ಆಲೂ ಕಾರ್ನ್ ಟಿಕ್ಕಿ
ಬೇಕಾಗುವ ಸಾಮಗ್ರಿ :
ಬೇಯಿಸಿದ ಆಲೂಗಡ್ಡೆ ೨ (ಮೀಡಿಯಂ ಗಾತ್ರ), ಬೇಯಿಸಿದ ಸ್ವೀಟ್ ಕಾರ್ನ್ ೧/೨ ಕಪ್ , ಜೀರಾ ಪೆಪ್ಪರ್ ಪೌಡರ್ ೧/೨ ಚಮಚ, ಆಮ್ ಚೂರ್ ಪೌಡರ್ ೧/೪ ಚಮಚ, ರುಚಿಗೆ ಉಪ್ಪು.
ಮಾಡುವ ವಿಧಾನ :
ಆಲೂಗಡ್ಡೆಯನ್ನು ಮ್ಯಾಶ್ ಮಾಡಿಕೊಂಡು ಸ್ವೀಟ್ ಕಾರ್ನ್, ಜೀರಾ ಪೆಪ್ಪರ್ ಪೌಡರ್, ಆಮ್ ಚೂರ್ ಪೌಡರ್ ಉಪ್ಪು ಸೇರಿಸಿ ಗಟ್ಟಿಯಾಗಿ ಕಲಸಿ. ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಬಟರ್ ಪೇಪರ್ ಮೇಲೆ ಗುಂಡಗೆ ತಟ್ಟಿ, ತುಪ್ಪ ಸವರಿ ಕಾದ ತವಾ ಮೇಲೆ ಸಣ್ಣ ಉರಿಯಲ್ಲಿ ಟೋಸ್ಟ್ ಮಾಡಿ.
– ಕಾವ್ಯ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





