ಪ್ರ : ನನ್ನ ಮಗಳು ಹುಟ್ಟಿದ ನಂತರ ನನ್ನ ಹೊಕ್ಕಳ ಕೆಳಭಾಗದಲ್ಲಿ ಸ್ಟ್ರೆಚ್ ಮಾರ್ಕ್ಸ್ ಹೆಚ್ಚಾಗಿದೆ. ಇದನ್ನು ದೂರಗೊಳಿಸುವುದು ಹೇಗೆ?
ಉ : ನಿಮಗೆ ಸ್ಟ್ರೆಚ್ ಮಾರ್ಕ್ ಇರುವ ಕಡೆ ವರ್ಜಿನ್ ಕೊಕೋನಟ್ ಆಯಿಲ್ ಸವರಿಕೊಳ್ಳಿ. ಇದರಿಂದ ಭಾರಿ ಲಾಭವಿದೆ. ಇದು ಚರ್ಮದ ಬಣ್ಣಕ್ಕೆ ಹೊಳಪು ನೀಡುವುದರಲ್ಲೂ ಸದಾ ಮುಂದು. ಇದರಿಂದ ಚರ್ಮದ ಗ್ಲೋ ಹೆಚ್ಚುತ್ತದೆ, ಸಹಜವಾಗಿ ಅದು ಮೃದುವಾಗುತ್ತದೆ. ಇಷ್ಟು ಮಾತ್ರವಲ್ಲ, ಮೈ ಮೇಲೆ ಕಂಡುಬರುವ ಯಾವುದೇ ಬಗೆಯ ಕಲೆ ಗುರುತಿನ ನಿವಾರಣೆಗೂ, ಗೀಚು ತರಚು ಗಾಯದ ಕಲೆ ಹೋಗಿಸುವಲ್ಲಿಯೂ ಈ ಆಯಿಲ್ ಪರಿಣಾಮಕಾರಿ! ರಾತ್ರಿ ಮಲಗುವ ಮುನ್ನ, ನೈಟ್ ಕ್ರೀಂ ತರಹ ಮುಖಕ್ಕೆ ಈ ಆಯಿಲ್ ಹಚ್ಚಿ ಮಲಗಿರಿ.
ಪ್ರ : ನನ್ನ ಚರ್ಮ ಆಯ್ಲಿ ಆಗಿದೆ. ನಾನು ಮುಖಕ್ಕೆ ಏನನ್ನು ಹಚ್ಚಿದರೆ ಹೆಚ್ಚಿನಂಶದ ಜಿಡ್ಡು ಹೋಗುತ್ತದೆ?
ಉ : ನಿಮ್ಮ ಆಯ್ಲಿ ಮುಖಕ್ಕೆ ಮುಲ್ತಾನಿ ಮಿಟ್ಟಿಯ ಪೇಸ್ಟ್ ಬಲು ಲಾಭಕರ. ನಿಮಗೆ ಬೆಳಗ್ಗೆ ಸಂಜೆ ಬಿಡುವಾದಾಗ, ಇದನ್ನು 5-6 ನಿಮಿಷ ಮುಖಕ್ಕೆ ಹಚ್ಚಿಕೊಂಡು ಹಾಗೇ ಒಣಗಿಸಿ. ನಂತರ ತುಸು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಸಿಗುವ ಮತ್ತೊಂದು ಲಾಭ ಸಂಪೂರ್ಣ ಜಿಡ್ಡು ತೊಲಗಿ, ಮುಖದಲ್ಲಿನ ಆ್ಯಕ್ನೆ ಮೊಡವೆಗಳ ಕಾಟ ದೂರವಾಗುತ್ತದೆ. ಇದರಲ್ಲಿ ಮೆಗ್ನೀಶಿಯಂ ಕ್ಲೋರೈಡ್ ಅಂಶವಿದ್ದು, ಅದು ಆಯ್ಲಿ ಸ್ಕಿನ್ನಿನ ಎಲ್ಲಾ ಕುಂದು ಕೊರತೆಗಳನ್ನೂ ನೀಗಿಸುತ್ತದೆ. ಮುಲ್ತಾನಿ ಮಿಟ್ಟಿ ಚರ್ಮವನ್ನು ಸಂಪೂರ್ಣ ಕ್ಲೀನ್ ಮಾಡಿ, ನಿಮಿಷಗಳಲ್ಲೇ ಶೈನಿಂಗ್ ಮಾಡುತ್ತದೆ.
ಪ್ರ : ನನ್ನ ಕೂದಲು ಮಳೆಗಾಲದಲ್ಲಿ ಬಹಳ ಅಂಟಂಟಾಗಿ ಹೋಗುತ್ತದೆ, ಜೊತೆಗೆ ಅದರಲ್ಲಿ ಜಾಸ್ತಿ ತಲೆ ಹೊಟ್ಟು ಸೇರಿಕೊಳ್ಳುತ್ತದೆ. ನನ್ನ ಈ ಸಮಸ್ಯೆ ದೂರ ಮಾಡಲು ಏನಾದರೂ ಉಪಾಯ ಇದ್ದರೆ ತಿಳಿಸಿ.
ಉ : ನೀವು ಶ್ಯಾಂಪೂನಿಂದ ತಲೆಗೂದಲು ತೊಳೆದ ನಂತರ, ಕೂದಲಿನ ಆರೈಕೆಗಾಗಿ ವಿನಿಗರ್ ಬಳಸಿಕೊಳ್ಳಿ. ಇದರಿಂದ ಕೂದಲಿನ ಬುಡವಾದ ಸ್ಕಾಲ್ಪ್ ನಲ್ಲಿ ರಕ್ತ ಸಂಚಾರ ಸುಗಮ ಆಗುತ್ತದೆ. ಇದು ಕೂದಲಿನ ಬೆಳವಣಿಗೆಗೆ ಪೂರಕ. ಹೀಗಾಗಿ ಕೂದಲು ಉದುರುವುದು ತಪ್ಪಿ, ಅದು ಹೆಚ್ಚು ಸಶಕ್ತಗೊಳ್ಳುತ್ತದೆ.
ನಿಮ್ಮ ಕೂದಲು ಹೆಚ್ಚು ಆಯ್ಲಿ ಆಗಿದ್ದರೆ, ಶ್ಯಾಂಪೂ ನಂತರ, ನಿಂಬೆ ರಸಕ್ಕೆ ವಿನಿಗರ್ ಬೆರೆಸಿ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. 15 ನಿಮಿಷ ಬಿಟ್ಟು, ತಣ್ಣೀರಿನಿಂದ ತಲೆ ತೊಳೆಯಿರಿ. ನ್ಯಾಚುರಲ್ ವಿನಿಗರ್ ಬಳಸುವುದರಿಂದ ಕೂದಲು ಹೆಚ್ಚು ಕೋಮಲ ಆಗುವುದರ ಜೊತೆ ಜೊತೆಗೆ, ಅದರಲ್ಲಿ ಆರ್ದ್ರತೆಯೂ ಕೂಡುತ್ತದೆ. ಹೀಗಾಗಿ ಆಯ್ಲಿ ಅಂಶ ಹೋಗುವುದರಿಂದ, ಕೂದಲು ಸಿಕ್ಕಾಗುವುದಿಲ್ಲ. ನಿಮ್ಮ ತಲೆಯ ಚರ್ಮ ಶುಷ್ಕವಾಗಿದ್ದು, ಇದರಲ್ಲಿ ತಲೆಹೊಟ್ಟಿನ ಸಮಸ್ಯೆಯೂ ಇದ್ದರೆ, ತಲೆಗೂದಲನ್ನು ತೊಳೆದ ನಂತರ, ಬಾದಾಮಿ ಎಣ್ಣೆಗೆ ತುಸು ವಿನಿಗರ್ ಬೆರೆಸಿ, ತಲೆಗೆ ಹೆಚ್ಚು ಮಸಾಜ್ ಮಾಡಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ಬಹುತೇಕ ದೂರವಾಗುತ್ತದೆ.





