ಇತ್ತೀಚೆಗೆ ನವದೆಹಲಿಯಲ್ಲಿ `ಮದರ್ಸ್ ಡೇ’ ಸಲುವಾಗಿ ಲಿಟಿಲ್ ಸ್ಟಾರ್ ಸೀನಿಯರ್ ಸೆಕೆಂಡರಿ ಸ್ಕೂಲ್, ಚೌಹಾನ್ ಪುರ್, ಕ್ಯಾರೆವಾರ್ ನಗರ್, ನವದೆಹಲಿಯಲ್ಲಿ ಒಂದು ದಿನ ಮಟ್ಟಿಗೆ ಪಾಕಕಲೆ ಮತ್ತು ಕ್ರಾಫ್ಟ್ ಕಲೆಗಳ ಸ್ಪರ್ಧೆಗಳನ್ನು ಡೆಲ್ಲಿ ಪ್ರೆಸ್ ಸಂಸ್ಥೆಯ ಯುವತಿಯರ ಅಚ್ಚುಮೆಚ್ಚಿನ ಮಾಸಪತ್ರಿಕೆ `ಗೃಹಶೋಭಾ’ ಆಯೋಜಿಸಲಾಗಿತ್ತು. ಇದಕ್ಕಾಗಿ ಸುಮಾರು ನೂರಾರು ಹೆಂಗಸರು ಬಂದು ಭಾಗವಹಿಸಿದರು, ಸಾವಿರಾರು ಮಂದಿ ಸಾಕ್ಷಿಯಾದರು.
ಪಾಕಕಲೆಯ ಪ್ರತಿಭೆಗಳು
ಪಾಕಕಲೆಯ ಸ್ಪರ್ಧೆಯಲ್ಲಿ ಫೈರ್ ಲೆಸ್ ರೆಸಿಪೀಸ್ ಗೆ ಆದ್ಯತೆ ನೀಡಲಾಗಿತ್ತು. ಇದಕ್ಕಾಗಿ 1 ಗಂಟೆ ಕಾಲದ ಸಮಯ ಒದಗಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರು, ಚಾಕಲೇಟ್ ರೋಲ್ಸ್ ತಯಾರಿಸಿದ ಭಾರತಿ. 2ನೇ ಸ್ಥಾನ ಪಡೆದವರು, ಮ್ಯಾಂಗೋ ಶ್ರೀಖಂಡ ತಯಾರಿಸಿದ ಊರ್ವಶಿ. 3ನೇ ಸ್ಥಾನ ಪಡೆದವರು ಬ್ರೆಡ್ ಡೋನಟ್ಸ್ ತಯಾರಿಸಿದ ಪ್ರೇಮಲತಾ!
ಇದರ ಹೊರತಾಗಿ 2 ಸಮಾಧಾನಕರ ಪುರಸ್ಕಾರಗಳೂ ದೊರೆತವು. ಚಾಕಲೇಟ್ ಕೇಕ್ ಗಾಗಿ ನ್ಯಾನ್ಸಿ ಹಾಗೂ ಅಮೃತಸಿರಿ ಲಸ್ಸಿ ತಯಾರಿಸಿದ್ದ ಲಕ್ಷ್ಮಿ ಇದನ್ನು ಪಡೆದರು.
ಈ ವಿಜೇತರು ಮಾತ್ರವಲ್ಲದೆ, ಸುಮಾರು 80ಕ್ಕೂ ಹೆಚ್ಚಿನ ಮಹಿಳೆಯರು ಅನೇಕ ಇನ್ನಿತರ ಸ್ವಾದಿಷ್ಟ ಡಿಶ್ ತಯಾರಿಸಿದ್ದರು. ಇವರೆಲ್ಲರಿಗೂ `ಗೃಹಶೋಭಾ’ ವತಿಯಿಂದ ಭಾಗವಹಿಸಿದ್ದಕ್ಕಾಗಿ ಪ್ರಶಸ್ತಿಪತ್ರ ಹಂಚಲಾಯಿತು. ಎಲ್ಲಾ ವಿಜೇತರಿಗೂ ಈ ಆಯೋಜನೆಯಲ್ಲಿ ಸೂಕ್ತ ಬಹುಮಾನ ನೀಡಲಾಯಿತು.
ಕ್ರಾಫ್ಟ್ ಕಲೆಯ ಪ್ರತಿಭೆಗಳು
`ಗೃಹಶೋಭಾ’ ಇಲ್ಲಿ ಏರ್ಪಡಿಸಿದ್ದ ಮತ್ತೊಂದು ಸ್ಪರ್ಧೆ ಎಂದರೆ ಕ್ರಾಫ್ಟ್ ಕಲೆಯ ಪ್ರದರ್ಶನ. ಇದರಲ್ಲಿ ಅತ್ಯಂತ ಬ್ಯೂಟಿಫುಲ್ ಆದರಲ್ಲಿ ಆರ್ಟ್ ನ 2 ಕಲಾಕೃತಿಗಳನ್ನು ತಯಾರಿಸಿದ್ದ ರೇಖಾ ತೋಮರ್ ಮೊದಲ ಸ್ಥಾನ, ತಾಯಿಮಗುವಿನ ಬಿಂಬ ಪ್ರತಿಬಿಂಬ ಕಲಾಕೃತಿ ತಯಾರಿಸಿದ್ದ ಪೂರ್ಣಿಮಾ 2ನೇ ಸ್ಥಾನ, ಸುಂದರ ಫ್ಲವರ್ ಪಾಟ್ ತಯಾರಿಸಿದ್ದ ಮಮತಾ 3ನೇ ಸ್ಥಾನ ಗಳಿಸಿದರು.
ಇದರ ಜೊತೆ ವಾಲ್ ಹ್ಯಾಂಗಿಂಗ್ ರೂಪದ ನವಿಲಿನ ಕಲಾಕೃತಿ ತಯಾರಿಸಿದ್ದ ಚಂಚಲಾ ಕುಮಾರಿ ಸಮಾಧಾನಕರ ಬಹುಮಾನ ಪಡೆದರು. ಎಲ್ಲರಿಗೂ ಪ್ರಶಸ್ತಿ ಪತ್ರ ಹಂಚಲಾಯಿತು.
ಈ ಸ್ಪರ್ಧೆಗಳಲ್ಲಿ ಭಾಗಹಿಸಿದ್ದ ಎಲ್ಲಾ ಹೆಂಗಸರಿಗೂ, ಡೆಲ್ಲಿ ಪ್ರೆಸ್ ಪರವಾಗಿ `ಗೃಹಶೋಭಾ’ ಪ್ರತಿಕೆಯ ಒಂದೊಂದು ಪ್ರತಿಯನ್ನು ಉಚಿತವಾಗಿ ಹಂಚಲಾಯಿತು.
– ಪ್ರತಿನಿಧಿ