ಶ್ರೀದೇವಿ ಮಗಳು ಜಾಹ್ನವಿ ತನ್ನ ಫಿಗರ್ ಪರ್ಫೆಕ್ಷನ್ ಮಾಡಿಸಿಕೊಂಡ ಬಳಿಕ, ಹಿಂದಿಗಿಂತ ಅತಿ ಹೆಚ್ಚು ಸ್ಟೈಲಿಶ್‌ಗ್ಲಾಮರಸ್ ಆಗಿದ್ದಾಳೆ. FBನ ಅಭಿಮಾನಿ ಜಾಹ್ನವಿ, ವಿಭಿನ್ನ ಡ್ರೆಸ್ ಗಳಲ್ಲಿ ತನ್ನ ಬ್ಯೂಟಿ ಫೋಟೋಸ್ ಪ್ರದರ್ಶಿಸುತ್ತಿದ್ದಾಳೆ. ಅವಳ ಇತ್ತೀಚಿನ ಚಿತ್ರಗಳನ್ನು ಗಮನಿಸಿ, ಇವಳ ಅಭಿಮಾನಿಗಳು ಇವಳಿಗೆ ಡೀಪ್ ನೆಕ್ ಡ್ರೆಸೆಸ್ ಸರಿ ಎನ್ನುತ್ತಿದ್ದಾರೆ. ಜಾಹ್ನವಿಯ ಬರಲಿರುವ `ಬಾಲ್’ ಚಿತ್ರ ಕೂಡ ಇವಳ ಡ್ರೆಸ್ ಗಳಷ್ಟು ಚರ್ಚೆಗೆ ಸಿಗಲಿಲ್ಲ. ಈ ಚಿತ್ರದ ಟ್ರೇಲರ್ ನೀವು ಗಮನಿಸಿಲ್ಲವಾದರೆ, ಅಗತ್ಯ ಇಂದೇ ಗಮನಿಸಿ, ಇದರಿಂದ ನಿಮ್ಮ ವೆಡ್ಡಿಂಗ್ ಪಾರ್ಟಿಗೆ ಹೊಸ ಐಡಿಯಾ ಹೊಳೆಯಬಹುದು!
ಕೃತಿಯ ಕೆರಿಯರ್ ಗೆ ಅಪಾಯ
`ಆದಿಪುರುಷ್’ ಚಿತ್ರ ಮಖಾಡೆ ಮಲಗಿದ ನಂತರ ಕೃತಿ ಸೇನನ್ ಳ ಕೆರಿಯರ್ ಪಾತಾಳಕ್ಕಿಳಿದಂತಿದೆ. ಇದಕ್ಕೆ ಮೊದಲು ಇವಳ `ಶಹಜಾದಾ’ `ಭೇಡಿಯಾ’ ಚಿತ್ರಗಳೂ ಸಖತ್ ತೋಪೆದ್ದಿದ್ದವು. ಸುದ್ದಿಗಾರರ ಪ್ರಕಾರ, ಇವಳ ಬಳಿ ಈಗ ಶಾಹಿದ್ ಕಪೂರ್ ಧರ್ಮೇಂದ್ರರಂಥ ಸ್ಟಾರ್ ಕಾಸ್ಟ್ ಇರುವ ಒಂದೇ ಒಂದು ಚಿತ್ರ ಮಾತ್ರ ಬಾಕಿ ಇದೆಯಂತೆ. ಇದು ಬಿಡುಗಡೆ ಆದ ನಂತರ, ಈ ಚಿತ್ರ ಸೆಕ್ಸೆಸ್ ಆದರೆ ಕೃತಿ ಉಳಿಯುತ್ತಾಳೆ, ಇಲ್ಲದಿದ್ದರೆ….. ಬಾಹುಬಲಿ ಪ್ರಭಾಸ್ ಜೊತೆಗೆ ನಾಯಕಿಯಾದೆ ಎಂದು ಮೆರೆಯುತ್ತಿದ್ದವಳಿಗೆ, ತನ್ನ ಕೆರಿಯರ್ ಉಳಿಸಿಕೊಳ್ಳಲು ದಕ್ಷಿಣದ ಚಿತ್ರಗಳ ಐಟಂ ಒಂದೇ ಗತಿ ಆಗಿಬಿಡಬಾರದು!
ಭಗವಾಧಾರಿಗಳ ಭಾವನೆಗಳಿಗೆ ಚ್ಯುತಿ ಬಾರದಿರಲಿ
`ಆದಿಪುರುಷ್’ ಚಿತ್ರದ ನಂತರ, ಇದೀಗ ಸೆನ್ಸಾರ್ ಬೋರ್ಡ್ ಎಷ್ಟೊಂದು ಕಳವಳಕ್ಕೆ ಸಿಲುಕಿದೆ ಎಂದರೆ, ಧರ್ಮಾಧಾರಿತ ಚಿತ್ರಗಳನ್ನು ಮತ್ತೆ ಮತ್ತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪರೀಕ್ಷಿಸುವಂತಾಗಿದೆ. ಪಾಪ, ಇವರೇನು ಮಾಡಿಯಾರು? ಯಾವ ಚಿತ್ರದಲ್ಲಾದರೂ ಧರ್ಮದ ಕುರಿತಾಗಿ ಸತ್ಯ ಸಂಗತಿಗಳಿದ್ದರೆ, ಬಿಡುಗಡೆ ನಂತರ ಭಗವಾಧಾರಿಗಳ ಭಾವನೆಗೆ ಚ್ಯುತಿ ಬಂದರೆ ಶ್ಯಾನೆ ಕಷ್ಟ! ಈ ಸಂದರ್ಭದಲ್ಲಿ ರಿಲೀಸ್ ಆಗಲಿದ್ದು, ಸೆನ್ಸಾರ್ ಇದಕ್ಕೆ ಅಸ್ತು ಅನ್ನದೆ ತಡೆ ಒಡ್ಡಿದೆ. ಈ ಚಿತ್ರದ ಪ್ರತಿ ಫ್ರೇಂ, ಪ್ರತಿ ಸಂಭಾಷಣೆಯನ್ನೂ ಕಾನೂನಿನ ಬೂದುಗಾಜಿನಲ್ಲಿ ಅಳೆಯಲಾಗುತ್ತದೆ, ನಂತರವೇ ನೀಡಲಾಗುತ್ತದೆ. ಅಯ್ಯೋ, ಬಲು ಕಷ್ಟದಿಂದ ಭಗವಾಧಾರಿಗಳು ಜನತೆಯ ಕಣ್ಣಿಗೆ ಧಾರ್ಮಿಕ ಕನ್ನಡಕ ತೊಡಿಸಿದ್ದಾರೆ, ಹಾಗಿರುವಾಗ ಯಾವುದೋ ಚಿತ್ರ ಬಂದು ಇವರ ದಂಧೆಗೆ ಬ್ರೇಕ್ ಹಾಕಬಾರದಷ್ಟೇ!
ಮಾರ್ಕೆಟ್ ಗೆ ಬಂದ ಹೊಸ ಜೋಡಿ
ಅರ್ಜುನ್ ಮಲೈಕಾ, ಕೃತಿ ಪ್ರಭಾಸ್ ನಂತರ ಜನರ ಗಮನ ತಮ್ಮತ್ತ ಸೆಳೆಯುತ್ತಿರುವ ಜೋಡಿ ಅಂದ್ರೆ…. ಆದಿತ್ಯ ರಾಯ್ ಕಪೂರ್‌ಅನನ್ಯಾ ಪಾಂಡೆ. ಸುದ್ದಿಗಾರರು ಸದಾ ಇವರ ಬೆನ್ನುಬಿದ್ದು, ಕಂಡ ಕಂಡ ಪೋಸ್ ಕ್ಯಾಚ್ ಮಾಡುತ್ತಿದ್ದಾರೆ. ಈ ಜೋಡಿ ಸಹ ಹಳೆ ಜೋಡಿಗಳ ಸಕಲು ರೆಕಾರ್ಡ್ ಹಾಡುತ್ತಿದೆ…. ಅಂದ್ರೆ… ಮೊದಲು ನೋ ಕಮೆಂಟ್ಸ್ ಅನ್ನೋದು, ವೀ ಆರ್ ಓನ್ಲಿ ಗುಡ್ ಫ್ರೆಂಡ್ಸ್ ಅನ್ನೋದು, ಕೊನೆಯಲ್ಲಿ ನಂಟು ಗಟ್ಟಿಗೊಳಿಸಿ, ಎಲ್ಲರನ್ನೂ ದಂಗು ಬಡಿಸುವುದು! ಏನೇ ಆಗಲಿ, ಸುದ್ದಿಗಾರರಿಗೆ ನಾವು ಯಾವುದೇ ಮಸಾಲೆ ಸುದ್ದಿ ಕೊಡೋದಿಲ್ಲ ಅಂತಾರೆ ಇರು. ಇವರ ಪ್ರೀತಿ ಪ್ರೇಮ ಟೊಳ್ಳೋ….. ಗಟ್ಟಿಯೋ…. ಕಾಲವೇ ಹೇಳಬೇಕು!
ರಶ್ಮಿಕಾ ಎಲ್ಲಿ ಕಳೆದುಹೋದಳು?
`ಪುಷ್ಪಾ’ ಹಿಂದಿ ವರ್ಷನ್ ನಿಂದ ರಶ್ಮಿಕಾ ಮಂದಣ್ಣ ಹಿಂದಿ ಭಾಷಿಕರ ಏರಿಯಾದಲ್ಲಿ ದಿಢೀರ್ ಎಂದು ಮನೆ ಮಾತಾಗಿದ್ದಳು. ಇದಾಗಿ ಕೆಲವು ಸರಾಸರಿ ಹಿಂದಿ ಚಿತ್ರಗಳಾದ ನಂತರ, ಇವಳ ಹೆಸರು ಯಾರೋ ಠುಸ್ ಪಟಾಕಿ ಆಗುತ್ತಿದೆ. ಕೇವಲ ಉತ್ತರದವರು ಮಾತ್ರ ದಕ್ಷಿಣದ ಚಿತ್ರಗಳಿಗೆ ಮೊರೆಹೋಗುತ್ತಾರೆ ಅಂತಲ್ಲ, ಎಷ್ಟೋ ದಕ್ಷಿಣದವರು ಇಲ್ಲಿ ಉತ್ತರದಲ್ಲಿ ತಮ್ಮ ಬೇಳೆಕಾಳು ಬೇಯಿಸಲು ಯತ್ನಿಸುತ್ತಿರುತ್ತಾರೆ. ರಶ್ಮಿಕಾ ಸಹ ಗಾಳಿ ಬಂದಾಗ ತೂರಿಕೋ ಎಂದು ನೋಡಿದಳು, ಆದರೆ ನೆನೆಸಿದ್ದೆಲ್ಲ ನಡೆಯುವುದುಂಟೇನು? ಸದ್ಯಕ್ಕಂತೂ ಈಕೆ ತೆಲುಗು ಚಿತ್ರಗಳಿಗಷ್ಟೇ ಅಂಟಿ ಉಳಿದಿದ್ದಾಳೆ.
ಸಮಂತಾ ಬ್ರೇಕ್ ಪಡೆಯಲಿದ್ದಾಳಾ?
ತನ್ನ ವೈವಾಹಿಕ ಜೀವನದಿಂದ ಶಾಶ್ವತ ಬ್ರೇಕ್ ಪಡೆದ ಸಮಂತಾ, ಸುದ್ದಿಗಾರರ ಪ್ರಕಾರ, 1 ವರ್ಷದ ಮಟ್ಟಿಗೆ ಬೆಳ್ಳಿ ತೆರೆಯಿಂದಲೂ ದೂರ ಇರ್ತಾಳಂತೆ. ಈ ಸುದ್ದಿ ಎಷ್ಟು ಖಚಿತ ಎಂದು ಈಗಲೇ ಹೇಳಲಾಗದು. ಆದರೆ ಒಂದಂತೂ ಸತ್ಯ, ಇತ್ತೀಚೆಗೆ ಈಕೆ OTT ಸೀರಿಸ್ `ಸಿಟಾಡೆಲ್’ನ ಶೂಟಿಂಗ್ ಮುಗಿಸಿ ಸುಮ್ಮನಿದ್ದಾಳೆ. ಈಕೆಗೆ ಇದ್ದಕ್ಕಿದ್ದಂತೆ ಈ ಸಿನಿ ಬ್ರೇಕ್ ಯಾಕೆ ಬೇಕಾಯಿತೋ ಗೊತ್ತಾಗುತ್ತಿಲ್ಲ. ತನ್ನ ಕೆರಿಯರ್ ನ ಪೀಕ್ ನಲ್ಲಿರುವ ಈಕೆ, ಇಂಥ ಅಡಾಡಿಯಿಂದ ಜನರ ಮನಸ್ಸಿನಿಂದಲೇ ದೂರ ಆಗಿಬಿಟ್ಟರೆ ಬಲು ಕಷ್ಟ!
ಕಪಟಿಗಳ ಕುತಂತ್ರ ಇಷ್ಟಕ್ಕೆ ಮುಗಿಯುವುದೇ?
ಮನೋಜ್ ಬಾಜ್ ಪೇಯಿಯವರ ಇತ್ತೀಚಿನ ಹೊಸ `ಏಕ್ ಬಂದಾ ಕಾಫಿ ಹೈ’ ಚಿತ್ರದಲ್ಲಿ, ಕಪಟ ಬಾಬಾಗಳ ಮುಖವಾಡ ಕಳಚುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಕಣ್ಣೆದುರೇ ಆ ಬಾಬಾ ತನ್ನ ಕಪಟ ಸಾಮ್ರಾಜ್ಯ ಕುಸಿಯುವುದನ್ನು ಕಾಣುತ್ತಾನೆ. ಈ ಚಿತ್ರ ನೋಡಿದ ಮೇಲೆ ಇದು ಯಾವ ಬಾಬಾ ಕುರಿತು ಹೇಳಲಾಗಿದೆ ಎಂಬುದು ಸುಸ್ಪಷ್ಟ. ಇದರಲ್ಲಿ ಮನೋಜ್ ಪಾತ್ರ ಬಲು ಗಟ್ಟಿಯಾಗಿ ನೆಲೆ ನಿಂತಿದೆ. ಆದರೆ ಕಪಟಿಗಳ ಕುತಂತ್ರಕ್ಕೆ ನೀಡಬೇಕಾದ ಆಘಾತದ ಪೆಟ್ಟು ಇನ್ನೂ ಪರಿಣಾಮಕಾರಿ ಆಗಬೇಕಿತ್ತು. ಬಹುಶಃ ನಿರ್ಮಾಪಕರು ಇನ್ನಷ್ಟು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ ಅನ್ಸುತ್ತೆ. ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಿಜಾಯಿತಿ ಧರ್ಮ ಹಾಗೂ ಕಪಟ ಕುತಂತ್ರಗಳ ನಡುವೆ ಗಟ್ಟಿ ವಾದ ವಿವಾದಗಳಿವೆ. ಆದರೂ ಅದು ಸಾಲದೆಂದೇ ಅನಿಸುತ್ತದೆ. ನಮ್ಮ ದೇಶದ ಅತಿ ದೊಡ್ಡ ಸಾಮಾಜಿಕ ಪಿಡುಗು ಅಂದ್ರೆ ಮೂಢನಂಬಿಕೆಗಳ ಕಣಜವಾದ ಈ ಕಪಟಿಗಳ ಕುತಂತ್ರ, ಇದನ್ನು ನಾಶ ಮಾಡಲು ಖಂಡಿತಾ ಹೆದರುವ ಅಗತ್ಯವಿಲ್ಲ.
ಕಾಶ್ಮೀರಿ ಕಲಾವಿದನ ಪ್ರತಿಭೆ
30 ವರ್ಷದ ಜೈನ್ ಖಾನ್ ದುರ್ರಾನಿ ಮೂಲತಃ ಕಾಶ್ಮೀರದವನು. `ಬೆಲ್ ಬಾಟಂ, ಕುಛ್ ಭಲೇಗೆ ಅಲ್ಫಾಸ್’ನಂಥ ಯಶಸ್ವಿ ಚಿತ್ರಗಳ ನಂತರ ಇನ್ನಷ್ಟು ಚಿತ್ರ ಮಾಡಿದ. ಈ ಚಿತ್ರಗಳಿಂದ ಈತನಿಗೆ ಪ್ರತ್ಯೇಕ ಐಡೆಂಟಿಟಿ ಏನೂ ಸಿಗಲಿಲ್ಲ. ಆದರೆ ಇತ್ತೀಚೆಗೆ ಬಂದ OTT ಸೀರೀಸ್ ನ `ಮುಖಾಬಿರ್’ ಚಿತ್ರ ಈತನಿಗೆ ಉತ್ತಮ ಹೆಸರು ತಂದುಕೊಟ್ಟಿದೆ, ಅದರಲ್ಲಿ ಹಾಗಿದೆ ಈತನ ಅದ್ಭುತ ಕಲಾಪ್ರತಿಭೆ! ನೀವು ಈತನನ್ನು ಸರಿಯಾಗಿ ಗಮನಿಸಿದರೆ, ಈತನ ಸ್ಟೈಲ್, ನಡೆನುಡಿಗಳು ಪಾಕಿಸ್ತಾನಿ ನಟ ಅಲಿ ಜಾಫರ್ ನನ್ನು ನೆನಪಿಸುತ್ತವೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿರುವ ಜೈನ್, ತಾನೊಬ್ಬ ಪ್ರತಿಭಾವಂತ ಎಂದು ಪ್ರೇಕ್ಷಕರು ಮೆಚ್ಚುವಂತೆ ನಿರೂಪಿಸಿದ್ದಾನೆ. ಮುಂದೆ ಹೆಚ್ಚು ಉತ್ತಮ ಅವಕಾಶ ಸಿಗಲಿ, ಆಲ್ ದಿ ಬೆಸ್ಟ್!
ಹಿರಿ ತಾರೆಗಳಿಗೆ ಕಿರುತೆರೆಯ ಆಸರೆ
`ಸುಲ್ತಾನ್’ ಚಿತ್ರದ ನಂತರ ಬ್ಯಾಡ್ ಬಾಯ್ ಸಲ್ಮಾನ್ ಒಂದಾದರೂ ಉತ್ತಮ ಚಿತ್ರ ನೀಡಲಿಲ್ಲ. ಈತನ ಇತ್ತೀಚಿನ ಚಿತ್ರ `ಕಿಸೀ ಕಾ ಭಾಯಿ….’ ಪ್ರೇಕ್ಷಕರಿಗೆ ಮೈ ಪರಚಿಕೊಳ್ಳುವಂತೆ ಮಾಡಿತು. ಸುದ್ದಿಗಾರರ ಪ್ರಕಾರ ಈತ ಸೂರಜ್‌ಬಡಜಾತ್ಯಾರ `ಪ್ರೇಂ ಕೀ ಶಾದಿ’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಇದೂ ಸಹ ಗಾಳಿಮಾತು ಎಂದಾಯಿತು. ಈತನಿಗೆ ಸರಿಯಾದ ಸ್ಕ್ರಿಪ್ಟ್ ಸಿಗುತ್ತಿಲ್ಲವಂತೆ. ಏನೇ ಆಗಲಿ, ತನ್ನ ಸ್ಟಾರ್ ಡಂ ಫ್ಲಾಪ್ ಆಯ್ತು ಎಂದು ಒಪ್ಪಲು ಈತ ಸಿದ್ಧನಿಲ್ಲ. ಹೇಗೆ ಒಪ್ಪುತ್ತಾನೆ? ಹಿರಿ ತಾರೆ ಎಂಬ ಪಟ್ಟ ಇದೆಯಲ್ಲ….? ಇಂಥ ಮಹಾನ್ ತಾರೆಗೆ ಈಗ OTT, ಕಿರುತೆರೆಗಳೇ ಆಧಾರ. ಇಲ್ಲವಾದರೂ ಈತನ ಸ್ಟಾರ್ ಗಿರಿ ಶೈನ್ ಆದೀತಾ? ಕಾಲವೇ ನಿರ್ಧರಿಸಬೇಕು.
ಅಲಾಯಾಳ ಡೇಟಿಂಗ್ ಯಾರೊಂದಿಗೆ?
ನವ ತಾರೆ ಅಲಾಯಾಳ ಕೆರಿಯರ್ ಅತ್ತ ಸರಿಯಾಗಿ ಶುರುವಾಗಲೂ ಇಲ್ಲ, ಮುಂದೆ ಸರಿಹೋಗಲೂ ಇಲ್ಲ. ಇತ್ತೀಚೆಗೆ ಬಂದ ಇವಳ ಚಿತ್ರ `Uಟರ್ನ್’ಗೆ ಪ್ರೇಕ್ಷಕರೂ U ಟರ್ನ್ ಮಾಡಿ ಕಳಿಸಿದರು. ಇದು ಕನ್ನಡದ ರೀಮೇಕ್ ಚಿತ್ರ. ಇವಳ ರೀಲ್ ಲೈಫ್ ಹೇಗೇ ಇರಲಿ, ರಿಯಲ್ ಲೈಫ್ ನಲ್ಲಂತೂ ಏನೇನೋ ಬದಲಾವಣೆ ಆಗುತ್ತಿದೆ. ಸುದ್ದಿಗಾರರ ಪ್ರಕಾರ, ಇತ್ತೀಚೆಗೆ ಇವಳು ಠಾಕ್ರೆ ವಂಶದ ಚಿರಾಗ್ ಐಶ್ವರ್ಯ ಠಾಕ್ರೆ ಜೊತೆ ಬಹಳ ಸುತ್ತಾಡುತ್ತಿದ್ದಾಳಂತೆ. ಅಂದಹಾಗೆ ಅಾಯಾ ಈ ನಿಟ್ಟಿನಲ್ಲಿ ಹೊಸತೇನೂ ಮಾಡಲಿಲ್ಲ, ಏಕೆಂದರೆ ಬಾಲಿವುಡ್ ಬಾಲೆಯರಿಗೆ ರಾಜಕೀಯದ ಮಂದಿ ಬಹಳ ಜಾಸ್ತೀನೇ ಪ್ರಿಯವಾಗುತ್ತಿದ್ದಾರೆ. ಸರಿ ಅಲ್ವಾ ಪರಿಣೀತಿ, ಸ್ವರಾ…..?
ಒಂದು ಫ್ಲಾಪ್ ಮುಂದೆ ಗತಿ…?
ಅಮಿತಾಭ್ ರ ಈಗಾಗಲೇ ಮುಳುಗಿಹೋದ ಕಂಪನಿಯಿನಿಂದ ಅರ್ಶದ್ ವಾರ್ಸಿ ಬೆಳಕಿಗೆ ಬಂದಿದ್ದ. ಆದರೆ ಆತ ಕೆರಿಯರ್ ಆರಂಭಿಸಿದ್ದು ಬೇರಾರದೋ ಚಿತ್ರದಿಂದ. ಯಾವ ಗಾಡ್ ಫಾದರ್ ನೆರವಿಲ್ಲದೆಯೇ ಅರ್ಶದ್, ತನ್ನ ಪ್ರತಿಭೆಯಿಂದ ಅವಕಾಶ ಪಡೆಯತೊಡಗಿದ. ಸಿಕ್ಕಿದ ಅವಕಾಶಗಳನ್ನು ಬಿಡಲಿಲ್ಲ. ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿಯಲ್ಲಿ, ತಾನು ಗಾಡ್ ಫಾದರ್‌ನೆರವಿಲ್ಲದೆಯೇ ಮುಂದುವರಿಯಬಲ್ಲನೇ ಎಂದು ಸಂಶಯ ವ್ಯಕ್ತಪಡಿಸಿದ. ನಮ್ಮಂಥ ಸ್ವಪೋಷಿತ ಕಲಾವಿದರ ಒಂದೇ ಒಂದು ಚಿತ್ರ ಫ್ಲಾಪ್ ಆದರೂ, ಮರುದಿನವೇ ಮುಂಬೈನಿಂದ ಎತ್ತಂಗಡಿ ಮಾಡಿಸಿಬಿಡುತ್ತಾರೆ. ಆದರೆ ಸ್ಟಾರ್ ಕಿಡ್ಸ್ ಚಿತ್ರಗಳು ಎಷ್ಟೇ ಫ್ಲಾಪ್ ಆದರೂ ಅವರಿಗೇನೂ ಅವಕಾಶ ನಿಲ್ಲೋದಿಲ್ಲ. ಅರ್ಶದ್ ಹೇಳುತ್ತಿರುವುದೇನೋ ನಿಜ, ಆದರೆ ಇಂಥ ಸಂದಿಗ್ಧ ಯಾವ ಉದ್ಯಮದಲ್ಲಿ ತಾನೇ ಇಲ್ಲ…?