ಸಬ್ಬಸಿಗೆ ಸೊಪ್ಪಿನ ರೊಟ್ಟಿ

ಸಣ್ಣಗೆ ಕೊಚ್ಚಿದ ಎಳೆ ಸಬ್ಬಸ್ಸಿಗೆ ಸೊಪ್ಪು ೧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ ೧/೨ ಕಪ್, ಅಕ್ಕಿ ಹಿಟ್ಟು ೨ ಕಪ್, ಜೀರಿಗೆ ೧ ಚಮಚ, ತುಪ್ಪ ೪ ಚಮಚ, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ 

 ಮಿಕ್ಸಿಂಗ್ ಬೌಲ್ ನಲ್ಲಿ  ಅಕ್ಕಿ ಹಿಟ್ಟು, ಸಬ್ಬಸಿಗೆ ಸೊಪ್ಪು, ಈರುಳ್ಳಿ, ತುಪ್ಪ, ಜೀರಿಗೆ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಎರಡೂವರೆ ಕಪ್ ನೀರಿಗೆ  ಎರಡು ಚಮಚ ಎಣ್ಣೆ ಹಾಕಿ ಕುದಿಸಿ ಉರಿ ಆರಿಸಿ. ಮಿಕ್ಸಿಂಗ್ ಬೌಲ್ ಗೆ ಸ್ವಲ್ಪ ಸ್ವಲ್ಪವಾಗಿ  ಈ ನೀರನ್ನು ಹಾಕುತ್ತ  ಹಿಟ್ಟನ್ನು ಗಂಟಿಲ್ಲದಂತೆ ರೊಟ್ಟಿಯ ಹದಕ್ಕೆ  ಕಲೆಸಿ ೫ ನಿಮಿಷ ಮುಚ್ಚಿಡಿ. ಬಟರ್ ಪೇಪರ್ ಮೇಲೆ ಎಣ್ಣೆ ಸವರಿ ಸಣ್ಣ ಮುದ್ದೆ ಹಿಟ್ಟನ್ನು ತೆಗೆದು ತೆಳ್ಳಗೆ ತಟ್ಟಿ . ಕಾದ ಕಾವಲಿಯ ಮೇಲೆ

ಹರಡಿ, ಅಂಚಿಗೆ ೧ ಚಮಚ ಎಣ್ಣೆ ಹಾಕಿ, ಮುಚ್ಚಳ ಮುಚ್ಚಿ ಎರಡೂ ಕಡೆ ಬೇಯಿಸಿ.

– ಕಾವ್ಯ ಭಾರದ್ವಾಜ್ 

Kavyaa Bharadwaj (1)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ