ಆಭರಣ ಇಲ್ಲದಿದ್ದರೆ ಹೆಣ್ಣಿನ ಶೃಂಗಾರ ಅಪೂರ್ಣ ಎಂದೇ ಭಾವಿಸಲಾಗಿದೆ. ಈ ಕಾರಣದಿಂದಲೇ ಬದಲಾಗುತ್ತಿರುವ ಆಧುನಿಕ ಯುಗದಲ್ಲೂ ಆಭರಣಗಳ ಪ್ರಯೋಗ ಹೊಸ ಹೊಸ ರೀತಿಯಲ್ಲಿ ಆಗುತ್ತಿರುತ್ತದೆ. ಟ್ರೆಡಿಶನಲ್ ಡ್ರೆಸೆಸ್ ಬಯಸುವ ನಟಿ ವಿದ್ಯಾಬಾಲನ್ ಗೆ, ಜುಮಕಿ ಎಷ್ಟು ಇಷ್ಟ ಅಂದ್ರೆ, ಅವಳು ಇದನ್ನು ಕೊಳ್ಳುವ ಯಾವ ಅವಕಾಶವನ್ನೂ ಬಿಡುವುದಿಲ್ಲವಂತೆ! ರೈಲಿನಲ್ಲಿ ಪ್ರಯಾಣಿಸುವಾಗ ದೊರಕುವಂಥ 5-10 ರೂ.ಗಳ ಅಗ್ಗದ ಜುಮಕಿ ಸಹ ಬಿಡುವುದಿಲ್ಲವಂತೆ. ಪಾರಂಪರಿಕ ಒಡವೆಗಳು ಅಂದ್ರೆ ವಿದ್ಯಾಳಿಗ ಬಲು ಆಪ್ಯಾಯಮಾನ.
ಸೋನಂ ಕಪೂರ್ ಸದಾ ತನ್ನ ಸ್ಟೈಲ್ ಗಾಗಿ ಖ್ಯಾತಿ. ಹಾಗಾಗಿ ಅದರಲ್ಲಿ ಬಗೆ ಬಗೆ ಪ್ರಯೋಗ ಮಾಡುತ್ತಿರುತ್ತಾಳೆ. ಆಕೆಯ ಇಂಥ ಲುಕ್ಸ್ ಎಲ್ಲವೂ ಆಧುನಿಕ ಅಭಿಮಾನಿಗಳಿಗೂ ಇಷ್ಟ. ಆಭರಣಗಳು ಅಂದ್ರೆ ಇವಳಿಗೆ ಬಲು ಖಯಾಲಿ. ಅದು ಅಗ್ಗ ಅಥವಾ ದುಬಾರಿ ಆಗಿರಲಿ, ಸೋನಂ ಮರೆಯದೆ ಕೊಳ್ಳುತ್ತಾಳಂತೆ. ತನ್ನ ಡ್ರೆಸ್ ಗೆ ಹೊಂದುವಂಥ ರಾಶಿ ರಾಶಿ ಒಡವೆ ಖರೀದಿಸಿದ್ದಾಳೆ.
ಟ್ರೆಡಿಶನಲ್ ಅಥವಾ ವೆಸ್ಟರ್ನ್ ಡ್ರೆಸ್ ಇರಲಿ, ಎಲ್ಲದಕ್ಕೂ ಯಾವುದೋ ಒಂದು ಒಡವೆ ಇರಲೇಬೇಕು ಅಂತಾಳೆ.
ನಟಿ ದೀಪಿಕಾ ಪಡುಕೋಣೆಗೆ ಟ್ರೆಡಿಶನಲ್ ಜ್ಯೂವೆಲರಿ ಎಂದರೆ ಇಷ್ಟ. ಆಕೆಗೆ ಹೆಚ್ಚಾಗಿ ಉದ್ದನೆ, ತೂಗಾಡುವ ಇಯರ್ ರಿಂಗ್ಸ್ ಇಷ್ಟ. ಹಾಗಾಗಿ ಆಕೆಯ ಮುಖ ಉದ್ದಕ್ಕಿದೆ ಅನಿಸುತ್ತದೆ.
ಈ ಕುರಿತಾಗಿ ಜ್ಯೂವೆಲರಿ ತಜ್ಞರ ಅಭಿಪ್ರಾಯ ಎಂದರೆ, ಮುಖ ಎಂಬುದು ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿ. ಸರಿಯಾದ ಆಭರಣದ ಆಯ್ಕೆ ಸೌಂದರ್ಯವನ್ನು ಇಮ್ಮಡಿಸುತ್ತದೆ. ಹೀಗಾಗಿ ಭಾರಿ ಭಾರಿ ಒಡವೆಗಳನ್ನು ಹೇರಿಕೊಳ್ಳುವ ಬದಲು, ಎಲಿಗೆಂಟ್ ಲುಕ್ಸ್ ನೀಡುವಂಥ ಒಡವೆಗಳು ಮಾತ್ರವೇ ಇಂದಿನ ಆಧುನಿಕ ತರುಣಿಯರ ಆಯ್ಕೆಯಾಗಿದೆ, ಇದೇ ಈಗ ಟ್ರೆಂಡಿ ಎನಿಸಿದೆ.
ಹೀಗಾಗಿ ಹೆಂಗಸರು ಒಡವೆಗಳ ಶೋ ರೂಮಿಗೆ ಹೋದಾಗ, ಅಲ್ಲಿನ ಝಗಮಗಿಸುವ ಬೆಳಕಲ್ಲಿ, ಹೊಳೆಹೊಳೆಯುವ ಒಡವೆಗಳಿಗೆ ಮಾರುಹೋಗುವ ಬದಲು, ನಿಮ್ಮ ಮುಖಕ್ಕೆ ಒಪ್ಪುವಂಥ ಆಭರಣ ಮಾತ್ರ ಆರಿಸಿ. ಈ ರೀತಿ ಮಾಡದಿದ್ದರೆ, ಎಂಥ ದುಬಾರಿ ಒಡವೆ ಧರಿಸಿದರೂ ಸರಿ, ಮುಖದ ಅಂದ ಕಳೆಗುಂದಿದಂತೆ ಕಾಣುತ್ತದೆ, ಲುಕ್ಸ್ ಡೌನ್ ಆಗುತ್ತದೆ. ಹೀಗಾಗಿ ಯಾವ ಆಕಾರದ ಮುಖಕ್ಕೆ ಎಂಥ ಆಭರಣ ಆರಿಸಬೇಕು ಎಂಬುದನ್ನು ವಿವರವಾಗಿ ತಿಳಿಯೋಣ :
ಓವಲ್ ಫೇಸ್
ಇಂಥ ಮುಖ ಉಳ್ಳವರಿಗೆ ಗುಡ್ ನ್ಯೂಸ್ ಎಂದರೆ, ಇಂಥವರು ಯಾವುದೇ ಉದ್ದನೇ ಸ್ಟೈಲಿಶ್ ನೆಕ್ ಲೇಸ್ ಧರಿಸಬಹುದು. ಇದೇ ತರಹ ಓವಲ್ ಯಾ ಟಿಯರ್ ಡ್ರಾಪ್ ಡಿಸೈನಿನ ರೌಂಡ್ ನೆಕ್ ಲೇಸ್, ನಿಮ್ಮ ಮುಖದ ಆಕಾರದ ನಕಲಿನಂತೆ ಇರುವುದರಿಂದ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಅದೇ ಜ್ಯಾಮಿಟ್ರಿಕ್ ಪೆಂಡೆಂಟ್ ಜೊತೆ ಶಾರ್ಟ್ ನೆಕ್ ಲೇಸ್ ಮಿನಿಮಲಿಸ್ಟಿಕ್ ಲುಕ್ಸ್ ಗಾಗಿ ಬಲು ಪ್ರಸಿದ್ಧವಾಗಿದೆ. ಲುಕ್ಸ್ ನ್ನು ಪರ್ಫೆಕ್ಟ್ ಗೊಳಿಸಲು, ವೈಡ್ ಇಯರ್ ರಿಂಗ್ಸ್ ನ ಮ್ಯಾಚಿಂಗ್ ಅತಿ ಉತ್ತಮ ಲುಕ್ಸ್ ನೀಡುತ್ತವೆ.
ಲಾಂಗ್ ಫೇಸ್
ಇಂಥ ಮುಖವುಳ್ಳವರ ಹಣೆಯಿಂದ ಗಲ್ಲದವರೆಗಿನ ಉದ್ದಳತೆ ತುಸು ಅಧಿಕ ಆಗಿರುತ್ತದೆ. ಹೀಗಾಗಿಯೇ ಈ ಮುಖ ಓವಲ್ ಫೇಸ್ ಗಿಂತ ತುಸು ಭಿನ್ನ. ಇಂಥ ಮುಖದವರಿಗಾಗಿ ಒಂದು ಸರಳ ಉಪಾಯ ಅಂದ್ರೆ, ಮುಖದ ಉದ್ದಳತೆಯನ್ನು ತಗ್ಗಿಸುವಂಥ ಸ್ವರ್ಣಾಭರಣ ಆರಿಸಬೇಕು. ಅದು ಮುಖದ ಅಗಲಕ್ಕೆ ಸೂಕ್ತ ಹೊಂದುವಂತಿರಬೇಕು. ಮುಖದ ಅಗಲಕ್ಕೆ ಇಂಪ್ರೆಶನ್ ನೀಡಲು, ಕುತ್ತಿಗೆಗೆ ತುಸು ಉದ್ದನೆ ಚಂಕಿಯರ್ ನೆಕ್ ಪೀಸ್ ಆರಿಸಬೇಕು. ಇಂಥ ಮುಖಕ್ಕಾಗಿ ಪಲ್ ಚೋಕರ್ ಸೆಟ್ (ಚಿತ್ರ ನೋಡಿ) ಒಂದು ಉತ್ತಮ ಆಯ್ಕೆ ಎನ್ನಬಹುದು. ಇದರ ಜೊತೆಗೆ ಶ್ಯಾಂಡ್ಲಿಯರ್ ಇಯರ್ ರಿಂಗ್ಸ್ ಲುಕ್ಸ್ ನ್ನು ಕಂಪ್ಲೀಟ್ ಮಾಡಲು ಎಲ್ಲಕ್ಕಿಂತ ಬೆಸ್ಟ್ ಆಯ್ಕೆ ಆಗಿರುತ್ತದೆ. ಫ್ಲೋರ್ ಡಿಸೈನ್ಸ್ ಸಹ ಇಂಥ ಮುಖದವರಿಗೆ, ಉತ್ತಮ ಆಯ್ಕೆ ಎಂದು ಸಾಬೀತಾಗಿದೆ.
ಹಾರ್ಟ್ ಶೇಪ್ ಫೇಸ್
ಇಂಥ ಮುಖ ಸಾಮಾನ್ಯವಾಗಿ ಶಾರ್ಟರ್, ಪಾಯಿಂಟೆಡ್ ಗಲ್ಲವುಳ್ಳದ್ದಾಗಿರುತ್ತದೆ. ಇಂಥ ಮುಖದವರಿಗಾಗಿ, ಎಲ್ಲಾ ಬಗೆಯ ಆಭರಣಗಳೂ ಒಪ್ಪುತ್ತವೆ! ಆದರೂ ಹಣೆಯ ಅಗಲದ ಭಾಗ ಕಡಿಮೆ ಮಾಡುವಂಥ ಹಾಗೂ ವೈಡರ್ ಜಾಲೈನ್ಸ್ ನ ಇಂಪ್ರೆಶನ್ ಹುಟ್ಟಿಸುಂಥ ನೆಕ್ ಪೀಸ್ ಹಾಗೂ ಅದೇ ಪ್ರಕಾರದ ಇಯರ್ ರಿಂಗ್ಸ್ ಇರಬೇಕು. ಇದರಲ್ಲಿ ಲಾಂಗ್, ಶೇಪ್ ನೆಕ್ ಲೇಸ್, ಗಲ್ಲವನ್ನು ಹೈಲೈಟ್ ಮಾಡುತ್ತವೆ. ಹೀಗಾಗಿ ಲಾಂಗ್ ನೆಕ್ ಲೇಸ್ ಗೆ ಬದಲಾಗಿ ಶಾರ್ಟ್ ನೆಕ್ ಲೇಸ್, ಕರ್ವ್ ರೌಂಡ್ ಕುತ್ತಿಗೆಯ ಸುತ್ತಲೂ ಕಂಪ್ಲೀಟ್ ಲುಕ್ ನೀಡುತ್ತದೆ ಹಾಗೂ ಹಣೆಯ ಅಗಲವನ್ನು ಬ್ಯಾಲೆನ್ಸ್ ಮಾಡುವಲ್ಲಿಯೂ ಸಹಕರಿಸುತ್ತದೆ. ಲೇಯರ್ಡ್ ನೆಕ್ ಲೇಸ್ ಸಹ ಒಂದು ಬೆಟರ್ ಪೀಸ್ ಆಗಿದ್ದು, ನೀವು ಅದರಲ್ಲಿ ಪೆಂಡೆಂಟ್ ಬಯಸಿದರೆ, ಒಂದು ಅಡ್ಟಸ್ಟೆಬಲ್ ಚೇನಿನ ಜೊತೆ ಇದನ್ನು ಆರಿಸಿ. ಜೊತೆಗೆ ಇದನ್ನು ಸಾಧ್ಯವಾದಷ್ಟೂ ಕುತ್ತಿಗೆಯಲ್ಲಿ ಚಿಕ್ಕದಾಗಿಯೇ ಇರಿಸಿಕೊಳ್ಳಿ. ಇಷ್ಟು ಮಾತ್ರ ಅಲ್ಲದೆ, ಟಿಯರ್ ಡ್ರಾಪ್ ಇಯರ್ ರಿಂಗ್ಸ್ ಸಹ ನಿಶ್ಚಿತ ರೂಪದಲ್ಲಿ ಲುಕ್ಸ್ ನ್ನು, ಬೆಟರ್ ಮಾಡಬಲ್ಲದು.
ರೌಂಡ್ ಫೇಸ್
ಓವಲ್ ಫೇಸಿಗೆ ಹೋಲಿಸಿದಾಗ ಈ ಗುಂಡು ಮುಖ, ಒಂದು ವಿಶಿಷ್ಟ ಅನುಪಾತ ಹೊಂದಿರುತ್ತದೆ. ಗುಂಡಗಿನ ಹಣೆ ಹಾಗೂ ಜಾ ಲೈನ್ ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಶಾರ್ಪ್ ಸ್ಟೋನ್ ಜ್ಯೂವೆಲರಿಯ ಆಯ್ಕೆ ಲುಕ್ಸ್ ಗೆ ಹೆಚ್ಚಿನ ಶಾರ್ಪ್ ನೆಸ್ ಒದಗಿಸುವಲ್ಲಿ ನೆರವಾಗುತ್ತದೆ. ಲಾಂಗ್ ಪೆಂಡೆಂಟ್ ಮತ್ತು ನೆಕ್ ಲೇಸ್, ಕಾಲರ್ ಬೋನ್ ಕೆಳಭಾಗದಲ್ಲಿ ಶೇಪ್ ಒದಗಿಸಿ, ಇಂಥ ಮುಖಕ್ಕೆ ಹೆಚ್ಚಿನ ಕಳೆ ತಂದುಕೊಡುತ್ತದೆ.
ರೌಂಡ್ ಫೇಸ್ ನ ಹೆಂಗಸರು ಚಂಕಿಯರ್‌ಚೋಕರ್ ನೆಕ್ ಲೇಸ್ ನ್ನು ಧರಿಸದೆ ಇರುವುದೇ ಲೇಸು. ಮುಖದ ಅನುಸಾರ ಅವರು ಕಾಂಟ್ರಾಸ್ಟ್ ಗಾಗಿ, ಚೌಕಾಕಾರ ಹಾಗೂ ಆಯತಾಕಾರದ ನೆಕ್ ಲೇಸ್ ಆವರಿಸಿದರೆ ಬೆಟರ್ ಆಗಿರುತ್ತದೆ.
ಸ್ಕ್ವೇರ್ ಫೇಸ್
ಇಂಥ ಮುಖದವರ ಹಣೆ, ಕೆನ್ನೆ ಹಾಗೂ ಜಾಲೈನ್ ಸಮಾನ ಅಗಲ ಹೊಂದಿರುತ್ತವೆ. ಹಣೆಯಿಂದ ಹಿಡಿದು ಗಲ್ಲದವರೆಗಿನ ಎತ್ತರ ಸಹ, ಮುಖದ ಅಗಲಕ್ಕೆ ಸಮಾನವಾಗಿರುತ್ತದೆ. ಸ್ಕ್ವೇರ್ ಫೇಸಿಗಾಗಿ ಸ್ಟೋನ್, ಸ್ಟಡೆಡ್ ಜ್ಯೂವೆಲರಿ ಆರಿಸುವುದೇ ಬೆಟರ್ ಆಯ್ಕೆ. ಇಂಥವರು ಶಾರ್ಪ್ ಜಾಮಿಟ್ರಿಕ್ ಡಿಸೈನ್ಸ್ ನ್ನು ಮುಟ್ಟಲೇಬಾರದು. ಟ್ಯಾಪ್ ನಂಥ ಆಕರ್ಷಕ ಕಾಂಪೊನೆಂಟ್ ಜೊತೆ ಲಾಂಗ್ ವರ್ಟಿಕಲ್ ನೆಕ್ ಲೇಸ್, ಸ್ಕ್ವೇರ್‌ಫೇಸ್ ಗೆ ಎಲ್ಲಕ್ಕಿಂತ ಉತ್ತಮ ಆಯ್ಕೆಯಾಗಿದೆ. ಲಾಂಗ್ ನೆಕ್ ಲೇಸ್ ಆರಿಸುವುದರಿಂದ, ಮುಖ ಮತ್ತಷ್ಟು ಉದ್ದಕ್ಕೆ ಕಾಣಿಸುತ್ತದೆ ಹಾಗೂ ಮುಖದ ಸಾಫ್ಟ್ ನೆಸ್ ಸಹ ಅತ್ಯುತ್ತಮವಾಗಿ ಕಂಗೊಳಿಸುತ್ತದೆ.
– ಜಿ. ಸುಮಾ





