ನಾವೆಲ್ಲರೂ ಸದಾ ಹೊಸ ವರ್ಷಕ್ಕೆ ಸ್ವಾಗತ ಕೋರಲು ಬಲು ಉತ್ಸುಕರಾಗಿ ತುದಿಗಾಲಲ್ಲಿ ನಿಂತಿರುತ್ತೇವೆ! ಏಕೆಂದರೆ ಹೊಸ ವರ್ಷ ನಮಗೆಲ್ಲ ಹೊಸತೊಂದು ಅಕಾಶವನ್ನು ತಂದುಕೊಡುತ್ತದೆ. ನಮ್ಮಲ್ಲಿ ಅದು ಹೆಚ್ಚಿನ ಆತ್ಮವಿಶ್ವಾಸ ಹಾಗೂ ಏನಾದರೂ ಕ್ರಿಯೇಟಿವ್ ಆಗಿ ಮಾಡಿ ತೋರಿಸು ಹುಮ್ಮಸ್ಸನ್ನು ಹುಟ್ಟುಹಾಕುತ್ತದೆ. ಈ ಹೊಸ ವರ್ಷಾಚರಣೆಗಾಗಿ ನಾವು ಏನೇನೋ ಪ್ಲಾನ್ ಮಾಡುತ್ತೇವೆ. ಹೊಸ ವರ್ಷ ಬರುತ್ತಿದ್ದಂತೆ ಅನೇಕ ಪಾರ್ಟಿಗಳನ್ನು ಅಟೆಂಡ್‌ ಮಾಡುತ್ತೇವೆ. ನೀವು ಸಹ ಹೀಗೆಯೇ ನ್ಯೂ ಇಯರ್ ಪಾರ್ಟಿಗಾಗಿ ಆತ್ಮೀಯರನ್ನು ಸೇರಿಸಿಕೊಂಡು ಎಲ್ಲಾದರೂ ಟೂರ್‌ ಹೊರಡುವ ಐಡಿಯಾ ಹಾಕಿಕೊಂಡಿದ್ದರೆ, ಈಗಿನಿಂದಲೇ ತಯಾರಿ ಆರಂಭಿಸಿ.

ಈ ತರಹ ನ್ಯೂ ಇಯರ್‌ ಪಾರ್ಟಿಗಾಗಿ ನೀವು ಸಿದ್ಧರಾಗುತ್ತಿದ್ದರೆ, ನಿಮ್ಮ ಸ್ಕಿನ್‌ ಕೇರ್‌ ರೊಟೀನ್‌ಕಡೆಯೂ ಹೆಚ್ಚಿನ ಗಮನ ಕೊಡಿ. ಇದರಿಂದ ನಿಮ್ಮ ಮುಖದಲ್ಲಿ ಒಂದು ವಿಭಿನ್ನವಾದ ಕಾಂತಿ, ಕಳೆ ಕೂಡಿಕೊಳ್ಳುತ್ತದೆ. ಹೀಗಾಗಿ ಹೊಸ ವರ್ಷದಲ್ಲಿ ನೀವು ಎಲ್ಲರೆದುರು ಹೊಸ ಕಾಂತಿಯುತ ಚರ್ಮದೊಂದಿಗೆ ಮಿರಿಮಿರಿ ಮಿಂಚಬಹುದು.

ಮುಖದಲ್ಲಿ ಇಂಥ ಕಾಂತಿ ತರುವುದಕ್ಕಾಗಿ, ಈ ಕೆಳಗಿನ ಕ್ರಮಗಳನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಿ. ಇದಕ್ಕಾಗಿ ಬಹಳ ಸಮಯವೇನೂ ಹಿಡಿಯದು. ನೀವು ಈ ನ್ಯೂ ಇಯರ್‌ ಈವ್ ನಲ್ಲಿ ಹೆಚ್ಚಿನ ಗ್ಲೋ ಪಡೆಯಲು ಈ ಸಲಹೆಗಳನ್ನು ಅಗತ್ಯ ಅನುಸರಿಸಿ :

shutterstock_125496500

ಎಕ್ಸ್ ಫಾಲಿಯೇಟ್ಮಾಡಿ  : ನಿಮ್ಮ ಚರ್ಮದಲ್ಲಿ ಬ್ಲ್ಯಾಕ್‌ ಯಾ ವೈಟ್‌ ಹೆಡ್ಸ್ ಹೆಚ್ಚಾಗಿ ಕಾಣಿಸಿಕೊಂಡಿದ್ದರೆ, ಡೆಡ್‌ ಸ್ಕಿನ್‌ ಕಾರಣ ಮುಖ ಬಹಳ ಡಲ್ ಎನಿಸಿದರೆ, ಈ ಸಮಸ್ಯೆಯಿಂದ ಪಾರಾಗಲು ನೀವು ನಿಯಮಿತವಾಗಿ ನಿಮ್ಮ ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಿಸುತ್ತಿರಬೇಕು. ಹೊಸ ವರ್ಷದಲ್ಲಿ ಹೊಳೆ ಹೊಳೆಯುವ ಮುಖ ಹೊಂದಲು, ಈ ಕ್ರಮ ಅತಿ ಅಗತ್ಯ. ಇದಕ್ಕಾಗಿ ನೀವು ರೆಡಿಮೇಡ್‌ ಎಕ್ಸ್ ಫಾಲಿಯೇಟಿಂಗ್‌ ಸ್ಕ್ರಬ್‌ ಬಳಸಿರಿ ಅಥವಾ ಮನೆಯಲ್ಲೇ ಎಕ್ಸ್ ಫಾಲಿಯೇಟರ್‌ ತಯಾರಿಸಿಕೊಳ್ಳಿ.

ಇದಕ್ಕಾಗಿ ನೀವು ಹೈಡ್ರೇಟಿಂಗ್‌ಮಾಯಿಶ್ಚರೈಸಿಂಗ್‌ ಅಂಶಗಳನ್ನುಳ್ಳ ಘಟಕಗಳ ಮಿಶ್ರಣ ಕಲಸಬೇಕು. ವಾರಕ್ಕೆ 2 ಸಲ ಹೀಗೆ ಸ್ಕ್ರಬ್‌ ಮಾಡಿಕೊಳ್ಳಿ, ಇದಕ್ಕಿಂತ ಹೆಚ್ಚು ಬೇಡ, ಚರ್ಮ ಡ್ರೈ ಆದೀತು.

ಚರ್ಮವನ್ನು ಕಲೆ ಸುಕ್ಕುಗಳಿಂದ ಮುಕ್ತಗೊಳಿಸಿ : ನಿಮ್ಮ ಚರ್ಮದಲ್ಲಿ ಹೆಚ್ಚಿನಂಶ ಡಾರ್ಕ್‌ ಸ್ಪಾಟ್ಸ್ ಇದ್ದು, ಅದು ನಿಮ್ಮ ಕೀಳರಿಮೆಗೆ ಕಾರಣವಾಗಿದ್ದರೆ, ಚಿಂತೆ ಬೇಡ. ತಕ್ಷಣ ನಿಮ್ಮ ಸ್ಕಿನ್‌ ಕೇರ್‌ ರೊಟೀನ್‌ ನಲ್ಲಿ ಹ್ಯಾಲುರೋನಿಕ್‌ ಆ್ಯಸಿಡ್‌ ಯಾ ರೆಟಿನಾಲ್ ‌ನಂಥ ಘಟಕಗಳನ್ನು ಬಳಸಿ, ಇಂಥವನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ನೀವು ಬಯಸಿದರೆ, ನಿಮ್ಮ ಚರ್ಮಕ್ಕೆ ಹೊಂದುವಂಥ ಎಸೆನ್ಶಿಯ್‌ ಆಯಿಲ್ ‌ಸಹ ಬಳಸಬಹುದು. ಸೂಕ್ತ ಆ್ಯಂಟಿ ಸ್ಪಾಟ್ ಮಾಯಿಶ್ಟರೈಸರ್‌ ಆರಿಸಿಕೊಂಡು, ನಿಮಗೆ ಬೇಕಾದ ವೈಟ್‌ ನಿಂಗ್‌ ಟ್ರೀಟ್‌ ಮೆಂಟ್‌ ಪಡೆಯಿರಿ. ದಿನಕ್ಕೆ 2 ಸಲ ಇಂಥ ಸೀರಂ ಬಳಸುವುದರಿಂದ, ಬಲು ಬೇಗ ನಿಮ್ಮ ಚರ್ಮದಲ್ಲಿ ಸುಧಾರಣೆಯಾಗಿ ಕಾಂತಿ ಕೂಡುತ್ತದೆ.

ಸ್ಕಿನ್ಸೈಕ್ಲಿಂಗ್‌ : ಇಡೀ ವಾರ ಹೊರಗಿನ ಧೂಳು, ಬಿಸಿಲಲ್ಲಿ ಓಡಾಡಿದ್ದರಿಂದ ಚರ್ಮ ಬೇಗ ಪ್ರಭಾವಿತಗೊಳ್ಳುತ್ತದೆ. ಹೀಗಾಗಿ ಇದನ್ನು ರಿಜುವಿನೇಟ್‌ ಮಾಡಲು, ಸ್ಕಿನ್‌ ಸೈಕ್ಲಿಂಗ್‌ ಫಾಲೋ ಮಾಡಿ. ವಾರದಲ್ಲಿ 4 ದಿನ ಇದನ್ನು ನಿಯಮಿತವಾಗಿ ಫಾಲೋ ಮಾಡಬೇಕು. ಇದರಲ್ಲಿ ಮೊದಲ ರಾತ್ರಿ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಬೇಕು. ಇದಕ್ಕಾಗಿ ಬೇಕಾದ ಸೂಕ್ತ ಕೆಮಿಕಲ್ಸ್ ಬಳಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ