ಸ್ಪ್ರಿಂಗ್ ಆನಿಯನ್ ಸ್ಟಿಕ್ಸ್  

ಬೇಕಾದ ಸಾಮಗ್ರಿ :

ಈರುಳ್ಳಿ ಎಸಳು ೧೦-೧೫, ಒಂದು ಕಪ್ ಕಡಲೆಹಿಟ್ಟು, ಅಚ್ಚ ಮೆಣಸಿನ ಪುಡಿ ೧ ಚಮಚ, ಓಂ ಕಾಳುಪುಡಿ ೧/೨ ಚಮಚ,ಇಂಗು, ಚಿಟಿಕಿ ಅಡುಗೆ ಸೋಡ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ  
ಈರುಳ್ಳಿ ಎಸಳುಗಳನ್ನು  ಚೆನ್ನಾಗಿ ತೊಳೆದು, ಒರೆಸಿ, ಸಣ್ಣಗೆ ಸೀಳಿಕೊಳ್ಳಿ.
ಮೇಲೆ ಹೇಳಿದ ಉಳಿದೆಲ್ಲ ಪದಾರ್ಥಗಳನ್ನು ನೀರು ಹಾಕಿ ದೋಸೆಹಿಟ್ಟಿನ ಹದಕ್ಕೆ  ಕಲೆಸಿಟ್ಟುಕೊಳ್ಳಿ.  ಎಳಸುಗಳನ್ನು  ಒಂದೊಂದಾಗಿ ಖಾರದ ಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಕೆಂಬಣ್ಣಕ್ಕೆ ಬರುವವರೆಗೆ ಕರಿಯಿರಿ.

ಕಾವ್ಯ ಭಾರದ್ವಾಜ್ 

kavya bharadwaj (2)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ