ಬ್ರೈಡಲ್ ಲುಕ್ ಎಂದರೆ ಕೇವಲ ಸೀರೆ, ಲೆಹಂಗಾ ಅಥವಾ ಆಭರಣಗಳು ಮಾತ್ರವಲ್ಲ, ಪಾದರಕ್ಷೆಗಳೂ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ…..!
ಸುನೈನಾಗೆ 29 ವರ್ಷ. ತನ್ನ ಮದುವೆಯಲ್ಲಿ ಅತ್ಯಂತ ಸುಂದರವಾಗಿ, ಸೊಗಸಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವಳ ಬಯಕೆಯಾಗಿತ್ತು. ತನ್ನನ್ನು ನೋಡಿದರು ವಾವ್ ಎಂದು ಹೇಳಬೇಕು ಎಂದುಕೊಳ್ಳುತ್ತಿದ್ದಳು. ಹಾಗಾಗಿ ಅವಳು ಖ್ಯಾತ ಡಿಸೈನರ್ ರಿಂದ ಲೆಹಂಗಾ ಡಿಸೈನ್ ಮಾಡಿಸಿದಳು. ವಿಶೇಷವೆಂದರೆ ಅವಳ ಮದುವೆಯಲ್ಲಿ ಮತ್ತೊಂದು ವಿಷಯಕ್ಕೆ ಅವಳಿಗೆ ಹೊಗಳಿಕೆ ದೊರಕಿತು.
ಸುನೈನಾಳ ಸ್ಟೈಲಿಶ್ ಕೂಲ್ ಶೂಗಳನ್ನು ನೋಡಿದ ಎಲ್ಲರೂ ಅವಳನ್ನು ಹೊಗಳುತ್ತಿದ್ದರು. ಅವಳು ತನ್ನ ಮೃದುವಾದ ಗುಲಾಬಿ ಬಣ್ಣದ ಲೆಹಂಗಾಕ್ಕೆ ಹೊಂದಿಕೆಯಾಗುವ ಶೂಗಳನ್ನು ಧರಿಸಿದ್ದಳು. ಅದರ ಮೇಲೆ ಮಿರರ್ ವರ್ಕ್ ಇತ್ತು. ಈ ಶೂಗಳು ಹೀಲ್ ಸ್ಟೈಲ್ ನಲ್ಲಿದ್ದ. ಆದ್ದರಿಂದ ಎತ್ತರದ ಸಮಸ್ಯೆ ಇರಲಿಲ್ಲ. ಸುನೈನಾಳ ಸ್ಟೈಲಿಶ್ ಶೂಗಳು ಮಾನಸಿಯನ್ನು ಎಷ್ಟು ಆಕರ್ಷಿಸಿತೆಂದರೆ, ಅವಳು ತನ್ನ ಮದುವೆಯಲ್ಲಿ ಸ್ಯಾಂಡಲ್ ಗಳನ್ನು ಹಿಮ್ಮಡಿ ಶೂಗಳೊಂದಿಗ ಬದಲಾಯಿಸಿದಳು.
ಮಾನಸಿ ಈ ರೀತಿ ಮಾಡುವುದರ ಹಿಂದಿನ ಕಾರಣವೆಂದರೆ, ಫ್ಯಾಷನ್ ನಲ್ಲಿ ತನ್ನನ್ನು ತಾನು ನವೀಕರಿಸಿಕೊಳ್ಳುವುದಾಗಿತ್ತು. ಅವಳು ಫ್ಯಾಷನ್ ನಲ್ಲಿ ತಾನು ಎಂದಿಗೂ ಹಿಂದಿರಲು ಬಯಸುವುದಿಲ್ಲ. ಪ್ರತಿ ವಧು ತನ್ನ ಮದುವೆ ದಿನದಂದು ವಿಶೇಷವಾಗಿ ಕಾಣಲು ಬಯಸುತ್ತಾಳೆ. ಮಾನಸಿಗೆ ಕೂಡ ಅದೇ ಆಸೆ ಇತ್ತು.

ನಿಮ್ಮ ಮನಸ್ಸಿಗೆ ಒಪ್ಪುವ ಸ್ಯಾಂಡಲ್ಸ್, ಪಂಪ್ಸ್, ಹೀಲ್ಸ್, ಶೂಸ್ ಅಥವಾ ಸ್ನೀಕರ್ಸ್ ಆರಿಸಿಕೊಳ್ಳಿ. ಅವು ಕಂಫರ್ಟಬಲ್ ಆಗಿರಲಿ ಮತ್ತು ವಿಶೇಷ ದಿನದಲ್ಲಿ ಯಾವುದೇ ಕಿರಿಕಿರಿಯಾಗದಂತಿರಲಿ.
ನೀವು ಧರಿಸುವ ಸ್ಯಾಂಡಲ್ಸ್ ಆರಾಮದಾಯಕವಾಗಿ ಇರದಿದ್ದರೆ, ನಿಮ್ಮ ವಿಶೇಷ ದಿನ ಕೆಟ್ಟ ದಿನವಾಗಿ ಪರಿಣಮಿಸುತ್ತದೆ. ಆದ್ದರಿಂದ ನಿಮ್ಮ ಕಂಫರ್ಟ್ ಗೆ ಅನುಗುಣವಾಗಿ ನಿಮ್ಮ ಮದುವೆಯ ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಿ.
ವಧುವಿಗೆ ಆರಾಮ ಎಷ್ಟು ಮುಖ್ಯ ಎಂಬುದನ್ನು ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ಅವರಿಂದ ಕಲಿಯಬಹುದು. ಅವರು ತಮ್ಮ ಮದುವೆಯಲ್ಲಿ ಗೋಟಾಪಟ್ಟಿ ಹೀಲ್ಸ್ ಧರಿಸಿದ್ದರು. ಅದನ್ನು ಧರಿಸಿದಾಗ ಬಹಳ ಆರಾಮದಾಯಕವಾಗಿತ್ತು ಹಾಗೂ ಸುಂದರವಾಗಿ ಕಾಣುತ್ತಿತ್ತು.
ಹಲವು ದಿನಗಳವರೆಗೆ ಇದು ಚರ್ಚೆಯ ವಿಷಯವಾಗಿಯೂ ಉಳಿದಿತ್ತು. ಅಷ್ಟೇ ಅಲ್ಲ, ಹಲವಾರು ಮಹಿಳೆಯರು ಕೂಡ ಇದನ್ನು ತುಂಬಾ ಇಷ್ಟಪಡುತ್ತಿದ್ದರು. ಆ ಕಾಲದಲ್ಲಿ ಗೋಟಾಪಟ್ಟಿ ಹೀಲ್ಸ್ ಟ್ರೆಂಡ್ ಆಗಲು ಇದೇ ಕಾರಣವಾಗಿತ್ತು.
ನೀವು ಸಹ ವಧುವಾಗಿದ್ದರೆ ಅಥವಾ ನಿಮ್ಮ ಸ್ನೇಹಿತೆ, ಸಹೋದರಿ, ಸೋದರ ಸಂಬಂಧಿ ಅಥವಾ ಭಾವಿ ಅತ್ತಿಗೆ ವಧು ಆಗಲಿದ್ದರೆ, ಈ ಲೇಖನ ನಿಮಗೆ ಬಹಳ ಉಪಯುಕ್ತವಾಗಿದೆ. ಇಂದು ನಾವು ವಧುವಿನ ಕೆಲವು ಪ್ರಸಿದ್ಧ ಪಾದರಕ್ಷೆಗಳ ಬಗ್ಗೆ ಹೇಳುತ್ತೇವೆ.

ಸ್ಟಾರ್ ಲುಕ್ಸ್ ನೀಡುವ ಶೂಗಳು : ನೀವೇನಾದರೂ ವಧುವಿನ ಲುಕ್ಸ್ ಗಾಗಿ ಸ್ಯಾಂಡಲ್ ಗಳನ್ನು ತೆಗೆದುಹಾಕುವ ಮೂಲಕ ಹೊಸದನ್ನು ಪ್ರಯತ್ನಿಸಲು ಬಯಸಿದರೆ, ನೀವು ನಕ್ಷತ್ರಗಳಿರುವ ಬ್ರೈಡಲ್ ಶೂಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಒಂದೇ ಬಣ್ಣದ ಬಟ್ಟೆಗಳ ಮೇಲೂ ಉತ್ತಮವಾಗಿ ಕಾಣುತ್ತವೆ. ಕಾಕ್ ಟೈವ್ ನಂತಹ ಇತರ ಮದುವೆಯ ಕಾರ್ಯಗಳಿಗಾಗಿ ನೀವು ಈ ರೀತಿಯ ಶೂಗಳನ್ನು ಧರಿಸುವ ಮೂಲಕ ಸ್ಟೈಲ್ ಮಾಡಬಹುದು.
35 ಸಾವಿರ ರೂ.ಗಳವರೆಗೆ ಇಂತಹ ಶೂಗಳನ್ನು ಸುಲಭವಾಗಿ ಖರೀದಿಸಬಹುದು. ನಿಮ್ಮ ಮದುವೆಯಲ್ಲಿ ಎತ್ತರದ ಹಿಮ್ಮಡಿ ಇವರು ಪಾದರಕ್ಷೆಗಳನ್ನು ಹಾಕಿಕೊಳ್ಳಲು ಬಯಸಿದರೆ, ಅಂತಹ ಶೂಗಳು ನಿಮಗೆ ಉತ್ತಮ ಆಯ್ಕೆಯಾಗಿರುತ್ತವೆ.
ಈ ಶೂ ಮತ್ತು ಸ್ನೀಕರ್ಸ್ ನಿಮ್ಮ ವಧುವಿನ ಲುಕ್ಸ್ ನ್ನು ಯೂನಿಕ್ ಆಗಿ ಕಾಣುವಂತೆ ಮಾಡುತ್ತವೆ. ಈ ಶೂಗಳ ವಿನ್ಯಾಸ ಫ್ಯಾಷನ್ ಪ್ರವೃತ್ತಿಯೊಂದಿಗೆ ಹೊಸತನ ಅಳವಡಿಸಿಕೊಳ್ಳುವುದನ್ನು ಸಹ ನಿಮಗೆ ಕಲಿಸಿಕೊಡುತ್ತದೆ.
ಬೋಹೊ ಶೈಲಿಯ ಶೂಗಳು
ಇತ್ತೀಚಿನ ದಿನಗಳಲ್ಲಿ ಬೋಹೋ ಲುಕ್ ಗೆ ವಿಭಿನ್ನ ಕ್ರೇಜ್ ಇದೆ. ಎಲ್ಲರೂ ಬೋಹೊ ಲುಕ್ ನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಿಮ್ಮ ಮದುವೆಯಲ್ಲಿ ಯಾವ ರೀತಿಯ ಪಾದರಕ್ಷೆಗಳನ್ನು ಧರಿಸಬೇಕೆಂದು ನೀವು ಗೊಂದಲಕ್ಕೆ ಒಳಗಾಗಿದ್ದರೆ, ನೀವು ಬೋಹೊ ಶೂಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ನೀವು ಸುಲಭವಾಗಿ ಹಲವು ರೀತಿಯ ವಿನ್ಯಾಸ ಮತ್ತು ಬಣ್ಣಗಳನ್ನು ಪಡೆಯಬಹುದು. ಇದು ನಿಮಗೆ ವಿಭಿನ್ನವಾದ ಲುಕ್ಸ್ ನೀಡುತ್ತವೆ. ನಿಮ್ಮ ಮದುವೆ ಕಾರ್ಯಕ್ರಮ ಹಗಲಿನಲ್ಲಿದ್ದರೆ, ಇವು ನಿಮಗೆ ಪರಿಪೂರ್ಣವಾದ ಲುಕ್ಸ್ ನೀಡುತ್ತವೆ.
ನಿಮ್ಮ ಲೆಹಂಗಾವನ್ನು ಗಮನದಲ್ಲಿ ಇಟ್ಟುಕೊಂಡು ಶೂಗಳ ಬಣ್ಣವನ್ನು ಆರಿಸಿಕೊಳ್ಳಿ. ನೀವು ಬಯಸಿದರೆ, ನಿಮ್ಮ ಸ್ವಂತ ವಿನ್ಯಾಸದೊಂದಿಗೆ ಕಸ್ಟಮೈಸ್ ಮಾಡಿದ ಬೋಹೊ ಶೂಗಳನ್ನು ಸಹ ಖರೀದಿಸಬಹುದು. ನೀವು ಬೋಹೊ ಶೂಗಳೊಂದಿಗೆ ಕೆಲವು ಹೊಸ ಪ್ರಯೋಗಗಳನ್ನು ಮಾಡಲು ಬಯಸಿದರೆ, ನೀವು ಶೂಗಳ ಮೇಲೆ ವಿಶೇಷವಾದ ಏನನ್ನಾದರೂ ಬರೆಸಬಹುದು. ನೀವು ಬಯಸಿದರೆ, ನಿಮ್ಮ ಗಂಡನ ಹೆಸರನ್ನು ಸಹ ಬರೆಸಬಹುದು.
ನಾವು ಬೋಹೊ ಶೂಗಳ ಬೆಲೆಯ ಬಗ್ಗೆ ಮಾತನಾಡುವುದಾದರೆ, ಅವು ಮಾರುಕಟ್ಟೆಯಲ್ಲಿ 28 ಸಾವಿರ ರೂ.ಗಳಿಗೆ ಸುಲಭವಾಗಿ ಲಭ್ಯ. ಮಿಂತ್ರಾ, ಅಮೆಝಾನ್, ಫ್ಲಿಪ್ ಕಾರ್ಟ್, ಅಜಿಯೋ, ಇಂಡಿಯಾ ಮಾರ್ಟ್, ನೈಕಾದಂತಹ ಅನೇಕ ಆನ್ ಲೈನ್ ಶಾಪಿಂಗ್ ಸೈಟ್ ಗಳಿಂದ ಆರ್ಡರ್ ಮಾಡಬಹುದು. ನೀವು ಇನ್ನು ಅನೇಕ ಇನ್ ಸ್ಟಾಗ್ರಾಂ ಸ್ಟೋರ್ ಗಳಲ್ಲೂ ನೋಡಬಹುದು.

ವಧುವಿಗೆ ಮುತ್ತಿನ ಶೂಗಳು
ಈ ರೀತಿಯ ಶೂಗಳನ್ನು ಮಣಿ ಮತ್ತು ದಾರನ್ನು ಬಳಸಿ ಕೈಯಿಂದ ಕಸೂತಿ ಕೆಲಸವನ್ನು ಮಾಡಲಾಗುತ್ತದೆ. ಇವು ನೋಡಲು ಬಹಳ ಸುಂದರ ಮತ್ತು ಸೊಗಸಾಗಿ ಕಾಣುತ್ತವೆ. ಇವು ವಿವಿಧ ಬಣ್ಣಗಳಲ್ಲಿ ದೊರೆಯುತ್ತವೆ. ನಿಮ್ಮ ಲೆಹಂಗಾದ ಬಣ್ಣಕ್ಕೆ ಅನುಗುಣವಾಗಿ ನಿಮ್ಮ ಶೂಗಳನ್ನು ಆಯ್ಕೆ ಮಾಡಬಹುದು. ಸುಮಾರು 3-10 ಸಾವಿರ ರೂ.ಗಳವರೆಗೆ ಆನ್ ಲೈನ್ ನಲ್ಲಿ ಲಭ್ಯ. ನಿಮ್ಮ ಬಜೆಟ್ ಮತ್ತು ಅಭಿರುಚಿಗೆ ಅನುಗುಣವಾಗಿ ವಧುವಿನ ಶೂಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ನೀವು ಪೆನ್ಸಿಲ್ ಹೀಲ್ಸ್ ಧರಿಸಲು ಕಂಫರ್ಟಬಲ್ ಆಗಿರದಿದ್ದರೆ ಅಥವಾ ಹೀಲ್ಸ್ ಧರಿಸಲು ನಿಮಗೆ ಬೇಸರವಾಗಿದ್ದರೆ, ನೀವು ಇತರ ಪ್ಲಾಟ್ ಫಾರ್ಮ್ ಬೇಸ್ಡ್ ಬ್ರೈಡಲ್ ಸ್ನೀಕರ್ಸ್ ಶೂಗಳನ್ನು ಆಯ್ಕೆ ಮಾಡಬಹುದು. ಇಂತಹ ಬ್ರೈಡಲ್ ಶೂಗಳನ್ನು ನೀವು ಜಾರ್ಕನ್‌ವರ್ಕ್ ಅಥವಾ ಪ್ಲೇರ್ ವರ್ಕ್ ಇರುವ ಬಟ್ಟೆಗಳೊಂದಿಗೂ ಧರಿಸಬಹುದು.
ಗ್ಲಿಟರ್ ಬ್ರೈಡಲ್ ಹೀಲ್ಸ್ ಶೂಸ್ ಗ್ಲಿಟರ್ ಹೀಲ್ಸ್ ಯಾವಾಗಲೂ ಸುಂದರವಾಗಿ ಕಾಣುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಧು ಶೂ ಧರಿಸಲು ಆದ್ಯತೆ ನೀಡುತ್ತಾಳೆ. ಏಕೆಂದರೆ, ಅವು ಕಂಫರ್ಟಬಲ್ ಆಗಿರುತ್ತವೆ. ವಧುವಿನ ಪಾದರಕ್ಷೆಗಳಲ್ಲಿ ಆರಾಮ ಮತ್ತು ಗ್ಲಿಟರ್ ಎರಡೂ ಇರಬೇಕು ಎಂದು ನೀವು ಬಯಸಿದರೆ, ಗ್ಲಿಟರ್ ಬ್ರೈಡಲ್ ಶೂಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇವು ಆರಾಮದಾಯಕ ಮಾತ್ರವಲ್ಲದೆ, ಟ್ರೆಂಡಿಯೂ ಆಗಿರುತ್ತವೆ. ಮಾರುಕಟ್ಟೆಯಲ್ಲಿ ಅವುಗಳ ಬೆಲೆ 28 ಸಾವಿರ ರೂ.ಗಳವರೆಗೆ ಇದೆ. ಇವುಗಳನ್ನು ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಖರೀದಿಸಬಹುದು.
ನವ ವಧುವಿಗಾಗಿ ಕಸೂತಿ ಚಪ್ಪಲಿಗಳು
ಬಹುತೇಕ ಹುಡುಗಿಯರಿಗೆ ಚಪ್ಪಲಿಗಳ ಕ್ರೇಝ್ ಬಹಳಷ್ಟು ಇರುತ್ತದೆ. ಇಂಡಿಯನ್ ಲುಕ್ಸ್ ಇರುವ ಕಸೂತಿ ಚಪ್ಪಲಿಗಳ ಕಾಂಬಿನೇಶನ್ ಪರ್ಫೆಕ್ಟ್ ಆಗಿರುತ್ತದೆ. ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಕೂಡ ತಮ್ಮ ಮದುವೆಯಲ್ಲಿ ಕಸೂತಿ ಮಾಡಿದ ಬ್ರೈಡಲ್ ಚಪ್ಪಲಿಗಳನ್ನು ಆಯ್ಕೆ ಮಾಡಿಕೊಂಡಿದ್ದಳು. ಕಸೂತಿ ಮಾಡಿರುವ ಚಪ್ಪಲಿಗಳು ಬಹಳ ಆರಾಮದಾಯಕವಾಗಿರುತ್ತವೆ. ಸಾಮಾನ್ಯ ಎತ್ತರವನ್ನು ಹೊಂದಿರುವ ವಧು, ತನ್ನ ಲುಕ್ಸ್ ನ್ನು ಕಸೂತಿ ಚಪ್ಪಲಿಗಳೊಂದಿಗೆ ಪೂರ್ಣಗೊಳಿಸಬಹುದು. ಇವು ನಿಮಗೆ ಸೊಗಸಾದ ಲುಕ್ಸ್ ನೀಡುತ್ತವೆ.
ನಾವು ಶೂಗಳ ಬಗ್ಗೆ ಮಾತನಾಡುವಾಗ ಪಂಜಾಬ್ ಹೆಸರು ಬರುವುದಿಲ್ಲ ಎಂದರೆ ಹೇಗೆ? ಪಂಜಾಬಿ ಶೂಗಳು ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಪ್ರಸಿದ್ಧಾಗಿವೆ. ಹೀಗಿರುವಾಗ, ಈ ಶೂಗಳು ವಧುವಿನ ಸಂಗ್ರಹಕ್ಕೆ ಯೋಗ್ಯವಾಗಿರುತ್ತವೆ. ಈ ಚಪ್ಪಲಿಗಳಲ್ಲಿ ಕಸೂತಿ ಕೆಲಸ, ಮಿರರ್ ವರ್ಕ್, ಗೆಜ್ಜೆಗಳು, ಶೆಲ್ ವರ್ಕ್, ಮುತ್ತಿನ ಕಸೂತಿ, ಗೋಟಾಪಟ್ಟಿ ಕೆಲಸ, ಪಲ್ಕರಿ ಇತ್ಯಾದಿ ಬಹು ಬಣ್ಣಗಳಲ್ಲಿ ಇರುತ್ತವೆ. ಈಗ ಈ ಶೂಗಳ ಮೇಲೆ ವಧೂವರರ ಹೆಸರು ಇತ್ಯಾದಿ ಟ್ಯಾಗ್ ಲೈನ್ ಗಳ ಟ್ರೆಂಡ್ ನಡೆಯುತ್ತಿದೆ.
ಈ ವಧುವಿನ ಶೂಗಳು, ಸ್ನೀಕರ್ಸ್ ಮತ್ತು ಸ್ಯಾಂಡಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ನೀವು ವಧುವಿನ ಲುಕ್ಸ್ ನ್ನು ಹೆಚ್ಚಿಸಿಕೊಳ್ಳಬಹುದು. ವಧುವಿನ ಶೂ ಮತ್ತು ಸ್ನೀಕರ್ಸ್ ಗಳ ಕೆಲವು ಪ್ರಸಿದ್ಧ ಬ್ರಾಂಡ್ ಗಳೆಂದರೆ ಹೌಸ್ ಆಫ್ ಪಟೌಡಿ, ನವಾಜ್, ಹರ್ ಝಿಂದಗಿ, ಇನಿಯಾಸಾ, ಡ್ರೀಮ್ ಸೇಫ್, ಟಾಯ್ ಸೆಟ್, ಅನಾರ್ ಗಿರಿ ಇತ್ಯಾದಿ.
ವಧುವಿನ ಪಾದರಕ್ಷೆಗಳನ್ನು ಎಲ್ಲಿ ಖರೀದಿಸಬೇಕು ಎಂಬುದರ ಕುರಿತು ನಾವು ಮಾತನಾಡುವುದಾದರೆ, ನೀವು ಅದನ್ನು ಟ್ರೇಸಾ, ಕೋರ್ ಹೆಡ್ ನಂತಹ ಅನೇಕ ಆನ್ ಲೈನ್ ವೆಬ್ ಸೈಟ್ ಗಳಿಂದ ಖರೀದಿಸಬಹುದು. ಅವರು ತಮ್ಮದೇ ಆದ ಇನ್ ಸ್ಟಾಗ್ರಾಂ ಪುಟಗಳನ್ನು ಸಹ ಹೊಂದಿದ್ದಾರೆ.
ಶೂಗಳು ಕಾಲಿಗೆ ಒತ್ತುವುದನ್ನು ತಪ್ಪಿಸಬೇಕೆಂದರೆ, ಮೊದಲು ಪಾದಗಳ ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾಂಡೇಜ್ ನ್ನು ಹಾಕಿಕೊಳ್ಳಿ. ಇದು ನಿಮಗೆ ರಕ್ಷಣೆ ನೀಡುತ್ತದೆ ಮತ್ತು ಶೂ ಒತ್ತುವುದರಿಂದ ನಿಮ್ಮನ್ನು ತಪ್ಪಿಸುತ್ತದೆ.
– ಪ್ರಿಯಾಂಕಾ ಜಿ.





