ಅಡುಗೆಮನೆ ಹೊಳೆಹೊಳೆಯುತ್ತಾ ಇದ್ದರಷ್ಟೇ ಸಾಲದು, ಅಲ್ಲಿ ಹೈಜೀನ್ಗೂ ಅಷ್ಟೇ ಪ್ರಾಧಾನ್ಯತೆ ಇರಬೇಕು. ಇದಕ್ಕಾಗಿ ಸಲಹೆಗಳನ್ನು ಅಗತ್ಯ ಅನುಸರಿಸಿ……!

ಸ್ವಚ್ಛ ಶುಭ್ರತೆಗೊಂಡ, ಅತ್ಯಾಧುನಿಕ ಉಪಕರಣಗಳಿಂದ ಸುಸಜ್ಜಿತ ಅಡುಗೆಮನೆ ಪ್ರತಿಯೊಬ್ಬ ಗೃಹಿಣಿಯ ಕನಸು. ನಾವು ಯಾರದೇ ಮನೆಗೆ ಹೋದಾಗಲೂ, ಆ ಮನೆಯ ಅರೇಂಜ್‌ ಮೆಂಟ್ಸ್ ಕಡೆ ನೋಟ ಹರಿಸುತ್ತೇವೆ. ಯಾವ ಮನೆ ಅಚ್ಚುಕಟ್ಟಾಗಿ ಸಿಂಗರಿಸಲ್ಪಟ್ಟಿರುತ್ತದೋ ಆ ಮನೆ ಎಲ್ಲರಿಗೂ ಅಚ್ಚುಮೆಚ್ಚು ಎನಿಸುತ್ತದೆ.

ಹಾಗೆಯೇ ನಿಮ್ಮನ್ನು ಯಾರಾದರೂ ಅತಿಥಿಗಳಾಗಿ ಮನೆಗೆ ಊಟಕ್ಕೆ ಕರೆದಾಗ, ಅವರ ಅಡುಗೆಯ ವಿಧಾನ, ಅಡುಗೆಮನೆ ಎಷ್ಟು ನೀಟಾಗಿದೆ ಎಂಬುದರತ್ತ ಹೆಂಗಸರು ಖಂಡಿತಾ ಗಮನಿಸುತ್ತಾರೆ. ಧಾನ್ಯ ಸಂಗ್ರಹಿಸುವ ಕಂಟೇನರ್‌, ಅಡುಗೆ ತಯಾರಿಗಾಗಿ ಬಳಸುವ ಪಾತ್ರೆಪಡಗ, ಗ್ಯಾಸ್‌ ಸ್ಟವ್ ನಿಂದ ಡೈನಿಂಗ್‌ ಟೇಬಲ್ ಮೇಲಿಟ್ಟ ಡಿನ್ನರ್‌ ಸೆಟ್‌, ಕೈ ಒರೆಸುವ ನ್ಯಾಪ್‌ ಕಿನ್‌, ಕಿಚನ್‌ ಟವೆಲ್ ‌ಇತ್ಯಾದಿಗಳೆಲ್ಲ ನಮ್ಮ ಆಕರ್ಷಣೆಯ ಕೇಂದ್ರಬಿಂದುಗಳಾಗುತ್ತವೆ. ಹಾಗಿರುವಾಗ ಎಲ್ಲರೂ ಮೆಚ್ಚುವಂತೆ ಮನೆ, ಅದರಲ್ಲೂ ಅಡುಗೆಮನೆ ಲಕಲಕ ಎಂದು ನೀಟಾಗಿರಬೇಕೇ ಹೊರತು, ಎಲ್ಲೆಂದರಲ್ಲಿ ಸಾಮಗ್ರಿ ಬಿಸಾಡಿದ್ದರೆ, ಸ್ಟೋರ್‌ ರೂಂ ಹಾಗಿರುವ ಫ್ರಿಜ್‌, ಗಲೀಜು ನ್ಯಾಪ್‌ ಕಿನ್‌, ಸೀದುಹೋದ ತವಾ/ಬಾಣಲೆ, ಮುಸುರೆ ಪಾತ್ರೆ ತುಂಬಿದ ಸಿಂಕ್‌ ಇತ್ಯಾದಿಗಳಿದ್ದರೆ ಅದನ್ನು ಗೃಹಿಣಿ ಇರುವ ಮನೆ ಎನ್ನಲಾದೀತೇ?

ಕಿಚನ್‌ ಮತ್ತು ಪಾತ್ರೆಗಳ ಸ್ವಚ್ಛತೆ ಶುಭ್ರತೆ ನೇರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬಲು ಎಚ್ಚರಿಕೆಯಿಂದ ಇದರ ಸ್ವಚ್ಛತೆ ಶುಭ್ರತೆಯತ್ತ ಗಮನ ಕೊಡಬೇಕು. ಆಗ ಮಾತ್ರ ಹೊಳೆ ಹೊಳೆಯುವ ಕಿಚನ್‌ ಗೆ ಹೈಜೀನ್ ಜೊತೆಗೂಡುತ್ತದೆ.

ಮನೆಯ ಕೇಂದ್ರಬಿಂದು ಕಿಚನ್‌. ಅದು ಸದಾ ಸ್ವಚ್ಛ ಶುಭ್ರವಾಗಿರಬೇಕು. ಆಗ ಮಾತ್ರ ಅಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಉತ್ಸಾಹ, ಹುಮ್ಮಸ್ಸು ತುಂಬಿರುತ್ತದೆ. ಅಡುಗೆಮನೆಯಲ್ಲಿ ಪಾತ್ರೆಗಳು ಸಹ ನಮ್ಮ ಹೆಲ್ದಿ ಆಹಾರದಷ್ಟೇ ಪ್ರಾಧಾನ್ಯತೆ ಪಡೆಯುತ್ತವೆ. ಎಷ್ಟೇ ಇಷ್ಟಪಟ್ಟು ಅಡುಗೆ ಮಾಡಿದ್ದರೂ, ಅದನ್ನು ಹೊಳೆಹೊಳೆಯುವ ಸ್ವಚ್ಛ ಶುಭ್ರ ಪಾತ್ರೆಗಳಲ್ಲಿ ತಂದು ತಟ್ಟೆಗೆ ಬಡಿಸದಿದ್ದರೆ, ಅದು ರಸಹೀನ ಎನಿಸುತ್ತದೆ. ಹೀಗಾಗಿ ಹಳೆಯ ಪಾತ್ರೆಗಳನ್ನು ಸಹ ಹೊಳೆಹೊಳೆಯುವಂತೆ ಇಟ್ಟುಕೊಳ್ಳಬೇಕಾದದು ಬಲು ಮುಖ್ಯ.

ಪಾತ್ರೆಗಳಿಗೆ ಅಂಟಿದ ಜಿಡ್ಡು, ಕಿಗಳು, ಗೃಹಿಣಿ ಎಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾಳೆ ಎಂದು ತೋರಿಸಿ ಕೊಡುತ್ತದೆ. ಹೀಗಾಗಿ ಅತಿ ಎಚ್ಚರಿಕೆಯಿಂದ, ಅಡುಗೆಮನೆಯ ಪ್ರತಿ ಮೂಲೆ ಮೂಲೆಯನ್ನೂ ಶುಚಿಯಾಗಿಡಿ. ನಿಮ್ಮ ಈ ಶುಭ್ರತೆ ಗಮನಿಸಿ ಅತಿಥಿಗಳು ಮಾರುಹೋಗದೆ ಇರಲಾರರು.

ಹೈಜೀನ್ಮೇಂಟೇನ್ಮಾಡಿ

ತವಾ, ಬಾಣಲೆ, ಸೌಟು, ಸ್ಪಾಟುಲಾ, ತಟ್ಟೆ, ಬಟ್ಟಲು, ಚಮಚ….. ಯಾವುದೇ ಇರಲಿ, ಎಲ್ಲವನ್ನೂ ಆಗಾಗ ಬಿಸಿ ನೀರು ತುಂಬಿಸಿ, ಒಂದು ದೊಡ್ಡ ಟಬ್‌ ನಲ್ಲಿ ಮುಳುಗಿಸಿ, ಅದಕ್ಕೆ ತುಸು ಡಿಟರ್ಜೆಂಟ್‌ ಪೌಡರ್‌, ನಿಂಬೆರಸ, ಕಲ್ಲುಪ್ಪು, ಸೋಡ ಇತ್ಯಾದಿ ಸೇರಿಸಿ 1 ಗಂಟೆ ಕಾಲ ನೆನೆಸಿ ನಂತರ ನೀಟಾಗಿ ತೊಳೆಯಿರಿ. ಏಕೆಂದರೆ ಅಡುಗೆ ನಂತರ ಮುಸುರೆ ಪಾತ್ರೆಗಳನ್ನು ಎಷ್ಟೇ ನೀಟಾಗಿ ತೊಳೆದಿದ್ದರೂ, ಎಲ್ಲೋ ಮೂಲೆಯಲ್ಲಿ ಏನೋ ಒಂದು ಚೂರು ಜಿಡ್ಡು ಕರೆ ಕಾಣಿಸಿದರೆ ಕಸಿವಿಸಿ ಎನಿಸುತ್ತದೆ. ಅವನ್ನು ಹೀಗೆ ಮಾಡಿ ಸ್ವಚ್ಛಗೊಳಿಸಿ. ಇದರಿಂದಾಗಿ ಅದಕ್ಕೆ ತಗುಲಿದ ಬ್ಯಾಕ್ಟೀರಿಯಾ ಸಂಪೂರ್ಣ ತೊಲಗುತ್ತದೆ.

ಯಾವುದೇ ಪಾತ್ರೆ ಇರಲಿ, ಗಲೀಜಾಗಿ ಕಾಣಿಸದೆ ನೀಟಾಗಿರಲು ಈ ವಿಧಾನ ಅನುಸರಿಸಿ. ನಾನ್‌ ಸ್ಟಿಕ್‌ ವೇರ್‌ ಬಳಸುತ್ತೀರಾದರೆ, ಅದರ ಜೊತೆ ದೊರೆತ ಸ್ಪಾಟುಲಾ ಮಾತ್ರ ಬಳಸಿರಿ. ಬೇರೆ ಸ್ಟೀಲ್ ಮಗುಚೋ ಕೈ ಬೇಡ. ಅದಕ್ಕಾಗಿ ಕೊಟ್ಟಿರುವ ಬ್ರಶ್‌ ಮಾತ್ರ ಬಳಸಿರಿ. ಇಲ್ಲದಿದ್ದರೆ ಅದರ ನಾನ್‌ಸ್ಟಿಕ್‌ಕೋಟಿಂಗ್‌ಬಲು ಬೇಗ ಹಾಳಾದೀತು.ಹೀಗೆ ಅದರ ಕೋಟಿಂಗ್‌ಹೋಗಿಬಿಟ್ಟರೆ, ಅದನ್ನು ಎಸೆಯಲು ಮನಸ್ಸಾಗದೆ ಅಡುಗೆ ಮುಂದುವರಿಸಿದರೆ, ನಮ್ಮ ಆರೋಗ್ಯ ಹಾಳಾದೀತು. ಅಧಿಕ ಶಾಖ, ಮಗುಚೋ ಕೈನ ಸತತ ಕೆಲಸದಿಂದಾಗಿ, ಹಾಳಾದ ಕೋಟಿಂಗ್‌ ವ್ಯಂಜನದ ಜೊತೆಗೆ ಬೆರೆತು ಆರೋಗ್ಯ ಕೆಡಿಸುತ್ತದೆ.

Chimney

ಹಾಗೆಯೇ ಎಷ್ಟೋ ಸಲ ಕ್ಯಾರೆಟ್‌, ಬೀಟ್‌ ರೂಟ್‌ ಇತ್ಯಾದಿ ತುರಿದ ನಂತರ, ಅದರ ಮಣೆಯನ್ನು ಹಾಗೆಯೇ ಅಥವಾ ನೀರಲ್ಲಿ ತೊಳೆದು ಇಟ್ಟುಬಿಡುತ್ತಾರೆ. ಎಷ್ಟೋ ಕಡೆ ತರಕಾರಿ ಅಂಶ ಮೆತ್ತಿಕೊಂಡು ಹಾಗೆ ಉಳಿದುಬಿಡುತ್ತದೆ. ಅದು ಹಾಗೇ ಒಣಗಿಬಿಟ್ಟರೆ, ನಂತರ ಈ ಕಣಗಳನ್ನು ತೆಗೆಯುವುದು ಮತ್ತಷ್ಟು ಕಷ್ಟ. ಹೀಗಾಗಿ ಮೊದಲ ಸಲ ನಲ್ಲಿ ಅಡಿ ತೊಳೆದ ತಕ್ಷಣ, (ಅದಕ್ಕಾಗಿಯೇ ಇರಿಸಿದ) ಟೂತ್‌ ಬ್ರಶ್‌ ನಿಂದ  ಪ್ರತಿ ಕಣವನ್ನೂ ತೆಗೆದು ಶುಚಿಗೊಳಿಸಿ. ನೀರು ಸೋರಲೆಂದು ಒದ್ದೆ ಪಾತ್ರೆಗಳನ್ನು ಸ್ಟಾಂಡ್‌/ ಸ್ಲಾಬ್‌ ನಲ್ಲಿ ಹಾಗೇ ಬಿಡುತ್ತಾರೆ. ನೀರು ಪೂರ್ತಿ ಹೋಗದಿದ್ದಾಗ, ಅದರಿಂದ ಎಂಥದ್ದೋ ವಾಸನೆ ಬರತೊಡಗುತ್ತದೆ. ಇದರಿಂದಾಗಿ ಆ ಸ್ಟಾಂಡ್‌ ದುರ್ನಾತ ಬೀರುತ್ತದೆ. ಆದ್ದರಿಂದ ಆ ಸ್ಟಾಂಡ್‌ ನ್ನು ಚೆನ್ನಾಗಿ ಒರೆಸಿ, ಒಣಗಿಸಿ, ನಂತರ ಒಣ ಪಾತ್ರೆ ಬೋರಲು ಹಾಕಿಡಿ.

ಕಿಚನ್ನಲ್ಲಿ ಚಿಮಣಿ ಅತ್ಯಗತ್ಯ

ಎಷ್ಟೋ ಸಲ ಕೆಲವಾರು ಮನೆಗಳಲ್ಲಿ ಏನೋ ಒಂದು ರೀತಿಯ ವಿಚಿತ್ರ ವಾಸನೆ ಹರಡಿರುತ್ತದೆ, ಅದಕ್ಕೆ ಅಡುಗೆಮನೆಯ ಕೊಳಕೇ ಕಾರಣ. ಅಡುಗೆ ಮುಗಿಯುವ ಹೊತ್ತಿಗೆ ಗೃಹಿಣಿ ಬಹಳ ದಣಿದು ಹೋಗಿರುತ್ತಾಳೆ. ಆಗ ಅಡುಗೆಮನೆ ಸ್ಲಾಬ್‌ ಇತ್ಯಾದಿ ಒಂದೊಂದನ್ನೇ ಕ್ಲೀನ್‌ ಮಾಡುನಷ್ಟು ಸಹನೆಯೇ ಇರುವುದಿಲ್ಲ. ಹೀಗಾಗಿ ಕೆಲವರು ಕೈಗೆ ಸಿಕ್ಕಿದ ಬಟ್ಟೆ ತೆಗೆದುಕೊಂಡು, ಕಿಚನ್‌ಪ್ಲಾಟ್‌ ಫಾರಮ್ ಕ್ಲೀನ್‌ ಮಾಡಿಬಿಡುತ್ತಾರೆ. ಆ ಕಾರಣದಿಂದಾಗಿ ಆ ಇಡೀ ಭಾಗ ಕಲೆ, ಗುರುತು, ಅಂಟಂಟು, ಜಿಡ್ಡು ಇತ್ಯಾದಿ ಆಗಿಹೋಗುತ್ತದೆ. ಆ ಕಾರಣ ಅದರ ದುರ್ವಾಸನೆ ಇಡೀ ಮನೆಗೆ ಹರಡಿಕೊಳ್ಳುತ್ತದೆ.

ಈ ಚಿಮಣಿ ಅಡುಗೆಮನೆಯ ಶಾಖ, ಹೊಗೆ, ಒಗ್ಗರಣೆಯ ಘಾಟು ಇತ್ಯಾದಿಗಳನ್ನು ಸುಲಭವಾಗಿ ಹೊರಗೆಳೆದು ಬಿಡುತ್ತದೆ. ಇದರಿಂದಾಗಿ ಕಿಚನ್ನಿನ ವಾಸನೆಯು ಇಡೀ ಮನೆಯನ್ನು ಪ್ರಭಾವಿತಗೊಳಿಸಲು ಬಿಡುವುದಿಲ್ಲ. ಜೊತೆಗೆ ಸಿಂಕ್‌, ಓವನ್‌, ಕೌಂಟರ್‌ಟಾಪ್‌ ಇತ್ಯಾದಿಗಳ ಸ್ವಚ್ಛತೆಯೂ ಕಿಚನ್ನಿನ ಶುಭ್ರತೆಯಷ್ಟೇ ಮುಖ್ಯ. ಅಡುಗೆಮನೆ ಸ್ಲಾಬ್‌ ಅಥವಾ ನೆಲದ ಮೇಲೆ ಹರಡಿದ ತರಕಾರಿ ಸಿಪ್ಪೆ, ಮಸಾಲೆ ಘಾಟು, ಇನ್ನಿತರ ಏನೇ ಕೊಳಕಿರಲಿ, ಬೇಗ ಬೇಗ ಅವುಗಳನ್ನು ಶುಚಿಗೊಳಿಸಿ ಇಡಬೇಕು.

ಇಡೀ ಕಿಚನ್ನಿನ ಕೊಳಕನ್ನು ಹಾಗೇ ಒಣಗಲಿ ಎಂದು ಬಿಟ್ಟುಬಿಡುವುದು ಖಂಡಿತಾ ಸರಿಯಲ್ಲ. ಈ ಎ್ಲಾ ಕೊಳಕೂ ಸೇರಿ ನೊಣಗಳಿಗೆ ಔತಣ ಆಗುವ ಮುನ್ನ ಆಗಾಗ ಡೆಟಾಲ್ ‌ಅದ್ದಿದ ಬಟ್ಟೆಯಲ್ಲಿ ನೀಟಾಗಿ ಒರೆಸಿಡಿ. ಇನ್ನೊಂದು ಮುಖ್ಯ ವಿಷಯ ಅಂದ್ರೆ ಮಿಕ್ಸರ್‌ಜಾರ್‌ ನ ಸ್ವಚ್ಛತೆ. ಏಕೆಂದರೆ ಬ್ಲೆಂಡ್‌ ನ ಅಡಿಭಾಗದಲ್ಲೂ ಆಹಾರ ಪದಾರ್ಥ ಮೆತ್ತಿಕೊಳ್ಳುತ್ತದೆ. ಅಲ್ಲಿ ಬೆರಳು, ಬ್ರಶ್‌ ಎರಡೂ ಹೋಗದು. ಹೀಗಾಗಿ ಜಾರ್‌ ನ ಒಳಭಾಗಕ್ಕೆ ಉಪ್ಪು, ನಿಂಬೆರಸ ಬೆರೆತ ಬಿಸಿ ಬಿಸಿ ನೀರನ್ನು ತುಂಬಿಸಿಟ್ಟು ಸ್ವಲ್ಪ ಹೊತ್ತಿನ ನಂತರ ಕ್ಲೀನ್‌ ಮಾಡಬೇಕು. ಆಗ ಎಲ್ಲವೂ ನೀಟಾಗುತ್ತದೆ.

Jitni-Jagah

ಜಾಗವಿದ್ದಷ್ಟು ಸೌಲಭ್ಯಗಳು

ಅನಾರೋಗ್ಯಕರ ಕಿಚನ್‌, ಅಂಟಂಟಿನ ಉಪಕರಣ, ಕೊಳಕು ಪಾತ್ರೆಗಳು ರೋಗಗಳ ಗೂಡಾಗಲು ದಾರಿ. ಮಸಾಲ ಡಬ್ಬಿ, ಶೀಶೆಗಳ ಕಪ್‌, ಪ್ಲೇಟ್‌, ಬೌಲ್‌, ಗ್ಲಾಸ್‌, ಕಿಚನ್‌ ಟೈಲ್ಸ್, ಮೈಕ್ರೋವೇವ್‌, ಮಿಕ್ಸರ್‌, ಬ್ಲೆಂಡರ್‌ ಇತ್ಯಾದಿ ಎಲ್ಲವನ್ನೂ ದಿನದಿನ ಶುಚಿಯಾಗಿಡಬೇಕು. ಹಾಗೆಯೇ ಡೈನಿಂಗ್‌ ಟೇಬಲ್ ಗೆ ಬರುವ ಡಿನ್ನರ್‌ ಸೆಟ್‌, ಕ್ರಾಕರಿ ನೀಟಾಗಿ ಲಕಲಕ ಅಂತಿದ್ದಾಗ ಮಾತ್ರ ಬಂದ ಅತಿಥಿಗಳು ನಿರಾಳವಾಗಿ ಊಟ ಮಾಡುತ್ತಾರೆ. ಎಷ್ಟೋ ಸಲ ಕಿಚನ್‌ ನಲ್ಲಿ ಅನಗತ್ಯ ಸಾಮಗ್ರಿಗಳ ರಾಶಿಯೇ ತುಂಬಿರುತ್ತದೆ. ಇದರಿಂದಾಗಿ ಕಿಚನ್‌ ಕಿಷ್ಕಿಂಧೆಯಾಗಿ, ಬೇಗ ಬೇಗ ಕೊಳಕಾಗುತ್ತದೆ. ಅನಗತ್ಯ ಎನಿಸುವ ಪದಾರ್ಥಗಳನ್ನು ಬೇಕಾದವರಿಗೆ ಕೊಟ್ಟುಬಿಡಿ. ಕಿಚನ್‌ವನಲ್ಲಿ ಎಷ್ಟು ಜಾಗ ಹೆಚ್ಚಾಗಿ ಖಾಲಿ ಉಳಿಯುತ್ತದೋ, ಕೆಲಸ ಮಾಡಲು ಅಷ್ಟೇ ಅನುಕೂಲಕರ.

ಗಾಜಿನ ಬಟ್ಟಲು, ಪಾತ್ರೆ ಇತ್ಯಾದಿಗಳನ್ನು ಡಬಲ್ ಎಚ್ಚರಿಕೆಯಿಂದ ಬಳಸಬೇಕು. ಹೀಗೆ ಪ್ರತಿ ಬಳಕೆಯ ನಡುವೆಯೂ ಆಯಾ ಸಾಮಗ್ರಿಗಳನ್ನು ಜೋಪಾನ ಮಾಡುವುದರಿಂದ ಅದರ ಬಾಳಿಕೆ ದೀರ್ಘಕಾಲ ಬರುತ್ತದೆ. ಹೀಗೆ ನೀಟಾಗಿ ಶುಭ್ರಗೊಳಿಸಿದ ಗ್ಲಾಸ್‌, ತಟ್ಟೆಗಳಲ್ಲಿ ಬಡಿಸಲಾದ ಆಹಾರ, ಪಾನೀಯ ಬಂದರ ಮನಸ್ಸನ್ನು ಪ್ರಪಲ್ಲಿತಗೊಳಿಸುತ್ತದೆ. ಯಾವುದನ್ನು ನೀಟಾಗಿ ತೊಳೆದು ಒರೆಸಿರುವುದಿಲ್ಲವೇ, ಅದರಲ್ಲಿ ಅನಗತ್ಯ ದುರ್ನಾತ ಕಾಡದೇ ಇರದು. ನೀವು ಎಷ್ಟೇ ಕಷ್ಟಪಟ್ಟು ಅಡುಗೆ ಮಾಡಿದ್ದರೂ, ಈ ಸಣ್ಣಪುಟ್ಟ ಲೋಪ ದೋಷಗಳಿಂದಾಗಿ ಅದು ಮುಚ್ಚಿ ಹೋಗುತ್ತದೆ.

ಹಾಗೆಯೇ ಹಾಲು, ನೀರು ಸೇವಿಸುವ ಗ್ಲಾಸುಗಳು ನೀಟಾಗದಿದ್ದರೆ ತಮ್ಮ ಹೊಳಪು ಕಳೆದುಕೊಳ್ಳುತ್ತವೆ. ಅತಿಥಿಗಳ ಮುಂದೆ ಇವು ಬಂದಾಗ, ನೀವು ತಬ್ಬಿಬ್ಬು ಆಗಿಹೋಗ್ತೀರಿ. ಗ್ಲಾಸು ತೊಳೆದು ಬೋರಲು ಹಾಕಿ ಇರಿಸಿ ನಂತರ ನೀಟಾಗಿ ಒರೆಸಿ, ಆಮೇಲೆ ಬಳಸಲು ಕೊಡಿ. ಇದರಿಂದಾಗಿ ಗ್ಲಾಸ್‌, ಪಿಂಗಾ; ಲಕಲಕ ಹೊಳೆಯುತ್ತದೆ.

ಹಿತ್ತಾಳೆ, ತಾಮ್ರದ ಸಾಮಗ್ರಿ ಬಳಸುವ ಕಾಲ ಹೋಯಿತು. ಆದರೆ ಕೆಲವೊಂದು ಮನೆಗಳಲ್ಲಿ ಈಗಲೂ ಇದರ ಬಳಕೆ ಇದೆ. ಹೀಗಾಗಿ ಪ್ರತಿ ಬಳಕೆಯ ನಂತರ ಇನ್ನೂ ತಿಕ್ಕಿತೊಳೆದು ಹೊಳೆಯುವಂತೆ ಮಾಡಿಡಿ. ಇದಕ್ಕಾಗಿ ಪೀತಾಂಬರಿ ಪೌಡರ್‌ ಬಳಸುವುದು ಲೇಸು. ಬೆಳ್ಳಿ ದೀಪ, ಬಟ್ಟಲು ಇತ್ಯಾದಿಗಳನ್ನು ಶುಚಿಗೊಳಿಸು ಮೊದಲು ಅಗತ್ಯವಾಗಿ ಪೇಪರ್‌ ನಿಂದ ಉಜ್ಜಿ, ವಿಭೂತಿಯಿಂದ ತಿಕ್ಕಿದರೆ ಅದು ಹೊಳೆಯತ್ತದೆ.

ಬಿ. ಭಾವನಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ