ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಎಂಬ ಪುಟ್ಟ ಗ್ರಾಮದ ಯುವಕ ಕಿರಣ್ ಕಮತೆ ಇಂದು ಈಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 53ನೇ ರ್ಯಾಂಕ್​ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೆ ಮನೆಯಲ್ಲೇ ಕುಳಿತು ಓದಿ ಯಶಸ್ವಿಯಾಗಿದ್ದಾರೆ.

ಕಿರಣ್​ ಕಮತೆ ಮೊದಲ ಐದು ಪ್ರಯತ್ನಗಳಲ್ಲಿ ಸೋತರೂ, 6ನೇ ಪ್ರಯತ್ನದಲ್ಲಿ ತಮ್ಮIAS ಕನಸನ್ನು ನನಸು ಮಾಡಿಕೊಂಡಿದ್ದಾರೆ. ತಂದೆ ರೈತರು ಮತ್ತು ತಾಯಿ ಗೃಹಿಣಿ. ಮಗನ ಈ ಸಾಧನೆಯಿಂದ ಈಡೀ ಹತ್ತರವಟಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್​ ಕಾಲೇಜಿನಲ್ಲಿ ಬಿಇ ಸಿವಿಲ್​ ಪದವಿ ಅಧ್ಯಯನ ಮಾಡಿದ ಕಿರಣ್, ಸದ್ಯ ಪಿಡಬ್ಲ್ಯೂಡಿ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂಬುದನ್ನು ಕಿರಣ್​ ಸಾಬೀತುಪಡಿಸಿದ್ದಾರೆ.

ಕಿರಣ್ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬಡ ಕೃಷಿಕ ಕುಟುಂಬದಿಂದ ಬಂದ ಅವರು, ಆರಂಭಿಕ ಐದು ಪ್ರಯತ್ನಗಳಲ್ಲಿ ಮುಗ್ಗರಿಸಿದ್ದರು. ಆರನೇ ಪ್ರಯತ್ನದಲ್ಲಿ ಐಎಎಸ್ ಗುರಿ ಮುಟ್ಟಿದ್ದಾರೆ. ಯಾವುದೇ ದೊಡ್ಡ ಕೋಚಿಂಗ್ ಸೆಂಟರ್​ಗಳ ಹಂಗಿಲ್ಲದೆ, ಸ್ವಂತ ಪರಿಶ್ರಮದಿಂದಲೇ ಈ ಯಶಸ್ಸು ಕಂಡಿದ್ದಾರೆ.

ಕರ್ನಾಟಕದ 22 ಅಭ್ಯರ್ಥಿಗಳು ಉತ್ತೀರ್ಣ

ಸಂದೀಪ್​ ಬಡದ್​ (82ನೇ ರ್ಯಾಂಕ್), ಸೂರ್ಯ (162​), ಕೃಪಾ ಜೈನ್​ (190), ಚಿನ್ಮಯಿ ಪಿ (310), ಮನೋಜ್​ (389), ಮಧು (436), ವರುಣ್​ ಗೌಡ (462), ನಿವೇದಿತಾ ಭಾವಿಮನಿ (469), ವಿಶಾಖ ಕದಂ (504), ಸೂರಜ್​ (525), ಧನಂಜಯ (554), ಉಲ್ಲಾಸ್​ ಎಂ ಎಸ್​ (556), ಮುತ್ತೇಶ್​ ಗೌಡ (622), ಸಾಗರ್​ ಎ (641), ಪಾಂಡುರಂಗ ಎಸ್​ ಕಂಬಳಿ (660), ಚಂದನ್​ ವೈ (661), ಬಸವರಾಜ್​ ಎಂ ಜವಳಿ (664), ಪ್ರವೀಣ್​ ಎಚ್​ ಟಿ (720), ಯತೀಶ್​ (732), ಬಸವರಾಜ್​ ಎಂ ಪಾಟೀಲ್​ (739), ಅನಿರುದ್ಧ ಕಟ್ಟಿಮನಿ (786), ಚಂದ್ರಶೇಖರ್​ (880) ಹಾಗೂ ನೇಹಾ (925) ರಾಜ್ಯದಿಂದ ಯುಪಿಎಸ್​ಸಿಗೆ ಆಯ್ಕೆಯಾಗಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ