ಯುವ ಜೋಡಿಗೆ ಮೋಜಿನ ಅವಕಾಶ : ಬೀನ್‌ ಬ್ಯಾಗ್‌ ಫರ್ನೀಚರ್‌ ಇತ್ತೀಚೆಗೆ ಬಲು ಜನಪ್ರಿಯ. ಇಷ್ಟ ಬಂದಂತೆ ಆಕಾರ ಬದಲಾಯಿಸಬಹುದಾದ ಈ ಫರ್ನೀಚರ್‌ ಕುರಿತು ಹೆಚ್ಚಿನ ರಿಸರ್ಚ್‌ ನಡೆಯುತ್ತಿದೆ. ಪಾಲಿಮರ್ಸ್‌ ನಿಂದ ಮಾಡಲ್ಪಟ್ಟ ಬೀನ್ಸ್, ಎಲ್ಲಾ ಜಾಗಗಳಲ್ಲೂ ಅಂದ್ರೆ ಬೆಡ್‌ ರೂಮಿನಿಂದ ಆಫೀಸ್‌ ವರೆಗೂ ಬಳಸುವಂತಾಗಲಿದೆ. ಇದಕ್ಕಾಗಿಯೇ ಮ್ಯಾಕ್ಸ್ ಕಂಪನಿ ಇಂಥವನ್ನು ಸಿದ್ಧಪಡಿಸಿ, ಯುವ ಜೋಡಿ ಎಂಜಾಯ್‌ ಮಾಡುವಂತೆ ರೂಪಿಸಿದೆ. ರಸಿಕ ಯುವ ಜೋಡಿಗೆ ಮತ್ತೇನು ತಾನೇ ಬೇಕು?

photo-jul-07-2023-8-45-51-pm

ಬೆಡಗಿ ಮುಖ್ಯವೋ ಡೆಕೋರೇಶನ್ನೋ? : ಲಿಜಾ ಮೇಕಪ್‌ ಇನ್‌ ಸ್ಟಿಟ್ಯೂಟ್‌ ನ ಹೊಸ ಹೊಸ ಪ್ರಯೋಗಗಳು ಕೇವಲ ಹೆಂಗಸರಿಗಷ್ಟೇ ಅಲ್ಲದೆ, ಗಂಡಸರಿಗೂ ಬಹಳ ಇಷ್ಟವಾಗುತ್ತಿವೆ. ಏಕೆಂದರೆ ಮನೆಗೆ ಪೇಂಟ್‌ ಹೊಡೆಸಿ ಅದನ್ನು ಅಂದವಾಗಿಡುವಂತೆಯೇ ಈ ಮೇಕಪ್‌ ಸಹ ಎಲ್ಲರನ್ನೂ ಬ್ಯೂಟಿಫುಲ್ ಮಾಡುತ್ತಿದೆ. ಪರ್ಮನೆಂಟ್‌ಎವರ್‌ ಲಾಸ್ಟಿಂಗ್‌ ಮೇಕಪ್ ಕುರಿತಾಗಿ ಹೆಚ್ಚು ಪ್ರಯೋಗಗಳು ನಡೆಯುತ್ತಿವೆ. ಮೇಕಪ್‌ ಮಾಡಿಕೊಂಡು ಅದರ ಮೇಲೆ ಬುರ್ಖಾ, ಸೆರಗು ಹೊದೆಯುವುದು ಖಂಡಿತಾ ಸರಿಯಲ್ಲ. ಅಂಥವರು ಮನೆಯಿಂದ ಹೊರಗೆ ಬರದೆ ಇರುವುದೇ ಲೇಸು.

antigua-carnival

ಪರಿಯ ಡ್ಯಾನ್ಸಿಗೇನು ಹೇಳೋಣ! : ಕೇಂಡ್ರಾ ಬನೀಸ್‌ ಸ್ಟೇಜ್‌ ಆರ್ಟಿಸ್ಟ್ ಆಗಿ ಖ್ಯಾತರು. ಸಿಂಗರ್‌, ಸಾಂಗ್‌ ರೈಟರ್‌, ಡ್ಯಾನ್ಸರ್‌ ಆಗಿರುವ ಇವರ ಹೊಸ ಆಲ್ಬಂ ಬಲು ವೇಗವಾಗಿ ಎಲ್ಲೆಡೆ ವೈರಲ್ ಆಗುತ್ತಾ ಗಮನ ಸೆಳೆಯುತ್ತಿದೆ. ಇವರ ಸಾಫ್ಟ್ ಮ್ಯೂಸಿಕ್‌ಡ್ಯಾನ್ಸ್ ಎಲ್ಲರ ಮನಗೆದ್ದಿದೆ! ಇವರ ಪಾಪ್‌ ಮ್ಯೂಸಿಕ್‌ ಎಂಥವರಲ್ಲೂ ಮ್ಯೂಸಿಕ್‌ ಸೆನ್ಸ್ ತರಬಲ್ಲದು, ಈ ಪರಿಯ ಡ್ಯಾನ್ಸ್ ನಿಮ್ಮನ್ನೂ ಕುಣಿಯುವಂತೆ ಮಾಡಬಲ್ಲದು!

glory-matipile-in-south-africa

ಮಜಾ ಅಂದ್ರೆ ಹೀಗಿರಬೇಕು : ಜೀವನದ ಅಸಲಿ ಮಜಾ ಇರುವುದೇ ಶಾಪಿಂಗ್‌ ನಲ್ಲಿ! ಬ್ರಾಂಡೆಡ್‌ ಡ್ರೆಸ್‌ ಗಳ ಕವರ್ಸ್‌ ಹಿಡಿದು ಸ್ಟೈಲಾಗಿ ಮಾಲ್ ‌ನಿಂದ ಕಾರಿಗೆ ನಡೆಯುವಾಗ, ಮನೆ ಮುಂದೆ ವೈಯಾರವಾಗಿ ಇಳಿದಾಗ, ಕಂಡವರು ಉರಿದುಕೊಂಡಾರು! ಆದರೆ ಇಂದಿನ ಯುಗದಲ್ಲಿ ಹೀಗೆ ಮಾಲ್ ‌ಮಾಲ್ ‌ಅಲೆಯುತ್ತಾ, ಇಷ್ಟಪಟ್ಟ ವಸ್ತು ಆರಿಸುವುದೂ ಸುಲಭವೇನಲ್ಲ. ಹೀಗಾಗಿಯೇ ಸ್ಮಾರ್ಟ್‌ ಬೈ ಆ್ಯಪರೆಲ್ ‌ಕಂಪನಿಯು, ಬೇರೆ ಬೇರೆ ಡಿಸೈನರ್ಸ್‌ ನ ಆ್ಯಪರೆಲ್ ‌ಗಳನ್ನು ಒಂದೇ ಕಡೆ ಲಭ್ಯವಿರುವಂತೆ ಮಾಡಿದೆ ಹಾಗೂ ಎಲ್ಲಾ ಬಗೆಯ ಗ್ರಾಹಕರ ಬೇಡಿಕೆಗಳನ್ನೂ ಪೂರೈಸುವುದಾಗಿ ತಿಳಿಸಿದೆ. ಈಗ ಕೊರಿಯರ್‌ ಮೂಲಕ, ಮನೆ ಬಾಗಿಲಿಗೆ ಬರುವ ಪ್ಯಾಕೆಟ್‌ ಕೊಳ್ಳುವುದೋ, ಹೀಗೆ ಮಾಲ್ ‌ಗೆ ಹೋಗಿ ಖರೀದಿಸುವುದೋ…. ನಿಮಗೇ ಬಿಟ್ಟದ್ದು!

kendra-the-bunnies-x-ayo-sk3t

ಬೆಟರ್ಭವಿಷ್ಯಕ್ಕಾಗಿ : ಗುಲಾಮಗಿರಿ ಎಂಬುದು ನೂರಾರು ವರ್ಷಗಳಿಂದ ವಿಶ್ವದ ನಾನಾ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಆದರೆ ಇಂದಿಗೂ ಮಾನವರ ಕಳ್ಳ ಸಾಗಾಣಿಕೆ ನಿರಂತರ ನಡೆಯುತ್ತಿದೆ. ಆಫ್ರಿಕಾದಲ್ಲಂತೂ ಬಡ ತಾಯಿ ತಂದೆಯರೇ ತಮ್ಮ ಮಕ್ಕಳನ್ನು ಮಾರಿಕೊಳ್ಳುತ್ತಾರೆ, ಉಂಡು ಉಡಲು ಇಲ್ಲದಿದ್ದಾಗ ಬೇರೇನು ಮಾಡಿಯಾರು? ಇಂಥ ಮಕ್ಕಳನ್ನು ಶ್ರೀಮಂತ ದೇಶಗಳ ಹೊಲಗದ್ದೆಗಳಲ್ಲಿ ನಿರಂತರ ದುಡಿಸುತ್ತಾರೆ. ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾರೆ. ಎಷ್ಟೋ ಸಂಘ ಸಂಸ್ಥೆಗಳು ಜನರನ್ನು ಇಂಥ ಜಾಲದಿಂದ ಬಿಡಿಸಲು ಹೆಣಗುತ್ತಿವೆ, ಆದರೆ ಸಮಸ್ಯೆ ಸುಲಭಕ್ಕೆ ಬಗೆಹರಿಯದು ಎಂದು ಎಲ್ಲರಿಗೂ ಗೊತ್ತು! ಮುಖ್ಯವಾಗಿ ದ. ಆಫ್ರಿಕಾದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಈ ಸಂಸ್ಥೆಗಳು ಹೆಣಗುತ್ತಿವೆ.

womens-clothing-online-boutique

ಇದಲ್ಲವೇ ಜೀವನದ ಮಜಾ! : ಆ್ಯಂಟಿ ಗುವಾ ಬಾರ್ಬುಡಾ ದ್ವೀಪಗಳಲ್ಲಿ ಕಳೆದ ಜುಲೈನಲ್ಲಿ ನಡೆದ ಕಾರ್ನಿವಾಲ್ ‌ಬಲು ಖ್ಯಾತಿ ಗಳಿಸಿತು. ವಿಶ್ವವಿಡೀ ಸಾವಿರಾರು ಪ್ರವಾಸಿಗರು ಇದಕ್ಕಾಗಿಯೇ ಈ ಸಂದರ್ಭದಲ್ಲಿ ಇಲ್ಲಿ ಸೇರಿದ್ದರು. ಪ್ರವಾಸಿಗರು ಈ ಕಾರ್ನಿವಾಲ್ ‌ನ್ನು ಸದಾ ನೆನಪಿಡಲಿ ಎಂದು ಇಲ್ಲಿನ ಸಂಸ್ಕೃತಿ ವಿಭಾಗ ಇದಕ್ಕಾಗಿ ಶ್ರಮವಹಿಸಿ ತಯಾರಿ ನಡೆಸುತ್ತದೆ. ಈ ಕಾರ್ನಿವಾಲ್ ‌ನಲ್ಲಿ ಕುಣಿಯುವ ಮಂದಿ ಬಹುತೇಕರು ವಾಲಂಟಿಯರ್ಸ್‌ ಆಗಿರುತ್ತಾರೆ. ಮೇಕಪ್‌ ಸಮೇತ ಗಂಟೆಗಟ್ಟಲೆ ಕುಣಿಯುವ ಈ ಮಂದಿಯ ಪರಿಶ್ರಮ ಶ್ಲಾಘನೀಯ. ನಮ್ಮಲ್ಲೂ ಇಂಥ ಗ್ಲಾಮರಸ್‌ ಕುಣಿತಗಳಿರಬಾರದೇ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ