ಬೇಸಿಗೆಯಲ್ಲಿ ಪೂಲ್ ಪಾರ್ಟಿ ಅರೇಂಜ್ ಮಾಡಲಿದ್ದೀರಾ? ಅದಕ್ಕಾಗಿ ಇಲ್ಲಿವೆ ಉತ್ತಮ ಸಲಹೆಗಳು……!
ಸಂದರ್ಭ ಎಂಥದ್ದೇ ಇರಲಿ, ದೊಡ್ಡದು ಅಥವಾ ಚಿಕ್ಕದು, ಅದನ್ನು ಎಲ್ಲರೂ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಎಂಜಾಯ್ ಮಾಡಲು ಬಯಸುತ್ತಾರೆ. ಈಗ ಬೇಸಿಗೆ ಅತಿ ದಟ್ಟವಾಗಿರುವುದರಿಂದ, ಇದರ ಹೀಟ್ ವೇವ್ ನಿಂದ ತಪ್ಪಿಸಿಕೊಳ್ಳಲು ಎಲ್ಲೆಲ್ಲೂ ಪೂಲ್ ಪಾರ್ಟಿಗಳು ನಡೆಯುವುದು ಮಾಮೂಲಿ. ಇದನ್ನು ಅರೇಂಜ್ ಮಾಡುವುದು ಸುಲಭ. ನೀರಿಗೆ ಇಳಿಯ ಬಯಸುವ ಈಜು ಗೊತ್ತಿರುವವರು, ಗೊತ್ತಿಲ್ಲದವರೂ ಸಹ ಇದರಲ್ಲಿ ಸಮಾನಾಗಿ ಎಂಜಾಯ್ ಮಾಡಬಹುದು.
ಸಿಟ್ಟಿಂಗ್ಸ್ ಹೀಗಿರಲಿ
ನಿಮ್ಮ ಹತ್ತಿರದ (ನಿಮ್ಮದೇ ಖಾಸಗಿಯಾದರೆ ಇನ್ನೂ ಉತ್ತಮ) ಸ್ವಿಮ್ಮಿಂಗ್ ಪೂಲ್ ಬಳಿ ವಿವಿಧತೆ ತುಂಬಿರುವಂತೆ ಸಿಟ್ಟಿಂಗ್ಸ್ ಅರೇಂಜ್ ಮಾಡುವುದು ಸೂಕ್ತ. ಇದಕ್ಕಾಗಿ ಉದ್ದನೇ ಹಾಗೂ ಕಡಿಮೆ ಎತ್ತರದ ಬೋಹೋ ಟೇಬಲ್ ಚೇರ್ಸ್, ಜಮಖಾನ ಹಾಸಿ ಕೂರಲಿಕ್ಕೆ ಬೇಕಾದ ಏರ್ಪಾಡು ಮಾಡಿ. ಎರಡೂ ಕಡೆ ಅನುಕೂಲಕ್ಕಾಗಿ ಪಿಲ್ಲೋ, ಕುಶನ್ಸ್ ಇರಿಸಿ.
ಡ್ರೆಸ್ ಕಲರ್ ಕೋಡ್
ನಿಮ್ಮ ಯಾವುದೇ ಪಾರ್ಟಿ ಇರಲಿ, ಅದು ಥೀಮ್ ಬೇಸ್ಡ್ ಆಗಿರಲಿ. ಮುಖ್ಯವಾಗಿ ನೀವು ಅದರಲ್ಲಿ ಪರ್ಟಿಕ್ಯುಲರ್ ಡ್ರೆಸ್ ಯಾ ಕಲರ್ ಸೆಟ್ ಇಟ್ಟರೆ, ಆ ಪಾರ್ಟಿ ಅತಿ ವಿಶಿಷ್ಟ ಎನಿಸುತ್ತದೆ. ಹೆಂಗಸರಿಗಾಗಿ ಸೀರೆ, ಸಲ್ವಾರ್ ಸೂಟ್, ಶರಾರಾ, ಗಂಡಸರಿಗಾಗಿ ಕುರ್ತಾ ಪೈಜಾಮಾ ಇತ್ಯಾದಿ ಡ್ರೆಸ್ ಕೋಡ್ ಪಾರ್ಟಿಯ ಥೀಮ್ ಅನುಸಾರ ಇಟ್ಟುಕೊಳ್ಳಬಹುದು.
ಅದು ಯಾರಿಗೂ ಕಷ್ಟಕರ ಆಗಬಾರದು, ಹಾಗಾಗಿ ಅಂಥ ಕಲರ್ ಕೋಡ್ ಸೆಟ್ ಮಾಡಿ, ಆಗ ಬಂದ ಅತಿಥಿಗಳು ಎಲ್ಲರೂ ಒಂದೇ ತರಹ ಫೀಲ್ ಆಗುತ್ತಾರೆ. ಇದರ ಪ್ರಕಾರವೇ ನಿಮ್ಮ ಪೂಲ್ ಅಲಂಕಾರ ಇರಲಿ. ಅಲಂಕಾರಕ್ಕೆ ತಕ್ಕಂತೆ ಟ್ರಾಪಿಕ್, ಆಲ್ ಲೈಟ್ ಯಾ ಕಲರ್ ಫುಲ್ ಡ್ರೆಸ್ ಕೋಡ್ ಸಹ ಇರಿಸಿಕೊಳ್ಳಬಹುದು.
ಸೀಸನ್ ಗೆ ತಕ್ಕಂತೆ ಡ್ರಿಂಕ್ಸ್
ಸಮ್ಮರ್ ಪಾರ್ಟಿಯ ಡ್ರಿಂಕ್ಸ್ ನಲ್ಲಿ ಫ್ರೂಟ್ ಪಂಚ್, ಮಾಕ್ ಟೇಲ್ಸ್, ಜೂಸಸ್, ಕೋಲ್ಡ್ ಕಬ್ಬಿನ ಹಾಲು, ಬರ್ಫ್ ಗೋಲಾ, ಕ್ಯಾಂಡಿ ಐಸ್, ಕೋಲ್ಡ್ ಡ್ರಿಂಕ್ಸ್ ಇತ್ಯಾದಿ ಅಣಿ ಮಾಡಿಕೊಳ್ಳಿ. ಇದನ್ನು ಸರ್ವ್ ಮಾಡಲು ಉತ್ತಮ ಗುಣಮಟ್ಟದ ಡಿಸ್ಪೋಸೆಬ್ ಗ್ಲಾಸಸ್, ತಣ್ಣನೆ ನೀರು ತುಂಬಿದ ಟ್ಯಾಪ್ ಇರುವ ಕ್ಯಾನ್/ಕಂಟೇನರ್ ಬಳಸಿಕೊಳ್ಳಿ. ಅತಿಥಿಗಳು ಬೇಕಾದಾಗ ಬಂದು ಇವನ್ನು ಸವಿಯಲು ಅನುಕೂಲ.
ಗೇಮ್ಸ್ ಮ್ಯೂಸಿಕ್ ಯಾ ಪಾರ್ಟಿಯೇ ಇರಲಿ, ಅದರಲ್ಲಿ ಗೇಮ್ಸ್, ಅಂತ್ಯಾಕ್ಷರಿ ಹಾಡುಗಳಿಲ್ಲದಿದ್ದರೆ ಅದು ಕಳೆಗಟ್ಟದು. ಬಣ್ಣ ಬಣ್ಣದ ಭರ್ತಿಯಾದ ಬೆಲೂನುಗಳನ್ನು ಪೂಲ್ ನಲ್ಲಿ ನಡುನಡುವೆ ತೇಲಿಬಿಡಿ. ಇದರಿಂದ ಹಿಟ್‌ಕ್ಯಾಚ್ ಗೇಮ್ಸ್, ಥ್ರೋ ಬಾಲ್ ತರಹದ ಆಟಗಳು ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತದೆ. ಇದರ ಜೊತೆಗೆ ಎಂದಿನ ತಂಬೋಲಾ, ಹೌಝಿ, ಬಿಂಗೋ, ಮಾನೋಪೋಲಿ, ರಮ್ಮಿ ಇತ್ಯಾದಿ ಆಟಗಳೂ ಇರಲಿ. ಪೂಲ್ ನಲ್ಲಿ ಇಳಿದವರಿಗಾಗಿ ಡೋನಟ್ಸ್, ಫ್ಲೆಮಿಂಗೋ, ಯೂನಿಕಾರ್ನ್, ಪೈನ್ ಆ್ಯಪಲ್ ಶೇಪ್ ಪ್ಲೇಟ್ಸ್ ಇತ್ಯಾದಿಗಳಿರಲಿ. ಇದರಿಂದ ನೀರಿಗಿಳಿದವರಿಗೆ ಭಾರಿ ಮಜಾ ಎನಿಸುತ್ತದೆ.
ಬಿಸಿಲಿನ ಕಡೆ ಗಮನವಿರಲಿ
ಪೂಲ್ ನಲ್ಲಿ ನೀರು ತಣ್ಣಗಿರುತ್ತದೆ ನಿಜ, ಹಾಗೇಂತ ತೀರಾ ಬಿಸಿಲಲ್ಲಿ ಈ ಪಾರ್ಟಿ ಏರ್ಪಡಿಸಬಾರದು. ಸಂಜೆ 5ರ ನಂತರ ಸಕಾಲ. ಜೊತೆಗೆ ಟೇಬಲ್ ಮೇಲೆ 3-4 ಟ್ಯೂಬ್ ಸನ್ ಸ್ಕ್ರೀನ್ ಲೋಶನ್ ಇರಲಿ, ನೀರಿಗಿಳಿಯುವವರು ಇದನ್ನು ಧಾರಾಳ ಬಳಸಲಿ.
ಆಹಾರದಲ್ಲಿ ವೈವಿಧ್ಯತೆ ಇರಲಿ
ಯಾವುದೇ ಪಾರ್ಟಿ ಇರಲಿ, ಅಲ್ಲಿ ಎಂಥ ಫುಡ್ ಸರ್ವ್ ಮಾಡುತ್ತಾರೆ ಎಂಬುದೇ ಅತಿ ಮಹತ್ತರವಾದುದು. ಏಜ್ ಗ್ರೂಪ್ ಗಮನದಲ್ಲಿರಿಸಿಕೊಂಡು, ಫುಡ್ ನಲ್ಲಿ ವೆರೈಟಿ ಇರಿಸಿಕೊಳ್ಳಿ. ಮೆಯ್ನ್ ಕೋರ್ಸ್ ಗಾಗಿ, ನೀರಿಗಿಳಿದವರು ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಾ, ಬಂದು ಹೋಗಿ ಅದನ್ನು ಎಂಜಾಯ್ ಮಾಡುವಂತಿರಬೇಕು. ನೂಡಲ್ಸ್, ಪಾಸ್ತಾ, ವೆಜ್ ಸ್ಯಾಂಡ್ ವಿಚ್, ಮಿಕ್ಸ್ಡ್ ವೆಜ್ ಪಕೋಡ, ಸಲಾಡ್, ಅವಕಾಡೋ, ಬೀಟ್ ರೂಟ್, ಪಾಲಕ್, ಕ್ಯಾಪ್ಸಿಕಂ ಇತ್ಯಾದಿಗಳ ಸಲಾಡ್ ಜೊತೆ ನಾರ್ತ್ ಇಂಡಿಯನ್ ಫುಡ್ ಇರಲಿ.
ಸಮಯ ಪೂಲ್ ಪಾರ್ಟಿ ಬಹಳ ಬಿಸಿಲಲ್ಲಿ ಬೇಡ. ಪೂಲ್ ನಲ್ಲಿ ಇಳಿದರು ಡೋನಟ್ಸ್ ಫ್ಲೆಮಿಂಗೋ, ಯೂನಿಕಾರ್ನ್, ಪೈನಾಪಲ್ ಪ್ಲೇಟ್ಸ್ ಇತ್ಯಾದಿಗಳನ್ನು ಬಳಸಿ ಆಡುತ್ತಾರಾದ್ದರಿಂದ, ಈ ಪೂಲ್ ಪಾರ್ಟಿ ಸಮಯವನ್ನು ಸಂಜೆ 5 ರಿಂದ ಇರಿಸಿಕೊಳ್ಳುವುದೇ ಸರಿ.
ಚೇಂಜಿಂಗ್ ರೂಮ್
ನೀರಿನಿಂದ ಎದ್ದು ಹೊರ ಬಂದವರು, ನೇರ ಚೇಂಜಿಂಗ್ ರೂಮಿಗೆ ಹೋಗುತ್ತಾರೆ. ಹೀಗಾಗಿ ಅದರ ಸ್ವಚ್ಛತೆ ಶುಭ್ರತೆ ಕಡೆ ಗಮನವಿರಲಿ. ಅತಿಥಿಗಳ ಲೆಕ್ಕ ನೋಡಿಕೊಂಡು, ದೊಡ್ಡ ಸೈಜಿನ ಟವೆಲ್ಸ್ ಇರಿಸಿ. ಅವರು ತಮ್ಮೊಂದಿಗೆ ತಂದಿದ್ದರೆ, ಅದು ಇನ್ನೂ ಒಳ್ಳೆಯದು. ಅಲ್ಲಿ ಒಂದು ಬಕೆಟ್, ನೀರು, ಮಗ್ ಇತ್ಯಾದಿಗಳ ವ್ಯವಸ್ಥೆಯೂ ಇರಲಿ.
– ಪ್ರತಿಭಾ ಪ್ರಸಾದ್





