ಮನೆಯ ಟೆರೇಸ್ ಇರಲಿ ಅಥವಾ ಫ್ಲಾಟ್ ನ ಬಾಲ್ಕನಿ ಇರಲಿ, ಈ ತೋಟಗಾರಿಕಾ ಸಲಹೆಗಳು ನಿಮ್ಮ ಮನೆಯಲ್ಲಿ ವರ್ಷವಿಡೀ ಸುಗಂಧ ತುಂಬಿರುವಂತೆ ಮಾಡುತ್ತವೆ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದು ಬಂಗಲೆಯನ್ನು ಹೊಂದಲು ಬಯಸುತ್ತಾರೆ. ಬಂಗಲೆಯ ಹೊರಗೆ ಉದ್ದುದ್ದನೆಯ ಬಾಟಲ್ ಪಾಮ್ ಮರಗಳಿರಬೇಕು, ಅದರ ಎಲೆಗಳ ಮೂಲಕ ಸೂರ್ಯರಶ್ಮಿ ಹೊರಹೊಮ್ಮಬೇಕು. ಬಾಗಿಲಿನ ಒಂದು ಬದಿಯಲ್ಲಿ ಕೆಂಪು ಹೂಗಳಿಂದ ತುಂಬಿದ ಗುಲ್ ಮೊಹರ್ ಮರವಿರಬೇಕು. ತುಜಿ ಮತ್ತು ಚಾಂದಿನಿ ಹೂಗಳಿಂದ ತುಂಬಿದ ನೆರಳು ನೀಡುವ ಸುಂದರವಾದ ಮರವಿರಬೇಕು..... ಇತ್ಯಾದಿ.
ಮನೆಗೆ ಹೋಗುವ ರಸ್ತೆಯ ಉದ್ದಕ್ಕೂ ಪಿಂಗ್ ಬೋಗನ್ ವಿಲಾ ಬೇಲಿ, ಬಂಗಲೆಯ ಹೊರಗಿನ ಗೋಡೆಯ ಮೇಲೆ ಇರಿಸಲಾದ ಕುಂಡಗಳಲ್ಲಿ ಶತಾವರಿ, ಚೈನಾ ಗ್ರಾಸ್, ಅಂಬ್ರೆಲಾ ಪಾಮ್, ಫಿಂಗರ್ ಪಾಮ್, ಚೈನಾ ಪಾಮ್, ಪಥರ್ಚಟ್ಟಾ (ಬ್ರಯೋಫಿಲಂ ಸಿಂಗೋನಿಯಂ), ಎವರ್ ಗ್ರೀನ್, ಐವಿ, ಆರ್ನಮೆಂಟ್ ಡ್ಯಾಫೆನ್ಬಾಚಿಯಾ, ಕ್ಯಾವಾಡಿಯಂ, ಪೆಪೆರೋಮಿಯಾಗಳನ್ನು ಬಂಗಲೆಯ ಕಾಂಪೌಂಡ್ ಗೋಡೆಯ ಮೇಲೆ ಇರಿಸಲಾಗಿರುವ ಕುಂಡಗಳಲ್ಲಿರಬೇಕು.
ಕಣ್ಣು ಹಾಯಿಸಿದ ಕಡೆಗೆಲ್ಲಾ ಹಚ್ಚ ಹಸಿರು. ಬಂಗಲೆಯ ಹೊರಗಿನ ಗೋಡೆ ಇಷ್ಟೊಂದು ಅಲಂಕಾರಿಕ ಗಿಡಗಳಿಂದ ಹಸಿರಾಗಿರುತ್ತದೆ ಎಂದು ನೆನೆಸಿಕೊಂಡರೆ ಸಾಕು, ಮನಸ್ಸಿಗೆ ರೋಮಾಂಚನವಾಗುತ್ತದೆ. ಗೇಟು ತೆರೆದು ಒಳಗೆ ಬರುತ್ತಿದ್ದಂತೆ, ಮೂಗಿಗೆ ತಾಗುವ ಟ್ಯೂಬರೋಸ್ ನ ತೆಳು ಸುಗಂಧವಂತೂ ಮನಸ್ಸಿಗೆ ಮುದ ನೀಡುವುದರ ಜೊತೆ ಮನೆಯೊಳಗೆ ಕೈಬೀಸಿ ಆಹ್ವಾನಿಸುವಂತಿರುತ್ತದೆ.
ಇಲ್ಲಿ ಗುಲಾಬಿ ಮತ್ತು ಹಳದಿ ಮಾರಿಗೋಲ್ಡ್ ಹೂವುಗಳ ಸುವಾಸನೆ ಅಮಲೇರಿಸುತ್ತದೆ. ಆ ಮೃದು ಹುಲ್ಲುಹಾಸಿನ ಮೇಲೆ ಕಾಲಿಟ್ಟಾಗ ಮನಸ್ಸಿಗೆ ಹಿತಕರ ಅನುಭವ ನಿಮ್ಮದಾಗುವುದು. ಉದ್ಯಾನವಿದ್ದರೆ ಅದು ಹೀಗೆಯೇ ಇರುತ್ತದೆ.
ಈಗ ಎಲ್ಲರಿಗೂ ಬಂಗಲೆ ಸಿಗುವುದಿಲ್ಲ. ಏಕೆಂದರೆ ನಗರಗಳಲ್ಲಿ ಭೂಮಿಯ ಕೊರತೆಯಿಂದಾಗಿ ಮನೆಯಲ್ಲಿ ಉದ್ಯಾನವನ ಹೊಂದುವ ಮಾತು ಅಸಾಧ್ಯ. ಆದರೆ ನೀವು ಫ್ಲಾಟ್ ನಲ್ಲಿ ವಾಸಿಸುತ್ತಿದ್ದರೆ, ನೀವು ಬಂಗಲೆಯಂತಹ ಆನಂದವನ್ನು ಅಲ್ಲಿಯೂ ಪಡೆಯಬಹುದು. ನಿಮ್ಮ ಬಾಲ್ಕನಿಯಲ್ಲಿ, ಮನೆಯೊಳಗೆ ಅಥವಾ ನಿಮ್ಮೊಟ್ಟಿಗೆ ಇರುವವರ ಜೊತೆ ಕೆಲಸ ಮಾಡುವ ಮೂಲಕ ಈ ವಾತಾವರಣವನ್ನು ನಿಮ್ಮಲ್ಲಿಯೇ ಸೃಷ್ಟಿಸಿಕೊಳ್ಳಬಹುದು. ದೊಡ್ಡದಾದ ಅಥವಾ ಚಿಕ್ಕದಾದ ಜಾಗವನ್ನು ಹೊಂದಿರುವವರು ಈ ಎಲ್ಲಾ ಮರಗಳು ಮತ್ತು ಸಸ್ಯಗಳನ್ನು ಬೆಳೆಸುವ ಮೂಲಕ ಉದ್ಯಾನ ವನವನ್ನು ನಿಮ್ಮದಾಗಿಸಿಕೊಳ್ಳಬಹುದು.

ಮಾಹಿತಿ ಸಂಗ್ರಹಿಸಿ
ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಮಾಹಿತಿಗಳು ಎಲ್ಲೆಡೆ ಲಭ್ಯವಿರುತ್ತವೆ. ಟಿವಿ ಕಾರ್ಯಕ್ರಮ, ಯೂಟ್ಯೂಬ್, ಇಂಟರ್ ನೆಟ್ ಅಥವಾ ಸ್ನೇಹಿತರಿಂದಲೂ ಕೃಷಿ ಸಂಶೋಧನೆ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಪಡೆಯಬಹುದು.
ಹೂ ಬಿಡುವ ಸಸ್ಯಗಳ ಆಯ್ಕೆ
ವರ್ಷವಿಡೀ ನಿಮ್ಮ ಮನೆಯ ಒಳಗೆ, ಸುತ್ತಮುತ್ತ ಹಸಿರಾಗಿರುವಂತೆ, ಬಣ್ಣಬಣ್ಣದ ಹೂಗಳಿಂದ ತುಂಬಿರಬೇಕು ಎಂದು ನೀವು ಬಯಸುವಿರಾದರೆ, ನಿಮಗೆ ಸ್ವಲ್ಪ ಕಲ್ಪನೆ, ತಿಳಿವಳಿಕೆ, ಅನುಭವ, ಗಿಡಗಳ ಬಗ್ಗೆ ಆಸಕ್ತಿ, ಉತ್ಸಾಹದ ಅಗತ್ಯವಿರುತ್ತದೆ. ಇಲ್ಲಿ ಸಸ್ಯಗಳ ಆಯ್ಕೆಯೂ ಬಹಳ ಮುಖ್ಯ. ಸರಿಯಾದ ಆಯ್ಕೆಯನ್ನು ನಿಮ್ಮದಾಗಿಸಿಕೊಂಡರೆ, ಅವುಗಳ ಬಗ್ಗೆ ಹೆಚ್ಚಿನ ಕಾಳಜಿಯ ಅಗತ್ಯ ಇರುವುದಿಲ್ಲ. ಹಸಿರು ಹಾಗೂ ಬಣ್ಣ ಬಣ್ಣದ ಹೂಗಳು ನಿಮ್ಮ ಮನೆಯ ಒಳಗೆ ಹಾಗೂ ಹೊರಗೆ ವರ್ಷವಿಡೀ ತುಂಬಿಯೇ ಇರುವಂತೆ ಮಾಡಿಕೊಳ್ಳಬಹುದು.





