ಮ್ಯಾಂಗೋ ಡಾಲಿಯಾ  ಉಪ್ಮಾ 

ಡಾಲಿಯಾ, (ಮುರಿದ ಗೋಧಿ) ಎಂಬುದು ಸಂಪೂರ್ಣ ಗೋಧಿ ಧಾನ್ಯದಿಂದ ನುಚ್ಚುಮಾಡಲಾಗುತ್ತದೆ. ಅನ್ನ ಅಥವಾ ರೋಟಿ ಗೆ ಬದಲಾಗಿ  ಡಾಲಿಯಾ  ಉಪ್ಮಾ  ಒನ್ ಪಾಟ್ ಕುಕಿಂಗ್ ರೆಸಿಪಿ ಮಧುಮೇಹ , ತೂಕ ಇಳಿಸಲು ಒಂದು ಪೌಷ್ಟಿಕ ಆಹಾರ .

ಬೇಕಾಗುವ ಸಾಮಗ್ರಿ : 

 ಗೋಧಿ ನುಚ್ಚು ೧ ಕಪ್ (ಸುಮಾರು ೩೫೦-೪೦೦ ಗ್ರಾಂ ), ತುರಿದ ತೋತಾಪುರಿ ಮಾವಿನ ಕಾಯಿ ೧/೨ ಕಪ್  ತೆಂಗಿನ ತುರಿ  ೧/೨ ಕಪ್ ಒಣಮೆಣಸಿನಕಾಯಿ ೫-೬ ( ಒಮ್ಮೆ ತರಿಯಾಗಿ ಮಿಕ್ಸರ್ ನಲ್ಲಿ ಮಾವು, ತೆಂಗು, ಒಣಮೆಣಸಿನಕಾಯಿಯನ್ನು ತರಿಯಾಗಿ  ರುಬ್ಬಿ ಇಟ್ಟುಕೊಳ್ಳಿ ) , ಹಸಿ ಬಟಾಣಿ ೧/೪ ಕಪ್. ರುಚಿಗೆ ತಕ್ಕಷ್ಟು ಉಪ್ಪು , ಅರಿಶಿನ  ೧/೪ ಚಮಚ , ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ , ಸೋಂಪು ತಲಾ ೧/೪ ಚಮಚ. 

ಮಾಡುವ ವಿಧಾನ 

ಒಂದು ಕುಕ್ಕರ್ ಪಾತ್ರೆಯಲ್ಲಿ ಮೊದಲು ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ , ಸೋಂಪು ಸಿಡಿಸಿ. ರುಬ್ಬಿದ ಮಿಶ್ರಣ , ಅರಿಶಿನ , ಹಸಿ ಬಟಾಣಿ ಸೇರಿಸಿ ಬಾಡಿಸಿ . ಗೋಧಿ ನುಚ್ಚು ( ಡಾಲಿಯಾ) ಸೇರಿಸಿ ಒಮ್ಮೆ ಮಗುಚಿ , ನಂತರ ಅದಕ್ಕೆ ೨ ೧/೨ ಕಪ್ ನೀರು , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ೨ ಸೀಟಿ ಕೂಗಿಸಿ ಉರಿ  ಆರಿಸಿ. ಸ್ವಲ್ಪ ತಣಿದ ನಂತರ  ಸರ್ವ್ ಮಾಡುವ ಮುನ್ನ ತೆಂಗಿನ ತೂರಿ ಕೊತ್ತಂಬರಿ ಉದುರಿಸಿ ಅಲಂಕರಿಸಿದರೆ ಆರೋಗ್ಯಕರ ಫೈಬರ್ ರಿಚ್ ಮ್ಯಾಂಗೋ  ಡಾಲಿಯಾ  ಉಪ್ಮಾ ಸವಿಯಲು ಸಿದ್ದ. 

- ಕಾವ್ಯ ಭಾರದ್ವಾಜ್ 

kavya bharadwaj (2)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ