– ರಾಘವೇಂದ್ರ ಅಡಿಗ ಎಚ್ಚೆನ್.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮುಳುಗುತ್ತಿರುವ ಸಾಮ್ರಾಜ್ಯಾನ ಹೇಗೆ ಕಾಪಾಡಿಕೊಳ್ತಾನೆ ಗೌತಮ್ ದಿವಾನ್ ಅನ್ನೋದು ಪ್ರಶ್ನೆಯಾಗಿ ಉಳಿದಿದೆ. ಇಡೀ ಸಾಮ್ರಾಜ್ಯ ಹರಾಜಿಗೆ ಬಂದಿದೆ. ಜೈದೇವ್‌ ಮಾಡಿರುವ ಕುತಂತ್ರಕ್ಕೆ ಬೀದಿ ಪಾಲಾಗಿದ್ದಾನೆ.
ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.
ಹಿರಿಯರು ಬಾಳಿ ಬದುಕಿದ ಮನೆ ಉಳಿಸಿಕೊಳ್ಳಲು ಗೌತಮ್‌ ದಿವಾನ್‌ ಅಖಿಲಾಂಡೇಶ್ವರಿ ಮನೆಗೆ ಬಂದಿದ್ದಾರೆ. ಅಲ್ಲೊಂದು ಮೀಟಿಂಗ್‌ ನಡೆಯುತ್ತೆ. ತನ್ನ ಎಲ್ಲ ಕಂಪಿನಿಯನ್ನು ಮಾರಲು ನಿರ್ಧಾರ ಮಾಡುತ್ತಾನೆ ಗೌತಮ್‌. ನಂತರ ಗೌತಮ್‌ ಕೈಗೆ ಬ್ಲ್ಯಾಂಕ್‌ ಚೆಕ್‌ ಕೊಟ್ಟು ಬಿಡ್ತಾರೆ ಅಖಿಲಮ್ಮ. ಚೆಕ್‌ ನೋಡಿದ ಗೌತಮ್‌ಗೆ ಶಾಕ್‌ ಜೊತೆಗೆ ಖುಷಿನೂ ಆಗುತ್ತೆ. ಆದರೂ ಏನಿದು ಮೇಡಮ್‌ ಅಂತ ಕೇಳ್ತಾರೆ. ಅದಕ್ಕೆ ಅಖಿಲಾಂಡೇಶ್ವರಿ ಇದು ನಾನು ದಿವಾನ್‌ ಕುಟುಂಬ ಉಳಿಸಿಕೊಳ್ಳುವುದಕ್ಕೆ ಗೌತಮ್‌ ದಿವಾನ್‌ಗೆ ಕೊಡ್ತಿರೋದು, ನಿಮಗೆ ಗೆಲುವು ಸಿಗಲಿ ಎನ್ನುತ್ತಾರೆ.
ಇತ್ತ ಜೈದೇವ್‌, ಆಸ್ತಿ ಎಲ್ಲಾ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ. ಒಂದು ಮಗು ಬಳಿ ಚೆಕ್‌ ಕೊಟ್ಟು ಜೈದೇವ್‌ ಕೊಡಲು ಗೌತಮ್‌ ಹೇಳುತ್ತಾನೆ. ಇನ್ನೇನು ಜೈದೇವ್‌ ಆಸ್ತಿ ಕಳೆದುಕೊಳ್ಳಬೇಕು ಅನ್ನೋ ಅಷ್ಟರಲ್ಲಿ ಗೌತಮ್‌ ಎಂಟ್ರಿ ಆಗಿದೆ. ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯಲು ಬಂದಿದ್ದಾನೆ ಗೌತಮ್‌.
ಶಕುಂತಲಾ ಬೀದಿ ಪಾಲಾಗಿದ್ದಾಗ ಮತ್ತೆ ಗೌತಮ್‌ ಕರೆದುಕೊಂಡು ಬಂದು ತಾಯಿಯನ್ನು ಸಲಹುತ್ತಿದ್ದಾನೆ. ಭಾಗ್ಯಮ್ಮ ಹಾಗೂ ಶಕುಂತಲಾ ಮುಖಾಮುಖಿ ಆಗಿದ್ದಾರೆ. ಭಾಗ್ಯಮ್ಮ ಕೂಡ ಮಕ್ಕಳನ್ನು ನಾವು ಹೇಗೆ ಸಾಕುತ್ತೇವೋ ಹಾಗೆ ಇರ್ತಾರೆ. ಗೌತಮ್‌ಗೆ ಪ್ರೀತಿ ಕೊಡುದು ಅಷ್ಟೇ ಗೊತ್ತು. ಮತ್ತೆ ವಿಷದ ಹಾವಿಗೆ ಹಾಲು ಎರೆಯುವಂತೆ ಮಾಡಬೇಡ ಎಂದಿದ್ದಾಳೆ.
ಕಥೆ ಈಗ ನೋಡ್ತಾ ಇದ್ದರೆ ಧಾರಾವಾಹಿ ಅಂತ್ಯ ಕಾಣುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಈಗಾಗಲೇ ಜೀ ವಾಹಿನಿ ಹೊಸ ಸೀರಿಯಲ್‌ ಪ್ರೋಮೋ ಹಂಚಿಕೊಂಡಿದೆ. ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಜಗದ್ಧಾತ್ರೀ’ ಶೀಘ್ರದಲ್ಲಿ ಬರುತ್ತಿದೆ. ಈ ಧಾರಾವಾಹಿಯ ನಾಯಕಿ ಪಾತ್ರಕ್ಕೆ ಮೋಕ್ಷಿತಾ ಪೈ ಅವರು ನಾಯಕಿ ಎಂಬ ಸುದ್ದಿ ತಿಂಗಳುಗಳಿಂದ ಓಡಾಡುತ್ತಿತ್ತು.
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ