– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಪ್ರಯೋಗಗಳು ನಡೆಯುತ್ತಿವೆ.ಅದು ಕಥೆಯಲ್ಲಾಗಿರಬಹುದು ಅಥವಾ ಪಾತ್ರಗಳ ಆಯ್ಕೆಯಲ್ಲಾಗಿರಬಹುದು.ಉದಯೋನ್ಮುಖ ಪ್ರತಿಭೆಗಳು ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಇದೀಗ ಇದೇ ರೀತಿ ಹೊಸ ಕಥೆಯ ಮೂಲಕ ಉದಯೋನ್ಮುಖ ತಂಡವೊಂದು ಬರುತ್ತಿದೆ.

ಹೌದು.’ಮನಂ ಮೂವಿ ಮೇಕರ್ಸ್ ‘ ಬ್ಯಾನರ್ ಅಡಿಯಲ್ಲಿ ‘ದಿ 1979 ಅನ್ ಟೋಲ್ಡ್ ಸ್ಟೋರಿ ‘ ಎನ್ನುವ ಹೊಸ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಪುಷ್ಪ ರಾಜ್ ಅವ್ರು ಆಕ್ಷನ್ ಕಟ್ ಹೇಳಿದ್ದು, ಬೀರಮಾನಹಳ್ಳಿ ಎಂ ಶ್ರೀನಿವಾಸ್ ಅವರು ಬಂಡವಾಳ ಹೂಡಿದ್ದಾರೆ.

1979 ರಲ್ಲಿ ಬಂಗಾಳದಲ್ಲಿ ನಡೆದಿರುವ ನೈಜ್ಯ ಕಥೆಯನ್ನಾಧರಿಸಿರುವ ಕಾಲ್ಪನಿಕ ಕಥೆ ಇರುವ ಸಿನಿಮಾ ಇದಾಗಿದ್ದು,ಸಂಪೂರ್ಣ ಕಥೆಯು ಬಂಗಾಳದ ಹಿನ್ನೆಲೆಯನ್ನು ಹೊಂದಿದ್ದರು ,ಚಿತ್ರವನ್ನು ನಮ್ಮ ಕೋಲಾರದಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ.ಹಾಗಾಗಿ ಚಿತ್ರದ ಬಗ್ಗೆ ಕುತೂಹಲದ ಜೊತೆಗೆ ನೀರಿಕ್ಷೆ ಹೆಚ್ಚಿದೆ.

ಈಗಾಗಲೇ ಸಿನಿಮಾದ ಟೀಸರ್ ಅನ್ನು ಚಿತ್ರ ತಂಡ ಜನವರಿ 23 ರಂದು ‘ಮ್ಯೂಸಿಕ್ ಬಜಾರ್ ‘ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ.ಟೀಸರ್ ನೋಡಿದಾಗ ಇದು ನಮ್ಮ ಮಣ್ಣಿನ ಕಥೆ ಎನ್ನುವುದು ಬಹಳ ಸುಲಭವಾಗಿ ತಿಳಿಯುತ್ತದೆ. ಅಷ್ಟು ನೈಜ್ಯವಾಗಿ ಸಿನಿಮಾವನ್ನು ಸೆರೆ ಹಿಡಿದಿದ್ದಾರೆ.

ರಾಜಕೀಯ, ಅಧಿಕಾರ, ಆಡಳಿತ,ಸ್ವಾಭಿಮಾನ, ನೋವು,ಹಿಂಸೆ ಇದರ ಸುತ್ತ ಈ ಚಿತ್ರ ಸುತ್ತುತದೆ ಎನ್ನುವುದನ್ನು ಟೀಸರ್ ಮೂಲಕ ಕಾಣಬಹುದಾಗಿದೆ.ಇದರ ಜೊತೆಗೆ ಸಿನಿಮಾದ ಬಿಜಿಎಂ ಕೂಡ ಬಹಳ ಅದ್ಭುತವಾಗಿದೆ. ಒಟ್ಟಿನಲ್ಲಿ ಸಿನಿಮಾ ಸಿನಿ ಪ್ರಿಯರಲ್ಲಿ ಕುತೂಹಲತೆಯನ್ನು ಹೆಚ್ಚಿಸಿದೆ.

ಇನ್ನು ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಮಾಹಿತಿ ನೀಡಿದೆ. ಸಿನಿಮಾದ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಇದೇ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿಯೂ ತಂಡ ತಿಳಿಸಿದೆ.
ಸಿನಿಮಾವು ಹೊಸ ಪ್ರತಿಭೆಗಳಿಂದ ಕೂಡಿದ್ದು, ಅಜ್ಜು,ಸುಜಿತ್, ಪ್ರಾನ್ವಿ ಗೌಡ ಹಾಗೂ ಅಮೃತ ಗೌಡ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.ಸಿನಿಮಾದ ತಾಂತ್ರಿಕ ವರ್ಗವು ಬಲಿಷ್ಠವಾಗಿದ್ದು,ಚಲಾಕಿ ಚರಣ್ ಅವರ ಛಾಯಾಗ್ರಾಹಣದಲ್ಲಿ ಚಿತ್ರ ಮೂಡಿಬಂದಿದೆ.ಜತೆಗೆ ಜಶ್ವಂತ್ ವಸುವುಲೇಟಿ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

ಸಿನಿ ಪ್ರಿಯರು ಸದಾ ಹೊಸತನವನ್ನು ಬಯಸುತ್ತಾರೆ.ಈ ವಿಚಾರದಲ್ಲಿ’ ದಿ 1979 ಅನ್ ಟೋಲ್ಡ್ ಸ್ಟೋರಿ ‘ ಹಲವಾರು ಪ್ರತಿಭೆಗಳಿಗೆ ಅವಕಾಶ ನೀಡಿರುವುದರ ಜೊತೆಗೆ ಒಂದೊಳ್ಳೆ ಕಥೆಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪ್ಪನ್ನು ಸೃಷ್ಟಿಸಲು ಬರುತ್ತಿದೆ.





