ಆಲೂ ರೋಲ್ಸ್
ಬೇಕಾಗುವ ಸಾಮಗ್ರಿ
ಬೇಯಿಸಿದ ಆಲೂಗಡ್ಡೆ ೨, ಕಡಲೇಹಿಟ್ಟು ೨ ಚಮಚ, ಅಕ್ಕಿಹಿಟ್ಟು ೧ ಚಮಚ, ಚಿರೋಟಿ ರವೆ ೧ ಚಮಚ, ಚಿಲ್ಲಿ ಪೌಡರ್ ೧/೨ ಚಮಚ, ಗರಂ ಮಸಾಲ ೧/೪ ಚಮಚ, ಓಂಕಾಳು ೧/೪ ಚಮಚ, ರುಚಿಗೆ ಉಪ್ಪು.
ಮಾಡುವ ವಿಧಾನ
ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಕಡಲೆಹಿಟ್ಟು ಅಕ್ಕಿಹಿಟ್ಟು, ಚಿರೋಟಿ ರವೆ, ಚಿಲ್ಲಿ ಪೌಡರ್, ಗರಂ ಮಸಾಲಾ , ಓಂಕಾಳು, ಉಪ್ಪು ಸೇರಿಸಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಬಟರ್ ಪೇಪರ್ ಮೇಲೆ ರೋಲ್ ಗಳ ಆಕಾರಕ್ಕೆ ಕತ್ತರಿಸಿ , ಕಾದ ಎಣ್ಣೆಯಲ್ಲಿ ಮೀಡಿಯಂ ಫ್ಲೇಮ್ ನಲ್ಲಿ ಡೀಪ್ ಫ್ರೈ ಮಾಡಿ. ಕ್ರಿಸ್ಪಿ ಆಲೂ ರೋಲ್ಸ್ ಟೊಮ್ಯಾಟೋ ಕೆಚಪ್ ನೊಂದಿಗೆ ಸವಿಯಿರಿ.
– ಕಾವ್ಯಾ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





