ಡೋಬಿ ನಿಟಿಂಗ್‌ ಹಾಗೂ ಲಾಂಗ್‌ ಫಿಟ್‌ ನ ಜೊತೆ ಲೈಟ್‌ ಕಾಟನ್‌ ಕುರ್ತಾ ಈತನ ಚೆಲು ಹೆಚ್ಚಿಸಿದೆ.     ಆ್ಯಕ್ವಾ ಬ್ಲೂ ಬಣ್ಣದ ಈ ಕಾಟನ್‌ ಬ್ಲೆಂಡ್‌ ಸೀರೆ ತನ್ನ ಬ್ಯೂಟಿಪುಲ್ ಗೋಲ್ಡನ್‌ ಬಾರ್ಡರ್‌ ನಿಂದ ರಿಚ್‌ ಲುಕ್ಸ್ ಗಳಿಸಿದೆ. ಅದು ಈಕೆಯ ಸೌಮ್ಯ ಸೌಂದರ್ಯಕ್ಕೆ ಕಲಶವಿಟ್ಟ ಕುಂದಣವಾಗಿದೆ! ಮ್ಯಾಚಿಂಗ್‌ ಬ್ಲೌಸ್‌ ಸೂಕ್ತವಾಗಿದೆ.

ವೈಬ್ರೆಂಟ್‌ ಪ್ಲೇರ್‌ ಹ್ಯಾಂಡ್‌ ಬ್ಲಾಕ್‌ ಪ್ರಿಂಟ್‌ ವುಳ್ಳ ಈ ಬ್ಯೂಟಿಪುರ್ ಸ್ವಾರ್‌ ಸೂಟ್‌ ಜೊತೆ ಫೆಬ್ರವರಿಯ ಈ ಉಲ್ಲಾಸಮಯ ವಾತಾವರಣದಲ್ಲಿ ಒಂದು ಹೊಸ ಅನುಭವ ನೀಡಲಿದೆ. ಉಡುಗೆಗೆ ಹೊಂದು ಸಿಲ್ವರ್‌ ಜುಮಕಿಯ ಆ್ಯಕ್ಸೆಸರಿ ಹೇಳಿ ಮಾಡಿಸಿದಂತಿದೆ!

Fashion-B (1)

ಟ್ರೆಡಿಶನಲ್ ಬ್ಲಾಕ್‌ ಪ್ರಿಂಟ್‌ ಡಿಸೈನ್‌ ಹಾಗೂ ರೌಂಡೆಡ್‌ ನೆಕ್‌ ನ ನೀಲಿ ಶಾರ್ಟ್‌ ಕುರ್ತಾ, ಈ ಚಂದದ ಪ್ರೇಮೋತ್ಸದ ಸಂದರ್ಭಕ್ಕೆ ಆಪ್ತವಾಗಿದೆ. ಜೊತೆಗಿನ ಬ್ರೌನ್‌ ಟ್ರೌಸರ್ಸ್‌ ಪರ್ಫೆಕ್ಟ್ ಆಯ್ಕೆಯಾಗಿದೆ.

ಈ ಲಂಗದ ಕುರ್ತಿಯಲ್ಲಿ ಅತಿ ಸೂಕ್ಷ್ಮ ಹ್ಯಾಂಡ್‌ ಬ್ಲಾಕ್‌ಪ್ಲೇರ್‌ ಡಿಸೈನ್‌ ಇದ್ದು, ಈ ಮಾಘ ಮಾಸದ ಆಹ್ಲಾದಕರ ಋತುವಿಗೆ, ಬಲು ಸೂಕ್ತ ಎನಿಸುತ್ತಿದೆ.

Fashion-C (1)

ಕ್ಲಾಸಿಕ್‌ ವೀ ನೆಕ್‌ ಹಾಗೂ ಫ್ಲೇರ್‌ ಡಿಸೈನ್‌ ವುಳ್ಳ ಈ ಗ್ರೇ ಕಾಟನ್‌ ಕುರ್ತಿ, ಹೆಚ್ಚು ಆರಾಮದಾಯಕ ಮಾತ್ರವಲ್ಲದೆ ಅಷ್ಟೇ ಸ್ಟೈಲಿಶ್‌ ಆಗಿದೆ ಅತ್ಯಾಕರ್ಷಕ ಹ್ಯಾಂಡ್‌ ಬ್ಲಾಕ್‌ ಪ್ರಿಂಟ್‌ ಹಾಗೂ ಬ್ಯೂಟಿಫುಲ್ ಡಿಸೈನಿನ ಜೊತೆ ತಯಾರಾದ ಈ ಪಿಂಕ್‌ ಲಾಂಗ್ ಕುರ್ತಿ, ವ್ಯಾಲೆಂಟೈನ್ಸ್ ಡೇ ಪಾರ್ಟಿಗೆ ಗೆಳತಿಯರು ರೆಡಿಯಾಗಿ ಹೊರಟಂತಿದೆ!

ವಿಶಿಷ್ಟ ಮಹೇಶ್ವರಿ ನೇಯ್ಗೆಯ ಈ ಸೀರೆ, ತನ್ನ ಲೈಟ್‌ ವೆಯ್ಟ್ ಮತ್ತು ಹೊಳೆಯುವ ಡಿಸೈನಿನ ಮೇಕ್‌ ನಿಂದಾಗಿ ಆಕರ್ಷಕ ಎನಿಸುತ್ತದೆ. ಸರಳ ಮೇಕಪ್‌, ವೆರಿ ಲೈಟ್‌ ಆ್ಯಕ್ಸೆಸರೀಸ್‌ ಇವಳಿಗೆ ಹೆಚ್ಚು ಒತ್ತು ಕೊಡುತ್ತಲಿದೆ. ಇವಳ ಜೊತೆಗಿನ ಸಂಗಾತಿ ರೌಂಡೆಡ್‌ ನೆಕ್‌ ವುಳ್ಳ ಗೋಲ್ಡನ್‌ ಡಿಸೈನಿನ ಪ್ರಿಂಟೆಡ್‌ ಕಾಟನ್‌ ಶಾರ್ಟ್‌ ಕುರ್ತಾ, ಬ್ರೌನ್‌ ಪ್ಯಾಂಟ್‌ ಧರಿಸಿ, ವ್ಯಾಲೆಂಟೈನ್ಸ್ ಪಾರ್ಟಿಗೆ ಹೊರಟು ನಿಂತಿದ್ದಾರೆ.

ಸ್ಲೀಕ್‌ ಫಿಟಿಂಗ್‌ ವುಳ್ಳ ಈ ನೀಲಿ ಕಾಟನ್‌ ಕುರ್ತಾ, ತನ್ನ ಗಾಢ ಪ್ರಿಂಟ್‌ ವರ್ಕ್‌ ನಿಂದ ಎದ್ದು ತೋರುತ್ತದೆ. ಇದನ್ನು ಕ್ರೀಂ ಸ್ಟ್ರೇಟ್ ಪ್ಯಾಂಟ್‌ ಹಾಗೂ ಕೊಲ್ಹಾಪುರಿ ಚಪ್ಪಲಿಯೊಂದಿಗೆ ಧರಿಸಿದರೆ ಚೆಂದ! ರಿಚ್‌ ಡಿಸೈನ್‌ ಕಾಂಟ್ರಾಸ್ಟಿಂಗ್‌ ಬಾರ್ಡರ್‌ ಜೊತೆ ವಿಸ್ಕೋಸ್‌ ಮಿಶ್ರಣದಿಂದ ನೇಯ್ದ ಈ ಸೀರೆ, ಮ್ಯಾಚಿಂಗ್‌ ಸ್ಲೀವ್ ಲೆ‌ಸ್‌ ಬ್ಲೌಸ್‌ ನೊಂದಿಗೆ ಮಿರಿಮಿರಿ ಮಿಂಚುತಿದೆ. ವ್ಯಾಲೆಂಟೈನ್ಸ್  ಪಾರ್ಟಿಗೆ ಇನ್ನಿದಕ್ಕಿಂತ ಅಲಂಕಾರ ಬೇಕೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ