ಬಹಳ ಹೊತ್ತು ಬಿಸಿಲಿನಲ್ಲಿದ್ದರೂ, ಅದಕ್ಕೆ ಏನೂ ಹಾನಿ ಆಗದೆ, ಫ್ರೆಶ್ಆಗಿ ನಳನಳಿಸುವಂತೆ ಮಾಡಲು ಸಲಹೆಗಳನ್ನು ಅಗತ್ಯ ಅನುಸರಿಸಿ…..!

ಚಳಿಗಾಲದಲ್ಲಿ ಬೆಳಗಿನ ಹೊತ್ತು ಚುಮು ಚುಮು ಚಳಿ ಓಡಿಸಲು, ಬಿಸಿಲು ಬರುವುದನ್ನೇ ಕಾದಿದ್ದು ಹೊರಗೆ ಓಡಾಡಿ ಮೈ ಕಾಯಿಸುತ್ತೇವೆ. ಆದರೆ ಬೇಸಿಗೆ ರಂಗೇರುತ್ತಿದ್ದಂತೆ ಬಿಸಿಲಲ್ಲಿ ಓಡಾಡುವುದೇ ದುಸ್ತರವಾಗುತ್ತದೆ. ಬೆಳಗಿನ ಹೊಂಬಿಸಲಲ್ಲಿ ಸೂರ್ಯಕಾಂತಿಗೆ ಮೈ ಒಡ್ಡುವುದರಿಂದ ವಿಟಮಿನ್‌ D ಲಭಿಸುತ್ತದೆ ಎಂಬುದು ನಿಜ, ಆದರೆ ಬೇಸಿಗೆಯ ಉರಿ ಬಿಸಿಲಲ್ಲಿ ಓಡಾಡಿದಷ್ಟೂ ನಮಗೆ ಹಾನಿ ತಪ್ಪಿದ್ದಲ್ಲ.

ಅಸಲಿಗೆ ಸೂರ್ಯನ UV ಕಿರಣಗಳು ನಮ್ಮ ದೇಹಕ್ಕೆ ಹಲವಾರು ಬಾಧೆ ತರುತ್ತವೆ. ಇದರಲ್ಲೂ 2 ಬಗೆ ಇದ್ದು UV ಕಿರಣಗಳು ಚರ್ಮದ ಆಳವಾದ ಪದರಕ್ಕಿಳಿದು ಹಿಂಸೆ ಮಾಡಿದರೆ, UVA ಕಿರಣಗಳು ಚರ್ಮದ ಮೇಲ್ಪದರಕ್ಕೆ ಹಾನಿ ಮಾಡುತ್ತವೆ. ಇದರಿಂದ ಹಲವು ನಕಾರಾತ್ಮಕ ಪ್ರಭಾವಗಳಾಗುತ್ತವೆ.

ಟ್ಯಾನಿಂಗ್‌ : ಸೂರ್ಯನ ಕಿರಣಗಳ ಸಂಪರ್ಕದಿಂದ ಚರ್ಮದ ಬಣ್ಣ ದಟ್ಟ ಕಪ್ಪಾಗುತ್ತಾ ಹೋಗುತ್ತದೆ. ಆಗ ಚರ್ಮ ಕಾಂತಿಹೀನ ಆಗುತ್ತದೆ. ಒಮ್ಮೊಮ್ಮೆ ಅಲ್ಲಲ್ಲಿ ದಟ್ಟ ಪ್ಯಾಚುಗಳು ಸಹ ಕಂಡುಬರುತ್ತವೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಮೊದಲಿನಂತಾಗುವುದಿಲ್ಲ. ಮುಖದ ಹೊಳಪು ಮಂಕಾಗಿ ಎಷ್ಟು ಮೇಕಪ್‌ ಮಾಡಿದರೂ ಕಳೆ ಕೂಡದು.

ಸನ್ಬರ್ನ್‌ : ಸೂರ್ಯ ಕಿರಣದ ಸತತ ದಾಳಿಯಿಂದ ಚರ್ಮ ಅಲ್ಲಲ್ಲಿ ಒಡೆಯುತ್ತದೆ, ಹೊಪ್ಪಳ ಏಳುತ್ತದೆ. ಜೊತೆಗೆ ಚರ್ಮ ಅಲ್ಲಲ್ಲಿ ಕೆಂಪು ಕೆಂಪಾಗಿ ದದ್ದು, ಗಂಧೆಗಳಾಗಬಹುದು. ಇದರಿಂದ ತೀವ್ರ ಕೆರೆತ, ಕಡಿತ, ಉರಿ ಕಾಡುತ್ತದೆ.

ಏಜಿಂಗ್‌ : ಚರ್ಮದ ಅಡಿ ಪದರದಲ್ಲಿನ ಕೊಲೋಜೆ‌ನ್ ಎಲಾಸ್ಟಿನ್‌ ಪದರಗಳಲ್ಲಿನ ಡ್ಯಾಮೇಜ್‌ ಕಾರಣ, ಸ್ಕಿನ್‌ ಕ್ರಮೇಣ ಏಜಿಂಗ್‌ ನ ಸವೆತಕ್ಕೆ ಕಾರಣವಾಗಿ, ಮುಪ್ಪು ಹೆಚ್ಚಾದಂತೆ ಕಂಡುಬರುತ್ತದೆ. ಇದರಿಂದ ಚರ್ಮ ಜೋತುಬಿದ್ದು, ಸುಕ್ಕು, ನೆರಿಗೆ, ಫೈನ್‌ ಲೈನ್ಸ್ ಹೆಚ್ಚುತ್ತವೆ. UV UVA ಎರಡೂ ಬಗೆಯ ಸೂರ್ಯ ಕಿರಣಗಳ ದುಷ್ಪ್ರಭಾವವೇ ಇದಕ್ಕೆ ಕಾರಣ.

ಸ್ಕಿನ್ಕ್ಯಾನ್ಸರ್‌ : ಇದು ಆನುವಂಶಿಕತೆ ಇರಬಹುದು, ಆದರೆ ಇದು ಸನ್‌ ಡ್ಯಾಮೇಜ್‌ ಕಾರಣ ಹೆಚ್ಚು ಕಾಡುತ್ತದೆ ಎಂಬುದೂ ನಿಜ. ಸೂರ್ಯನ ಕಿರಣಗಳ ಈ ತೀಕ್ಷ್ಣ ಪ್ರಭಾವ, ಎಲ್ಲರ ಮೇಲೂ ಸಮಾನವಾಗಿ ಇರುವುದಿಲ್ಲ.

ಬಿಸಿಲಿಗೆ ಹೋದವರಲ್ಲಿ ಶ್ವೇತ ವರ್ಣದವರಿಗೇ ಹೆಚ್ಚಿನ ತೊಂದರೆ ಕಾಡುವುದು. ಮೈ ಪೂರ್ತಿ ಮಚ್ಚೆ ಇರುವವರಿಗೂ ಬಾಧೆ ತಪ್ಪದು. ಇಷ್ಟಲ್ಲದೆ ಯಾರಿಗೆ ಬೆಂಕಿ ಉರಿಯ ಗುರುತು, ಗಾಯ, ಮಾಸಿದ ಕಲೆ ಹೆಚ್ಚಾಗಿರುತ್ತದೋ, ಅಂಥವರಿಗೆ ಬಿಸಿಲಿನ ಓಡಾಟ ಹೆಚ್ಚು ಹಿಂಸೆ ಎನಿಸುತ್ತದೆ.

iStock_000006116977Large

UV ಕಿರಣಗಳಿಂದ ರಕ್ಷಣೆ

ನಿಮ್ಮ ಇಡೀ ದೇಹವನ್ನು ಕವರ್‌ ಮಾಡುವಂಥ ಡ್ರೆಸ್‌ ಧರಿಸಿ. ಆಗ ಈ ಕಿರಣ ನಿಮ್ಮ ಚರ್ಮಕ್ಕೆ ತಾಕದು. 50 SPF ರೇಟಿಂಗ್ ಅಥವಾ ಅದಕ್ಕೂ ಹೆಚ್ಚಿನ ಮಟ್ಟ ಇರುವಂಥ ಫ್ಯಾಬ್ರಿಕ್ಸ್ ನ ಬಟ್ಟೆಗಳನ್ನೇ ಧರಿಸಬೇಕು. ಇದಕ್ಕಾಗಿ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್‌ ಲೋಶನ್‌ ಬಳಸುವುದು ಅನಿವಾರ್ಯ. ಅದು 30 SPF (ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌) ಆಗಿದ್ದರೆ ಭಾರತೀಯ ಚರ್ಮಕ್ಕೆ ಉತ್ತಮ ರಕ್ಷಣೆ ನೀಡಬಲ್ಲದು. ಹಗಲಲ್ಲಿ ನೀವು ಹೆಚ್ಚಾಗಿ ಉರಿಬಿಸಿಲಲ್ಲೇ ಓಡಾಡ ಬೇಕಿದ್ದರೆ, 50 SPFನ ಸನ್‌ ಸ್ಕ್ರೀನ್‌ ಬಳಸಿದರೆ ಲೇಸು. ಹೀಗಾಗಿ ಹೊರಗೆ ಹೋಗುವ 15 ನಿಮಿಷಕ್ಕೆ ಮೊದಲು 30+ SPFನ ಬ್ರಾಂಡ್‌ ಸ್ಪೆಕ್ಟ್ರಂ ಹಚ್ಚಿ ಮುನ್ನಡೆಯಿರಿ.

ಬ್ರಾಂಡ್‌ ಸ್ಪೆಕ್ಟ್ರಂ ಅಂದ್ರೆ ಆ ಪ್ರಾಡಕ್ಟ್ UV + UVA ಎರಡೂ ಬಗೆಯ ಸೂರ್ಯ ಕಿರಣಗಳ ವಿರುದ್ಧ ನಮಗೆ ಲಾಭ ತರುವಂತಾಗಬೇಕು.

ಸರಳ ಪ್ರಭಾವಿ ವಿಧಾನ

ಹೊರಗೆ ಹೊರಟಾಗ ಅಗತ್ಯವಾಗಿ ಕ್ಯಾಪ್‌ ಧರಿಸಿ ನಿಮ್ಮ ಕಣ್ಣು, ಕಿವಿ, ಮುಖವನ್ನು UV ಕಿರಣಗಳಿಂದ ಕಾಪಾಡಿಕೊಳ್ಳಿ. ಉತ್ತಮ ರಕ್ಷಣೆಗಾಗಿ ಅಗಲ ಬಾರ್ಡರ್‌ ವುಳ್ಳ ಕ್ಯಾಪ್‌ ಖರೀದಿಸಿ.

ಚರ್ಮವನ್ನು ಕಾಪಾಡಿಕೊಳ್ಳುವ ಅತಿ ಸರಳ, ಪ್ರಭಾವಿ ವಿಧಾನ ಎಂದರೆ, ಸದಾ ನೆರಳಲ್ಲೇ ಇರಬೇಕು. ಅಂದ್ರೆ ಹೊರಗೆ ಹೋದಾಗೆಲ್ಲ ನಿಮ್ಮ ಜೊತೆ 1 ಛತ್ರಿ ಇರಲಿ! ಜೊತೆಗೆ ಸದಾ 2 ಬಾಟಲಿ ನೀರು ಇಟ್ಟುಕೊಂಡು, ದಿನವಿಡೀ ಕುಡಿಯುತ್ತಲೇ ಇರಿ. ಇದರಿಂದ ಆಂತರಿಕವಾಗಿ UV ಕಿರಣಗಳ ದುಷ್ಪ್ರಭಾವದಿಂದ ನೀವು ಪಾರಾಗಬಹುದು.

ಹಣ್ಣಿನ ತಾಜ ಜೂಸ್‌, ಎಳನೀರು, ನೀರು ಮಜ್ಜಿಗೆ, ಎಲೆಕ್ಟ್ರೊಲೈಟ್ಸ್ ಇತ್ಯಾದಿ ಆಗಾಗ ಸೇವಿಸುತ್ತಿರಿ.

ಸನ್‌ ಗ್ಲಾಸಸ್‌ ಧರಿಸಲು ಮರೆಯದಿರಿ. ಯಾವುದೋ ಅಗ್ಗದ ಮಾಲು ಕೊಳ್ಳದಿರಿ. UV + UVA ಕಿರಣಗಳ ಆ್ಯಂಟಿ ಗ್ಲೇರಿಂಗ್ ರಕ್ಷಾ ಕವಚವುಳ್ಳಂಥ ಉತ್ತಮ ಗುಣಮಟ್ಟದ ಕಂಪನಿಯ ಸನ್‌ ಗ್ಲಾಸಸ್‌ ಮಾತ್ರ ಕೊಳ್ಳಬೇಕು. ಅದು ಕಂಗಳಿಗೆ ಕಂಫರ್ಟೆಬಲ್ ಸಹ ಆಗಿರಬೇಕು.

ಲೇಸರ್ಸ್ಕಿನ್ಟೋನಿಂಗ್

ಡೀಟೋನಿಂಗ್‌ : ಲೇಸರ್‌ ಎಕ್ಸ್ ಪೋಶರ್‌ ನ ಪರಿಣಾಮವಾಗಿ ಚರ್ಮದ ಬಣ್ಣ ತುಸು ಲೈಟ್‌ ಆಗಬಹುದು.

ಸ್ಕಿನ್ಪಾಲಿಶಿಂಗ್‌ : ಈ ಟೆಕ್ನಿಕಲ್ ಡ್ಯಾಮೇಜ್‌ ಆಗಿರುವ ಚರ್ಮಕ್ಕೆ ಪೂರಕ, ಅದನ್ನು ಮತ್ತೆ ಪುರುಜ್ಜೀವಗೊಳಿಸುತ್ತದೆ.

ಆ್ಯಂಟಿ ಏಜಿಂಗ್ಚಿಕಿತ್ಸೆ : ಒಮ್ಮೊಮ್ಮೆ ಸುಕ್ಕು, ನೆರಿಗೆ, ಫೈನ್‌ ಲೈನ್ಸ್ ಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಶಾಶ್ವತ ಚಿಕಿತ್ಸೆಯ ಮೊರೆ ಹೋಗಬೇಕು. ಬೊಟಾಕ್ಸ್ ಫಿಲ್ಲರ್ಸ್‌ ವಿಧಾನಗಳಿಂದ ಈ ಕುಂದುಕೊರತೆ ನಿವಾರಿಸಬಹುದು.

UV ಕಿರಣಗಳ ಹಾನಿ ತಪ್ಪಿಸಲು ನಿಮ್ಮ ಆಹಾರದಲ್ಲಿ ಈ ಅಂಶಗಳು ಖಂಡಿತಾ ಇರಬೇಕು. ಎಂದಿನ ಪೌಷ್ಟಿಕ ಆಹಾರದ ಜೊತೆಗೆ ಧಾರಾಳ ವಿಟಮಿನ್‌ C ಇರುವಂಥ ಹುಳಿಹಣ್ಣು, ಕಿತ್ತಳೆ, ಮೂಸಂಬಿ, ನೆಲ್ಲಿಕಾಯಿ, ನಿಂಬೆ, ದಾಳಿಂಬೆ ಮುಂತಾದವನ್ನು ಧಾರಾಳ ಸೇವಿಸಿ. ಜೊತೆಗೆ ತಾಜಾ ಹಸಿ ತರಕಾರಿ, ಗ್ರೀನ್‌ ಟೀ ಸಹ ಇರಲಿ.

ಆಹಾರದ ಕಡೆ ಗಮನವಿರಲಿ

ವಿಟಮಿನ್‌ C ಧಾರಾಳ ಇರುವಂಥ ಹಣ್ಣುಗಳೊಂದಿಗೆ ಹಾಲು, ಸೊಪ್ಪು ಸಹ ದಿನ ಸೇವಿಸಬೇಕು. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ಬಲು ಸಹಕಾರಿ. ಸನ್‌ ಟ್ಯಾನ್‌, ಸನ್‌ ಬರ್ನ್‌ ಇತ್ಯಾದಿಗಳಿಂದ ಉತ್ತಮ ರಕ್ಷಣೆ ಸಿಗುತ್ತದೆ.

ಇದೇ ತರಹ ತಾಜಾ ಹಸಿರು ತರಕಾರಿಗಳಿಂದ ಕೋಸಂಬರಿ, ಸಲಾಡ್‌ ಇತ್ಯಾದಿ ದಿನ ಸೇವಿಸಬೇಕು. ಇದರಲ್ಲಿನ ವಿಟಮಿನ್‌, ಸೂರ್ಯ ಕಿರಣಗಳ ಹಾನಿಯಿಂದ ಕಾಪಾಡುತ್ತದೆ. ಬಿಸಿಲಿನಲ್ಲಿ ಹೆಚ್ಚಿಗೆ ಓಡಾಡುವುದರಿಂದ ಯಾರಿಗೆ ಬೇಗ ಚರ್ಮದ ಮೇಲೆ ಡಾರ್ಕ್‌ ಪ್ಯಾಚೆಸ್‌ ಕಾಣಿಸುತ್ತದೋ, ಅಂಥವರು ಕಟ್ಟುನಿಟ್ಟಾಗಿ ಇವನ್ನೆಲ್ಲ ಸೇವಿಸಲೇ ಬೇಕು. ಟೊಮೇಟೊ, ಸೌತೇಕಾಯಿ, ಲೆಟ್ಯೂಸ್‌, ಕ್ಯಾಪ್ಸಿಕಂ, ಎಲೆಕೋಸು, ಮೂಲಂಗಿ, ಬೀಟ್‌ ರೂಟ್‌ ಇತ್ಯಾದಿಗಳನ್ನು ಸಾಧ್ಯವಾದಷ್ಟೂ ಹಸಿಯಾಗಿಯೇ ಸೇವಿಸಿ.

ಜೊತೆಗೆ ನಟ್ಸ್ ಡ್ರೈ ಫ್ರೂಟ್ಸ್ ಸಹ ಇರಲಿ. ಅಂದ್ರೆ ಗೋಡಂಬಿ, ದಾಕ್ಷಿ, ಪಿಸ್ತಾ, ಬಾದಾಮಿ, ಖರ್ಜೂರ, ಅಂಜೂರ, ಫ್ಲಾಕ್‌ ಸೀಡ್ಸ್ (ಓಮೇಗಾ 3ಗಾಗಿ) ಮುಂತಾದವುಗಳ ಸೇವನೆ ಆ್ಯಂಟಿ ಇನ್‌ ಫ್ಲಮೇಟರಿ ಗುಣ ಹೊಂದಿದ್ದು, ಸನ್‌ ಬರ್ನ್‌ ನಿಂದ ಕಾಪಾಡುತ್ತವೆ.

ಬಿ. ಪಂಕಜಾ

ನಿಯಮಿತ ಪರೀಕ್ಷೆ ಮಾಡಿಸಿ

ಸ್ಕಿನ್‌ ಕ್ಯಾನ್ಸರ್‌ ಆಗಿದೆಯೇ ಎಂದು ತಿಳಿಯಲು ನಿಮ್ಮ ಚರ್ಮದ ಬಣ್ಣದಲ್ಲಿ ಏನಾದರೂ ಬದಲಾವಣೆ, ಗಂಟು, ಗುಳ್ಳೆ, ಗಂಧೆ, ದದ್ದುಗಳಾಗಿದ್ದರೆ ನಿಯಮಿತವಾಗಿ ವೈದ್ಯರ ಬಳಿ ಪರೀಕ್ಷೆ, ಮಾಡಿಸಿ. ಚರ್ಮ ತಜ್ಞರ ಸಲಹೆಯಂತೆ ಮುಂದುವರಿಯಿರಿ.

ಲೈಟ್‌ ಸನ್‌ ಬರ್ನ್ಸ್ ಗಾಗಿ ಹೀಗೆ ಮನೆ ಮದ್ದು ಮಾಡಿ. ಕೋಲ್ಡ್ ಕಂಪ್ರಶನ್‌ ಯಾ ಐಸ್‌ ಪ್ಯಾಕ್‌ ಮಸಾಜ್‌, ಹೈಡ್ರೇಟಿಂಗ್‌ ಕ್ರೀಂ, ಪೆಯ್ನ್ ಕಿಲ್ಲರ್‌ ಮಾತ್ರೆ ಸೇವಿಸಬಹುದು.

ಆ್ಯಂಟಿ ಇನ್‌ ಫ್ಲಮೆಟರಿ ಗುಣಗಳುಳ್ಳ ಔಷಧಿಗಳು ಚರ್ಮದ ಕೆಂಪು ಪ್ಯಾಚೆಸ್‌, ಊತ ಇತ್ಯಾದಿಗಳನ್ನು ನಿವಾರಿಸುವಲ್ಲಿ ಪೂರಕ.

ಬಾಡಿ ಲೋಶನ್‌, ಕ್ರೀಂ ಹಚ್ಚುವುದರಿಂದ ಕೆರೆತ, ಕಡಿತ, ಡ್ರೈ ಸ್ಕಿನ್‌, ಹೊಪ್ಪಳೆಗಳಿಂದ ಪರಿಹಾರ ಸಿಗುತ್ತದೆ.

ಪ್ರತಿದಿನ 2 ಸಲ ತಣ್ಣೀರಿನಿಂದ ಸ್ನಾನ ಮಾಡಿ. ಕಾದಾರಿದ ಬಾರ್ಲಿ ನೀರು, ಎಳನೀರು, ನೀರು ಮಜ್ಜಿಗೆ ಇತ್ಯಾದಿ ಆಗಾಗ ಧಾರಾಳ ಕುಡಿಯುತ್ತಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ