ಫಿನ್‌ಟೆಕ್ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಏಂಜಲ್ ವನ್ ಲಿಮಿಟೆಡ್, ತನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಂತೆ ಹಾಗೂ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸುತ್ತಿರುವ ವಂಚಕ ಸಾಮಾಜಿಕ ಮಾಧ್ಯಮ ಗುಂಪುಗಳ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.

ಕಂಪನಿ ವಾಟ್ಸಪ್ ಮತ್ತು ಟೆಲಿಗ್ರಾಂ ಮುಂತಾದ ಸಾಮಾಜಿಕ ಸಂದೇಶ ವಿನಿಮಯ ವೇದಿಕೆಗಳಲ್ಲಿ ಅನಧಿಕೃತ ಗುಂಪುಗಳನ್ನು ರಚಿಸಲಾಗುತ್ತಿರುವುದು ಗಮನಿಸಿದೆ. ಇವುಗಳು ಏಂಜಲ್ ವನ್ ಲಿಮಿಟೆಡ್‌ನ ಬ್ರ್ಯಾಂಡ್ ಹೆಸರು, ಲೋಗೋ ಹಾಗೂ ಹಿರಿಯ ಅಧಿಕಾರಿಗಳ ಹೆಸರು ಮತ್ತು ಚಿತ್ರಗಳನ್ನು ಕಾನೂನುಬಾಹಿರವಾಗಿ ಹಾಗೂ ಮೋಸಪೂರಿತವಾಗಿ ಬಳಸುತ್ತಿವೆ. ಇಂತಹ ಗುಂಪುಗಳು SEBI ನೋಂದಣಿ/ಅನುಮತಿ ಇಲ್ಲದೆ ಷೇರುಗಳಿಗೆ ಸಂಬಂಧಿಸಿದ ಸಲಹೆಗಳನ್ನು ನೀಡುವುದು, ಖೋಟಾ ಆದಾಯ ಭರವಸೆ ನೀಡುವುದು ಹಾಗೂ SEBI ಅನುಮೋದನೆಯಿಲ್ಲದೆ ಭ್ರಮಾಪಟ್ಟ ಮಾಹಿತಿಯನ್ನು ಹಂಚುವುದು ಸೇರಿದಂತೆ ಹಲವಾರು ಅನಧಿಕೃತ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಏಂಜಲ್ ವನ್ ಗುರುತಿಸಿದೆ.

“SEBI ಅನುಮೋದನೆಯಿಲ್ಲದ ಹೂಡಿಕೆ ಸಲಹೆಗಳನ್ನು ನೀಡುವುದು ಅಥವಾ ಖಚಿತ ಆದಾಯ ಭರವಸೆ ನೀಡುವುದು ಸಂಪೂರ್ಣವಾಗಿ ನಿಷಿದ್ಧ. ನಮ್ಮ ಹೆಸರಿನಲ್ಲಿ ಯಾವುದೇ ಸಂವಹನ ಬಂದರೆ ಅದರ ವೈಧ್ಯತೆ ಪರಿಶೀಲಿಸಲು ನಾವು ಹೂಡಿಕೆದಾರರನ್ನು ಬಲವಾಗಿ ಮನವಿ ಮಾಡುತ್ತೇವೆ. ಹೂಡಿಕೆ ನಿರ್ಧಾರಗಳು ಯಾವಾಗಲೂ ಸೂಕ್ತ ಸಂಶೋಧನೆ ಹಾಗೂ ಅಧಿಕೃತ ಮೂಲಗಳಿಂದ ಸಿಗುವ ಮಾಹಿತಿಯ ಆಧಾರದ ಮೇಲೆ ಮಾತ್ರ ಇರಬೇಕು. ನಕಲಿ ಆಪ್ಸ್, ವೆಬ್‌ಲಿಂಕ್‌ಗಳು ಅಥವಾ ಖಾಸಗಿ ವಾಟ್ಸಪ್/ಟೆಲಿಗ್ರಾಂ ಗುಂಪುಗಳೊಂದಿಗೆ ಏಂಜಲ್ ವನ್ ಲಿಮಿಟೆಡ್‌ಗೆ ಯಾವುದೇ ನೇರ ಅಥವಾ ಪರೋಕ್ಷ ಸಂಪರ್ಕವಿಲ್ಲ. ಇವುಗಳಿಂದ ಉಂಟಾಗುವ ಆರ್ಥಿಕ ನಷ್ಟಗಳಿಗೆ ಕಂಪನಿ ಹೊಣೆಗಾರರಾಗುವುದಿಲ್ಲ,” ಎಂದು ಏಂಜಲ್ ವನ್ ಪ್ರಕಟಿಸಿದೆ.

ಏಂಜಲ್ ವನ್ ಸ್ಪಷ್ಟಪಡಿಸಿರುವಂತೆ, ಕಂಪನಿ ಗ್ರಾಹಕರನ್ನು ಅನಧಿಕೃತ ಸಾಮಾಜಿಕ ಮಾಧ್ಯಮ ಗುಂಪುಗಳಿಗೆ ಸೇರಿಸುವುದಿಲ್ಲ, ಸಂದೇಶ ಆಧಾರಿತ ವೇದಿಕೆಗಳ ಮೂಲಕ ಸೂಕ್ಷ್ಮ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ, ಅನಧಿಕೃತ ಮಾರ್ಗಗಳಿಂದ ಹಣ ಸಂಗ್ರಹಿಸುವುದಿಲ್ಲ ಹಾಗೂ ಖಚಿತ ಆದಾಯ ಭರವಸೆ ನೀಡುವುದಿಲ್ಲ. ಎಲ್ಲಾ ಅಧಿಕೃತ ವ್ಯವಹಾರಗಳು ಕೇವಲ ಏಂಜಲ್ ವನ್‌ನ ಅಧಿಕೃತ ವೇದಿಕೆಗಳ ಮೂಲಕವೇ ನಡೆಯಬೇಕು. ಅಪ್ಲಿಕೇಶನ್‌ಗಳನ್ನು ಅಧಿಕೃತ ಮೂಲಗಳಿಂದ ಹಾಗೂ ಅನುಮೋದಿತ ಆಪ್ ಸ್ಟೋರ್‌ಗಳಿಂದ ಮಾತ್ರ ಡೌನ್‌ಲೋಡ್ ಮಾಡಬೇಕಾಗಿದೆ.

ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಿಸುವುದು ಹಾಗೂ ಸುರಕ್ಷಿತ ಟ್ರೇಡಿಂಗ್ ಅಭ್ಯಾಸಗಳನ್ನು ಉತ್ತೇಜಿಸುವ ವಿಷಯದಲ್ಲಿ ಏಂಜಲ್ ವನ್ ಬದ್ಧವಾಗಿದೆ. ಹೂಡಿಕೆದಾರರು ಎಚ್ಚರಿಕೆಯಿಂದ ಇರಲಿ ಮತ್ತು ತಮ್ಮ ಹಣಕಾಸು ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕಂಪನಿ ಮನವಿ ಮಾಡಿದೆ.

ಸಾಮಾನ್ಯ ಜನರು ಇಂತಹ ನಕಲಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಕಾನೂನು ಜಾರಿಗೆ ಸಂಬಂಧಿಸಿದ ಇಲಾಖೆಗೆ ವರದಿ ಮಾಡಬೇಕು. ಯಾವುದೇ ಸೈಬರ್ ವಂಚನೆ ಎದುರಾದಲ್ಲಿ cybercrime.gov.in ಪೋರ್ಟಲ್ ಮೂಲಕ, 1930 ಹೆಲ್ಪ್‌ಲೈನ್‌ಗೆ ಕರೆ ಮಾಡುವ ಮೂಲಕ, ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡುವ ಮೂಲಕ ಅಥವಾ ceoescalation@angelone.in  ಗೆ ಬರೆಯುವ ಮೂಲಕ ವರದಿ ಮಾಡಬಹುದು.

ಏಂಜಲ್ ಒನ್ ಲಿಮಿಟೆಡ್ ಬಗ್ಗೆ
ಏಂಜಲ್ ಒನ್ ಲಿಮಿಟೆಡ್ (NSE: ANGELONE, BSE: 543235) ಭಾರತದ ಪ್ರಮುಖ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ, ಇದು ಲಕ್ಷಾಂತರ ಜನರು ಹೂಡಿಕೆ ಮಾಡುವ ಮತ್ತು ಸಂಪತ್ತನ್ನು ನಿರ್ಮಿಸುವ ವಿಧಾನವನ್ನು ಪರಿವರ್ತಿಸುತ್ತದೆ. 35 ಮಿಲಿಯನ್‌ಗಿಂತಲೂ ಹೆಚ್ಚಿನ ಕ್ಲೈಂಟ್ ಬೇಸ್‌ನೊಂದಿಗೆ, ಕಂಪನಿಯು ಬ್ರೋಕಿಂಗ್, ಸಲಹಾ, ಮಾರ್ಜಿನ್ ಹಣಕಾಸು, ಸಂಪತ್ತು ಮತ್ತು ಆಸ್ತಿ ನಿರ್ವಹಣೆ (AMC) ಮತ್ತು ಮ್ಯೂಚುವಲ್ ಫಂಡ್‌ಗಳು, ಸಾಲ, ಸ್ಥಿರ ಆದಾಯ ಮತ್ತು ವಿಮೆಯಂತಹ ಮೂರನೇ ವ್ಯಕ್ತಿಯ ಹಣಕಾಸು ಉತ್ಪನ್ನಗಳ ವಿತರಣೆಯಾದ್ಯಂತ ವ್ಯಾಪಕ ಶ್ರೇಣಿಯ ಡಿಜಿಟಲ್-ಮೊದಲ ಪರಿಹಾರಗಳನ್ನು ನೀಡುತ್ತದೆ.

ಸ್ಕೇಲೆಬಲ್ ತಂತ್ರಜ್ಞಾನದ ಮೇಲೆ ತೀಕ್ಷ್ಣವಾದ ಗಮನವನ್ನು ಹೊಂದಿರುವ ಏಂಜಲ್ ಒನ್, ಗ್ರಾಹಕರ ನಿಶ್ಚಿತಾರ್ಥ ಮತ್ತು ಧಾರಣವನ್ನು ಹೆಚ್ಚಿಸಲು AI, ಯಂತ್ರ ಕಲಿಕೆ ಮತ್ತು ಡೇಟಾ-ಚಾಲಿತ ಒಳನೋಟಗಳನ್ನು ಸಂಯೋಜಿಸುತ್ತದೆ. ಇದರ ಪ್ರಮುಖ ಸೂಪರ್ ಅಪ್ಲಿಕೇಶನ್, NXT, ಡೆವಲಪರ್-ಕೇಂದ್ರಿತ ಸ್ಮಾರ್ಟ್‌ಎಪಿಐ – ವ್ಯಾಪಾರಿಗಳಿಗಾಗಿ ಮುಕ್ತ API ಪ್ಲಾಟ್‌ಫಾರ್ಮ್ – ಮತ್ತು ಸ್ಮಾರ್ಟ್ ಮನಿ – ಸಮಗ್ರ ಹೂಡಿಕೆದಾರರ ಶಿಕ್ಷಣ ವೇದಿಕೆಯಿಂದ ನಡೆಸಲ್ಪಡುತ್ತದೆ, ಇದು ಮೊಬೈಲ್-ಮೊದಲು, ಡೇಟಾ-ಬುದ್ಧಿವಂತ ಮತ್ತು ಬೆಳವಣಿಗೆ-ಚಾಲಿತ ಗ್ರಾಹಕರಿಗೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ. ಫಿನ್‌ಟೆಕ್ ನಾವೀನ್ಯತೆಯನ್ನು ಆಳವಾದ ಉದ್ಯಮ ಪರಿಣತಿಯೊಂದಿಗೆ ಸಂಯೋಜಿಸಿ, ಏಂಜಲ್ ಒನ್ ಕ್ಲೈಂಟ್‌ಗಳನ್ನು ತಮ್ಮ ಆರ್ಥಿಕ ಪ್ರಯಾಣದಲ್ಲಿ ಸಬಲಗೊಳಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ