ಆಧುನಿಕ ಹೆಂಗಸರಿಗಾಗಿ ಕ್ಲೌಡ್ಕಿಚನ್ಬಿಸ್ನೆಸ್‌, ಕೇವಲ ಲಾಭ ಗಳಿಸಿಕೊಡುವುದಲ್ಲದೆ, ಮನೆಯಲ್ಲೇ ಕುಳಿತು ಆರಾಮವಾಗಿ ವ್ಯವಹಾರ ನಡೆಸಲು ಅವಕಾಶ ನೀಡುತ್ತದೆ.......!

ಬಿಸ್‌ ನೆಸ್‌ ಸಣ್ಣದಿರಲಿ ದೊಡ್ಡದಿರಲಿ, ನಾವು ಆಫ್‌ ಲೈನ್‌ ಗ್ರಾಹಕರ ಜೊತೆ ಜೊತೆಗೆ ಆನ್‌ ಲೈನ್‌ ಗ್ರಾಹಕರತ್ತಲೂ ಹೆಚ್ಚಿನ  ಗಮನ ವಹಿಸಬೇಕಾಗುತ್ತದೆ. ಆಗ ಮಾತ್ರ ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಏಕೆಂದರೆ ಇಂದಿನ ಆಧುನಿಕ ದಿನಗಳಲ್ಲಿ ಎಲ್ಲರೂ ಕ್ಷಣಾರ್ಧದಲ್ಲಿ ಫೋನಿನ ಮಾಹಿತಿ ಒತ್ತಿ ವ್ಯವಹಾರ ಮುಗಿಸ ಬಯಸುತ್ತಾರೆ. `ಕ್ಲೌಡ್‌ ಕಿಚನ್‌' ಅಂದ್ರೆ ಪೋಸ್ಟ್ ಯಾ ವರ್ಚುಯೆಲ್ ಕಿಚನ್‌ ಹೆಸರಲ್ಲೂ ಜನಪ್ರಿಯ. ಇಲ್ಲಿ ನಿಮಗೆ ಕೇವಲ ಟೇಕ್‌ ಅವೇ ಆರ್ಡರ್‌ ಮಾತ್ರ ಲಭ್ಯ. ಆನ್‌ ಲೈನ್‌ ಫುಡ್‌ ಆರ್ಡರಿಂಗ್‌ ಸಿಸ್ಟಂ ಮಾಧ್ಯಮದಿಂದ ಗ್ರಾಹಕರಿಗೆ ಸಕಾಲಕ್ಕೆ ಇಲ್ಲಿಂದ ಆಹಾರ ಸಿಗುತ್ತದೆ. ಹೀಗಾಗಿ ಇದು ಭಾರತವಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ ದೊಡ್ಡ ಟ್ರೇಡಿಂಗ್‌ ಬಿಸ್‌ ನೆಸ್‌ ಎನಿಸಿದೆ. ಝೋಮ್ಯಾಟೊ, ಸ್ವಿಗ್ಗಿಯಂಥ ಫುಡ್‌ ಡೆಲಿವರಿ ಅಪ್ಲಿಕೇಶನ್ಸ್ ಇದರೊಂದಿಗೆ ಕೈ ಜೋಡಿಸಿವೆ. 2019ರ ಹೊತ್ತಿಗೆ ಭಾರತದಾದ್ಯಂತ ಕ್ಲೌಡ್‌ ಕಿಚನ್ನಿನ 5,000 ಶಾಖೆಗಳು ಹರಡಿದ್ದವು. ಆನ್‌ ಲೈನ್‌ ಫುಡ್‌ಆರ್ಡರಿಂಗ್‌ ಆ್ಯಪ್ಸ್ ವೆಬ್‌ ಸೈಸ್ ನೆರವಿನಿಂದ, ಇದಕ್ಕೆ ಹೆಚ್ಚು ಸಮರ್ಥನೆ ಸಿಕ್ಕಿದೆ, ಇಂದು ಭಾರತವಿಡೀ 30 ಸಾವಿರಕ್ಕೂ ಹೆಚ್ಚಿನ ಶಾಖೆಗಳು ಹರಡಿವೆ!

ಸೂಕ್ತ ಪ್ಲಾನಿಂಗ್ಮುಖ್ಯ

ನೀವು ಕೇವಲ 5-6 ಲಕ್ಷ ಹಣ ಹೂಡಿ, ಈ ಕೆಲಸ ಶುರು ಮಾಡಬಹುದು. ಇಂಥ ಕ್ಲೌಡ್‌ ಕಿಚನ್ನಿನ `ದಿ ಛೋಂಕ್‌'ನ ಕೋ ಫೌಂಡರ್ ಮಂಜರಿ ಸಿಂಗ್‌ಹಿರಣ್ಮಯಿ ಶಿವಾನಿ ಜೊತೆ ನಡೆಸಿದ ಸಂದರ್ಶನದ ಸಾರಾಂಶ ಹೀಗಿದೆ.

ಕೋವಿಡ್‌ ದೆಸೆಯಿಂದ ಎಲ್ಲರೂ ಲಾಕ್‌ ಡೌನ್‌ ನಲ್ಲಿ ಮನೆಯಲ್ಲೇ ಬಂಧಿಗಳಾದಾಗ ಹಿರಣ್ಮಯಿ, ಹೋಟೆಲ್ ‌ಮುಚ್ಚಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಈ ರೀತಿ ಆಹಾರ ಒದಗಿಸಬಾರದೇಕೆ ಎಂಬ ಐಡಿಯಾದಿಂದ ಇದನ್ನು 2021 ರಲ್ಲಿ `ದಿ ಛೋಂಕ್‌' (ಒಗ್ಗರಣೆ) ಹೆಸರಲ್ಲಿ ಪ್ರಾರಂಭಿಸಿದರು. ಬಿಹಾರ ಮೂಲದ ಈಕೆ ಈ ರೀತಿ ಸ್ವಾದಿಷ್ಟ ಬಿಹಾರಿ ವ್ಯಂಜನಗಳನ್ನು ಒದಗಿಸಲಾರಂಭಿಸಿದರು. ಇದಕ್ಕೆ ಈಕೆಯ ಸೊಸೆ ಮಂಜರಿ ಸಹ ಜೊತೆಯಾದರು.

24

ಹೆಚ್ಚುತ್ತಿರುವ ಬೇಡಿಕೆ

ಮಂಜರಿ ಹೇಳುತ್ತಾರೆ, ಮೊದಲು ಸಣ್ಣ ಮಟ್ಟದಲ್ಲಿ ತಮ್ಮ ಮನೆಯಿಂದಲೇ ಈ ಹೆಚ್ಚುವರಿ ಅಡುಗೆಯ ಬಿಸ್‌ ನೆಸ್‌ ಶುರು ಮಾಡಿದರಂತೆ. ಆನ್‌ ಲೈನ್‌ ಫುಡ್‌ ಡೆಲಿವರಿ ಆ್ಯಪ್ಸ್ ಡೌನ್‌ ಲೋಡ್‌ ಮಾಡಿಕೊಂಡು, ತಮ್ಮ ಏರಿಯಾದ ಎಲ್ಲರಿಗೂ ಫುಡ್‌ ಡೆಲಿವರಿ ಮಾಡತೊಡಗಿದರು. ಮುಂದೆ ಅವರು ದೆಹಲಿಗೆ ಶಿಫ್ಟ್ ಆಗಿ, 5 ಔಟ್‌ ಲೆಟ್ಸ್ ಹೊಂದಿ, ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಧಿಕಾಂಶ ಕೆಲಸ ಆಟೋಮೆಟಿಕ್‌, ಆನ್‌ ಲೈನ್‌ ಆಗಿದೆ. ಝೊಮ್ಯಾಟೊ, ಸ್ವಿಗ್ಗಿಗಳ ಮೂಲಕ ಇವರ ಕೆಲಸ ಸಲೀಸಾಗಿದೆ.

ಸದ್ಯಕ್ಕೆ ಇವರ ವಾರ್ಷಿಕ ಟರ್ನ್‌ ಓವರ್‌ 2 ಕೋಟಿ ಪ್ರಾಜೆಕ್ಟ್ ಆಗಿದ್ದು, ಕಳೆದ ವರ್ಷ 15-18% ಲಾಭ ಸಿಕ್ಕಿದೆ. ಇವರ ಬಳಿ ಒಟ್ಟು 28 ಮಂದಿ ಸಿಬ್ಬಂದಿ ಇದ್ದು, 6 ಜನ ಬ್ಯಾಕ್‌ ಆಫೀಸ್‌ ಗಮನಿಸಿಕೊಂಡರೆ, ಉಳಿದವರು ಅಡುಗೆ ಮಾಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ