“ಅಮ್ಮ….. ಬೇಗ ರೆಡಿಯಾಗು. ಇವತ್ತು ಸಂಜೆ ನಾವು ಹೊರಗೆ ಹೊರಡಬೇಕು,” ಸ್ಮಿತಾ ತನ್ನ ತಾಯಿ ರೇವತಿಗೆ ಹೇಳಿದಳು.

“ಆದರೆ ಎಲ್ಲಿಗೇ ಹೋಗಬೇಕು? ನನಗಂತೂ ಮನೆಯಲ್ಲಿ ಇನ್ನೂ ಖಂಡುಗ ಕೆಲಸ ಬಾಕಿ ಇದೆ. ನೀನೇ ಹೋಗು,” ಎಂದು ರೇವತಿ ಮಗಳ ಮಾತು ತಳ್ಳಿ ಹಾಕಿದರು.

“ಅದೆಲ್ಲ ಆಮೇಲೆ ಬಂದು ಮಾಡಿಕೊಳ್ಳೋಣಮ್ಮ. ನಾನೂ ಹೆಲ್ಪ್ ಮಾಡ್ತೀನಿ, ಮೊದಲು ನೀನು ರೆಡಿಯಾಗು!”

“ಹೊಸದಾಗಿ ತಯಾರಾಗೋದು ಏನಿದೆ? ಈ ಸಲ್ವಾರ್‌ ಸೂಟ್‌ಸಾಕು, ಮೇಲೊಂದು ದುಪಟ್ಟಾ ಹೊದ್ದರೆ ಆಯ್ತು,” ರೇವತಿ ಹೇಳಿದರು.

“ಇದರ ಬದಲು ಒಳ್ಳೇ ಸೀರೇನಾದರೂ ಉಟ್ಟುಕೊಳ್ಳಬಾರದೇ?”

“ಅಯ್ಯೋ, ಸಾಕು ನಡಿಯೇ! ಅದು ಸರಿ, ಈಗ ಎಲ್ಲಿಗೆ ಹೋಗುತ್ತಿದ್ದೇವೆಎಅಂತ?”

“ಅದೇ ನನ್ನ ಫ್ರೆಂಡ್‌ ದೀಪಾ ಇದ್ದಾಳಲ್ಲ…. ಅವಳನ್ನು ಭೇಟಿಯಾಗಲು.”

“ಅದಕ್ಕೆ ನಾನು ಯಾಕೆ ಬರಬೇಕು?” ರೇವತಿಗೆ ಈಗಲೂ ಹೋಗಲು ಮನಸ್ಸಿರಲಿಲ್ಲ.

“ಅಯ್ಯೋ…. ನಡಿಯಮ್ಮ. ಸುಮ್ಮನೆ ಪ್ರಶ್ನೆ ಕೇಳೋದೇ ಆಗೋಯ್ತು. ನನಗೆ ಒಬ್ಬಳೇ ಹೋಗಲು ಇಷ್ಟ ಇಲ್ಲ ಅಂತ ನಿನ್ನ ಹೊರಡಿಸಿದ್ದು!”

ಕೆದರಿದ ತಲೆಗೆ ಒಂದಿಷ್ಟು ಬಾಚಣಿಗೆ ಆಡಿಸಿ, ಹೆರಳು ಹೆಣೆದು, ರೇವತಿ ಬೇಗ ತಯಾರಾಗಿ ನಿಂತರು. ಆಟೋ ಒಂದು ಬ್ಯೂಟಿ ಪಾರ್ಲರ್‌ ಮುಂದೆ ನಿಂತಾಗ ರೇವತಿ ಕಿರುಚಿದರು, “ನನ್ನನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿರುವೆ? ನೀನು ಹೇಳಿದ್ದು ದೀಪಾಳ ಮನೆಗೆ ಹೋಗಬೇಕು ಅಂತ ಅಲ್ವೇ…. ಈ ಬ್ಯೂಟಿ ಪಾರ್ಲರಿಗೆ ಬಂದು ನಾನೇನು ಮಾಡಲಿ?”

“ಅಯ್ಯೋ…. ಅಮ್ಮ…. ಈ ಬ್ಯೂಟಿ ಪಾರ್ಲರ್‌ ಅವಳದೇ…”

ಎದುರು ಬಂದ ದೀಪಾ, “ಬನ್ನಿ, ಆಂಟಿ ಕೂತ್ಕೊಳ್ಳಿ,” ಎಂದು ಹಾರ್ದಿಕವಾಗಿ ಸ್ವಾಗತ ಕೋರಿ ಇವರನ್ನು ಒಳಗಿನ ಕುರ್ಚಿಯಲ್ಲಿ ಕೂರಿಸಿದಳು. ಎದುರಿಗೆ ಥಳಥಳ ಹೊಳೆಯುತ್ತಿದ್ದ ಕನ್ನಡಿಗಳು. “ನೀವಿಲ್ಲಿ ಆರಾಮಾಗಿ 2-3 ಗಂಟೆ ಕಾಲ ಕುಳಿತಿರಿ. ನಾವು ಒಂದಿಷ್ಟು ಕೆಲಸ ಮಾಡುತ್ತೇವೆ. ಆಮೇಲೆ ದೊಡ್ಡ ಚಮತ್ಕಾರ ನೋಡ್ತೀರಂತೆ!” ಎಂದಳು ದೀಪಾ.

ಮುಂದಿನ 2-3 ಗಂಟೆಗಳಲ್ಲಿ ದೀಪಾ, ಅವಳ ಅಸಿಸ್ಟೆಂಟ್‌ ಸೇರಿ, ರೇವತಿಯರಿಗೆ ಮೇಕ್‌ ಓವರ್‌ ಮಾಡಿ, ಅವರ ಸಂಪೂರ್ಣ ರೂಪ ಬದಲಾಯಿಸಿಬಿಟ್ಟರು. ಅವರ ಸೆಕೆಗಂಟಿನ ಕೂದಲು ಬಿಚ್ಚಿ, ನೀಟಾಗಿ ಸ್ಟೆಪ್‌ ಕಟ್‌ ಮಾಡಿ, ಶ್ಯಾಂಪೂನಿಂದ ತೊಳೆದು ಲಕಲಕ ಹೊಳೆಯುವಂತೆ ಮಾಡಿದರು. ಬ್ರೌನ್‌ ಶೇಡ್‌ ನಲ್ಲಿ ಹೇರ್‌ ಕಲರಿಂಗ್‌ ಸಹ ಆಯಿತು. ಕೂದಲಿನ ನಂತರ ಮುಖಕ್ಕೆ ಫೇಶಿಯಲ್ ಮಾಡಲಾಯಿತು. ನಂತರ ತುಸು ಲೈಟಾಗಿ ಮೇಕಪ್‌ ಮಾಡಲಾಯಿತು. ಬದಲಾದ ತನ್ನ ಮುಖ ಚಹರೆ ಕಂಡು ರೇವತಿ ನಂಬದಾದರು.

ನಿಮ್ಮ ಕಡೆಯೂ ಗಮನವಿರಲಿ

ಮದುವೆಗೆ ಮುಂಚಿನ ಕಾಲದಲ್ಲಿ ರೇವತಿ ಸಹ, ತಮ್ಮ ಮುಖ, ಮೈಮಾಟ, ತಲೆಗೂದಲಿನ ಕಡೆ ಗಮನಕೊಟ್ಟು ಅಲಂಕರಿಸಿಕೊಳ್ಳುತ್ತಿದ್ದರು. ಮುಂದೆ ಮದುವೆ, ಮಕ್ಕಳು ಅಂತ ಸಂಸಾರದಲ್ಲಿ ಮುಳುಗಿ ಹೋದಾಗ, ರೇವತಿ ತಮ್ಮ ಆರೈಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. 38 ದಾಟಿದ ತಾನು ಈ ವಯಸ್ಸಿನಲ್ಲಿ ಯಾವ ಅಲಂಕಾರ ಮಾಡಿಕೊಂಡು ಏನಾಗಬೇಕಾಗಿದೆ ಎಂದು ಅವರು ಸುಮ್ಮನಾಗುತ್ತಿದ್ದರು. ಹೀಗಾಗಿ ಅವರ ಮುಖದಲ್ಲಿ ಸದಾ ಸುಸ್ತು, ಫೈನ್‌ ಲೈನ್ಸ್, ಸುಕ್ಕುಗಳು ಮಾಮೂಲಾಗಿ ಹೋದವು.

ಮದುವೆಗೆ ಮುಂಚೆ ಆಕೆ ತಮ್ಮ ಕೂದಲನ್ನು ಸದಾ ಓಪನ್‌ ಆಗಿಯೇ ಬಿಟ್ಟಿರುತ್ತಿದ್ದರು. ಆದರೆ ಈಗೆಲ್ಲ ಸದಾ ಒಂದು ಹೆರಳು, ಸೆಕೆಗಂಟು, ಯಾವುದೋ ಒಂದು ಹಾಕಿ, ತಮ್ಮ ಮನೆಗೆಲಸದಲ್ಲಿ ಮುಳುಗಿ ಹೋಗುತ್ತಿದ್ದರು. ಕ್ರಮೇಣ ತಲೆಗೂದಲಲ್ಲಿ ಬಿಳಿ ಬಣ್ಣ ಕಾಣಲಾರಂಭಿಸಿತು. ಈಗ ಅವರ ದೇಹ ಸಹ ತುಂಬಿಕೊಂಡು, ಮೊದಲಿನ ಆಕರ್ಷಣೆ ಮಾಯವಾಗಿತ್ತು. ಆಕೆ ಸದಾ ಯಾವುದೋ ಒಂದು ಕಾಟನ್‌ ಸೀರೆ, ಸಡಿಲ ಸಲ್ವಾರ್‌ ಸೂಟ್‌ ಧರಿಸಿ ಹೇಗೋ ಕಾಲ ತಳ್ಳುತ್ತಿದ್ದರು. ತಮ್ಮ ಅಲಂಕಾರದ ಬಗ್ಗೆ ಇದಕ್ಕಿಂತ ಆಕೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಆದರೆ ಈಗ ಅವರ ಮಗಳು ಸ್ಮಿತಾ, ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದಾಳೆ. ಮದರ್ಸ್‌ ಡೇ ನೆಪದಲ್ಲಿ ಅಮ್ಮನ ಮೇಕ್‌ ಓವರ್ ಮಾಡಿಸಲು ನಿರ್ಧರಿಸಿದಳು.

ಬ್ಯೂಟಿ ಪಾರ್ಲರ್‌ ನಂತರ ಸ್ಮಿತಾ ತಾಯಿಯನ್ನು ಮಾಲ್ ಗೆ ಕರೆದೊಯ್ಯಳು. ಅಲ್ಲಿ 2 ಸೆಟ್‌ ಬ್ಯೂಟಿಫುಲ್ ಆದ ಪೇಪ್ಲಂ ಟಾಪ್‌, ಸ್ಟ್ರೇಟ್‌ ಜೀನ್ಸ್ ಕೊಂಡಳು. ಅದನ್ನು ಧರಿಸಲು ಹೇಳಿದಾಗ ರೇವತಿ ಖಂಡಿತಾ ಬೇಡ ಎಂದರು. ಸ್ಮಿತಾಳ ಒತ್ತಾಯದ ಮೇರೆಗೆ ಧರಿಸಲೇ ಬೇಕಾಯ್ತು. ನಂತರ ಸ್ಮಿತಾ ಸುಂದರವಾದ ಹ್ಯಾಂಡ್‌ ಪರ್ಸ್‌ ಹಾಗೂ ಪ್ಲಾಟ್‌ ಫಾರ್ಮ್ ಹೀಲ್ಸ್ ಕೊಡಿಸಿದಳು.

ರೇವತಿ ಮಗಳನ್ನು ತಡೆಯುತ್ತಾ, “ಇಷ್ಟೊಂದು ಹಣ ಅನಗತ್ಯವಾಗಿ ಯಾಕೆ ದಂಡ ಮಾಡಬೇಕು? ಇಷ್ಟೊಂದು ಹಣ ದಿಢೀರ್ ಅಂತ ಎಲ್ಲಿಂದ ಬಂತು?”

“ಅಮ್ಮ, ಈ ಖರ್ಚು ಅನ್ಯಾಯವಾಗಿ ಹಾಳಾಗುತ್ತಿಲ್ಲ. ಬದಲಿಗೆ ಸದುಪಯೋಗ ಆಗುತ್ತಿದೆ! ಇದು ನನಗೆ ಬಂದ ಬೋನಸ್‌ ಹಣ. ಹೀಗಾಗಿ ಸಂಬಳದ ಹಣ ಹಾಳು ಮಾಡುತ್ತಿಲ್ಲ,” ಎಂದು ವಿವರಿಸಿದಳು.

ಮಗಳನ್ನು ಪ್ರೀತಿಯಿಂದ ಅಪ್ಪಿದ ರೇವತಿ, ಅವಳ ಕೈ ಹಿಡಿದು ಹಾಯಾಗಿ ಮಾಲ್ ಇಳಿದು, ಆಟೋ ಏರಿ ಮನೆ ಸೇರಿದರು. ಜೀನ್ಸ್ ಟಾಪ್‌ ನಲ್ಲಿದ್ದ ಈಕೆಯನ್ನು ಪತಿರಾಯರು ಪಿಳಿಪಿಳಿ ಕಣ್ಣು ಬಿಡುತ್ತಾ ನೋಡಿದರು. ಗಂಡು ಮಕ್ಕಳಿಬ್ಬರು ಸಹ ಅಮ್ಮನನ್ನು ಹೊಸಬಳೆಂಬಂತೆ ನೋಡಿದರು. ಈ ರೀತಿ ರೇವತಿಯ ಮೇಕ್‌ ಓವರ್‌ ಬದಲಾಗಿ, 10 ವರ್ಷ ಚಿಕ್ಕವರಾಗಿ ಕಾಣುತ್ತಿದ್ದರು.

ಎಲ್ಲರೂ ಹೊಗಳುವವರೇ!

ಈ ರೀತಿ ಅಮ್ಮನ ಮೇಕಪ್‌ ಬದಲಾಯಿಸಿ, ಸ್ಮಿತಾ ಬಹಳ ಖುಷಿಯಾಗಿದ್ದಳು. ತಾನು ಕೆಲಸಕ್ಕೆ ಹೋಗುವ ಮೊದಲು ಮತ್ತು ಬಂದ ನಂತರ, ಮನೆಗೆಲಸಗಳಲ್ಲಿ ಧಾರಾಳ ನೆರವಾಗುವೆ, ಆದರೆ ಅಮ್ಮ ಮಾತ್ರ ಸದಾ ಹೀಗೆ ನೀಟಾಗಿ ಅಲಂಕರಿಸಿಕೊಂಡು ಇರಬೇಕು ಎಂದು ಸ್ಮಿತಾ ಹೇಳಿದಳು. ಇದೀಗ ರೇವತಿಯ ಮುಖದಲ್ಲಿ ಆತ್ಮವಿಶ್ವಾಸ ತುಂಬಿದ ಮುಗುಳ್ನಗು ಹರಡಿತ್ತು.

ಮಗುವಿನ ಮೊದಲ ಶಿಕ್ಷಕಿ ತಾಯಿ ಎಂಬುದರಲ್ಲಿ 2 ಮಾತಿಲ್ಲ. ತಾಯಿಯೇ ಮಗಳ ಮೊದಲ ಗೆಳತಿಯೂ ಆಗುತ್ತಾಳೆ. ಎಲ್ಲಕ್ಕೂ ಹೆಚ್ಚಾಗಿ ತಾಯಿ ಮಗಳಿಗೆ ಫ್ರೆಂಡ್‌, ಫಿಲಾಸಫರ್‌, ಗೈಡ್‌ ಆಗಿರುತ್ತಾಳೆ. ಇಂಥ ತಾಯಿಗಾಗಿ ಮಕ್ಕಳು ಎಂಥ ತ್ಯಾಗಕ್ಕೆ ಸಿದ್ಧವಾದರೂ ಕಡಿಮೆಯೇ! ಆದರೆ ಇಂದಿನ ಆಧುನಿಕ ಯುವಜನತೆ ತಮ್ಮದೇ ಜೀವನಶೈಲಿಯಲ್ಲಿ ಎಷ್ಟು ತಲ್ಲೀನರಾಗಿರುತ್ತಾರೆ ಎಂದರೆ, ಅಮ್ಮನ ಕಡೆ ಗಮನಿಸಿಕೊಳ್ಳುವಷ್ಟು ಸಹನೆ, ಪುರಸತ್ತು ಇರುವುದೇ ಇಲ್ಲ. ಯಾವ ತಾಯಿ ತನ್ನ ಇಡೀ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟಿದ್ದಳೋ, ಆಕೆಯ ಆರೋಗ್ಯದ ಕಡೆ ಗಮನ ವಹಿಸುವಷ್ಟೂ ಮಕ್ಕಳಿಗೆ ಸಮಯ ಇರುವುದಿಲ್ಲ.

ಮಕ್ಕಳ ಆರೈಕೆ, ಅವರ ಜವಾಬ್ದಾರಿ ನಿರ್ವಹಿಸುತ್ತಾ, ತಾಯಿಗೆ ತನ್ನ ಕಡೆ ಗಮನ ಕೊಡಲು ಎಳ್ಳಷ್ಟೂ ಸಮಯ ಇರುವುದಿಲ್ಲ. ಇನ್ನು ಅಲಂಕಾರ, ಡ್ರೆಸ್‌ ಕಡೆ ಗಮನ ಕೊಡುವುದು ಎಲ್ಲಿಂದ? ಹಾಗಿರುವಾಗ ಮದರ್ಸ್‌ ಡೇ ದಿನ ಇಂಥ ತಾಯಿಗಾಗಿ ನಮ್ಮ ಇಡೀ ದಿನ ಮೀಸಲಿಡಬಾರದೇಕೆ? ಆಕೆಯ ಮೇಕಪ್‌, ಡ್ರೆಸ್ಸಿಂಗ್‌ ಸೆನ್ಸ್, ಹೊಸ ಹೇರ್‌ ಸ್ಟೈಲ್ ‌ಗಳ ಮೇಕ್‌ ಓವರ್‌ ಕಡೆ ಗಮನಹರಿಸಿ, ಅಮ್ಮನಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿ.

shutterstock_63856942_web

ಮೇಕಪ್ಮೇಕ್ಓವರ್

ಯಾವ ವಯಸ್ಸಿನ ಮಹಿಳೆಯೇ ಇರಲಿ, ಮೇಕಪ್‌ ಬೇಡ ಎನ್ನುವವರು ಯಾರೂ ಇರುವುದಿಲ್ಲ. ಎಷ್ಟೋ ಹೆಂಗಸರು ಮೇಕಪ್ ಟ್ರೆಂಡ್‌ ಫಾಲೋ ಮಾಡಲು  ಯೂಟ್ಯೂಬ್‌ ನೆರವು ಪಡೆಯುತ್ತಾರೆ. ಹಾಗೆ ನೋಡಿದರೆ ಮೇಕಪ್‌ ಮಾಡಿಕೊಳ್ಳಲು ಸಾವಿರಾರು ವಿಧಾನಗಳಿವೆ, ಅದಕ್ಕೆ ಇಂಥದ್ದೇ ಅಂತ ಸ್ಪೆಷಲ್ ಕೋರ್ಸ್ ‌ಏನಿಲ್ಲ. ಆದರೆ 40+ನ ತಾಯಂದಿರ ಮೇಕಪ್‌ ಮಾಡಿಸುವಾಗ, ಅವರ ಸ್ಕಿನ್‌ ಟೋನ್‌ ಕಡೆ ಗಮನ ಇರಲಿ. ಏಕೆಂದರೆ ಈ ವಯಸ್ಸಿನಲ್ಲಿ ಮುಖದಲ್ಲಿ ಫೈನ್‌ ಲೈನ್ಸ್, ಸುಕ್ಕುಗಳು ಕಾಣಿಸುವುದು ಸಹಜ.

ಮಹಾನಗರಗಳ ಸೌಂದರ್ಯ ತಜ್ಞೆಯರು ಈ ಕುರಿತಾಗಿ ನೀಡುವ ಸಲಹೆಗಳನ್ನು ಗಮನಿಸೋಣವೇ? :

ಫೌಂಡೇಶನ್ಸೆಲೆಕ್ಷನ್

ನಾರ್ಮ್‌ ಸ್ಕಿನ್‌ ಗಾಗಿ ಪೌಡರ್‌ ಫೌಂಡೇಶನ್‌ ಬೇಸ್‌ ಇರಲಿ. ಡ್ರೈ ಸ್ಕಿನ್‌ಗಾಗಿ ಲಿಕ್ವಿಡ್‌, ಸ್ಟಿಕ್‌ ಯಾ ಹೈಡ್ರೇಟಿಂಗ್‌ ಪೌಡರ್ ಫೌಂಡೇಶನ್‌ ಬಳಸಿಕೊಳ್ಳಿ. ಆಯ್ಲಿ ಸ್ಕಿನ್‌ ಗಾಗಿ, ಆಯಿಲ್ ‌ಫ್ರೀ ಲಿಕ್ವಿಡ್‌ ಯಾ ಪೌಡರ್‌ ಫೌಂಡೇಶನ್‌ ನ್ನು ಆರಿಸಿಕೊಳ್ಳಿ. ಕಾಂಬಿನೇಶನ್‌ ಸ್ಕಿನ್‌ ಗಾಗಿ, ಆಯಿಲ್ ಹೆಚ್ಚಾಗಿ ಒಸರುವ ಕಡೆ, ತುಸು ಹೆಚ್ಚಾಗಿಯೇ ಪೌಡರ್‌ ಫೌಂಡೇಶನ್‌ ಬಳಸಿಕೊಳ್ಳಿ ಹಾಗೂ ಕಡಿಮೆ ಒಸರುವ ಕಡೆ, ಕಡಿಮೆ ಬಳಸಿಕೊಳ್ಳಿ.

ಸ್ಕಿನ್ಟೋನ್ಪ್ರಕಾರ ಮೇಕಪ್

ಯೆಲ್ಲೋ ಬೇಸ್ಡ್ ಪಿಂಕ್‌ ಬೇಸ್ಡ್ ಫೌಂಡೇಶನ್‌, ಸಾಮಾನ್ಯವಾಗಿ ಎಲ್ಲಾ ತರಹದ ಸ್ಕಿನ್‌ ಟೋನ್‌ ಗೂ ಸೂಟ್‌ ಆಗುತ್ತದೆ. ಪಿಂಕ್ ಬೇಸ್ಡ್ ಫೌಂಡೇಶನ್‌ ತುಸು ಹೆಚ್ಚೇ ಎನಿಸುವ ಬಿಳುಪು ಬಣ್ಣದವರಿಗೆ ಸರಿ ಹೊಂದುತ್ತದೆ. ಡಸ್ಕಿ ಸ್ಕಿನ್‌ ಟೋನ್‌ ಗೆ ರೋಝಿ, ರೆಡ್ಡಿಶ್ ಯಾ ಬ್ಲೂ ಬೇಸ್‌ ನ ಫೌಂಡೇಶನ್‌ ನ್ನು ಆರಿಸಿಕೊಳ್ಳಿ.

ಲಿಪ್ಸ್ಟಿಕ್ಬಣ್ಣದ ಆಯ್ಕೆ

ನಿಮ್ಮ ನ್ಯಾಚುರಲ್ ಲಿಪ್‌ ಕಲರ್‌ ಗಿಂತ 2 ಶೇಡ್‌ ಡೀಪ್‌ ಆಗಿರುವಂಥ ಲಿಪ್‌ ಸ್ಟಿಕ್‌ ನ್ನೇ ಆರಿಸಿ. ಪಿಂಕ್‌ ರೆಡ್‌ ಶೇಡ್‌ ಜೊತೆ ಎಕ್ಸ್ ಪೆರಿಮೆಂಟ್‌ ಮಾಡಿ. ಇದು ಎಲ್ಲಾ ಡ್ರೆಸೆಸ್‌ ಗೂ ಸೆಟ್‌ ಆಗುತ್ತದೆ. ಹಗಲು ಹೊತ್ತಿನಲ್ಲಿ ಲಿಪ್‌ ಸ್ಟಿಕ್‌ ಶೇಡ್‌ ಲೈಟ್‌ ಆಗಿರಲಿ ಹಾಗೂ ಸಂಜೆಯ ಪಾರ್ಟಿಗಳಿಗೆ ಅದು ಡಾರ್ಕ್‌ ಆಗಿರಲಿ. ಫೇರ್‌ ಸ್ಕಿನ್‌ ಗಾಗಿ ಪಿಂಕ್‌ ಅಂಡರ್‌ ಟೋನ್‌, ಮೀಡಿಯಂಗಾಗಿ ಕ್ರಾನ್‌ ಬೆರ್ರಿ, ಬ್ರಿಕ್‌ ರೆಡ್‌ ಹಾಗೂ ಡಾರ್ಕ್‌ ಕಾಂಪ್ಲೆಕ್ಷನ್‌ ಗಾಗಿ ಬ್ರೌನ್‌ ಬರ್ಗಂಡಿ ಶೇಡ್ಸ್ ಆರಿಸಿ.

ಹೇರ್ಮೇಕ್ಓವರ್

ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗು ತರುವಲ್ಲಿ ಹೇರ್‌ ಸ್ಟೈಲ್ ‌ನ ಪಾತ್ರ ಹಿರಿದು. ನಿಮ್ಮ ಮುಖ ಕಂಡ ತಕ್ಷಣ ಗಮನ ಸೆಳೆಯುವುದೇ ನಿಮ್ಮ ಹೇರ್‌ ಸ್ಟೈಲ್‌. ಮದರ್ಸ್‌ ಡೇನಂದು ನೀವು ಸಹ ಅಮ್ಮನಿಗಾಗಿ ಏನಾದರೂ ಎಕ್ಸ್ ಪೆರಿಮೆಂಟ್ ಮಾಡಬಯಸುತ್ತಿದ್ದರೆ, ಅವರ ಮುಖದ ಆಕಾರಕ್ಕೆ ತಕ್ಕಂತೆ ಪರ್ಫೆಕ್ಟ್ ಹೇರ್‌ ಸ್ಟೈಲ್ ‌ಆರಿಸಿ.

ಹೇರ್ಸ್ಟೈಲ್ ಹೇಗಿರಬೇಕು?

ಗುಂಡಗಿನ ಮುಖಕ್ಕೆ, ಮುಖದ ಎರಡೂ ಕಡೆ ತೂಗಾಡುವಂತೆ ತುಸು ಕೂದಲನ್ನು ಇಳಿಬಿಡಿ. ಚಾಪಿ ಲೇಯರ್ಡ್‌ ಬಾಬ್‌, ಡಿಫೈಂಡ್‌ಪಿಕ್ಸಿ ಯಾ ಡೀಪ್‌ ಲೇಯರ್‌ ನವರು ಓಪನ್‌ ಹೇರ್‌ ಟ್ರೈ ಮಾಡಬಹುದು. ಓವಲ್ ಮುಖ ಹೊಂದಿದವರು ಶಾರ್ಟ್‌ ಹೇರ್‌ ಇದ್ದರೆ ಬ್ಲಂಟ್‌ ಬಾಬ್‌ ಹಾಗೂ ಉದ್ದದ ಕೂದಲಿದ್ದರೆ ಲೈಟ್‌ ಲೇಯರ್‌ ಕಟ್‌ ಇರಿಸಿಕೊಳ್ಳಬೇಕು. ಡೈಮಂಡ್‌ ಫೇಸ್‌ ನವರು ಲಾಂಗ್‌, ಸೈಡ್‌ ಸ್ಟೆಪ್ಟ್ ಬ್ಯಾಂಗ್ಸ್ ಹಾಗೂ ಟೆಕ್ಸ್ ಚರ್ಡ್‌ ಬಾಬ್‌ ಟ್ರೈ ಮಾಡಬಹುದು.

ಸ್ಕಿನ್‌ ಟೋನಿಗೆ ತಕ್ಕಂತೆ ಹೇರ್‌ ಕಲರ್‌ ಫೇರ್‌ ಸ್ಕಿನ್‌ ಟೋನಿನವರು ಲೈಟ್‌ ಬ್ರೌನ್‌, ಹನೀ ಚೆಸ್ಟ್ ನಟ್‌, ಡಾರ್ಕ್‌ ಬ್ಯಾಂಡ್ ಹೈಲೈಟ್ಸ್ ಚೆನ್ನಾಗಿ ಸೂಟ್‌ ಆಗುತ್ತವೆ. ಮೀಡಿಯಂ ಸ್ಕಿನ್‌ ಟೋನಿನವರು ಚಾಕಲೇಟ್‌ ಬ್ರೌನ್‌, ಬೇಸ್‌ ಕಲರ್‌, ಚೆಸ್ಟ್ ನಟ್‌ ನಂಥ ಕಲರ್ಸ್‌ ಅಲ್ಲದೆ ಗೋಲ್ಡನ್‌ ಬ್ರೌನ್‌, ಡೀಪ್‌ ರಿಚ್‌ ಬ್ರೌನ್‌ ಹೇರ್‌ ಕಲರ್ಸ್‌ ಸಹ ಆರಿಸಬಹುದು. ಡಸ್ಕಿ ಸ್ಕಿನ್‌ ನವರಿಗೆ ಡಾರ್ಕ್ ಚಾಕಲೇಟ್‌ ಬ್ರೌನ್‌ ಕಲರ್‌ ಚೆನ್ನಾಗಿ ಸೂಟ್‌ ಆಗುತ್ತದೆ. ಜೊತೆಗೆ ಚಾಕಲೇಟ್‌ ಬ್ರೌನ್‌, ರೆಡ್‌ ಅಂಡರ್‌ ಟೋನ್‌ ಹಾಗೂ ಡಾರ್ಕ್ ಬ್ರೌನ್‌ ಕಲರ್ಸ್‌ ಸಹ ಆರಿಸಬಹುದು.

ಡ್ರೆಸ್ಸಿಂಗ್ಮೇಕ್ಓವರ್

ಸಾಮಾನ್ಯವಾಗಿ ಮಕ್ಕಳು ಮದರ್ಸ್‌ ಡೇನಂದು ತಾಯಿಗೆ ಸೀರೆಯನ್ನು ಗಿಫ್ಟ್ ಆಗಿ ನೀಡುತ್ತಾರೆ. ತಾಯಿಗೆ ಸೀರೆಯಲ್ಲದೆ ಬೇರೆ ಯಾವ ಡ್ರೆಸ್‌ ತಾನೇ ಇಷ್ಟವಾದೀತು? ಹೀಗಾಗಿ ನೀವು ಅಮ್ಮನಿಗೆ ಸೀರೆ ಕೊಳ್ಳುವುದಾದರೆ, ಅವರ ಬಾಡಿ ಶೇಪ್‌ ಗೆ ತಕ್ಕಂತೆಯೇ ಸೀರೆ ಆರಿಸಿ. ಈ ಕುರಿತಾಗಿ ಮಹಾನಗರಗಳ ತಜ್ಞರ ಅಭಿಪ್ರಾಯ ತಿಳಿಯೋಣವೇ? :

IB143363_143363143323897_CZ363213

ಪ್ಲಸ್ಸೈಜ್ನವರಿಗೆ

ಇಂಥ ಮಹಿಳೆಯರಿಗೆ ಶಿಫಾನ್‌, ಸಾಫ್ಟ್ ಫೈನ್‌ ಸಿಲ್ಕ್ ಹಾಗೂ ಜಾರ್ಜೆಟ್‌ ಸೀರೆಗಳನ್ನು ಆರಿಸಿ. ಪ್ರಿಂಟೆಡ್‌ ಸೀರೆಗಳಿಗೆ ಬದಲಾಗಿ ಅತಿ ತೆಳು ಪ್ರಿಂಟ್‌ ಇರುವಂಥ ಸೀರೆ ಆರಿಸಿ.

ತೆಳುಕಾಯದ ಹೆಂಗಸರಿಗಾಗಿ

ತೆಳುಕಾಯದ ಹೆಂಗಸರು ಎಂಥ ಸೀರೆ ಆರಿಸಿದರೂ ನಡೆಯುತ್ತದೆ. ಕಾಟನ್‌, ಆರ್ಗೆಂಝಾ, ನೆಟೆಡ್‌ ಸೀರೆಗಳ ಆಯ್ಕೆ ಬೆಟರ್ ಎನಿಸುತ್ತದೆ. ಬ್ರಾಡ್‌ ಪ್ರಿಂಟ್‌, ಹಾರಿಝಂಟಲ್ ಲೈನ್ಸ್ ಜೊತೆಗೆ ಹೆವಿ ವರ್ಕಿನ ಸೀರೆಗಳು ಇವರಿಗೆ ಚೆನ್ನಾಗಿ ಒಪ್ಪುತ್ತವೆ.

ಉದ್ದದ ಹೆಂಗಸರಿಗಾಗಿ

ಇಂಥ ಹೆಂಗಸರಿಗೆ ಸೂಪರ್‌ ನೆಟ್‌, ಕಾಟನ್‌ ಹಾಗೂ ಸಿಲ್ಕ್ ಸೀರಗಳು ಚೆನ್ನಾಗಿ ಒಪ್ಪುತ್ತವೆ. ಹಾರಿಝಂಟಲ್ ಪ್ರಿಂಟ್ಸ್ ನ ಸೀರೆ ಆರಿಸಿ. ವರ್ಟಿಕಲ್ ಪ್ರಿಂಟ್ಸ್ ನ ಸೀರೆ ಬೇಡ, ಆಗ ಮತ್ತಷ್ಟು ಎತ್ತರ ಕಾಣಿಸುವರು. ಸಾಲಿಡ್‌ ಕಲರ್ಸ್‌ ಯಾ ಪ್ರಿಂಟ್ಸ್ ರಹಿತ ಸೀರೆ ಇಂಥವರಿಗೆ ಚೆನ್ನಾಗಿ ಒಪ್ಪುತ್ತವೆ.

ಕಡಿಮೆ ಎತ್ತರದ ಹೆಂಗಸರಿಗಾಗಿ

ಕುಳ್ಳಗಿನ ಹೆಂಗಸರಿಗೆ ಕಡಿಮೆ ವಾಲ್ಯೂಂ ಇರುವ ಸೀರೆ ಚೆನ್ನಾಗಿ ಒಪ್ಪುತ್ತವೆ. ವರ್ಟಿಕಲ್ ಸ್ಟ್ರೈಪ್ಸ್ ವುಳ್ಳ ಸೀರೆಗಳನ್ನೇ ಆರಿಸಿ. ಆದಷ್ಟೂ ಹೊಕ್ಕುಳ ಕೆಳಗೆ ಸೀರೆ ಉಡುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ತುಸು ಹೈಟ್‌ ಹೆಚ್ಚಿದಂತೆ ಅನಿಸುತ್ತದೆ.

ಇತ್ತೀಚಿನ ಆಧುನಿಕ ತಾಯಂದಿರು ಮನೆಮಟ್ಟಗಿನ ಗೃಹಿಣಿಯರು ಮಾತ್ರವಲ್ಲ, ಉದ್ಯೋಗಸ್ಥ ವನಿತೆಯರೂ ಹೌದು. ಇವರು ಎರಡೂ ಕಡೆ ಕೆಲಸ ಮಾಡಬೇಕಿರುವುದರಿಂದ, ಸದಾ ಪ್ರೆಸೆಂಟೆಬಲ್ ಆಗಿರಬೇಕಾಗುತ್ತದೆ. ಹೀಗಾಗಿ ಕಿರಿಯರು ಅಮ್ಮನಿಗಾಗಿ ಡ್ರೆಸೆಸ್‌ ಆರಿಸುವಾಗ, ಅಮ್ಮ ಅದರಲ್ಲಿ ಆಧುನಿಕಳಾಗಿ ಹಾಗೂ ಕಂಫರ್ಟೆಬಲ್ ಆಗಿರುವಂತೆ ಆರಿಸಿ.

ಇತ್ತೀಚಗೆ ಹೆಂಗರಸರಲ್ಲಿ ಲಾಂಗ್‌ ಸ್ಕರ್ಟ್‌ (ಜೋಧ್‌ ಪುರಿ/ರಾಜಾಸ್ಥಾನೀ ಶೈಲಿ) ಬಲು ಜನಪ್ರಿಯ. ಚಿಕನ್‌ ಕಾರಿ ಕಸೂತಿಯ ಟಾಪ್‌/ಶರ್ಟ್‌ ಜೊತೆ ಧರಿಸುವುದರಿಂದ, ಇದು ಇಂಡಿಯನ್‌ ವೆಸ್ಟರ್ನ್‌ ಡ್ರೆಸ್‌ ಗಳ ಫ್ಯೂಷನ್‌ ಎನಿಸುತ್ತದೆ. ಜೊತೆಗೆ ಅಗಲದ ಬಳೆಗಳು ಅಂದ್ರೆ ಬ್ರಾಂಡೆಡ್‌ ಬ್ಯಾಂಗಲ್ಸ್ ಖರೀದಿಸಿ. ಇದಕ್ಕೆ ಹೊಂದುವಂತೆ ಲೈಟ್‌ ಮೇಕಪ್‌ ಇರಲಿ.

ಸ್ಟ್ರೇಟ್‌ ಜೀನ್ಸ್ ಅಥವಾ ಬಾಯ್ಸ್ ಜೀನ್ಸ್ ಸಹ ಒಂದು ಉತ್ತಮ ಆಯ್ಕೆ. ಇದು ಬಿಲ್ ಕುಲ್ ಓಪನ್‌ ಲೆಗ್‌ ಸ್ಟೈಲ್ ಆದ್ದರಿಂದ, ನಡುವಯಸ್ಸಿನ ಮಹಿಳೆಯರು ಇದನ್ನು ಆರಾಮವಾಗಿ ಧರಿಸಬಹುದು. ಇದನ್ನು ಅವರು ಮನೆಯ ಹೊರಗೂ ಧರಿಸಬಹುದು, ಡೇಲಿ ಯೂಸ್‌ ಗೂ ಬಳಸಬಹುದು. ಇದನ್ನು ಇಂಡಿಯನ್‌ ಪ್ರಿಂಟ್ಸ್ ನ ಶಾರ್ಟ್‌ ಕುರ್ತಿಗಳ ಜೊತೆ ಧರಿಸಬಹುದಾಗಿದೆ.

ರಾಪ್‌ ಅರೌಂಡ್‌ ನ ಸ್ಕರ್ಟ್ಸ್ ಇತ್ತೀಚೆಗೆ ಎಲ್ಲಾ ನಡುವಯಸ್ಸಿನ ಹೆಂಗಸರ ಮೊದಲ ಆಯ್ಕೆ ಆಗಿದೆ. ಅದರಲ್ಲೂ ಮಹಾನಗರಗಳ ಹೆಂಗಸರು ಇಂಥ ಡ್ರೆಸೆಸ್‌ ನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ನಿಮ್ಮ ತಾಯಿಗೆ ನೀವು ಈ ಸಲ ಇಂಥದ್ದನ್ನು ಅರಿಸಿ. ಇದರಿಂದ ಅಮ್ಮನ ಲುಕ್ಸ್ ಖಂಡಿತಾ ಬದಲಾಗುತ್ತದೆ, ಆಕೆ ಹೆಚ್ಚು ಆಧುನಿಕರಾಗಿ ಕಾಣಿಸುತ್ತಾರೆ.

ಶಾರ್ಟ್‌ ಟಾಪ್‌ ಜೊತೆ ಶ್ರಗ್‌ ಧರಿಸುವುದು, ಒಂದು ಡೀಸೆಂಟ್‌ ಸ್ಮಾರ್ಟ್‌ ಡ್ರೆಸ್‌ ಎನಿಸುತ್ತದೆ. ಸ್ಪೆಷಲಿ, ಜೀನ್ಸ್ ಜೊತೆ ಇದನ್ನು ಟ್ರೈ ಮಾಡಿ.

ಇತ್ತೀಚೆಗೆ ಟ್ರೌಸರ್ಸ್‌ ಸಹ ಅಷ್ಟೇ ಜನಪ್ರಿಯ ಆಗುತ್ತಿದೆ. ನೀವು ಅಮ್ಮನಿಗಾಗಿ ಲೈಟ್‌ ಬ್ಲೂ ಯಾ ಲೈಟ್‌ ಬ್ರೌನ್‌ ನಂಥ ಟ್ರೆಂಡಿ ಕಲರ್ಸ್‌ ಆರಿಸಿ. ಇದರಲ್ಲಿ ಅಮ್ಮ ಫ್ಯಾಷನೆಬೆಲ್ ‌ಆಗಿ ಕಂಡುಬರುತ್ತಾರೆ.

ನೀವು ಲೆಂಥ್‌ ನ ಲೈನ್‌ ಶಿಫ್ಟ್ ಡ್ರೆಸ್‌, ಕೇಪ್ರಿ, ಶಾರ್ಟ್‌ ಡ್ರೆಸ್‌, ಕ್ಯಾಪ್ಟನ್‌ ಡ್ರೆಸ್‌, ಪೇಪ್ಲಂ ಟಾಪ್‌ ಇತ್ಯಾದಿಗಳನ್ನು ಇತ್ತೀಚೆಗೆ ಪ್ರೌಢ ಮಹಿಳೆಯರೂ ಧರಿಸಿ ನಲಿಯುವಂತಾಗಿದೆ.

ಅಮ್ಮ ತುಸು ಹೆಲ್ದಿ ಆಗಿದ್ದರೆ, ಇತ್ತೀಚೆಗೆ ಪ್ಲಸ್‌ ಸೈಜ್‌ ನ ಬಹಳಷ್ಟು ಡ್ರೆಸ್‌ ಗಳು ಲಭ್ಯವಿವೆ. ಇಂಥ ಬಹಳಷ್ಟು ಬ್ರಾಂಡ್ಸ್ ಈಗ ಖ್ಯಾತಿ ಗಳಿಸುತ್ತಿವೆ. ಇವುಗಳಿಂದ ಪ್ರೌಢ ಮಹಿಳೆಯರು ಸಹ ಪಾರ್ಟಿಗಳಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ನೀವು ಅಮ್ಮನಿಗಾಗಿ ಬ್ಯೂಟಿಫುಲ್ ಲೈನ್‌ ಡ್ರೆಸೆಸ್‌ ಖರೀದಿಸಿ. ಅಮ್ಮ ಬಲು ಸಣ್ಣಗಿದ್ದರೆ, ಶರ್ಟ್‌ ಡ್ರೆಸ್‌, ಕ್ಯಾಪ್ಟನ್‌ ಯಾ ಶ್ರಗ್‌ ನ ಆಯ್ಕೆಗಳಿವೆ.

ಜ್ಯೂವೆಲರಿ ಸೆಟ್

ಅಮ್ಮನಿಗಾಗಿ ಇತ್ತೀಚಿನ ಟ್ರೆಂಡ್‌ ಪ್ರಕಾರದ ಯಾವುದೇ ಬಗೆಯ ಸ್ವರ್ಣಾಭರಣ ಕೊಳ್ಳಬಹುದು. ಆರ್ಟಿಫಿಶಿಯಲ್ ಜ್ಯೂವೆಲರಿ ಸೆಟ್ ಸಹ ಇದೀಗ 500-2500ರ ಒಳಗೆ ಸಿಗುತ್ತದೆ.

ಸ್ಕಿನ್ಕೇರ್ಪ್ರಾಡಕ್ಟ್ಸ್

ಅಮ್ಮ ತಮ್ಮ ವಯಸ್ಸಿಗಿಂತ 10 ವರ್ಷ ಕಿರಿಯರಾಗಿ ಕಾಣಿಸಲಿ ಎಂಬ ಆಸೆ ನಿಮಗಿದ್ದರೆ, ನೀವು ಅವರಿಗೆ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ನ ಒಂದು ಕಂಪ್ಲೀಟ್‌ ರೇಂಜಿನ ಸೆಟ್‌ ನ್ನು ಗಿಫ್ಟಾಗಿ ಕೊಡಿ. ಅಮ್ಮನಿಗಾಗಿ ಡೇ ಕ್ರೀಂ, ನೈಟ್‌ ಕ್ರೀಂ, ಲಿಂಪ್‌ ಟಿಂಟ್‌, ಅಂಡರ್‌ ಐ ಕ್ರೀಂ, BB ‌ಕ್ರೀಂ ಹಾಗೂ ಪ್ರೌಡ ವಯಸ್ಸಿನವರಿಗೆ ಬೇಕಾದ ಇನ್ನಿತರ ಎಲ್ಲಾ ಮೇಕಪ್‌ ಪ್ರಾಡಕ್ಟ್ಸ್ ಕೊಡಿಸಿರಿ.

ಫಿಟ್ನೆಸ್ಬ್ಯಾಂಡ್

ಮದರ್ಸ್‌ ಡೇನಂದು ಅಮ್ಮನಿಗಾಗಿ ಫಿಟ್‌ ನೆಸ್‌ ಬ್ಯಾಂಡ್‌ ಒಂದು ಅತ್ಯುತ್ತಮ ಉಡುಗೊರೆ. ಇದು ಅವರ ಆರೋಗ್ಯ ರಕ್ಷಣೆಗೆ ಬಲು ಅಗತ್ಯ ಕೂಡ. ಇದು ಅವರ ಪ್ರತಿ ಹೆಜ್ಜೆಯ ಎಣಿಕೆ ತೋರಿಸುವುದು ಮಾತ್ರವಲ್ಲದೆ, ಅವರನ್ನು ವಾಕಿಂಗ್‌ ಹೊರಡಿಸಲು ಪ್ರಚೋದಿಸುತ್ತದೆ. ಹೀಗಾಗಿ ಫಿಟ್‌ ನೆಸ್‌ ಟ್ರಾಕರ್‌ ಯಾ ಬ್ಯಾಂಡ್‌ ನ್ನು ಅಗತ್ಯವಾಗಿ ಅಮ್ಮನಿಗೆ ಕೊಡಿಸಿ. ಇದರಿಂದ ಅವರ ಹೆಲ್ದಿ ಲೈಫ್‌ ಸ್ಟೈಲ್ ‌ಸುಧಾರಿಸುತ್ತದೆ.

ಸ್ಪಾ ಆಫರ್‌ ಮಾಡಿ ಅವರಿಗೆ ಹೇರ್‌ ಬಾಡಿ ಸ್ಪಾ, ಮೇಕಪ್‌ ಪ್ರಾಡಕ್ಟ್ಸ್ ಯಾ ಬಾಡಿ ಮಸಾಜ್‌ ಆಫರ್‌ ಮಾಡಿ. ಇದರಿಂದ ಅಮ್ಮನ ಅಗತ್ಯಗಳೆಲ್ಲ ಪೂರೈಸುತ್ತವೆ ಹಾಗೂ ಅವರಿಗೆ ತಾವು ಬಹಳ ಸ್ಪೆಷಲ್ ಎಂಬ ಫೀಲಿಂಗ್‌ ಬರುತ್ತದೆ. ಹ್ಯಾಪಿ ಮದರ್ಸ್‌ ಡೇ!

ಪ್ರತಿನಿಧಿ

ಮೇಕಪ್ಆ್ಯಕ್ಸೆಸರೀಸ್

ಅಮ್ಮನಿಗೆ ಆರಂಭದಲ್ಲಿ ನೀವೇ ಮೇಕಪ್‌ ಮಾಡಿ. ನಂತರ ಅವರೇ ಮುಂದುವರಿಸುತ್ತಾರೆ. ಅದಕ್ಕಾಗಿ ಈ ಅಂಶಗಳನ್ನು ಗಮನಿಸಿ:

ಈ ವಯಸ್ಸಿನ ಪ್ರೌಢ ಹೆಂಗಸರು ಕೇವಲ ಮಿನಿಮಮ್ ಮೇಕಪ್‌ ಬಯಸುತ್ತಾರೆ. ಹೊಳೆಯುವ ಲಿಪ್‌ ಸ್ಟಿಕ್‌ ಯಾ ಬ್ರೈಟ್‌ ಕಲರ್ ಬ್ಲಶರ್‌ ಯಾ ಮಸ್ಕರಾಗಳಿಗೆ ಬದಲಾಗಿ ಲೈಟ್‌ ಪಿಂಕ್‌,  ಪೀಚ್‌, ಲೈಟ್‌ ಬ್ರೌನ್‌, ಲೈಟ್‌ ಮೆರೂನ್‌ ಕಲರಿನ ಲಿಪ್‌ ಸ್ಟಿಕ್ಸ್ ಬಳಸಿರಿ. ಬ್ಲಶರ್‌ ‌ BB ‌ಕ್ರೀಂ ಸಹ ಓಕೆ. ನೀವು ಅಮ್ಮನಿಗಾಗಿ ಟೋನರ್‌, ಮಾಯಿಶ್ಚರೈಸರ್‌, ಕ್ಲೆನ್ಸರ್‌, ಸ್ಕ್ರಬರ್‌ ಇತ್ಯಾದಿ ಗಿಫ್ಟ್ ಕೊಳ್ಳಿರಿ. ಈ ವಯಸ್ಸಿನಲ್ಲಿ ಅವರಿಗೆ ಫೌಂಡೇಶನ್‌ ಬೇಡ. ಇದರ ಬದಲು BB ‌ಕ್ರೀಂ ಕೊಳ್ಳಿರಿ. ಇದು ಮಾಯಿಶ್ಚರೈಸರ್‌ ಹಾಗೂ ಫೌಂಡೇಶನ್‌ ಎರಡರ ಕೆಲಸವನ್ನೂ ಮಾಡುತ್ತದೆ. ಜೊತೆಗೆ ಲಿಕ್ವಿಡ್‌ ಬ್ಲಶರ್‌ ಉತ್ತಮ ಲುಕ್ಸ್ ನೀಡುತ್ತದೆ.

ನೀವು ಅವರಿಗಾಗಿ ಲಿಪ್‌ ಚೀಕ್‌ ಟಿಂಟ್‌ ನ ಆಪ್ಶನ್‌ ಆರಿಸಿ. ಇವು ನ್ಯಾಚುರಲ್ ಪಿಗ್ಮೆಂಟ್ಸ್ ಆಗಿದ್ದು, ಇದರಿಂದ ನ್ಯಾಚುರಲ್ ಕಲರ್ ಬರುತ್ತದೆ.

ನೀವು ಅಮ್ಮನ ಹೇರ್‌ ಸ್ಟೈಲ್ ‌ಸಹ ಬದಲಾಯಿಸಬಹುದು. ಕೂದಲನ್ನು ಶಾರ್ಟ್‌ ಮಾಡಿಸಿ. ಸ್ಟೆಪ್‌ ಕಟ್‌ ಮತ್ತೆ ಟ್ರೆಂಡ್‌ ನಲ್ಲಿದೆ. ಹೀಗಾಗಿ ಅವರನ್ನು ಸ್ಟೆಪ್‌ ಕಟ್‌ ಗೆ ಒಪ್ಪಿಸಿ, ಜೊತೆಗೆ ಶ್ರಿಂಗೇಲ್ ‌ಕಟ್‌ ಕೂಡ. ಹಿಂದಿನ ಕಾಲದಂತೆ ಉದ್ದದ ಕೂದಲಿನ ಟ್ರೆಂಡ್ ಈಗಿಲ್ಲ.

ಶಾರ್ಟ್‌ ಹೇರ್‌ ಯಾ ಶೋಲ್ಡರ್‌ ಲೆಂಥ್‌ ಹೇರ್‌ ಕಟ್‌ ಮಾಡಿಸಿ. ಹೈ ಬನ್‌, ಹೈ ಪೋನಿಟೇಲ್ ‌ಸಹ ಚೆನ್ನಾಗಿರುತ್ತದೆ. ಶಾರ್ಟ್‌ ಲವ್ಲಿ ಹೇರ್‌ ಸ್ಟೈಲ್ ಅಂದ್ರೆ ಬಾಬ್‌ ಕಟ್‌ ಸಹ ಓಕೆ. ಇದು ಮ್ಯಾನೇಜಬಲ್ ಆಗಿದ್ದು, ಬೇಸಿಗೆಗೆ ಗುಡ್‌ ಲುಕ್ಸ್ ಎನಿಸಿವೆ.

ಕೂದಲಿನ ಲುಕ್ಸ್ ಬದಲಾಯಿಸಲು, ಕೂದಲಿಗೆ ಹೇರ್‌ ಕಲರ್‌ ಮಾಡಿಸಿ. ಬ್ರೌನ್‌, ರೆಡ್‌, ಮೆರೂನ್‌, ಬರ್ಗೆಂಡಿ, ಬ್ಲಾಕಿಶ್‌ ಬ್ರೌನ್ ಇತ್ಯಾದಿ ಕಲರ್ಸ್‌ ನ ಟ್ರೆಂಡಿನಲ್ಲಿವೆ. ಇದರಿಂದ ಬಿಳಿ ಕೂದಲು ತಾನಾಗಿ ಅಡಗಿ ಹೋಗುತ್ತದೆ, ಕೂದಲಿನ ಹೊಳಪು ತಾನಾಗಿ ಹೆಚ್ಚುತ್ತದೆ. ಅವರು ಒಪ್ಪಿದರೆ, ಕೂದಲನ್ನು ಕರ್ಲಿ ಯಾವ ಸ್ಟ್ರೇಟ್‌ ಸಹ ಮಾಡಿಸಬಹುದು.

ಇನ್ನು ಫುಟ್‌ ವೇರ್‌ ವಿಚಾರ. ಅಮ್ಮನಿಗಾಗಿ ಕಂಫರ್ಟೆಬಲ್ ಎನಿಸುವ ಫ್ಲಾಟ್‌ ಯಾ ಬ್ಲ್ಯಾಕ್‌ ಹೀಲ್ಸ್ ಖರೀದಿಸಿ, ಪ್ಲಾಟ್‌ ಫಾರ್ಮ್ ಹೀಲ್ ‌ಎನಿಸಿರುವ ಇದು ಈಗ ಬಲು ಟ್ರೆಂಡ್‌ ನಲ್ಲಿದೆ.

ಮದರ್ಸ್‌ ಡೇನಂದು ನೀವು ಅಮ್ಮನಿಗೆ ಸ್ಪೆಷಲ್ ಫೀಲ್ ‌ನೀಡಬಯಸಿದರೆ, ನಿಮ್ಮ ದೃಷ್ಟಿಯಲ್ಲಿ ಅವರು ಎಷ್ಟು ಮುಖ್ಯ ಎನಿಸಿದರೆ, ಈ ಮೇಲಿನ ಸಲಹೆಗಳನ್ನು ಅಗತ್ಯ ಅನುಸರಿಸಿ ಅವರಿಗೆ ಹೆಚ್ಚಿನ ಖುಷಿ ತಂದುಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ