ನೀವು ನಿಮ್ಮ ಸೆಕ್ಸ್ ಲೈಫ್ನ್ನು ಉತ್ತಮಗೊಳಿಸಿಕೊಂಡು, ನಿಮ್ಮ ಜೀವನದಲ್ಲಿ ರೊಮಾನ್ಸ್ ಹೆಚ್ಚಿಸಿಕೊಳ್ಳ ಬಯಸಿದರೆ, ಅಗತ್ಯವಾಗಿ ಸಲಹೆಗಳನ್ನು ಅನುಸರಿಸಿ……!

ಸಾಮಾನ್ಯವಾಗಿ ಜನ ಸೆಕ್ಸ್ ಕುರಿತಾಗಿ ಸ್ವಾಭಾವಿಕವಾಗಿಯೇ ಹೆಚ್ಚು ಉತ್ಸಾಹ ತಾಳುತ್ತಾರೆ. ಸೆಕ್ಸ್ ಕುರಿತಾದ ಮಾತುಕತೆ ಸಂಗಾತಿಗಳಲ್ಲಿ ರೋಮಾಂಚನ ಹೆಚ್ಚಿಸುತ್ತದೆ, ಆದರೆ ಒಮ್ಮೊಮ್ಮೆ ಚಿಂತೆಗೂ ದೂಡುತ್ತದೆ. ಯಾವುದಾದರೂ ಸೆಕ್ಸ್ ಸಮಸ್ಯೆಗೆ ವ್ಯಕ್ತಿ ಒಳಗಾಗಿದ್ದರೆ, ಏನೋ ಗಾಢ ಟೆನ್ಶಗೆ ಗುರಿಯಾಗಿದ್ದಾನೆ ಎಂದರೆ ಸರಿ, ಆದರೆ ಕೆಲವರು ಭ್ರಾಂತಿಗೆ ಸಿಲುಕಿ ಅನಗತ್ಯ ಗಾಬರಿಗೆ ಒಳಗಾಗುತ್ತಾರೆ, ಇವರಿಗೆ ಯಾವ ಸೆಕ್ಸ್ ಸಮಸ್ಯೆಯೂ ಇರುವುದಿಲ್ಲ. ಇದರ ಪರಿಣಾಮವಾಗಿ, ಸೆಕ್ಸ್ ದೃಷ್ಟಿಯಿಂದ ಆರೋಗ್ಯ ಚೆನ್ನಾಗಿರುವ ಪತಿ ಸಹ ಎಷ್ಟೋ ಸಲ ಅತಿಯಾದ ಟೆನ್ಶನ್‌ ಗೆ ಗುರಿಯಾಗಿ, ಅವರ ದಾಂಪತ್ಯ ಜೀವನ ಸಮಸ್ಯೆಗೂ ಸಿಲುಕುತ್ತದೆ. ಇಂಥವರಿಗೆ ಕ್ರಮೇಣ ಆತ್ವವಿಶ್ವಾಸ ತಗ್ಗುತ್ತಾ ಹೋಗುತ್ತದೆ. ತಾವು ಸೆಕ್ಸ್ ಸಮಸ್ಯೆಗೆ ತುತ್ತಾಗಿಲ್ಲ ಎಂದು ನಂಬಲಿಕ್ಕೇ ಇವರು ತಯಾರಿರುವುದಿಲ್ಲ. ಅನಗತ್ಯ ಔಷಧಿಗಳ ಸೇವನೆಗೆ ತೊಡಗುತ್ತಾರೆ.

ಇದರಿಂದ ಏಳುವ ಪ್ರಶ್ನೆ ಎಂದರೆ, ಯಾವುದಾದರೂ ಸುಲಭ ವಿಧಾನಗಳಿಂದ, ತನಗೆ ಯಾವ ಸೆಕ್ಸ್ ಸಮಸ್ಯೆಯೂ ಇಲ್ಲ ಎಂದು ದಂಪತಿ ತಾವೇ ತಿಳಿದುಕೊಳ್ಳುವಂಥ ಕ್ರಮ ಇಲ್ಲವೇ? ಇದರಿಂದ ಅವರು ಸೇವಿಸುತ್ತಿರುವ ಅನಗತ್ಯ ಔಷಧಿಗಳನ್ನು ಬಿಡಬಹುದಾಗಿದೆ. ತಜ್ಞರ ಪ್ರಕಾರ, ಇಂಥವರಿಗಾಗಿಯೇ ಹಲವಾರು ವಿಧಾನಗಳಿವೆ. ಇಂಥ ವಿಧಾನಗಳನ್ನು ಸರಿಯಾಗಿ ಅನುಸರಿಸುವುದರಿಂದ ವ್ಯಕ್ತಿ ತಾನು ಯಾವುದೇ ಸೆಕ್ಸ್ ಸಮಸ್ಯೆಗೆ ಸಿಲುಕಿಲ್ಲ ಎಂದು ಸ್ಪಷ್ಟ ತಿಳಿಯಬಹುದು, ಇಂಥವರು ಚಿಂತೆಗೆ ಸಿಲುಕುವ ಅಗತ್ಯವಿಲ್ಲ, ಔಷಧಿಯೂ ಬೇಕಾಗಿಲ್ಲ.

ಸ್ಟಾಮಿನಾ ಬಗ್ಗೆ ತಿಳಿಯುವುದು ಹೇಗೆ?

ತಜ್ಞರ ಪ್ರಕಾರ ಗಂಡಸಿಗೆ ತನ್ನ ಲೈಂಗಿಕ ಶಕ್ತಿಯ ಬಗ್ಗೆ ಸಂದೇಹ ಮೂಡಿದ್ದರೆ, ತಾನು ನಿದ್ದೆಯಲ್ಲಿದ್ದಾಗ ತನ್ನ ಶಿಶ್ನ ನಿಗುರುತ್ತದೋ ಇಲ್ಲವೋ ಎಂದು ಸ್ಪಷ್ಟ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಇಂಥ ವ್ಯಕ್ತಿಗೆ ದೈಹಿಕ, ಮಾನಸಿಕ ಸಮಸ್ಯೆ ಇರದಿದ್ದರೆ, ರಾತ್ರಿಯ ಸುದೀರ್ಘ ನಿದ್ದೆಯಲ್ಲಿ ತನ್ನ ಜನನಾಂಗ ನಿಗುರಿರುವುದನ್ನು ಆತ ಅರಿಯಬಹುದು. ಕೆಲವೊಮ್ಮೆ ರಾತ್ರಿಯ ನಿದ್ದೆಯಲ್ಲೇ ಇದು ತಿಳಿಯುತ್ತದೆ ಅಥವಾ ಬೆಳಗ್ಗಿನ ಹೊತ್ತು ಇದು ಸ್ಪಷ್ಟ ತಿಳಿದು ಬರುತ್ತದೆ. ಹೀಗಾಗಿಯೇ ಮಾರ್ನಿಂಗ್‌ ಸೆಕ್ಸ್ ಬಗ್ಗೆ ಅನೇಕ ಗಂಡಸರು ಆಸಕ್ತಿ ತೋರುತ್ತಾರೆ, ಏಕೆಂದರೆ ಅವರು ಫುಲ್ ಚಾರ್ಜ್‌ ಆಗಿರುತ್ತಾರೆ. ಬೆಳಗಿನ ರಾಶಿ ಕೆಲಸ ನೆನೆದು ಹೆಂಗಸು ಇದನ್ನು ವಿರೋಧಿಸುವುದು ಸಹಜ.

ಸುದೀರ್ಘ ನಿದ್ದೆಯ ನಡುವೆ ಮೂಡುವ ಈ ಗಡಸುತನ, ಆತ ಸಂಭೋಗಕ್ಕೆ ರೆಡಿಯಾಗುವ ಮೊದಲು ಉಂಟಾಗುವ ಗಡಸುತನಕ್ಕಿಂತಲೂ ಮಿಗಿಲಾಗಿರುತ್ತದೆ. 20-25 ನಿಮಿಷ ಹಾಗೇ ಇರುತ್ತದೆ. ತಾನು ಕಾಮಕ್ಕೆ ಆಸೆ ಪಡದೆ, ಇದು ತಂತಾನೇ ನಿದ್ದೆ ಮಧ್ಯೆ ಹೇಗಾಯಿತು ಎಂದು ಆತ ಆಶ್ಚರ್ಯಪಡುತ್ತಾನೆ.

ಯಾವ ಗಂಡಸಿನ ಜೀವನಶೈಲಿ ಅನಿಯಮಿತ ಅಲ್ಲವೋ, ಆತನ ಊಟ ತಿಂಡಿ ಬ್ಯಾಲೆನ್ಸ್ಡ್ ಆಗಿದ್ದರೆ, ಆತ ಅನಗತ್ಯ ಟೆನ್ಶನ್‌ ಗೆ ಗುರಿಯಾಗದಿದ್ದರೆ, ಇಂಥ ಗಡಸುತನ ಮೂಡುವುದು ಸಹಜ, ಸ್ವಾಭಾವಿಕ. ಪ್ರತಿ ರಾತ್ರಿಯೂ ಹೀಗೇ ಆಗಬೇಕು ಎಂದೇನಿಲ್ಲ. ಆದರೆ ವಿವಾಹಿತ, ಲೈಂಗಿಕವಾಗಿ ಸಕ್ರಿಯನಾದ ಗಂಡಸಿಗೆ ಸಮಾಗಮದ 2-3 ದಿನಗಳ ನಂತರ ಆಗಬಹುದು, ಅವಿವಾಹಿತನಿಗೆ ಇನ್ನೂ ಬೇಗ ಬೇಗ ಆಗಬಹುದು.

42-21175200

ಮನೋವೈಜ್ಞಾನಿಕ ಪ್ರಭಾವ

ಈ ತರಹ ಗಡಸುತನ ಹೊಂದುವುದು ನೈಸರ್ಗಿಕ ಕ್ರಿಯೆ ವೈದ್ಯಕೀಯ ಶುಶ್ರೂಷೆಗೂ ನೆರವಾಗುತ್ತದೆ. ಯಾವ ಗಂಡಸಿಗೆ ಸಮಾಗಮದ ಸಮಯದಲ್ಲಿ ಸಹಜವಾಗಿ ಹೀಗೆ ಗಡಸುತನ ಆಗುವುದಿಲ್ಲವೋ, ಅಂಥವರ ಚಿಕಿತ್ಸೆಗೆ ಮುನ್ನ, ಈ ರೀತಿ ಆಗುವುದಕ್ಕೆ (ನಪುಂಸಕತೆಗೆ ಮೂಲ ಹುಡುಕಲು) ದೈಹಿಕ ಅಥವಾ ಮಾನಸಿಕ ಕಾರಣ ಮುಖ್ಯವೇ ಎಂಬುದನ್ನು ವಿಶ್ಲೇಷಿಸುತ್ತಾರೆ. ಇದಕ್ಕಾಗಿ ರೋಗಿಗೆ ಮಲಗುವ ಮುನ್ನ, ತನ್ನ ಗುಪ್ತಾಂಗಕ್ಕೆ ಒಂದು ಎಲಾಸ್ಟಿಕ್‌ ಉಪಕರಣ ಧರಿಸುವಂತೆ ಸಲಹೆ ನೀಡುತ್ತಾರೆ. ಈ ಉಪಕರಣ, ನಿದ್ದೆ ಮಧ್ಯೆ ಗುಪ್ತಾಂಗದ ಆಕಾರದಲ್ಲಿ ಆಗುವ ಬದಲಾಣೆಯ ಸೂಚನೆ ನೀಡುವುದರಲ್ಲಿ ಚಾಣಾಕ್ಷತನ ತೋರುತ್ತದೆ.

ಈ ಉಪಕರಣ ಗಂಡಸಿನ ಗುಪ್ತಾಂಗದಲ್ಲಿ ನಿದ್ದೆ ಮಧ್ಯೆ ಆಗಿದೆ ಎಂದು ಸೂಚಿಸಿದರೆ, ವೈದ್ಯರು ದೈಹಿಕವಾಗಿ ರೋಗಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವಿವರಿಸುತ್ತಾರೆ. ಸಮಾಗಮದ ಸಮಯದಲ್ಲಿ ಆತನಿಗೆ ಗಡಸುತನ ಆಗುತ್ತಿಲ್ಲ ಎಂದರೆ ಇದಕ್ಕೆ ಮಾನಸಿಕ ಟೆನ್ಶನ್‌ ಕಾರಣ ಎಂದು ಹೇಳುತ್ತಾರೆ. ಅಂದ್ರೆ, ಸಮಾಗಮದ ಸಂದರ್ಭದಲ್ಲಿ ಅತಿಯಾದ ಉತ್ಸುಕತೆ, ಉತ್ತೇಜನ, ಗಾಬರಿ ಇತ್ಯಾದಿಗಳ ಕಾರಣ ಆತನಿಗೆ ಈ ಸಮಸ್ಯೆ ಉಂಟಾಗಿರಬಹುದು. ದೈಹಿಕಾಗಿ ಅಂತೂ ಯಾವ ನ್ಯೂನತೆಯೂ ಇಲ್ಲ ಎಂಬುದು ಖಾತ್ರಿ ಆಗಿರುತ್ತದೆ. ಆದರೆ ನಿದ್ದೆ ಮಧ್ಯೆ ಯಾವ ಪ್ರಕ್ರಿಯೆಯನ್ನೂ ತೋರದಿದ್ದರೆ, ಆಗ ಸಮಸ್ಯೆ ಮಾನಸಿಕ ಅಲ್ಲ, ದೈಹಿಕ ಎಂದು ನಿರ್ಧರಿಸಿ, ಅದಕ್ಕೆ ಬೇಕಾದ ಚಿಕಿತ್ಸೆ ಆರಂಭಿಸುತ್ತಾರೆ.

ಗಂಡಸಿಗೆ ಹೀಗೆ ಪ್ರಕ್ರಿಯೆ ಉಂಟಾಗುವುದೇಕೆ ಎಂಬುದಕ್ಕೆ ತಜ್ಞರು ಬೇರೆ ಬೇರೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಇದು ಆಗುವುದಂತೂ ನಿಜ, ಇದು ಗಂಡಸಿನ ಲೈಂಗಿಕ ಜೀವನಕ್ಕೆ ಉತ್ತಮ ಸಂಕೇತ! ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಾಗಿ ಮಾಮೂಲಿ ಗಂಡಸರು ಈ ಪ್ರಕ್ರಿಯೆಗೆ ಆಶ್ಚರ್ಯಗೊಳ್ಳುವುದು ಬೇಡ, ಹೀಗೆ ಆಗುತ್ತಿರುವುದು ಒಳ್ಳೆಯದಕ್ಕೆ ಎಂದು ನಿಮ್ಮ ಲೈಂಗಿಕ ಜೀವನದಲ್ಲಿ ಸಂತೃಪ್ತಿ ಕಂಡುಕೊಳ್ಳಿ.

ವರದಿಗಳು ಏನು ಹೇಳುತ್ತವೆ?

ಒಂದು ವರದಿಯ ಪ್ರಕಾರ, ಲೈಂಗಿಕ ಸಕ್ರಿಯ ಗಂಡಸು, ವಯೋಬೇಧವಿಲ್ಲದೆ 20%-30%, ಸಮಯಕ್ಕೆ ಮೊದಲು ಸ್ಖಲನವಾಗುವ ಪ್ರಿಮೆಚೂರ್‌ಇಜಾಕ್ಯುಲೇಶನ್‌ ಸಮಸ್ಯೆ ಎದುರಿಸುತ್ತಾರೆ, ಎನ್ನುತ್ತದೆ. ವಾಸ್ತವದಲ್ಲಿ ಈ ಪರ್ಸೆಂಟೇಜ್‌ ಇನ್ನೂ ಹೆಚ್ಚು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಏಕೆಂದರೆ ಇಂಥ ವರದಿಗಳಿಗೆ ಪ್ರಶ್ನೆ ಉತ್ತರ ಮೂಲಕ ಮಾಹಿತಿ ನೀಡುವ ಜನ, ಬೇಕೆಂದೇ ತಮ್ಮ ಮನಸ್ಸಿನ ಮಾತನ್ನು ಮರೆಮಾಚುತ್ತಾರೆ. ಅಸಲಿ ವಿಷಯ ಅಂದ್ರೆ, ಸಮಾಗಮದ ಮಧ್ಯೆ ಸ್ಖಲನ ಬೇಗ ಆಗುವುದಕ್ಕೆ ಚಾರಣ, ಆ ಸಂದರ್ಭದಲ್ಲಿ ವ್ಯಕ್ತಿಯ ದೈಹಿಕ, ಮಾನಸಿಕ ಸ್ಥಿತಿ, ಆ ಹೆಣ್ಣಿನ ಜೊತೆ ಈತನ ಸಾಮಂಜಸ್ಯ, 2 ಸಮಾಗಮಗಳ ನಡುವಿನ ಅಂತರ, ಅದು ನಡೆಯುವ ಸ್ಥಳದ ಎಲ್ಲಾ ಅಂಶಗಳನ್ನೂ ಆಧರಿಸಿರುತ್ತದೆ.

ತಮ್ಮ ವೈವಾಹಿಕ ಜೀವನದ ಅನುಭವದಿಂದ ಜನ ಹೇಳುವುದೆಂದರೆ, ತಾವು ಆ ಸಂದರ್ಭದಲ್ಲಿ ಎಷ್ಟು ಸಲ ಸಮಾಗಮಕ್ಕೆ ಸಜ್ಜಾಗಿದ್ದೆವು (ಫ್ರೀಕ್ವೆನ್ಸಿ) ಎಂಬುದು ಅವರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಮಾನದಂಡ ಎನ್ನುತ್ತಾರೆ. ಇಲ್ಲಿ ದಂಪತಿಗಳು ತಮ್ಮ ವೈಮನಸ್ಯ ಅಥವಾ ಬೇರೆ ನೆಪದಲ್ಲಿ ಬೇಕೆಂದೇ ಸಮಾಗಮ ನಡೆಸದೇ ಇರುವವರನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ಸಮಾಗಮನದ ಹೆಸರು ಕೇಳಿದರೆ ಸಿಡುಕುವವರು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ. ಇಲ್ಲಿ ನಾವು ಸಾಮಾನ್ಯ ದಂಪತಿಗಳ ಕುರಿತು ಗಮನಿಸೋಣ, ಇವರು ಬಹುತೇಕ ವಾರಕ್ಕೆ 2 ಸಲ ಕೂಡುವರು.

ಸಾಮಾನ್ಯಾಗಿ ಒಬ್ಬ ಆರೋಗ್ಯವಂತ ಗಂಡಸು, ಯಶಸ್ವೀ ಪ್ರೇಮಭರಿತ ಸಮಾಗಮ ಹೊಂದಿದ 2-3 ದಿನಗಳಲ್ಲಿ ಮತ್ತೆ ಸೆಕ್ಸ್ ಗೆ ಆಸೆಪಡುವುದು ಅಸಹಜವಲ್ಲ. ಇದು ಸ್ತ್ರೀಪುರುಷರ ವಯಸ್ಸನ್ನೂ ಆಧರಿಸಿದೆ. 30 ವರ್ಷಕ್ಕಿಂತ ಕಿರಿಯರು, ವಾರದಲ್ಲಿ 3-4 ಸಲ ಸಮಾಗಮ ನಡೆಸುವುದು ಸಹ ಅಸಹಜವಲ್ಲ, 40+ ನಂತರ ಇದು ಕ್ರಮೇಣ ಕಡಿಮೆ ಆಗುತ್ತಾ ಹೋಗುವುದು ಮಾಮೂಲಿ.

ಇನ್ನೊಂದು ವರದಿಯ ಪ್ರಕಾರ, ವಿಶ್ವವಿಡೀ ಎಲ್ಲಾ ದಂಪತಿಗಳನ್ನೂ ವಿಚಾರಿಸಿದಾಗ, ಒಂದು ವರ್ಷಕ್ಕೆ 139 ಸಲ ಸಮಾಗಮ ಹೊಂದಿದರೆಂಬ ಅಂಕಿಸಂಖ್ಯೆ ಬೆಳಕಿಗೆ ಬರುತ್ತದೆ. ಇದರಿಂದ ವಿಶ್ವವಿಡೀ ದಂಪತಿಗಳು ವಾರದಲ್ಲಿ 2-3 ಸಲ ಸಮಾಗಮ ಬಯಸುತ್ತಾರೆ ಎಂಬುದು ಖಚಿತ. ಒಟ್ಟಾರೆ ವಾರಕ್ಕೊಮ್ಮೆ ಮಾತ್ರ ಕೂಡಿದರೂ, ನೀವು ಯಶಸ್ವೀ ಲೈಂಗಿಕ ಸುಖ ಪಡೆಯುತ್ತಿದ್ದೀರಿ ಎಂದೇ ಅರ್ಥ.

ಇಲ್ಲಿ ಸಕಾರಾತ್ಮ ಸೆಕ್ಸ್ ದೃಷ್ಟಿಕೋನದಿಂದ ಅಳೆದು ಚರ್ಚಿಸುತ್ತಿದ್ದೇವೆ ಎಂದು ನೆನಪಿಡಿ. ಇಡೀ ತಿಂಗಳು ಸಮಾಗಮ ಹೊಂದಲಿಲ್ಲ ಎಂದರೆ ನಿಮ್ಮ ಲೈಂಗಿಕ ಜೀವನ ಆರೋಗ್ಯಕರವಾಗಿಲ್ಲ ಎಂದು ಖಂಡಿತಾ ಭಾವಿಸಬಾರದು. ಅದು ಖಂಡಿತಾ ಆರೋಗ್ಯಕರವಾಗಿಯೇ ಇದೆ, ಆದರೆ ಹೀಗಿದ್ದೂ ನೀವು 1-2 ತಿಂಗಳ ಕಾಲ ಅದರ ಬಗ್ಗೆ ಕಾಳಜಿಯೇ ವಹಿಸುತ್ತಿಲ್ಲ ಎಂದರೆ ಇದು ತುಸು ಅಸಾಮಾನ್ಯವೇ ಸರಿ!

ನಿಮ್ಮ ದಿನಚರಿ ಹಾಗೂ ಆಹಾರ

ಇದೇ ಸ್ಥಿತಿ ಸತತ ಮುಂದುವರಿಯುತ್ತಿದ್ದರೆ, ಅಂದ್ರೆ ಮನಸ್ಸು ಸಮಾಗಮ ಬಯಸಿದರೂ, ಗುಪ್ತಾಂಗ ಸಹಕರಿಸುತ್ತಿಲ್ಲ ಎಂದಾದರೆ, ಆಗ ಲೈಂಗಿಕ ಆರೋಗ್ಯ ಯಾಕೋ ಸರಿ ಇಲ್ಲ ಎಂದೇ ಭಾವಿಸಬೇಕಾಗುತ್ತದೆ. ಇದಕ್ಕಾಗಿ ತಕ್ಷಣ ಮಾತ್ರೆ ಔಷಧಿಗಳ ಮೊರೆಹೋಗದೆ, ಸ್ವತಃ ನೀವೇ ಇದರಿಂದ ಹೊರಬರುವ ದಾರಿ ಹುಡುಕಿ. ವಾಸ್ತವದಲ್ಲಿ ಸೆಕ್ಸ್ ಸುಖ ಹೊಂದಲು ಮಾನಸಿಕ ಪ್ರೇರಣೆ ಅತಿ ಮುಖ್ಯ. ಯಾವ ಹೆಣ್ಣು ಗಂಡೇ ಇರಲಿ, ಲೈಂಗಿಕವಾಗಿ ಉತ್ತೇಜಿತರಾದರೆ ಎಲ್ಲಕ್ಕೂ ಮೊದಲು ಈ ಉತ್ತೇಜನ ನಮ್ಮ ಮಸ್ತಿಷ್ಕದಲ್ಲಿ ಜಾಗೃತಗೊಳ್ಳುತ್ತದೆ. ಆ ನಂತರ ಬ್ರೇನ್‌ ಸಂದೇಶ ನೀಡಿ, ಗುಪ್ತಾಂಗವನ್ನು ಚುರುಕಾಗಿಸುತ್ತದೆ.

ಮಾನಸಿಕವಾಗಿ ಹೀಗೆ ಸಿದ್ಧರಾಗಬೇಕು ಎಂದು ತಿಳಿದ ಬಳಿಕ, ಹಲವಾರು ಅಧ್ಯಯನಗಳಲ್ಲಿ, ನಪುಂಸಕತೆ ಯಾ ಸೆಕ್ಸ್ ನಲ್ಲಿ ಅರುಚಿ ಕುರಿತಾಗಿ, ದೇಹಕ್ಕಿಂತ ಹೆಚ್ಚಾಗಿ ಮಸ್ತಿಷ್ಕ ಇಲ್ಲಿ ಸಹಕರಿಸುತ್ತಿಲ್ಲ ಎಂಬುದನ್ನು ಒತ್ತಿ ಒತ್ತಿ ಹೇಳಲಾಗಿದೆ. ಹೃದಯ, ರಕ್ತ ಧಮನಿಗಳಲ್ಲಿ ಸಂಚಾರ, ಒತ್ತಡ, ಪ್ರೋಸ್ಟೇಟ್‌ ಗ್ಲಾಂಡ್‌ ಗೆ ಸಂಬಂಧಿಸಿದ ಸಮಸ್ಯೆ…… ಇತ್ಯಾದಿ ಅನೇಕ ಕಾರಣಗಳಿಂದ ಹೀಗೆ ಅದು ಸಹಕಾರ ನೀಡದೇ ಇರಬಹುದು. ಮತ್ತೊಂದು ವಿಚಾರ ಎಂದರೆ, ಸೆಕ್ಸ್ ನಲ್ಲಿ ಅರುಚಿಗೆ ಕಾರಣ, ನಮ್ಮ ಹೃದ್ರೋಗದ ಸಂಕೇತ ಹೌದು.

ಆದ್ದರಿಂದ ಅನಗತ್ಯವಾಗಿ ನೀವೇ ಸಂದೇಹಕ್ಕೆ ಸಿಲುಕಿ, ಕಂಡ ಕಂಡ ಜಾಹೀರಾತುಗಳಿಗೆ ಮರುಳಾಗಿ, ಮಾತ್ರೆ ಔಷಧಿ ಸೇವಿಸುವ ಮೊದಲು, ನಿಮ್ಮ ದೇಹ ಮನಸ್ಸನ್ನು ಸದಾ ಚುರುಕಾಗಿಟ್ಟುಕೊಳ್ಳುವತ್ತ ಮನಸ್ಸು ಕೊಡಿ. ಪೌಷ್ಟಿಕ ಆಹಾರ ಸೇವನೆ, ಉತ್ತಮ ವ್ಯಾಯಾಮ, ಸಕಾರಾತ್ಮಕ ಧೋರಣೆ, ಕೇವಲ ದೈಹಿಕ/ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಲೈಂಗಿಕ ಆರೋಗ್ಯಕ್ಕೂ ಅಷ್ಟೇ ಮುಖ್ಯ!

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ