರ್ ಗಳ ಮೇಲೆ ಲಗಾಮು ಹೇರಲು ಇರುವುದಾದರೂ, ಈಗಿದು ಪೊಲೀಸ್ ಠಾಣೆ ಯಾ ಕೋರ್ಟಿನಂತೆ ಆಗಿದೆ. ಇಲ್ಲಿ ದೂರು ಸರಿಪಡಿಸದಿದ್ದರೂ, ವರ್ಷ ವರ್ಷ ಇಲ್ಲಿ ಬುಕ್ ಮಾಡಲಾದ ಫ್ಲಾಟ್ ಗಳ ಬಡ್ಡಿಯಂತೂ ಏರುತ್ತಲೇ ಇರುತ್ತದೆ, ಗ್ರಾಹಕರು ಕಂಗಾಲಾಗಿ ಹೋಗುತ್ತಾರೆ.
ಇಂಥ ಸೊಸೈಟಿಗಳಲ್ಲಿ ವಾಸಿಸಬೇಕೆಂಬ ಕನಸು ನನಸಾಗುವಂಥ ಉತ್ತಮ ಆರ್ಥಿಕ ಸ್ಥಿತಿಯಲ್ಲಿ ನಮ್ಮ ದೇಶ ಇಲ್ಲವೇ ಇಲ್ಲ. ಇನ್ನೂ ಇದು ಬಡವರ ದೇಶವೇ ಹೌದು. ನಮ್ಮ ಪ್ರಧಾನಿ ಅಮೆರಿಕಾಗೆ ಹೋಗಿ, ಕಳೆದ 10 ವರ್ಷಗಳಲ್ಲಿ ನಮ್ಮ ಆರ್ಥಿಕ ವ್ಯವಸ್ಥೆ 10 ರಿಂದ 5ನೇ ಸ್ಥಾನಕ್ಕೆ ಏರಿದೆ ಎಂದು ಕೊಚ್ಚಿಕೊಳ್ಳಬಹುದು, ಆದರೆ ಅಸಲಿ ಸಂಗತಿ ಅಂದ್ರೆ, ತಲಾದಾಯದ ಪ್ರಕಾರ ಪ್ರತಿ ವ್ಯಕ್ತಿ 2015 ರಿಂದ 2022ಕ್ಕೆ 1,600ರ ಡಾಲರ್ ಗಳ ಆದಾಯವಿರುವ ಪ್ರತಿ ವ್ಯಕ್ತಿಯಿಂದ ಕೇವಲ 400 ಡಾಲರ್ ಹೆಚ್ಚಿ, 2000 ಡಾಲರ್ ಆಗಿದೆ. ಇದೇ ರೀತಿ ವಿಯೆಟ್ನಾಂನಂಥ ಹಿಂದುಳಿದ ದೇಶದಲ್ಲಿ 2055 ಡಾಲರ್ ನಿಂದ ಹೆಚ್ಚಾಗಿ 3,025 ಡಾಲರ್ ಹಾಗೂ ಸಿಂಗಪೂರ್ ನಂಥ ಸಮೃದ್ಧ ದೇಶಗಳಲ್ಲಿ 59,112 ಡಾಲರ್ ನಿಂದ ಹೆಚ್ಚಾಗಿ 69,896 ನಷ್ಟು ಡಾಲರ್ ಆಗಿದೆ.
ನಾವೆಲ್ಲರೂ ನಮ್ಮ ಮನೆಯ ಈ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವೇ ಅದೃಷ್ಟವಂತರು ಹೆತ್ತವರ ಆಸ್ತಿ, ರಾಜಕೀಯ ಪುಢಾರಿಗಳ ಬೆನ್ನುಬಿದ್ದು ಹೇಗೋ ಹೋಲೋಯಿನ್ ತುಂಬಿಸಿ ನೆಮ್ಮದಿ ಕಂಡುಕೊಳ್ಳುತ್ತಾರೆ.