ರಾಘವೇಂದ್ರ ಅಡಿಗ ಎಚ್ಚೆನ್.

ISH MYRA Producer ಕಂಪನಿ ಅಡಿಯಲ್ಲಿ ಪರಮೇಶ್ವರ್ ಬಿ ‌ಕನ್ನಡ ಪ್ರೇಕ್ಷಕರಿಗೆ ಹೊಸದೊಂದು ಆಫರ್ ಕೊಟ್ಟಿದ್ದಾರೆ. ಅದು ಉಪೇಂದ್ರ ಸಿನಿಮಾವನ್ನ ರಿ- ರಿಲೀಸ್ ಮಾಡೋ ಮೂಲಕ. ಈ ವಿಚಾರವನ್ನ ಮಾಧ್ಯಮಕ್ಕೆ ‌ಮೊದಲು ತಿಳಿಸುವ ಉದ್ದೇಶದಿಂದ ಇಂದು ಪತ್ರಿಕಾಗೋಷ್ಠಿ ಕರೆದಿದ್ದ ಪರಮೇಶ್ವರ್ ಥೇಟ್ ಉಪೇಂದ್ರರಂತೆ ತಲೆಗ್ ಹುಳ ಬಿಟ್ಟಿದ್ದಾರೆ. ಆಸಾಧ್ಯ ಅನ್ನೋದನ್ನ ಸಾಧ್ಯ ಮಾಡ್ತೀವಿ ನಂಬಿ ಅಂತ ವಿಶ್ವಾಸದಿಂದ ಯೋಜನೆಯನ್ನ ಹಂಚಿಕೊಂಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಅದ್ರೆ ಉಪೇಂದ್ರ ಸಿನಿಮಾ ಜೂನ್ 4ನೇ ತಾರೀಖು ರಾಜ್ಯದಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಅಂದ್ರೆ ಅದು ಬರೀ ಸಿಂಗಲ್ ಸ್ಕ್ರೀನ್ ಗಳಲ್ಲಿ ಮಾತ್ರ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಪ್ರತಿ ಥಿಯೇಟರ್ ನಲ್ಲಿ ಶೋ ಮುಗಿದ ನಂತರ 10 ನಿಮಿಷ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಲಿದ್ದು, ‌ಸರಿಯಾದ ಉತ್ತರ ನೀಡಿದ ಪ್ರೇಕ್ಷಕರಿಗೆ ಪ್ರಾಶಸ್ತ್ಯ ಮೇರೆಗೆ ಆ ಶೋನ‌ ಸಂಪೂರ್ಣ ಕಲೆಕ್ಷನ್ ದುಡ್ಡನ್ನ ಬಹುಮಾನವಾಗಿ ನೀಡಲಾಗುವುದು. ಅಲ್ಲದೇ ಉಪೇಂದ್ರ ಪ್ರದರ್ಶನದ 25ನೇ ದಿನ ಅದೇ ರೀತಿ ಉತ್ತರ ನೀಡಿದ ಒಬ್ಬ ಪ್ರೇಕ್ಷಕನಿಗೆ 1ಕೋಟಿ ಬಹುಮಾನ ನೀಡಲಾಗುವುದು. ಎಂದು ಆಯೋಜಕ ಪರಮೇಶ್ವರ್ ಬಿ ಹೇಳಿದ್ರು.

upendra
ಉದ್ದೇಶ
ಈ ಯೋಜನೆಯ ಉದ್ದೇಶವೇನೆಂದರೆ, ಕನ್ನಡ ಚಿತ್ರರಂಗದ ಇತಿಹಾಸದ ಮೈಲಿಗಲ್ಲು ಚಿತ್ರಗಳನ್ನ ಇಂದಿನ ಆಡಿಯನ್ಸಿಗೆ ಈ ಜನರೇಷನ್ ಸಿನಿಮಾ ಪ್ರೇಮಿಗಳಿಗೆ ತಿಳಿಸುವುದು. ಕನ್ನಡ ಸಿನಿಮಾ ಇತಿಹಾಸ ಮತ್ತು ಸಾಧನೆಯನ್ನ ಎಚ್ಚರಿ.. ಹೊಸ ಅಲೆಯ ಸಿನಿಮಾ ಮೇಕರ್ ಗಳನ್ನ ಹಾಗೇ ಪ್ರೇಕ್ಷಕರನ್ನ ಪ್ರೋತ್ಸಾಹಿಸವುದು.
ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನ ಕರೆತಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನ ಉಳಿಸಿಕೊಳ್ಳುವುದು. ಸಿನಿಮಾಗಳಿಲ್ಲದ ಬರಗಾಲದಲ್ಲಿ ಥಿಯೇಟರ್‌ ಗಳಿಗೆ ಸಿನಿಮಾಗಳನ್ನ ಪೂರೈಸುವುದು‌.
ಉಪೇಂದ್ರ ಸಿನಿಮಾ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ರವರು ಅನುಮತಿ ಕೊಟ್ಟಿದ್ದು, ಮುಂದಿನ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರು ಹಾಗೂ ಉಪೇಂದ್ರರವರು ಭಾಗಿಯಾಗಲಿದ್ದು, ಯೋಜನೆಯ ಸಂಪೂರ್ಣ ವಿವರಗಳನ್ನ ಹಂಚಿಕೊಳ್ಳಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ