ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಹೋಗಬೇಕಾದಾಗ, ನೀವು ಧರಿಸುವ ಡ್ರೆಸ್ ಗೆ ತಕ್ಕಂತೆ ಸ್ವರ್ಣಾಭರಣಗಳು ಸ್ಟೈಲಿಶ್ ಆಗಿರುವಂತೆ, ನಿಮ್ಮ ಸ್ಮಾರ್ಟ್ ನೆಸ್ ಹೆಚ್ಚಿಸಲು ಏನು ಮಾಡಬೇಕು ಎಂದು ವಿವರವಾಗಿ ಗಮನಿಸೋಣವೇ…..?
ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಡಗರ ಸಂಭ್ರಮ. ಹೀಗಾಗಿ ಹೆಂಗಸರ ದಂಡು ಸಹಜವಾಗಿ ಒಡವೆಗಳ ಅಂಗಡಿಗಳತ್ತ ಮುತ್ತುತ್ತದೆ. ವಿವಿಧ ಸ್ವರ್ಣಾಭರಣ ಖರೀದಿಸುವ ನಮ್ಮ ಓದುಗರಿಗೆಂದೇ ನಗರದ ಹಲವಾರು ಜ್ಯೂವೆಲರಿಯ ಮಾಲೀಕರು, ಜ್ಯೂವೆಲರಿ ಡಿಸೈನರ್ಸ್ ಇಲ್ಲಿ ನೀಡಿರುವ ಸಲಹೆಗಳನ್ನು ಅನುಸರಿಸೋಣವೇ? ಮುಖ್ಯವಾಗಿ ದೊಡ್ಡ ಹಬ್ಬಗಳಿಗಾಗಿ ಖರೀದಿಸುವ ಭಾರಿ ಬಜೆಟ್ ನ ಉಡುಗೆಗೆ ತಕ್ಕಂತೆ, ಒಡವೆಗಳ ಸ್ಟೈಲ್ ಸ್ಟೇಟ್ ಮೆಂಟ್ ಇರಬೇಕು.
ಬೇರೆ ಬೇರೆ ಡ್ರೆಸ್ ಗಳಿಗೆ ತಕ್ಕಂತೆ ಸ್ಟೈಲಿಶ್ ಜ್ಯೂವೆಲರಿ ಧರಿಸಬೇಕು. ನವರಾತ್ರಿಯ ಗುಜರಾತಿ ಡ್ಯಾನ್ಸ್ ಗರ್ಬಾ ಸ್ಟೈಲಿನ ಲೆಹಂಗಾ ಚೋಲಿ ಜೊತೆ, ನೀವು ಬೆಳ್ಳಿಯ ಆಭರಣ ಧರಿಸಿದರೆ ಚಂದ. ಮೆಟಲ್ ನ ಆಕ್ಸಿಡೈಸ್ಡ್ ಬಲು ಕಾಂಪ್ಲಿಮೆಂಟ್ ಆಗಿರುತ್ತದೆ. ಲೆಹಂಗಾ ಜೊತೆ ನೀವು ಸಿಲ್ವರ್ ಜ್ಯೂವೆಲರಿ ಸಹ ಧರಿಸಬಹುದು, ಅಂದ್ರೆ ಜುಮಕಿ, ಬೈತಲೆ ಆಭರಣ ಇತ್ಯಾದಿ ಬಹಳ ಪ್ರಿಟಿ ಎನಿಸುತ್ತದೆ.
ಲೆಹಂಗಾ ಜೊತೆ ನೀವು ಹೆವಿ ಲುಕ್ಸ್ ಸಹ ಪಡೆಯಬಹುದು. ಇದಕ್ಕಾಗಿ ನೀವು ಉ.ಭಾರತದ ಕಡೆ ಫೇಮಸ್ ಎನಿಸಿರುವ ರಾಣಿ ಹಾರ ಸಹ ಧರಿಸಿರಿ. ಮೊದಲು ಚೋಕರ್ ಧರಿಸಿ, ನಂತರ ರಾಣಿ ಹಾರ, ಕೊನೆಗೆ ಕೈಗಳಿಗೆ ಬಂಗಾರ, ವಜ್ರದ, ಪೀಲ್ಕಿ ಬಳೆಗಳನ್ನು ಧರಿಸಲು ಮರೆಯದಿರಿ.
ನೀವು ಹಬ್ಬದ ಈ ಸಂದರ್ಭದಲ್ಲಿ ಕಾಂಜೀವರಂ, ಮೈಸೂರು ಸಿಲ್ಕ್ ಸೀರೆ ಆರಿಸುವುದು ಸಹಜ. ಹೀಗಾಗಿ ಇದಕ್ಕೆ ಹೊಂದುವಂತೆ ಅಚ್ಚುಕಟ್ಟಾದ ಬಂಗಾರದ ಆಭರಣ, ಸ್ವರ್ಣಾಭರಣ, ಮುತ್ತುರತ್ನಗಳ ಒಡವೆ ಧರಿಸಿರಿ. ಗೋಲ್ಡನ್ ಬೈತಲೆ ಬೊಟ್ಟು, ಚೋಕರ್, ಕಿವಿಯ ಓಲ್, ಮಾಟ್ಲು, ಬಳೆಗಳು ಇತ್ಯಾದಿ. ರೇಷ್ಮೆ ಸೀರೆ ಜೊತೆ ಬಂಗಾರಕ್ಕೆ ಹುದುಗಿಸಲಾದ ನವರತ್ನಗಳ ಚೋಕರ್ ಸೆಟ್ ಸಹ ಅತ್ಯಂತ ಬ್ಯೂಟಿಫುಲ್ ಸ್ಟೈಲಿಶ್ ಎನಿಸುತ್ತದೆ.
ಇದರಿಂದ ನಿಮಗೆ ಅಚ್ಚುಕಟ್ಟಾದ ಸಾಂಪ್ರದಾಯಿಕ ಲುಕ್ ಸಿಗುತ್ತದೆ. ಇದರ ಜೊತೆ ನೀವು ಕಲರ್ ಫುಲ್ ಲುಕ್ಸ್ ಕ್ಯಾರಿ ಮಾಡಿ. ಆರ್ಗೆಂಝಾ ಸೀರೆ ಜೊತೆ ಡೈಮಂಡ್ ಸೆಟ್ ಇರಲಿ. ಲೈಟ್/ಗ್ರೇ ಯಾ ಪಿಂಕ್ ಆರ್ಗೆಂಝಾ ಸೀರೆ ಉಟ್ಟಿದ್ದರೆ, ಅದರ ಜೊತೆ ಬ್ಲೂ ಸಫೈರ್ಡೈಮಂಡ್ ಸೆಟ್ ಬಲು ಮುದ್ದಾಗಿ ಒಪ್ಪುತ್ತದೆ. ಗ್ರೀನ್ ಎಮರಾಲ್ಡ್ ಡೈಮಂಡ್ ನ ಕಾಂಬಿನೇಶನ್ ಸಹ ಅತಿ ಬ್ಯೂಟಿಫುಲ್ ಎನಿಸುತ್ತದೆ.
ಸ್ವಾರ್ ಸೂಟ್ ಜೊತೆ ಧರಿಸಲು : ಬಾಟ್ ಗ್ರೀನ್ ಕಲರಿನ ಸಲ್ವಾರ್ ಸೂಟ್ ಜೊತೆ ನಿಮ್ಮ ಅಚ್ಚುಮೆಚ್ಚಿನ ಡೈಮಂಡ್ ನೆಕ್ಲೇಸ್(ಸ್ಟ್ರಿಂಗ್ ಸ್ಟೈಲ್ ಯಾ ಚೋಕರ್ ಸ್ಟೈಲ್) ಧರಿಸಿ ಅಥವಾ ಮನೆಯಲ್ಲಿ ಉಳಿದು ಅತಿಥಿಗಳನ್ನು ಆಹ್ವಾನಿಸಿದಾಗ, ಪೆಂಡೆಂಟ್ ಸ್ಟೈಲಿನ ನೆಕ್ಲೇಸ್ ಧರಿಸಿರಿ. ಅನಾರ್ಕಲಿ ಸೂಟ್ ಹೆವಿ ಆಗುತ್ತದೆ. ಇದರ ಜೊತೆ ಪೋಲ್ಕಿ/ ಕುಂದಣ/ ಡೈಮಂಡ್ ನ ದೊಡ್ಡ ದೊಡ್ಡ ಜುಮಕಿ ಧರಿಸಬಹುದು. ಸಿಂಗಲ್ ಸೂಟ್ ಜೊತೆ ಪ್ರಾಪರ್ ಸೆಟ್ ಧರಿಸಿರಿ. ಸೂಟ್ ಹೆವಿ ಎನಿಸಿದರೆ, ಜ್ಯೂವೆಲರಿ ತುಸು ಲೈಟ್ ಆಗಿರಲಿ. ಸಣ್ಣಪುಟ್ಟ ಗೆಟ್ ಟು ಗೆದರ್ ಫಂಕ್ಷನ್ ಗಳಿಗೆ, ಇಂಥ ಭಾರಿ ಭಾರಿ ಜ್ಯೂವೆಲರಿ ಧರಿಸಬೇಡಿ. ಆದರೆ ನೂರಾರು ಜನ ಬರುವಂಥ ಮುಂಜಿ, ಮದುವೆ ಅಥವಾ ದೊಡ್ಡ ಶುಭ ಸಮಾರಂಭಗಳಿಗೆ ಅಗತ್ಯ ಇಂಥವನ್ನು ಧರಿಸಿರಿ. ಆದರೆ ಇದನ್ನು ಗ್ರೇಸ್ ಪಲಿ ಕ್ಯಾರಿ ಮಾಡಿ, ಏಕೆಂದರೆ ನಿಮ್ಮ ಡ್ರೆಸ್ ಮತ್ತು ಜ್ಯೂವೆಲರಿ ಮ್ಯಾಚ್ ಆಗುವಂತಿರಬೇಕು.
ಹೇರ್ ಸ್ಟೈಲ್ ಗೆ ತಕ್ಕಂತೆ ಜ್ಯೂವೆಲರಿ ಆರಿಸುವುದು ಹೇಗೆ? : ಹೇರ್ ಸ್ಟೈಲ್ ನ್ನು ಆಧರಿಸಿಯೂ ಸಹ ಸ್ವರ್ಣಾಭರಣಗಳನ್ನು ನೀವು ಆಯ್ಕೆ ಮಾಡಬಹುದು. ನೀಟಾದ ನೀಳ ಜಡೆ/ಕೊಂಡೆ ಅಥವಾ ಬೇರೆ ಟೈಟ್ ಲುಕ್ ನ ಹೇರ್ ಸ್ಟೈಲ್ ಆಗಿದ್ದರೆ, ಪ್ರಾಪರ್ಲಿ ಕಂಪ್ಲೀಟ್ ಸೆಟ್ ಹಾಗೂ ಡೈಮಂಡ್ ನ ಕಿವಿಯೋಲೆ ಧರಿಸಿರಿ. ಇದು ದೊಡ್ಡ ಶುಭ ಸಮಾರಂಭಗಳಲ್ಲಿ ನಿಮ್ಮನ್ನು ನಾಲ್ವರ ನಡುವೆ ಎತ್ತಿ ತೋರಿಸುತ್ತದೆ. ಕರ್ಲಿ ಕೂದಲು ಹೊಂದಿರುವವರು, ಹೆವಿ ಜ್ಯೂವೆಲರಿ ಸೆಟ್ ಧರಿಸಬೇಕು. ಏಕೆಂದರೆ ಇಂಥವರ ಕೂದಲಿನ ನಡುವೆ ಕಿವಿಯೋಲೆ ಎದ್ದು ಕಾಣಿಸದು. ಒಂದು ಪಕ್ಷ ನಿಮ್ಮ ಒಡವೆಗಳ ಸೆಟ್ ನಲ್ಲಿ ಅಂಥ ಕಿವಿಯೋಲೆ ಇದ್ದರೆ, ಒಂದು ಕಡೆ ಕಿವಿಯ ಆಚೀಚೆ ಪೂರ್ತಿ ಕೂದಲು ಕವರ್ ಆಗುವಂತೆ ಸೆಟ್ ಮಾಡಿ, ಆಗ ಇಯರ್ ರಿಂಗ್ಸ್ ನೀಟಾಗಿ ಕಂಡು ಬರುತ್ತದೆ. ನಿಮ್ಮದು ಸ್ಟ್ರೇಟ್/ ಗಿಡ್ಡ / ಮೀಡಿಯಂ ಕೂದಲಾಗಿದ್ದರೆ, ಇದು ಮತ್ತಷ್ಟು ಕಂಫರ್ಟೆಬಲ್ ಎನಿಸುತ್ತದೆ. ಆಗ ನೀವು ಪ್ರಾಪರ್ ಕಂಪ್ಲೀಟ್ ಜ್ಯೂವೆಲರಿ ಧರಿಸಲಿಕ್ಕೂ ಅನುಕೂಲ. ಕರ್ಲಿ ಕೂದಲಿನಲ್ಲಿ ನೆಕ್ಲೇಸ್ ಹುದುಗಿಹೋದಂತೆ ಅನಿಸುತ್ತದೆ, ಹೀಗಾಗಿ ಅದರ ಜೊತೆ ನೆಕ್ಲೇಸ್ ಅವಾಯ್ಡ್ ಮಾಡಿ, ದೊಡ್ಡ ಗಾತ್ರದ ಜುಮಕಿ ಧರಿಸಿರಿ.
– ಪ್ರತಿನಿಧಿ.





