ಕಾಡಿಗೆ ತೀಡಿದ ಬಟ್ಟಲು ಕಂಗಳು ಯಾರಿಗೆ ತಾನೇ ಇಷ್ಟವಿಲ್ಲ? ಹೆಣ್ಣಿನ ಮೊಗದ ಅಂದ ಹೆಚ್ಚಿಸುವುದರಲ್ಲಿ ಕಂಗಳ ಪಾತ್ರ ಹಿರಿದು. ಹೀಗಾಗಿಯೇ ಐ ಮೇಕಪ್‌ ಗಾಗಿ ಹೆಚ್ಚಿನ ಗಮನ ನೀಡಲಾಗುತ್ತದೆ. ಕಂಗಳಿಗೆ ವಿಶೇಷ ಮೇಕಪ್‌ ಮಾಡಲು ಪುರಸತ್ತಿಲ್ಲವೇ? ಆಗ ಐ ಲೈನರ್‌ ಬಳಸಿಕೊಂಡು ಕೊರತೆ ನೀಗಿಸಿ. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ 4 ಮುಖ್ಯ ಐ ಲೈನರ್ಸ್‌ ಎಂದರೆ :

ಪೆನ್ಸಿಲ್ ಲೈನರ್

ಕಾಡಿಗೆಯ ಈ ಲೈನರ್‌ ಬೇಸಿಕ್‌ ಎನಿಸಿದೆ. ಹಿಂದೆಲ್ಲ ಇದೇ ಟ್ರೆಂಡ್‌ ಮುಖ್ಯವಾಗಿತ್ತು. ಕಂಗಳಿಗೆ ಸ್ಮೋಕಿ ಲುಕ್ಸ್ ನೀಡಲು ಇದನ್ನೇ ಬಳಸುತ್ತಿದ್ದರು. ಐ ಲೈನರ್‌ ಬಳಸುವಲ್ಲಿ ನೀವು ಹೊಸಬರಾದರೆ, ಮೊದಲು ಇದರಿಂದಲೇ ಆರಂಭಿಸಿ. ಇದು ಹರಡುವ ಭಯವಿಲ್ಲ. ಕಂಗಳಿಗೆ ಅಪೇಕ್ಷಿತ ಆಕಾರ ಸಿಗುತ್ತದೆ. ನೀವು ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತೀರಾದರೆ, ಇದರ ಬಳಕೆ ಬೇಡ. ಇದನ್ನು ತೀಡುವಾಗ ನಿಮ್ಮ ಕೈ ಬಹಳ ನಡುಗುತ್ತಿದ್ದರೆ, ತೀರಾ ಚೂಪಾದ ಪೆನ್ಸಿಲ್ ‌ಬೇಡ, ಮೊಂಡಾದುದೇ ಇರಲಿ. ಆಗ ಅದು ಚುಚ್ಚುವ ಭಯವಿಲ್ಲ.

ಲಿಕ್ವಿಡ್ ಲೈನರ್

ನೀವು ಲೈನರ್‌ ಬಳಸುವಲ್ಲಿ ಪರ್ಫೆಕ್ಟ್ ಆದಾಗ, ಈ ಲಿಕ್ವಿಡ್‌ ಲೈನರ್‌ ಕೊಳ್ಳಿರಿ. ಯಾರಿಗೆ ವಿಂಗ್‌ ಲೈನರ್‌ ತೀಡುವುದು ಇಷ್ಟವೋ ಅಂಥವರಿಗೆ ಇದು ಬೆಸ್ಟ್. ಇದನ್ನು ಕಂಗಳ ಕೆಳಭಾಗದ ರೆಪ್ಪೆ ಬಳಿ ಎಂದೂ ಬಳಸದಿರಿ. ಆಗ ಇದು ಹರಡಿ ಕಣ್ಣಿನ ಮೇಕಪ್‌ ಹಾಳು ಮಾಡೀತು. ಇದು ಇಡೀ ದಿನ ನಿಲ್ಲಲಿ ಎಂದು ನೀವು ಬಯಸಿದರೆ, ವಾಟರ್‌ ಪ್ರೂಫ್‌ ಲಿಕ್ವಿಡ್‌ ಲೈನರ್‌ ಕೊಳ್ಳುವುದೇ ಸರಿ.

ಜೆಲ್ ಲೈನರ್

ಸ್ಮೋಕಿ ಕಂಗಳನ್ನು ಪಡೆಯಲು ಜೆಲ್ ಐ ಲೈನರ್‌ ಬೆಸ್ಟ್. ಇದು ಲಿಕ್ವಿಡ್‌ಪೆನ್ಸಿಲ್ ‌ಐ ಲೈನರ್ಸ್‌ ಗಿಂತ ವಿಭಿನ್ನ. ಬ್ರಶ್‌ ನೆರವಿನಿಂದ ಇದನ್ನು ತೀಡಬೇಕು. ಲಿಕ್ವಿಡ್‌ ಲೈನರ್‌ ಬಳಸುವುದಕ್ಕಿಂತ ಇದರ ಬಳಕೆ ಸುಲಭ. ಬೆಸ್ಟ್ ಮ್ಯಾಟ್‌ ಫಿನಿಶಿಂಗ್‌ ಗಾಗಿ ಇದನ್ನು ಬಳಸಿಕೊಳ್ಳಿ.

ಫೆಲ್ಟ್ ಟಿಪ್ಲೈನರ್

ಇದು ಮಾರ್ಕರ್‌ ಪೆನ್ಸಿಲ್ ನಂತೆ ಕಾಣಿಸುವ ಐ ಪ್ರಾಡಕ್ಟ್. ಇತರ ಲೈನರ್‌ ಗಳಿಗೆ ಹೋಲಿಸಿದಾಗ ಇದು ತುಸು ಬೇಗ ಒಣಗುತ್ತದೆ. ವಿಂಗ್‌ ಲೈನರ್‌ ಬಯಸುವ ಮಂದಿಗೆ ಇದು ಅಚ್ಚುಮೆಚ್ಚು. ನೀವು ಪಾರ್ಟಿಗೆ ಹೊರಡುವ ತರಾತುರಿಯಲ್ಲಿದ್ದರೆ, ಕೊನೆಯ ಫಿನಿಶಿಂಗ್ ಟಚ್‌ ಗಾಗಿ ಇದನ್ನು ಬಳಸಿಕೊಳ್ಳಿ.

ಬಳಸುವ ಸಮರ್ಪಕ ವಿಧಾನ

ಎಲ್ಲಕ್ಕೂ ಮೊದಲು ಮುಖ ಸ್ವಚ್ಛಗೊಳಿಸಿ, ನಂತರ ಮುಖಕ್ಕೆ ಮಾಯಿಶ್ಚರೈಸರ್‌, ಕಂಗಳ ಸುತ್ತಲೂ ಐ ಕ್ರೀಂ ಹಚ್ಚಿರಿ. ಫೌಂಡೇಶನ್‌ ಬಳಸುವುದರಿಂದ ಅದು  ಐ ಲೈನರ್‌ ಗೆ ದೀರ್ಘ ಬಾಳಿಕೆ ಕೊಡುತ್ತದೆ. ಈಗ ನಿಮ್ಮ ಕಂಗಳ ಅಕ್ಕಪಕ್ಕ ಮೇಕಪ್‌ಮಾಡಬೇಕಿರುವ ಕಡೆ, ಅಲ್ಲಿಗೆ ತುಸು ಪ್ರೈಮರ್‌ ಹಚ್ಚಿರಿ. ಇದು ಮೇಕಪ್‌ ನ್ನು ಚರ್ಮದಲ್ಲಿ ವಿಲೀನಗೊಳಿಸಲು ಸಹಾಯಕ.

ನಂತರ ಕಂಗಳ ಬಳಿ ಕನ್ಸೀಲರ್‌ ತೀಡಿರಿ. ಇದನ್ನು ಚೆನ್ನಾಗಿ ಬ್ಲೆಂಡ್‌ ಗೊಳಿಸಿ. ಮುಖ್ಯವಾಗಿ ಲಿಕ್ವಿಡ್‌ ಐ ಲೈನರ್‌ ಬಳಸುವಾಗ ಕೆಲವರಿಗೆ ಕೈ ನಡುಗುತ್ತದೆ. ಆಗ ನೀವು ನಿಮ್ಮ ಮೊಣಕೈಯನ್ನು ಟೇಬಲ್ ಮೇಲಿರಿಸಿ, ಬಾಗಿ ಇದನ್ನು ಮುಂದುರಿಸುವುದೇ ಸರಿ. ನಂತರ ರೆಪೆಲ್ ಪಿಯ ಮೇಲೆ, ಕಂಗಳ ಒಳಭಾಗದಿಂದ ಹೊರಬರುವಂತೆ ಒಂದು ಸೀದಾ ಲೈನ್‌ ಎಳೆಯಿರಿ. ಮೊದಲ ಸಲ ಬಳಸುವವರಿಗೆ ಇದು ತುಸು ಕಷ್ಟಕರ ಎನಿಸಬಹುದು.

ಹೀಗಾಗಿ ಮೇಲ್ಭಾಗದ ರೆಪ್ಪೆಯ ಮೇಲೆ, ನೀಟಾಗಿ ಡಾಟ್ಸ್ ಬರುವ ತರಹ ಗುರುತು ಮಾಡಿ. ನಂತರ ಇಲ್ಲಿ ಸಣ್ಣ ಸ್ಟ್ರೋಕ್ಸ್ ಮೂಲಕ ಐ ಲೈನರ್‌ ತೀಡಬೇಕು.

ಈ ರೀತಿ ಲೈನರ್‌ ಕೆಲಸ ಮುಗಿದಾಗ, ನಿಮ್ಮ ಕೆಳಭಾಗದ ಲ್ಯಾಶ್‌ ಲೈನ್‌ ನ್ನು ಒಂದು ಪೆನ್ಸಿಲ್ ‌ಲೈನರ್‌ ನಿಂದ ಮುಂದುವರಿಸಿ. ಇದು ಹರಡಿದೆ ಎನ್ನಿಸಿದರೆ, ಐ ಮೇಕಪ್‌ ರಿಮೂವರ್‌ ನಿಂದ ಇದನ್ನು ತೆಗೆದುಬಿಡಿ.

ವಿಭಿನ್ನ ಬಣ್ಣಗಳ ಪ್ರಭಾವ

ನಿಮಗೆ ಬೋಲ್ಡ್ ಎಫೆಕ್ಟ್ ಬೇಕಿದ್ದರೆ, ಬ್ಲ್ಯಾಕ್‌ ಕಲರ್‌ ಆರಿಸಿ. ಸ್ಮೋಕಿ ಲುಕ್ಸ್ ಗಾಗಿ ಬ್ರೌನ್‌ ಕಲರ್‌ ಬೆಟರ್‌. ಕಂಗಳನ್ನು ದೊಡ್ಡದಾಗಿ ತೋರಿಸಲು ಲೈಟ್‌ ಕಲರ್‌ ಉತ್ತಮ. ಕಂಗಳನ್ನು ಬ್ರೈಟ್‌ ಆಗಿಸಲು ಗ್ರೇ ಕಲರ್‌ ಆರಿಸಿ. ಕಂಗಳಿಗೆ ಟ್ರೆಂಡಿ ಲುಕ್ಸ್ ಬೇಕೇ? ಗ್ರೀನ್ ಕಲರ್‌ ಆರಿಸಿ ಗ್ಲಿಟರ್‌ ನಿಂದ ಸ್ಪಾರ್ಕ್‌ ಲುಕ್‌ ಪಡೆಯಿರಿ.

ಕಂಗಳ ಆಕಾರಕ್ಕೆ ತಕ್ಕಂತೆ ಆಯ್ಕೆ ಎಷ್ಟೋ ಸಲ ಹೆಂಗಸರು ಐ ಲೈನರ್‌ ಬಳಸುತ್ತಾರೆ, ಆದರೆ ಅದು ಅವರ ಕಂಗಳ ಆಕಾರಕ್ಕೆ ತಕ್ಕಂತಿದೆಯೇ ಎಂದು ಗಮನಿಸುವುದಿಲ್ಲ. ಏಕೆಂದರೆ ಐ ಲೈನರ್‌ ಲುಕ್ಸ್, ಇವರ ಕಂಗಳ ಆಕಾರ ಆಧರಿಸಿದೆ. ಹೀಗಾಗಿ ಲೈನರ್ ತೀಡುವ ಮೊದಲು, ನಿಮ್ಮ ಕಂಗಳ ಆಕಾರದ ಬಗ್ಗೆ ತಿಳಿದುಕೊಳ್ಳಿ. ನಂತರ ಅದಕ್ಕೆ ತಕ್ಕಂತೆ ಲೈನರ್‌ ಆರಿಸಿ.

ಗೋಲಾಕಾರದ ಕಂಗಳು : ರೌಂಡ್‌ ಶೇಪ್‌ ನ ಕಂಗಳು ದೊಡ್ಡದಾಗಿರುತ್ತದೆ. ಇಂಥವರಿಗೆ ವಿಂಗ್ಡ್ ಐ ಲೈನರ್ಸ್‌ ಬೆಸ್ಟ್.

ಬಾದಾಮಿ ಕಂಗಳು : ಈ ತರಹದ ಕಂಗಳ ಆಕಾರವುಳ್ಳವರು ಯಾವುದೇ ಬಗೆಯ ಐ ಲೈನರ್‌ ಬಳಸಿಕೊಳ್ಳಬಹುದು. ಅದರಲ್ಲೂ ವಿಂಗ್ಡ್ ಐ ಲೈನರ್‌ ಬಾದಾಮಿ ಕಂಗಳಿಗೆ ಹೆಚ್ಚು ಒಪ್ಪುತ್ತದೆ. ನಿಮ್ಮ ಕಂಗಳ ಒಳಭಾಗದಿಂದ ಲೈನ್‌ ಎಳೆಯಲು ಆರಂಭಿಸಿ. ನಿಧಾನವಾಗಿ ಅದನ್ನು ಥಿಕ್‌ ಆಗಿಸಿ. ಕಂಗಳ ಕೊನೆಯಲ್ಲಿ ವಿಂಗ್ಸ್ ನ್ನು ಹರಡಿಬಿಡಿ.

ಸಣ್ಣ ಕಂಗಳು : ಇದಕ್ಕಾಗಿ ಲೈನರ್‌ ನ್ನು ಮೇಲ್ಭಾಗದ ಲ್ಯಾಶ್‌ ಲೈನ್‌ ನಿಂದ ತೆಳುವಾಗಿ ಗೆರೆ ಎಳೆಯುತ್ತಾ ಶುರು ಮಾಡಿ. ಕೊನೆಗೆ ಇದನ್ನು ತುಸು ದಪ್ಪ ಮಾಡಿ. ಇದರಿಂದ ಕಂಗಳು ದೊಡ್ಡದಾಗಿ ಕಾಣುತ್ತವೆ.

ದೊಡ್ಡ ಕಂಗಳು : ಇಂಥ ಹೆಂಗಸರು ಕ್ಯಾಟ್‌ ಐ ಲೈನರ್‌ ಹಾಗೂ ವಿಂಗ್ಡ್ ಸ್ಟೈಲ್ ‌ಎರಡನ್ನೂ ಬಳಸಬಹುದು.

ಅರಳಿದ ಕಂಗಳು : ಇಂಥ ಕಂಗಳು ತುಸು ಅರಳಿಕೊಂಡಂತೆ ಕಾಣುತ್ತವೆ, ರೆಪ್ಪೆಗಳು (ಎವೆ) ಸಹ ದೊಡ್ಡದಾಗಿ ಕಾಣುತ್ತವೆ. ಇಂಥ ಹೆಂಗಸರು ತಮ್ಮ ಕಂಗಳಿಗೆ ಆರಂಭದ ಲೈನ್‌ ನಿಂದ ಹಿಡಿದು ಕೊನೆಯವರೆಗೂ ತೆಳು ಅಥವಾ ದಪ್ಪ, ಯಾವುದಾದರೂ ಒಂದೇ ಬಗೆಯವುದನ್ನು ಅನುಸರಿಸಬೇಕು.

ಲೈನರ್ಬಳಸಲು ಟಿಪ್ಸ್

ಇದನ್ನು ಹಚ್ಚು ಮೊದಲು ಐ ಲ್ಯಾಶೆಸ್‌ ನ್ನು ಮೊದಲು ಕರ್ಲ್ ಮಾಡಿ. ಇದರಿಂದ ಕಂಗಳು ಮತ್ತಷ್ಟು ಸುಂದರವಾಗಿ ಕಾಣುತ್ತವೆ. ಇದನ್ನು ಹಚ್ಚುವಾಗ ಮೇಲ್ಭಾಗದ ಐ ಲ್ಯಾಯಾಶ್‌ ವೈನ್‌ ನ ಮಧ್ಯದಿಂದ ಐ ಲೈನರ್‌ ತೀಡುವಾಗ, ಸದಾ ಕೆಳಗಿನ ಕಡೆ ನೋಡಿ. ಮೇಲೆ ನೋಡುವುದರಿಂದ ಶೇಪ್‌ ಕೆಡುತ್ತದೆ.

ಅಕಸ್ಮಾತ್ ಲೈನರ್

ಕಣ್ಣೊಳಗೆ ಹೋಗಿ ಬಿಟ್ಟರೆ, ತಕ್ಷಣ ತಣ್ಣೀರು ಬಳಸಿ, ಕಂಗಳನ್ನು ಚೆನ್ನಾಗಿ ತೊಳೆಯಿರಿ. ವಿಂಗ್ಸ್ ಮಾಡಿಕೊಳ್ಳುವಾಗ, ರೆಪ್ಪೆಗಳನ್ನು ಬಹಳ ಸಲ ಬಡಿಯಬಾರದು, ಇಲ್ಲದಿದ್ದರೆ ವಿಂಗ್ಸ್ ಕೆಟ್ಟೀತು. ಕ್ಯಾಟ್‌ ಐ ಲೈನರ್‌ ಲುಕ್ಸ್ ಗಾಗಿ ಮೊದಲು ಕಾಡಿಗೆ ಪೆನ್ಸಿಲ್ ಬಳಸಿರಿ. ನಂತರ ಐ ಲೈನರ್‌ ಬಳಸಬೇಕು. ಇದನ್ನು ನಿಧಾನವಾಗಿ ತೀಡಬೇಕು. ಕಂಗಳನ್ನು ಮತ್ತಷ್ಟು ದೊಡ್ಡದಾಗಿ ತೋರಿಸಬೇಕೇ? ಲೋಯರ್‌ ಲ್ಯಾಯಾಶ್‌ ಲೈನ್‌ ಬಳಿ ಲೈಟ್‌ ಕಾಜಲ್ ಪೆನ್ಸಿಲ್ ‌ಯಾ ಲೈಟ್‌ ಲೈನರ್‌ ಬಳಸಿರಿ.

ಗಿರಿಜಾ ಪ್ರಕಾಶ್

ಲೈನರ್ಬಳಸುವಾಗ ವಹಿಸಬೇಕಾದ ಎಚ್ಚರಿಕೆಗಳು

ನೀವು ಮೊದಮೊದಲು ಪೆನ್ಸಿಲ್ ‌ಐ ಲೈನರ್‌ ಷ್ಟೇ ಬಳಸಿರಿ. ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿದ ತಕ್ಷಣವೇ ಇದನ್ನು ತೀಡಬಾರದು. ನಿಮ್ಮದು ಆಯ್ಲಿ ಸ್ಕಿನ್‌ ಆಗಿದ್ದರೆ, ಐ ಲೈನರ್‌ ತೀಡುವ ಮೊದಲು ನಿಮ್ಮ ಮುಖವನ್ನು ಟಿಶ್ಯು ಪೇಪರ್‌ ನಿಂದ ಚೆನ್ನಾಗಿ ಒರೆಸಿ ಶುಚಿಗೊಳಿಸಿ, ಆಗ ಅದರಲ್ಲಿರುವ ಜಿಡ್ಡಿನ ಅಂಶ ಹೋಗಿಬಿಡುತ್ತದೆ. ಇದನ್ನು ಬಳಸುವಾಗ, ಒಂದು ಸಲಕ್ಕೆ ಒಂದೇ ಪದರ ಬರುವಂತೆ ಮಾಡಿ. ನಂತರ ಇದನ್ನು ತುಸು ದಪ್ಪ ಆಗಿಸಲು 2ನೇ, 3ನೇ ಪದರ ತೀಡಿರಿ. ಐ ಲೈನರ್‌ ತೀಡುವಾಗ ಅದು ಕಂಗಳ ಆಚೀಚೆ ಹರಡಿಕೊಂಡರೆ, ಅದು ಆರುವ ಮೊದಲೇ, ತಕ್ಷಣ ಕಾಟನ್‌ ಅಥವಾ ಒದ್ದೆ ಬಟ್ಟೆಯಿಂದ ಒರೆಸಿ ಬಿಡಿ.

ಐ ಲೈನರ್‌ ಬಳಸಿದ ನಂತರ, ಅದರ ಬ್ರಶ್ಶನ್ನು ಸದಾ ಬಿಸಿ ನೀರಲ್ಲಿ ತೊಳೆದು ಒಣಗಿಸಿ. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಲ್ ಸೋಂಕಿನಿಂದ ಪಾರಾಗುವಿರಿ. ನಿಮ್ಮ ಐ ಲೈನರ್‌, ಲಿಪ್‌ ಸ್ಟಿಕ್‌ ಇತ್ಯಾದಿ ಬೇರೆಯವರ ಜೊತೆ ಶೇರ್‌ ಮಾಡಬೇಡಿ. ಪ್ರತಿ ಸಲ ಒಂದೇ ಬ್ರಶ್‌ ನಿಂದ ಮೇಕಪ್‌ ಮಾಡಿಕೊಂಡರೆ ಬ್ಯಾಕ್ಟೀರಿಯಾ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ  3-4 ತಿಂಗಳ ನಂತರ, ಐ ಲೈನರ್‌ ಬ್ರಶ್ಶನ್ನು ಬದಲಿಸಿ.

ಉತ್ತಮ ಬ್ರಾಂಡ್ಸ್ ಲೈನರ್ಸ್

ರೆವಲಾನ್‌ ಕಲರ್‌ ಸ್ಟೇ ಎಗ್ಸಾಸ್ಟಿ ಫೈ ಲಿಕ್ವಿಡ್‌ ಲೈನರ್‌

ಕಲರ್‌ ಬಾರ್‌ ಜಸ್ಟ್ ಸ್ಮೋಕಿ ಐ ಪೆನ್ಸಿಲ್ ಲೈನರ್‌

ಪ್ರೊಫೆಶನ್‌ ಮೇಕಪ್‌ ಮ್ಯಾಟ್‌ ಲಿಕ್ವಿಡ್‌ ಲೈನರ್‌

ಬಾಬಿ ಬ್ರೌನ್‌ ಲಾಂಗ್‌ ವೇರ್‌ ಜೆಲ್ ‌ಐ ಲೈನರ್‌

ಮ್ಯಾಕ್‌ ಪ್ಲಯಿಡ್‌ ಲೈನ್‌ ಜೆಲ್ ‌ಐ ಲೈನರ್‌

ಲ್ಯಾಕ್ಮೆ ಆ್ಯಬ್‌ ಸಲ್ಯೂಟ್‌ ಗ್ಲಾಸ್‌ ಆರ್ಟಿಸ್ಟ್ ಐ ಲೈನರ್‌

1 ಗ್ಲಾಮರ್‌ ಸ್ಪಿಕ್‌ ಐ ಲೈನರ್‌

ಮೆಬೆಲೀನ್‌ ವಾಸ್ಟಿಂಗ್‌ ಡ್ರಾಮಾ ಜೆಲ್ ಲೈನರ್‌

ಲೊರಿಯನ್‌ ಪ್ಯಾರಿಸ್‌ ಸೂಪರ್‌ ಲೈನರ್‌ ಸೂಪರ್‌ ಸ್ಟಾರ್‌ ಓ ಡಿಸೈನರ್‌

ಕಲರ್‌ ಬಾರ್‌ ಪ್ರಿಸಿಶನ್‌ ವಾಟರ್‌ ಪ್ರೂಫ್‌ ಲಿಕ್ವಿಡ್‌ ಐ ಲೈನರ್‌

ಲ್ಯಾಕ್ಮೆ ಐಕಾನಿಕ್‌ ಲೈನರ್‌ ಪೆನ್‌ ಫೈನ್‌ ಟಿಪ್‌

ಮೆಬೆಲೀನ್‌ ನ್ಯೂಯಾರ್ಕ್‌ಹದೀದ್‌ ಜೆಲ್ ‌ಐ ಲೈನರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ