ಗಝಲ್ ಅಲಘ್
ಗಝಲ್ ಅಲಘ್ ಎಂಥ ಅದ್ಭುತ ಶಕ್ತಿ ಎಂದರೆ, ತನ್ನ ಮಗುವಿನ ಸಂಕಷ್ಟಗಳ ನಿವಾರಣೆಗಾಗಿ, ತನಗೆ ಮಾತ್ರವಲ್ಲದೆ ಇತರ ಎಲ್ಲಾ ಹೆಂಗಸರಿಗೂ ಮಾದರಿಯಾಗುವಂತೆ ಒಂದು ಬಿಸ್ ನೆಸ್ ಆರಂಭಿಸಿ, ಪರಿಹಾರ ಕಂಡುಕೊಂಡರು. ಆಕೆ ನ್ಯಾಚುರ್ ಬೇಬಿ ಬ್ಯೂಟಿ ಪ್ರಾಡಕ್ಟ್ಸ್ ತಯಾರಿಸುವ `ಮಾಮಾ ಅರ್ಥ್’ ಕಂಪನಿ ಸ್ಥಾಪಿಸಿದರು. ಇದು ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯಕ್ಕೆ ಬೇಕಾದ ಉತ್ಪನ್ನ ತಯಾರಿಸುತ್ತದೆ. ಜೊತೆಗೆ ಸಣ್ಣ ಶಿಶುಗಳಿಗೂ ಕೂಡ.
ಈಕೆಗೆ ಬಿಸ್ ನೆಸ್ ಟುಡೇ ಫಾರ್ಚ್ಯೂನ್ ಇಂಡಿಯಾದ ಮೋಸ್ಟ್ ಪವರ್ ವುಮನ್-2023, ಅಂಡರ್, ಫಾಸ್ಟ ಫಾರ್ವರ್ಡ್ ವುಮನ್ ಅಚೀರ್ಸ್ ಅವಾರ್ಡ್, ಬಿಸ್ ನೆಸ್ ಟುಡೇ ಮೋಸ್ಟ್ ಪವರ್ ವುಮನ್-2024, ಬಿಸ್ ನೆಸ್ ವರ್ಲ್ಡ್-40 ಅಂಡರ್ 40 ಇತ್ಯಾದಿ ಪ್ರಶಸ್ತಿಗಳು ಅರಸಿ ಬಂದವು. ಕಲೆಯ ಅಭಿರುಚಿಯುಳ್ಳ ಈಕೆಯ ರಚನೆಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಗಳು ಮಾಮೂಲಿ ಎನಿಸಿವೆ. ದೇಶದ ಅತಿ ಶ್ರೇಷ್ಠ ಸಾಧನೆಯ 10 ಮಂದಿ ಮಹಿಳಾ ಕಲಾವಿದರಲ್ಲಿ ಈಕೆ ಒಬ್ಬರೆನಿಸಿದ್ದಾರೆ ಕಾರ್ಪೊರೇಟ್ ಟ್ರೇನರ್, ಅಪ್ಪಟ ದೀಶೀ ಕಲಾವಿದೆ, ಜವಾಬ್ದಾರಿಯುತ ತಾಯಿಯಾಗಿರುವ ಈಕೆ ಕೌಟುಂಬಿಕ ಹಾಗೂ ವೃತ್ತಿಪರ ರಂಗದಲ್ಲೂ ಸಹ ಸೈ ಎನಿಸಿದ್ದಾರೆ. ಈಕೆ ಸೋನಿ ಚಾನೆಲ್ ನ `ಶಾರ್ಕ್ ಟ್ಯಾಂಕ್’ ಶೋ-1ರ ಪ್ರಮುಖ ಜಜ್ ಗಳಲ್ಲಿ ಒಬ್ಬರು. ಈಕೆ 2024ರ ಸ್ಟಾರ್ಟ್ ಅಪ್ ಕಮಿಟಿಯ ಸಹ ಅಧ್ಯಕ್ಷೆಯೂ ಹೌದು.
ಈಕೆ ಚಂಡೀಘಡ ರಾಜ್ಯದ ಒಂದು ಅವಿಭಕ್ತ ಕುಟುಂಬಕ್ಕೆ ಸೇರಿದವರು. ಮೂಲತಃ ಬಿಸ್ ನೆಸ್ ಕುಟುಂಬ ಇವರದು. ಲಾಭ ಇದ್ದರೆ ಮಾತ್ರ ಅದು ಬಿಸ್ ನೆಸ್, ಇತ್ಯಾದಿ ಕೇಳಿಕೊಂಡೇ ಬೆಳೆದರು. ಶಾಲಾ ಕಾಲೇಜಿನ ಆಟಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದು. ಮುಂದೆ ಎಂಜಿನಿಯರಿಂಗ್ ಸೇರಿದರೂ ಆಸಕ್ತಿ ಎಲ್ಲಾ ಬಿಸ್ ನೆಸ್ ನಲ್ಲೇ ಇತ್ತು.
ನಿಮಗೆ ಇಷ್ಟವಿಲ್ಲದ ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಪರಿಶ್ರಮ ಪಟ್ಟರೂ ಪ್ರಗತಿ ಸಾಧ್ಯವಿಲ್ಲ. ಬದಲಿಗೆ ನಿಮ್ಮ ಅಭಿರುಚಿಗೆ ತಕ್ಕಂಥ ಕ್ಷೇತ್ರದಲ್ಲಿ ಹೆಚ್ಚು ಕಷ್ಟಪಟ್ಟಾಗ ಮಾತ್ರ ಯಶಸ್ಸು ಸಾಧ್ಯ, ಎನ್ನುತ್ತಾರೆ.
ಹೀಗಾಗಿ ತಮ್ಮ ಮೆಚ್ಚಿನ ಕಂಪ್ಯೂಟರ್ ನಿಂದ ಡಿಪ್ಲೊಮಾ ಪಡೆದರು. ಹೀಗೆ ಕೋ ಆಪರೇಟಿವ್ ಕೆರಿಯರ್ ಆರಂಭಿಸಿದರು. 4 ವರ್ಷ ಈ ರೀತಿ ತಮ್ಮ ಸಾಫ್ಟ್ ವೇರ್ ಕೌಶಲದ ವೃತ್ತಿಯಲ್ಲಿದ್ದರು.
ಮದುವೆ ನಂತರ ನಿಮ್ಮ ಜೀವನ ಹೇಗೆ ಬದಲಾಯ್ತು? ಹೊಸ ಕಂಪನಿ ಆರಂಭಿಸಿದ್ದು ಹೇಗೆ? ವರುಣ್ ಜೊತೆ ಸ್ನೇಹ, ಪ್ರೇಮ ಮದುವೆಯಲ್ಲಿ ಮುಕ್ತಾಯವಾಯಿತು. ಮದುವೆ ನಂತರ ಆತ ಕೆಲಸಕ್ಕಾಗಿ ಫಿಲಿಪೈನ್ಸ್ಗೆ ಹೊರಟಾಗ ಇವರೂ ಹೊರಡಬೇಕಾಯ್ತು. ಅಲ್ಲಿ ಹೆಚ್ಚಿನ ಬಿಡುವಿನ ಸಮಯ ಪೇಂಟಿಂಗ್ ಮುಂದುವರಿಸಲು ಸಹಕಾರಿಯಾಯ್ತು. ಪತಿಯ ನೆರವಿನಿಂದ ಅದನ್ನು ಆರ್ಟ್ ಅಕಾಡೆಮಿಗಳಿಗೆ ಕಳುಹಿಸಿದರು. ಹೀಗೆ ನ್ಯೂಯಾರ್ಕ್ ಆರ್ಟ್ ಅಕಾಡೆಮಿ ಸೇರಿ ಈಕೆ ಪ್ರೊಫೆಶನಲಿ ಅದನ್ನು ಕಲಿಯುವಂತಾಯ್ತು. ಅಲ್ಲಿಂದ ಮುಂದೆ ಕಲಾವಿದೆಯಾಗಿ ಬೆಳೆದು ಅಸಂಖ್ಯಾತ ಪ್ರದರ್ಶನ ಏರ್ಪಡಿಸುವಂತಾಯ್ತು.
ದೊಡ್ಡ ಮಗ ಹುಟ್ಟಿದ ನಂತರ ಪರಿಸ್ಥಿತಿ ಬದಲಾಯಿತು. ಮಗುವಿಗಾಗಿ ಟಾಕ್ಸಿನ್ ಫ್ರೀ ನ್ಯಾಚುರಲ್ ಪ್ರಾಡಕ್ಟ್ಸ್ ಬೇಕಿತ್ತು. ಅಮೆರಿಕಾದ ವಾಸ ಆ ಬಗ್ಗೆ ಇವರಿಗೆ ಮಾಹಿತಿ ನೀಡಿತ್ತು. ಒಂದು ಬ್ರಾಂಡ್ ನಲ್ಲಿ ಇಂಥ ವಿಷಕಾರಿ ಘಟಕ ಬೆರೆತಿದೆ ಎಂದು ಅದನ್ನು ಅಲ್ಲಿ ನಿಷೇಧಿಸಿದ್ದರು. ಇವರ ಮಗನಿಗೆ ಬಂದ ಗಿಫ್ಟ್ ನಲ್ಲಿ ಅಂಥದ್ದೇ ಬ್ರಾಂಡ್ಇದ್ದವು. ಇವರ ಮಗ ಅಗಸ್ತ್ಯನಿಗೆ ಚರ್ಮದ ಅಲರ್ಜಿ ಕಾಡುತ್ತಿತ್ತು. ಹೀಗಾಗಿ ಅಲ್ಲಿಂದಲೇ ಇಂಥ ಪ್ರಾಡಕ್ಟ್ಸ್ ತರಿಸಿ ಮಗನಿಗೆ ಕೊಡುತ್ತಿದ್ದರು. ಅತಿ ದುಬಾರಿಯಾದ ಇದು ಹೆಚ್ಚು ದಿನ ನಡೆಯುವಂತಿರಲಿಲ್ಲ.
ಭಾರತದಲ್ಲೇ ಸಣ್ಣ ಮಕ್ಕಳಿಗೆ ಇಂಥ ಸೂಕ್ಷ್ಮ ಪ್ರಾಡಕ್ಟ್ಸ್ ಏಕೆ ಸಿಗುವಂತಾಗಬಾರದು ಎಂದು ಯೋಚಿಸಿ, ಪತಿಯ ಸಲಹೆಯಂತೆ ತಾವೇ ಅಂಥ ಒಂದು ಕಂಪನಿ ಸ್ಥಾಪಿಸಲು ಮುಂದಾದರು. ಇದು ಅವರಿಗೆ ಟರ್ನಿಂಗ್ ಪಾಯಿಂಟ್ ಆಯ್ತು. ಬೇಬಿ ಪ್ರಾಡಕ್ಟ್ಸ್ ಗೆ ಬೇಕಾದ ಕಚ್ಚಾ ಸಾಮಗ್ರಿ ಭಾರತದಲ್ಲಿ ಅಗ್ಗವಾಗಿ ಸಿಗುತ್ತಿತ್ತು. ಇದನ್ನು ಬಳಸಿಕೊಂಡು ಇಲ್ಲೇ ತಯಾರಿಸಲು ನಿಶ್ಚಯಿಸಿದರು. ಈ ರೀತಿ 2016ರಲ್ಲಿ 6 ಉತ್ಪನ್ನಗಳೊಂದಿಗೆ ಈ ಕಂಪನಿ ಶುರುವಾಯಿತು.
ನೀವು ಗ್ರಾಹಕರ ವಿಶ್ವಾಸ ಗಳಿಸಿದ್ದು ಹೇಗೆ?
ನಮ್ಮ ಪ್ರಾಡಕ್ಟ್ಸ್ ಸದಾ ಸೇಫ್, ಟಾಕ್ಸಿನ್ ಫ್ರೀ, ನ್ಯಾಚುರಲ್ ಘಟಕಗಳಿಂದ ತುಂಬಿರಬೇಕೆಂದು ನಿರ್ಧರಿಸಿ ಹಾಗೆಯೇ ಮಾಡಿದೆವು. ಆ ಕುರಿತು ಭಾರತೀಯ ಪೋಷಕರಿಗೆ ಒಪ್ಪಿಸುವುದು ಸುಲಭ ಆಗಿರಲಿಲ್ಲ. ಹೀಗಾಗಿ ನಾವು `ಮೇಡ್ ಸೇಫ್ಆರ್ಗನೈಸೇಷನ್ ‘ನಿಂದ ನಮ್ಮ ಪ್ರಾಡಕ್ಟ್ಸ್ ಸರ್ಟಿಫೈ ಮಾಡಿಸಿದೆವು. ಅದೊಂದು ಲಾಭ ಕೇಳದ ಸಂಸ್ಥೆಯಾಗಿದ್ದು, ಯಾವುದೇ ಉತ್ಪನ್ನದ ಮೂಲ ಘಟಕ ಪರೀಕ್ಷಿಸಿ ಒಪ್ಪಿಗೆ ನೀಡುತ್ತದೆ. ಇದರ ಸೇಫ್ಟಿ ಸ್ಟಾಂಡರ್ಡ್ಸ್ ಮಾನವರಿಗೆ ಮಾತ್ರವಲ್ಲದೆ, ಪರಿಸರ ಕಾಳಜಿ, ಜಲಚರಗಳ ಕಾಳಜಿವರೆಗೆ ಇದೆ. ಕೇವಲ ಭಾರತವಲ್ಲ, ಇಡೀ ಏಷ್ಯಾ ಖಂಡಕ್ಕೆ ನಾವೇ ಈ ಸರ್ಟಿಫಿಕೇಟ್ ಪಡೆದ ಮೊದಲಿಗರು!
ಇದಕ್ಕೆ ಮೊದಲು ಬೇರೆ ಯಾವ ಬ್ರಾಂಡ್ ನವರೂ ಬ್ಯೂಟಿ ಪ್ರಾಡಕ್ಟ್ಸ್ನಲ್ಲಿ ಸೇಫ್ಟಿ ಬಗ್ಗೆ ಕಾಳಜಿ ವಹಿಸಿರಲ್ಲಿ. ಹೀಗಾಗಿ ಗ್ರಾಹಕರ ವಿಶ್ವಾಸ ದೊರಕಿತು. ನಮ್ಮ ಇಡೀ ಬ್ರಾಂಡ್ ಸೆಟ್ ಅಪ್ ಅಪಾರ ಕಾಳಜಿಯುಳ್ಳ ಪೇರೆಂಟ್ಸ್ ದೇ ಆಗಿತ್ತು. ನಾವೆಲ್ಲರೂ ಪೇರೆಂಟ್ಸ್ ಆದ್ದರಿಂದ ಗ್ರಾಹಕರ ಕಾಳಜಿ ನಮ್ಮ ಮೊದಲ ಆದ್ಯತೆ ಆಯ್ತು. ನೇರ ಅವರೊಂದಿಗೆ ಮಾತನಾಡಿ, ಅವರ ಸಲಹೆ ಪಡೆದು, ಅದನ್ನು ಬಳಕೆಗೆ ತರುತ್ತಿದ್ದೆ. ಪ್ರಸ್ತುತ ಪ್ರಾಡಕ್ಟ್ಸ್ ನ ಸಮಸ್ಯೆಗಳನ್ನು ಪರಿಶೀಸಿ ನಾವು ಮುಂದುವರಿಯುತ್ತಿದ್ದೆವು. ನಮ್ಮ ಪ್ರಾಡಕ್ಟ್ಸ್ ಲಾಂಚ್ ಮಾಡುವ ಮೊದಲು ಸಾವಿರಾರು ಗ್ರಾಹಕರಿಂದ ಫೀಡ್ ಬ್ಯಾಕ್ ಪಡೆಯುತ್ತಿದ್ದೆ. ಹೀಗೆ ಕೊರತೆ ನೀಗಿಸಿ, ಎಲ್ಲರ ಬೇಡಿಕೆ ಪೂರೈಸುತ್ತಿದ್ದೆ. 95%ಗೂ ಅಧಿಕ ಗ್ರಾಹಕರು ಇಂಥ ಪ್ರಾಡಕ್ಟ್ಸ್ ನ್ನೇ ಬಳಸುತ್ತೇವೆ ಎಂದು ಖಾತ್ರಿ ಪಡಿಸಿದ್ದನ್ನೇ ನಾವು ನಂತರ ಲಾಂಚ್ ಮಾಡುತ್ತಿದ್ದೆ. ಈ ರೀತಿ ಗ್ರಾಹಕರ ನಂಬಿಕೆ ಬೆಳೆಯಿತು.
ನಾವು ಆ ಕಾಲದ ಅಜ್ಜಿಯರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ಇದನ್ನೇ ನಮ್ಮ ಪ್ರಾಡಕ್ಟ್ಸ್ ನಲ್ಲಿ ಬಳಸಿದ್ದೇವೆ. ಇಂಗು ಸೋಂಪನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ, ಮಗುವಿನ ಹೊಟ್ಟೆಗೆ ಮಸಾಜ್ ಮಾಡುವುದರಿಂದ ಅದರ ಹೊಟ್ಟೆ ನೋವು ನಿವಾರಣೆ ಆಗುತ್ತಿತ್ತೋ ಅಂಥದ್ದನ್ನೇ ಪ್ರಾಕ್ಟಿಕಲ್ ಆಗಿ ಬಳಸಿದ್ದೇವೆ. ಇದರಿಂದ ಮಗುವಿಗೆ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಈ ರೀತಿ ನಮ್ಮ `ಇಂಗು ಟಮೀ ರೋಲ್ ಆನ್’ ಸಿದ್ಧವಾಯ್ತು. 6 ತಿಂಗಳವರೆಗಿನ ಮಕ್ಕಳಿಗೆ ಕೆಮಿಕಲ್ ಪ್ರಾಡಕ್ಟ್ಸ್ ಬೇಕಾಗುವುದಿಲ್ಲ. ಇದೇ ರೀತಿ ಸೊಳ್ಳೆಗಳ ನಿವಾರಣೆಗಾಗಿ ನಾವು ನ್ಯಾಚುರಲ್ ಮಸ್ಕ್ಯುಟೊ ರೆಪಿಲೆಂಟ್ ಸಿದ್ಧಪಡಿಸಿದೆವು, ಅದು ನಮ್ಮ ಬೆಸ್ಟ್ ಸೆಲ್ಲರ್! ಹಾಗೆಯೇ ಮಗು, ಗರ್ಭಿಣಿ, ಬಾಣಂತಿಯರಿಗೆ ಬೇಕಾಗುವ ಲೇಪನ, ಲೇಹ್ಯಗಳನ್ನೂ ತಯಾರಿಸಿದ್ದೇವೆ!
– ಪ್ರತಿನಿಧಿ