ದೆಹಲಿಯ ನೋಯ್ಡಾ ಪ್ರದೇಶದಲ್ಲಿ 10 ವರ್ಷದ ಒಬ್ಬ ಮನೆಗೆಲಸದ ಹುಡುಗಿ ಜೊತೆ ಜಗಳವಾಡಿ, ಅದನ್ನು ಹೊಡೆದು ಬಡಿದು ಮಾಡಿದ ಮಾಲೀಕಳಾದ ಏರ್ ಲೈನ್ಸ್ ಪೈಲಟ್ ಗೆ ಕೆಲವು ದಿನ ಜೇಲು ಸೇರುವಂತಾಯಿತು. ಈಗ ದೆಹಲಿಯಲ್ಲಿ ಡೊಮೆಸ್ಟಿಕ್ ಹೆಲ್ಪರ್ಸ್ ಗಾಗಿಯೇ ಕಂಪನಿಗಳಿದ್ದು, ಇವುಗಳ ರೆಜಿಸ್ಟ್ರೇಷನ್‌ಪೊಲೀಸ್ ವೆರಿಫಿಕೇಶನ್ ಅನಿವಾರ್ಯವಾಗಿದೆ. ಡೆಲ್ಲಿ ಪ್ರೈ. ಪ್ಲೇಸ್ಮೆಂಟ್ ಏಜೆನ್ಸಿ (ರೆಗ್ಯುಲೇಶನ್) ಆರ್ಡರ್ 2014 ಈಗ ಅತಿ ಶಿಸ್ತಿನಿಂದ ಚಾಲನೆಗೆ ತರಲಾಗಿದೆ. ಇದರ ನೆರವಿಲ್ಲದೆ ಕೆಲಸ ಕೊಡಿಸುವ ಏಜೆನ್ಸಿಗಳ ಮಾಲೀಕರಿಗೆ 50 ಸಾವಿರ ದಂಡ ವಿಧಿಸಲಾಗುತ್ತದೆ.
ಎಲ್ಲಾ ಮಹಾನಗರಗಳಲ್ಲೂ ಮನೆಗೆಲಸದವರು ಅನಿವಾರ್ಯ. ಸಿಟಿ ಲೈಫ್ ಸ್ಟೈಲ್ ಗೆ ಇದು ಅತ್ಯಗತ್ಯ ಸೇವೆ. ಇದರ ಸತತ ಸಪ್ಲೈ ಸಹ ಅತ್ಯಗತ್ಯ. ದೇಶದ ಬಡ ಜಾಗಗಳಿಂದ ಹುಡುಗ ಹುಡುಗಿಯರು ನಿರಂತರವಾಗಿ ಹಣದ ಲಾಲಸೆ, ಇನ್ನಿತರ ಆಮಿಷಗಳನ್ನೊಡ್ಡಿ ಅಥವಾ ಕಿಡ್ ನ್ಯಾಪ್ ಮಾಡಿ ಇವರನ್ನು ಮಹಾನಗರಕ್ಕೆ ಎಳೆದು ತರಲಾಗುತ್ತದೆ. ಹೀಗೆ ಮನೆಗೆಲಸಗಳಿಗೆ ಜನ ಸಿಗುತ್ತಾರೆ. ಇಂಥ ಏಜೆನ್ಸಿಗಳ ಮಾಲೀಕರು ದೊಡ್ಡ ಮೊತ್ತದ ಕಮೀಶನ್ ಪಡೆಯುತ್ತಾರೆ. ಹೊಸ ಟೆಕ್ನಾಲಜಿ ಇವರ ಕೆಲಸವನ್ನು ಸುಲಭಗೊಳಿಸಿದೆ. ಈ ಮಂದಿ ತಮ್ಮ ಸೇವಕರನ್ನು ಮೊಬೈಲ್ ಗಳಿಂದಲೇ ಕಂಟ್ರೋಲ್ ಮಾಡುತ್ತಾರೆ.
ಎಲ್ಲಕ್ಕೂ ಮುಖ್ಯ ವಿಷಯ ಪೊಲೀಸ್ ವೆರಿಫಿಕೇಶನ್ ನದು. ಇದು ಇಡೀ ದೇಶಕ್ಕೇ ಒಂದು ಆತಂಕದ ವಿಷಯ ಆಗುತ್ತಿದೆ. ಹೇಳಲಿಕ್ಕೇನೋ ಇದು ನಾಗರಿಕರ ಸುರಕ್ಷತೆಗಾಗಿ ಇದೆ, ಆದರೆ ಇದರಲ್ಲಿ ಕೇವಲ ಉತ್ತಮ ವ್ಯಕ್ತಿಗಳ ರೆಕಾರ್ಡ್ ಮಾತ್ರ ಸಿಗುತ್ತದೆ. ಯಾರು ಕಿಲಾಡಿ ಅಪರಾಧಿಗಳೋ ಅವರ ಬಳಿ ಎಲ್ಲಾ ತರಹದ ನಕಲಿ ಡಾಕ್ಯುಮೆಂಟ್ಸ್ ಇದ್ದೇ ಇರುತ್ತವೆ. ಎಷ್ಟೇ ಪ್ರಯತ್ನಿಸಿದರೂ ಪೊಲೀಸರು ಇದನ್ನು ವೆರಿಫೈ ಮಾಡಲಾರರು. ಯಾವ ನಗರವೇ ಆಗಲಿ, ಸರ್ವೆಂಟ್ ನೀಡಿರುವ ವಿಳಾಸಕ್ಕೆ ಪೊಲೀಸ್ ಮಾಹಿತಿ ಕಳುಹಿಸಬಹುದಷ್ಟೇ. ಆ ವ್ಯಕ್ತಿ ಇಂಥ ಜಾಗದವರು, ಇವರು ಅಪರಾಧಿ ಅಲ್ಲ, ಉತ್ತಮ ಹಿನ್ನೆಲೆ.... ಇತ್ಯಾದಿ.
ಯಾರು ಅಸಲಿ ಅಪರಾಧಿಯೋ ತಾನು ವೆರಿಫಿಕೇಶನ್ನಿನಲ್ಲಿ ಸಿಕ್ಕಿಬೀಳುವಂಥ ಕೆಲಸ ಯಾಕೆ ಮಾಡುತ್ತಾರೆ? ಎಷ್ಟೋ ಸಾವಿರಾರು ನೌಕರಿಗಳಿಗೆ ಇಂಥ ಪೊಲೀಸ್ ವೆರಿಫಿಕೇಶನ್ ಬೇಕಾಗಿಲ್ಲ. ಇಂಥವರಲ್ಲಿ ಪಿಕ್ ಪಾಕೆಟರ್ಸ್, ವೇಶ್ಯಾವಾಟಿಕೆಗಳು, ಸಣ್ಣಪುಟ್ಟ ಡಾಬಾ, ಕಾರ್ಖಾನೆಯ ಕೆಲಸಗಾರರೂ ಸೇರಿರುತ್ತಾರೆ.
ಇದರಿಂದ ಸರ್ವೆಂಟ್ಸ್ ಗೂ ಆಪತ್ತು ತಪ್ಪಿದ್ದಲ್ಲ, ಅವರನ್ನು ಇರಿಸಿಕೊಳ್ಳುವ ಮಾಲೀಕರಿಗೂ ಸಹ. ಪೊಲೀಸರು ಶಿಸ್ತಾಗಿ ಸಮವಸ್ತ್ರ ಧರಿಸಿ ಬಂದು, ಯಾವಾಗ ಬೇಕಾದರೂ ಇಂಥ ಮನೆಗಳಲ್ಲಿ ಇಣುಕುತ್ತಾರೆ. ಭಾರತೀಯರು ಇಂದಿಗೂ ತಮ್ಮ ಮನೆ ಮುಂದೆ ಪೊಲೀಸ್ ಬಂದು ನಿಲ್ಲುವುದನ್ನು ಅವಮಾನಕರ ಎಂದೇ ಭಾವಿಸುತ್ತಾರೆ. ಅವರಿಂದ ಸುರಕ್ಷತೆ ಎಂದು ಭಾವಿಸುವುದೇ ಇಲ್ಲ. ವೆರಿಫಿಕೇಶನ್ ಹೆಸರಲ್ಲಿ ಕಮಾಯಿ ಗಿಟ್ಟಿಸಲು ಪೊಲೀಸರಿಗೆ ನಾನಾ ತಂತ್ರಗಳು ಗೊತ್ತು. ದೆಹಲಿಯ ಮನೆಗೆಲಸದ ಸಿಬ್ಬಂದಿ ಪಂಚಾಯತ್ ಸಂಗಮದ ಅಧಿಕಾರಿಗಳ ಪ್ರಕಾರ, ಈ ವೆರಿಫಿಕೇಶನ್ ಒಳ್ಳೆಯದಿದ್ದರೂ ಇದರಲ್ಲಿ ಭ್ರಷ್ಟಾಚಾರ ತಪ್ಪಿದ್ದಲ್ಲ ಅಂತಾರೆ.