ಕಿರುತೆರೆಯಲ್ಲಿ ಸಾಂಪ್ರದಾಯಿಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಟಿ ಮೌನ ಗುಡ್ಡೆಮನೆ ಇದೀಗ ಸಂಪೂರ್ಣ ವಿಭಿನ್ನ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅವರ ಹೊಸ ಮೈಕ್ರೋ ಡ್ರಾಮಾ ‘ಲವ್ ಪಂಚ್’ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

‘ರಾಮಾಚಾರಿ’ ಧಾರಾವಾಹಿಯಲ್ಲಿ ಚಾರುಲತಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ಮೌನ, ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇಷ್ಟರವರೆಗೆ ಟ್ರೆಡಿಷನಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಈ ಬಾರಿ ಬೋಲ್ಡ್ ಹಾಗೂ ಸ್ಟೈಲಿಷ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ.

‘ಲವ್ ಪಂಚ್’ ಮೈಕ್ರೋ ಸರಣಿಯಲ್ಲಿ ನಟ ಶರತ್ ಪದ್ಮನಾಭ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ಪಾರು’ ಧಾರಾವಾಹಿಯಿಂದ ಜನಪ್ರಿಯತೆ ಪಡೆದಿದ್ದ ಶರತ್, ಪ್ರಸ್ತುತ ‘ನಾ ನಿನ್ನ ಬಿಡಲಾರೆ’ ಸೀರಿಯಲ್‌ನಲ್ಲೂ ಅಭಿನಯಿಸುತ್ತಿದ್ದಾರೆ. ಈ ಹೊಸ ಸರಣಿಯಲ್ಲಿ ಮೌನ ಮತ್ತು ಶರತ್ ನಡುವಿನ ಕೆಮಿಸ್ಟ್ರಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

‘ಲವ್ ಪಂಚ್’ ಒಂದು ಕಾಲೇಜ್ ಲವ್ ಸ್ಟೋರಿಯನ್ನು ಆಧರಿಸಿದ ಕಥೆಯಾಗಿದ್ದು, ಮೊದಲಿಗೆ ಜಗಳವಾಡಿಕೊಳ್ಳುವ ಯುವ ಜೋಡಿ ನಂತರ ಪ್ರೀತಿಯಲ್ಲಿ ಬೀಳುವ ರೀತಿಯಲ್ಲಿ ಕಥೆ ಸಾಗುತ್ತದೆ. ಟ್ರೇಲರ್‌ನಲ್ಲಿ ರೊಮ್ಯಾನ್ಸ್ ಜೊತೆಗೆ ಕೊನೆಯಲ್ಲಿ ಕುತೂಹಲ ಹುಟ್ಟಿಸುವ ಟ್ವಿಸ್ಟ್ ಕೂಡ ತೋರಿಸಲಾಗಿದೆ.

ಈ ಮೈಕ್ರೋ ಡ್ರಾಮಾದ ಟ್ರೇಲರ್ ಬಿಡುಗಡೆಯಾದ ಬಳಿಕ, ಮೌನ ಗುಡ್ಡೆಮನೆ ಅವರ ಹೊಸ ಲುಕ್ ಹಾಗೂ ಅಭಿನಯದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ