ಆಧುನಿಕ ಹೆಂಗಸರಿಗಾಗಿ ಕ್ಲೌಡ್ಕಿಚನ್ಬಿಸ್ನೆಸ್‌, ಕೇವಲ ಲಾಭ ಗಳಿಸಿಕೊಡುವುದಲ್ಲದೆ, ಮನೆಯಲ್ಲೇ ಕುಳಿತು ಆರಾಮವಾಗಿ ವ್ಯವಹಾರ ನಡೆಸಲು ಅವಕಾಶ ನೀಡುತ್ತದೆ…….!

ಬಿಸ್‌ ನೆಸ್‌ ಸಣ್ಣದಿರಲಿ ದೊಡ್ಡದಿರಲಿ, ನಾವು ಆಫ್‌ ಲೈನ್‌ ಗ್ರಾಹಕರ ಜೊತೆ ಜೊತೆಗೆ ಆನ್‌ ಲೈನ್‌ ಗ್ರಾಹಕರತ್ತಲೂ ಹೆಚ್ಚಿನ  ಗಮನ ವಹಿಸಬೇಕಾಗುತ್ತದೆ. ಆಗ ಮಾತ್ರ ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಏಕೆಂದರೆ ಇಂದಿನ ಆಧುನಿಕ ದಿನಗಳಲ್ಲಿ ಎಲ್ಲರೂ ಕ್ಷಣಾರ್ಧದಲ್ಲಿ ಫೋನಿನ ಮಾಹಿತಿ ಒತ್ತಿ ವ್ಯವಹಾರ ಮುಗಿಸ ಬಯಸುತ್ತಾರೆ. `ಕ್ಲೌಡ್‌ ಕಿಚನ್‌’ ಅಂದ್ರೆ ಪೋಸ್ಟ್ ಯಾ ವರ್ಚುಯೆಲ್ ಕಿಚನ್‌ ಹೆಸರಲ್ಲೂ ಜನಪ್ರಿಯ. ಇಲ್ಲಿ ನಿಮಗೆ ಕೇವಲ ಟೇಕ್‌ ಅವೇ ಆರ್ಡರ್‌ ಮಾತ್ರ ಲಭ್ಯ. ಆನ್‌ ಲೈನ್‌ ಫುಡ್‌ ಆರ್ಡರಿಂಗ್‌ ಸಿಸ್ಟಂ ಮಾಧ್ಯಮದಿಂದ ಗ್ರಾಹಕರಿಗೆ ಸಕಾಲಕ್ಕೆ ಇಲ್ಲಿಂದ ಆಹಾರ ಸಿಗುತ್ತದೆ. ಹೀಗಾಗಿ ಇದು ಭಾರತವಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ ದೊಡ್ಡ ಟ್ರೇಡಿಂಗ್‌ ಬಿಸ್‌ ನೆಸ್‌ ಎನಿಸಿದೆ. ಝೋಮ್ಯಾಟೊ, ಸ್ವಿಗ್ಗಿಯಂಥ ಫುಡ್‌ ಡೆಲಿವರಿ ಅಪ್ಲಿಕೇಶನ್ಸ್ ಇದರೊಂದಿಗೆ ಕೈ ಜೋಡಿಸಿವೆ. 2019ರ ಹೊತ್ತಿಗೆ ಭಾರತದಾದ್ಯಂತ ಕ್ಲೌಡ್‌ ಕಿಚನ್ನಿನ 5,000 ಶಾಖೆಗಳು ಹರಡಿದ್ದವು. ಆನ್‌ ಲೈನ್‌ ಫುಡ್‌ಆರ್ಡರಿಂಗ್‌ ಆ್ಯಪ್ಸ್ ವೆಬ್‌ ಸೈಸ್ ನೆರವಿನಿಂದ, ಇದಕ್ಕೆ ಹೆಚ್ಚು ಸಮರ್ಥನೆ ಸಿಕ್ಕಿದೆ, ಇಂದು ಭಾರತವಿಡೀ 30 ಸಾವಿರಕ್ಕೂ ಹೆಚ್ಚಿನ ಶಾಖೆಗಳು ಹರಡಿವೆ!

ಸೂಕ್ತ ಪ್ಲಾನಿಂಗ್ಮುಖ್ಯ

ನೀವು ಕೇವಲ 5-6 ಲಕ್ಷ ಹಣ ಹೂಡಿ, ಈ ಕೆಲಸ ಶುರು ಮಾಡಬಹುದು. ಇಂಥ ಕ್ಲೌಡ್‌ ಕಿಚನ್ನಿನ `ದಿ ಛೋಂಕ್‌’ನ ಕೋ ಫೌಂಡರ್ ಮಂಜರಿ ಸಿಂಗ್‌ಹಿರಣ್ಮಯಿ ಶಿವಾನಿ ಜೊತೆ ನಡೆಸಿದ ಸಂದರ್ಶನದ ಸಾರಾಂಶ ಹೀಗಿದೆ.

ಕೋವಿಡ್‌ ದೆಸೆಯಿಂದ ಎಲ್ಲರೂ ಲಾಕ್‌ ಡೌನ್‌ ನಲ್ಲಿ ಮನೆಯಲ್ಲೇ ಬಂಧಿಗಳಾದಾಗ ಹಿರಣ್ಮಯಿ, ಹೋಟೆಲ್ ‌ಮುಚ್ಚಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಈ ರೀತಿ ಆಹಾರ ಒದಗಿಸಬಾರದೇಕೆ ಎಂಬ ಐಡಿಯಾದಿಂದ ಇದನ್ನು 2021 ರಲ್ಲಿ `ದಿ ಛೋಂಕ್‌’ (ಒಗ್ಗರಣೆ) ಹೆಸರಲ್ಲಿ ಪ್ರಾರಂಭಿಸಿದರು. ಬಿಹಾರ ಮೂಲದ ಈಕೆ ಈ ರೀತಿ ಸ್ವಾದಿಷ್ಟ ಬಿಹಾರಿ ವ್ಯಂಜನಗಳನ್ನು ಒದಗಿಸಲಾರಂಭಿಸಿದರು. ಇದಕ್ಕೆ ಈಕೆಯ ಸೊಸೆ ಮಂಜರಿ ಸಹ ಜೊತೆಯಾದರು.

24

ಹೆಚ್ಚುತ್ತಿರುವ ಬೇಡಿಕೆ

ಮಂಜರಿ ಹೇಳುತ್ತಾರೆ, ಮೊದಲು ಸಣ್ಣ ಮಟ್ಟದಲ್ಲಿ ತಮ್ಮ ಮನೆಯಿಂದಲೇ ಈ ಹೆಚ್ಚುವರಿ ಅಡುಗೆಯ ಬಿಸ್‌ ನೆಸ್‌ ಶುರು ಮಾಡಿದರಂತೆ. ಆನ್‌ ಲೈನ್‌ ಫುಡ್‌ ಡೆಲಿವರಿ ಆ್ಯಪ್ಸ್ ಡೌನ್‌ ಲೋಡ್‌ ಮಾಡಿಕೊಂಡು, ತಮ್ಮ ಏರಿಯಾದ ಎಲ್ಲರಿಗೂ ಫುಡ್‌ ಡೆಲಿವರಿ ಮಾಡತೊಡಗಿದರು. ಮುಂದೆ ಅವರು ದೆಹಲಿಗೆ ಶಿಫ್ಟ್ ಆಗಿ, 5 ಔಟ್‌ ಲೆಟ್ಸ್ ಹೊಂದಿ, ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಧಿಕಾಂಶ ಕೆಲಸ ಆಟೋಮೆಟಿಕ್‌, ಆನ್‌ ಲೈನ್‌ ಆಗಿದೆ. ಝೊಮ್ಯಾಟೊ, ಸ್ವಿಗ್ಗಿಗಳ ಮೂಲಕ ಇವರ ಕೆಲಸ ಸಲೀಸಾಗಿದೆ.

ಸದ್ಯಕ್ಕೆ ಇವರ ವಾರ್ಷಿಕ ಟರ್ನ್‌ ಓವರ್‌ 2 ಕೋಟಿ ಪ್ರಾಜೆಕ್ಟ್ ಆಗಿದ್ದು, ಕಳೆದ ವರ್ಷ 15-18% ಲಾಭ ಸಿಕ್ಕಿದೆ. ಇವರ ಬಳಿ ಒಟ್ಟು 28 ಮಂದಿ ಸಿಬ್ಬಂದಿ ಇದ್ದು, 6 ಜನ ಬ್ಯಾಕ್‌ ಆಫೀಸ್‌ ಗಮನಿಸಿಕೊಂಡರೆ, ಉಳಿದವರು ಅಡುಗೆ ಮಾಡುತ್ತಾರೆ.

ಸಹಜವಾಗಿಯೇ ಕೆಲಸ ಹೆಚ್ಚಿದ್ದು, ಇವರು ಹೆಂಗಸರಾದ ಕಾರಣ ಸೋರ್ಸಿಂಗ್‌ ನಲ್ಲಿ ಹೆಚ್ಚು ಇನ್‌ ವಾಲ್ವ್ ‌ಆಗಲಾಗುತ್ತಿಲ್ಲ. ಕಚ್ಚಾ ವಸ್ತುಗಳಾದ ತರಕಾರಿ, ಬೇಳೆ, ಮಸಾಲೆ ಇತ್ಯಾದಿ ಗಮನಿಸಬೇಕು. ಜನ ಮೆಚ್ಚಿಕೊಳ್ಳುವ ವಸ್ತು ಮಾರ್ಕೆಟ್‌ ಗೆ ಬಂದ ತಕ್ಷಣ ಅದನ್ನು ತರಬೇಕು. ಹೆಚ್ಚಿನ ಜನದಟ್ಟಣೆಯಿಂದ ತೀರಾ ಮಂಡಿ ಒಳಗೆ ಹೋಗಿ ವ್ಯಾಪಾರ ನಡೆಸುವುದು ಇವರಿಗೆ ಕಷ್ಟವಾಗುತ್ತಿದೆ.

ಜೊತೆಗೆ ಮನೆ ಮಂದಿ, ಮಕ್ಕಳನ್ನು ಸುಧಾರಿಸಬೇಕಿದೆ. ಹೀಗಾಗಿ ಇದಕ್ಕಾಗಿ ಎಂದೇ ಸೋರ್ಸಿಂಗ್‌ ಮ್ಯಾನೇಜರ್‌,  ಇತರ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದಾರೆ.

ಆರ್ಥಿಕ ತೊಂದರೆ

ರೆಸ್ಟೋರೆಂಟ್‌ ಹಾಗೂ ಕ್ಲೌಡ್‌ ಕಿಚನ್‌ ಬಿಸ್‌ ನೆಸ್‌ ಗೆ 5% ತಗುಲುತ್ತದೆ. ಝೋಮ್ಯಾಟೊ/ಸ್ವಿಗ್ಗಿಗಳಿಂದ ಆರ್ಡರ್‌ ಬಂದರೆ, ಅಗ್ರಿಗೇಟರ್ಸ್‌ರಿಟರ್ನ್‌ ಫೈಲ್ ‌ಮಾಡುತ್ತಾರೆ. ವೆಬ್‌ ಸೈಟ್‌ ಮಾಧ್ಯಮದಿಂದ ಆರ್ಡರ್‌ ಬಂದರೆ, ಇವರೇ ಸರ್ಕಾರಕ್ಕೆ 5% ಜಿಎಸ್ಟಿ ಕಟ್ಟಬೇಕಾಗುತ್ತದೆ. ಇದರ ಹೊರತಾಗಿ ಬೇರೇನೂ ತೆರಿಗೆಯ ಸಮಸ್ಯೆ ಇಲ್ಲ, ಹೀಗಾಗಿ ಸಾಮಾನ್ಯ ಗೃಹಿಣಿಯರು ಇದರ ಶಾಖೆ ಆರಂಭಿಸ ಬಯಸಿದರೆ, ಹೆಚ್ಚಿನ ತೊಂದರೆ ಇರುವುದಿಲ್ಲ.

ಇತರ ತೊಂದರೆಗಳು

ಅಗ್ರಿಗೇಟರ್ಸ್‌ ಹೈ ಕಮೀಶನ್‌ (ಸುಮಾರು 30%) ಬಯಸುವುದರಿಂದ, ಇದು ಕನಿಷ್ಠ ಮಾರ್ಜಿನ್ನಿನ ವ್ಯಾಪಾರವಾಗುತ್ತದೆ. ಹೀಗಾಗಿ ಟೆಕ್ನಿಕಲಿ ರಿಟರ್ನ್ಸ್ ನ್ನು ಹೆಚ್ಚು ಬಯಸಬೇಡಿ. ಗ್ರಾಹಕರೊಂದಿಗೆ ನೇರ ಸಂಪರ್ಕ ಇರುವುದಿಲ್ಲ. ಹಾಗಾಗಿ ಗ್ರಾಹಕರ ಪ್ರತಿಕ್ರಿಯೆ, ಬೇಡಿಕೆ ತಿಳಿಯುವುದು ಕಷ್ಟ.

ಈಗಾಗಲೇ ಈ ಫೀಲ್ಡ್ ನಲ್ಲಿ ಬಹಳಷ್ಟು ಬ್ರಾಂಡ್ಸ್ ಬಂದುಬಿಟ್ಟಿವೆ, ಹೀಗಾಗಿ ಪೈಪೋಟಿ ಹೆಚ್ಚು! ಒಂದು ಕ್ಲೌಡ್‌ ಕಿಚನ್ನಿನ ಲಿಮಿಟೇಶನ್‌ ಸುತ್ತಮುತ್ತಲ 67 ಕಿ.ಮೀ. ವ್ಯಾಸ ಹೊಂದಿರುತ್ತದೆ. ಬೆಂಗಳೂರಿನಂಥ ಮಹಾನಗರದಲ್ಲಿ ಇಷ್ಟರಲ್ಲಿ ನಿಮಗೆ ಸಾವಿರ ರೆಸ್ಟೋರೆಂಸ್ ಸಿಗುತ್ತವೆ. ಜೊತೆಗೆ 1000+ ಬ್ರಾಂಡ್ಸ್ ಇವೆ. ಹೀಗಾಗಿ ಗ್ರಾಹಕರಿಗೆ ವಿಪುಲ ಆಯ್ಕೆಗಳಿವೆ. ಹೀಗಾಗಿ ನೀವು ಹೊಸಬರಾದರೆ ಮಾರ್ಕೆಟಿಂಗ್‌ ನಲ್ಲಿ ಹೆಚ್ಚು ಖರ್ಚು ಮಾಡಬೇಕಾದೀತು. ಹೆಚ್ಚು ಆಫರ್ಸ್‌ ಕೊಡಬೇಕಾಗುತ್ತದೆ, ಹೀಗಾಗಿ ಮಾರ್ಜಿನ್‌ ಪ್ರಾಫಿಟ್‌ ಕಡಿಮೆ.

ಹೆಚ್ಚಿನ ಬ್ರಾಂಡ್‌ ಗಳು ಸಂಘಟಿತವಾಗಿ ಕೆಲಸ ಮಾಡುವುದಿಲ್ಲ. ಆಗಾಗ ದಿಢೀರ್‌ ಎಂದು ಅಡುಗೆ ಸಿಬ್ಬಂದಿ ಬೇರೆ ಕಡೆ ಕೆಲಸಕ್ಕೆ  ಹೋಗುವುದರಿಂದ ಅದೊಂದು ದೊಡ್ಡ ಕಷ್ಟ. ಹೀಗಾಗಿ ಅನಿವಾರ್ಯವಾಗಿ ಹೊಸಬರನ್ನು ನೇಮಿಸಿಕೊಂಡರೆ, ಸ್ಟಾಂಡರ್ಡ್‌ ರುಚಿ ಇರುವುದಿಲ್ಲ. ಅವರಿಗೆ ತರಬೇತಿ ನೀಡಿ, ಒಂದು ಹಂತಕ್ಕೆ ತಂದು 2 ವರ್ಷ ಕಳೆಯುವಷ್ಟರಲ್ಲಿ, ಕೆಲಸ ಬಿಡುತ್ತಾರೆ. ಈ ಹಿಂಸೆ ತಪ್ಪದು. ಗ್ರಾಹಕರು ಬದಲಾಗುತ್ತಲೇ ಇರುತ್ತಾರೆ. ಪೈಪೋಟಿ ಕಾರಣ ಅವರ ಅಭಿರುಚಿ ಬೇಗ ಬೇಗ ಬದಲಾಗುತ್ತಿರುತ್ತದೆ. ಕ್ಲೌಡ್ ಕಿಚನ್‌ ಗಾಗಿ ಪ್ರತ್ಯೇಕ ಸರ್ಕಾರಿ ನೀತಿಗಳೇನೂ ಇಲ್ಲ. ಈಗಲೂ ಅದನ್ನು ಡೈನ್‌ ಇನ್‌ ರೆಸ್ಟೋರೆಂಟ್‌ ಎಂದೇ ಪರಿಗಣಿಸಲಾಗುತ್ತದೆ. ಆದರೆ ತಾರ್ಕಿಕಕವಾಗಿ ಇವೆರಡರಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಅದರ ಕಮೀಶನ್‌ ಕಡಿಮೆ, ಪ್ರಾಫಿಟ್‌ಹೆಚ್ಚು!

ಇಂಥ ಸಮಸ್ಯೆಗಳು ಸಾಮಾನ್ಯ ಎನಿಸಿವೆ, ಎಲ್ಲ ಬಿಸ್‌ ನೆಸ್‌ ನಲ್ಲೂ ಇದ್ದೇ ಇದೆ. ಎಲ್ಲದಕ್ಕೂ ತನ್ನದೇ ಆದ ಲಾಭನಷ್ಟಗಳಿವೆ. ಕ್ಲೌಡ್‌ ಕಿಚನ್‌ ಗೂ ತನ್ನದೇ ಆದ ವಿಶಿಷ್ಟ ಲಾಭಗಳಿವೆ.

ಇಲ್ಲಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಅಪೇಕ್ಷಿಸಬಹುದು. ಕೆಲಸ ನಿಭಾಯಿಸುವುದೂ ಸುಲಭ. ಮನೆ ನಿಭಾಯಿಸುತ್ತಲೇ ಮಹಿಳೆ ಇದನ್ನು ತೂಗಿಸಬಹುದು. ಇತರ ಹೋಟೆಲ್ ‌ಗಳಿಗೆ ಹೋಲಿಸಿದಾಗ ಇಲ್ಲಿನ ಮೆಟೀರಿಯಲ್ ಮ್ಯಾನೇಜ್‌ ಮೆಂಟ್‌ ಕಾಸ್ಟ್, ಓವರ್‌ ಹೆಡ್‌ ಕಾಸ್ಟ್, ಲೇಬರ್‌ ಕಾಸ್ಟ್ ಇತ್ಯಾದಿ ಬಲು ಕಡಿಮೆ. ಇಲ್ಲಿ ಅಡುಗೆ ಮಾಡಿದ್ದನ್ನು ಪ್ಯಾಕ್‌ ಮಾಡಿ ಕಳಿಸುವುದಷ್ಟೇ ಕೆಲಸ. ಹೀಗಾಗಿ ಸಿಬ್ಬಂದಿ, ಕ್ಲೀನಿಂಗ್‌ ಎಲ್ಲಾ ಕಡಿಮೆ.

ಹವ್ಯಾಸವೇ ಬಿಸ್ನೆಸ್

ಇದಕ್ಕಾಗಿ ಕಡಿಮೆ ಜಾಗ ಸಾಕು. ಇದನ್ನು ನಗರದ ಯಾವುದೇ ಭಾಗದಲ್ಲಿ ಆರಂಭಿಸಬಹುದು. ನಿಮ್ಮ ಮನೆ ಬಿಸ್‌ ನೆಸ್ ಏರಿಯಾದಲ್ಲಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ. ಹೀಗಾಗಿ ನಿಮ್ಮ ಅಡುಗೆ ಹವ್ಯಾಸ ಬಿಸ್‌ ನೆಸ್‌ ಆಗಿ ಬದಲಾಯಿಸಿಕೊಳ್ಳಬಹುದು.

ಲಾಂಗ್ಟರ್ಮ್ ಪ್ರಾಫಿಟ್

ನೀವು ಬಯಸಿದರೆ ಆಫ್‌ ಲೈನ್‌ಮೆಸ್‌/ದರ್ಶಿನಿ ಸಹ ನಡೆಸಬಹುದು. ಇತರ ಹೋಟೆಲ್ ಗಳಿಗೆ ರೆಗ್ಯುಲರ್‌ ಸಪ್ಲೈ, ಹಾಸ್ಟೆಲ್‌, ಕಾಲೇಜ್‌, ಕಾರ್ಪೋರೇಟ್‌ ಆಫೀಸ್‌ ಗಳಿಗೆ ನಿಯಮಿತ ಡೆಲಿವರಿ ಗೊತ್ತುಪಡಿಸಿಕೊಳ್ಳಿ. ಪಾರ್ಟಿಗಳ ಕೇಟರಿಂಗ್‌ ಆರ್ಡರ್‌ ಪಡೆಯಿರಿ. ಹಾಗೆಯೇ ಆಯಾ ಹಬ್ಬಗಳಲ್ಲಿ ಹೋಳಿಗೆ ಕಜ್ಜಾಯಗಳಂಥ ವಿಶೇಷ ತಿನಿಸುಗಳನ್ನು ಸಹ ಒದಗಿಸಬಹುದು.

ಪ್ರತಿನಿಧಿ 

ಭಾರತದಲ್ಲಿ ಕ್ಲೌಡ್ಕಿಚನ್ಜಾಗ : ಬೇಡಿಕೆಗೆ ತಕ್ಕಂತೆ ಸಾಮಗ್ರಿ ಒದಗಿಸಲು, ನಿಮ್ಮ ಬಳಿ ಉತ್ತಮ ಅಡುಗೆಮನೆಗೆ ಪೂರಕ ಜಾಗ ಇರಬೇಕು. ಜೊತೆಗೆ ಇದರಿಂದ ಬಿಸ್‌ ನೆಸ್‌ ನಡೆಸುವ ಸ್ಮಾರ್ಟ್‌ ನೆಸ್‌ ಇರಬೇಕು.

ಲೈಸೆನ್ಸ್ : ಲೈಸೆನ್ಸ್ ಇಲ್ಲದೆ ಯಾವುದೇ ವ್ಯವಹಾರ ನಡೆಸುವುದು ಸರಿಯಲ್ಲ. ಈ ಲೈಸೆನ್ಸ್ ಪಡೆಯಲು ಬೇಕಾದುದು ಲೈಸೆನ್ಸ್,  ರೆಜಿಸ್ಟ್ರೇಷನ್‌, ಫೈರ್‌ ಕ್ಲಿಯರೆನ್ಸ್.

ಪ್ಯಾಕೇಜಿಂಗ್‌ : ಮಾಡಿದ ಅಡುಗೆ ಎಷ್ಟೇ ಅಚ್ಚುಕಟ್ಟಾಗಿರಲಿ, ಅದನ್ನು ಪರ್ಫೆಕ್ಟ್ ಆಗಿ, ಆಕರ್ಷಕ ಪ್ಯಾಕಿಂಗ್‌ ಮಾಡುವ ಕಲೆ ಗೊತ್ತಿರಬೇಕು.

ಆನ್ಲೈನ್ಕನೆಕ್ಟಿವಿಟಿ : ಹೈ ಫೈ ಸ್ಮಾರ್ಟ್‌ ಫೋನ್ಸ್, ಇಂಟರ್‌ ನೆಟ್‌ ಸಪೋರ್ಟ್‌ ಬೇಕೇ ಬೇಕು. ಡಿಜಿಟಲ್ ರೂಪದಲ್ಲಿ ಸಕ್ರಿಯ ಆಗಿರಬೇಕು.

ಮಾರ್ಕೆಟಿಂಗ್‌ : ಝೊಮ್ಯಾಟೊ, ಸ್ವಿಗ್ಗಿಯಂಥ ಫುಡ್‌ ವೆಬ್‌ ಸೈಟ್‌ ಗಳಲ್ಲಿ ರೆಜಿಸ್ಟ್ರೀಷನ್‌ ಮಾಡಿಸಬೇಕು. ಅವರ ಲಕ್ಷಾಂತರ ಆರ್ಡರ್ಸ್‌ ನಿಮಗೆ ಸಹಾಯಕ.

ಸಿಬ್ಬಂದಿ : ಇಲ್ಲಿ ಅಡುಗೆಮನೆ ಬಾಣಸಿಗರು ಬಲು ಮುಖ್ಯ. ಅವರು ಉತ್ತಮ ತರಬೇತಿ ಹೊಂದಿದ್ದು, ಕಾರ್ಯಕುಶಲತೆಯಲ್ಲಿ ನಿಪುಣರಾಗಿರಬೇಕು. ಇಲ್ಲಿ ಸ್ಮಾರ್ಟ್‌ ನೆಸ್‌ ಹೆಚ್ಚಿನ ತಂತ್ರಗಾರಿಕೆ ಬೇಡುತ್ತದೆ. ಜೊತೆಗೆ ಮೆಟೀರಿಯಲ್, ವೆಂಡರ್ಸ್‌, ಮ್ಯಾನ್‌ ಪವರ್‌ ಸಂಭಾಳಿಸಬೇಕು. ಎಲ್ಲಾ ಲೈಸೆನ್ಸ್ ದೊರೆತ ನಂತರ ಕೆಲಸ ಶುರು ಮಾಡಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ