ಸಬ್ಬಸಿಗೆ ಸೊಪ್ಪಿನ ಮಜ್ಜಿಗೆ ಹುಳಿ 

ಬೇಕಾದ ಸಾಮಗ್ರಿ 

 ಸಣ್ಣಗೆ ಕೊಚ್ಚಿದ ಸಬ್ಬಸ್ಸಿಗೆ ಸೊಪ್ಪು ೧ ಕಪ್, ಕಡೆದ ಮೊಸರು ೨ ಕಪ್, ನೆನೆಸಿದ ಕಡಲೆಬೇಳೆ ೧/೨ ಕಪ್, ದನಿಯ ೧ ಚಮಚ, ಜೀರಿಗೆ ೧ ಚಮಚ, ಶುಂಠಿ ಸಣ್ಣ ತುಂಡು, ತೆಂಗಿನತುರಿ ೨ ಚಮಚ, ಒಣಮೆಣಸಿನಕಾಯಿ ೪-೫, ರುಚಿಗೆ ತಕ್ಕಷ್ಟು ಉಪ್ಪು. 

 ಮಾಡುವ ವಿಧಾನ

ಸೊಪ್ಪನ್ನು ೨ ಕಪ್ ನೀರು ಹಾಕಿ ಬೇಯಲು ಇಡಿ.  ಮಸಾಲೆಗೆ ಕಡಲೆಬೇಳೆ, ದನಿಯ, ಜೀರಿಗೆ, ಶುಂಠಿ, ತೆಂಗಿನತುರಿ, ಒಣಮೆಣಸಿನಕಾಯಿ ಸ್ವಲ್ಪ ನೀರು  ಸೇರಿಸಿ  ರುಬ್ಬಿಟ್ಟುಕೊಳ್ಳಿ. ಸೊಪ್ಪು ಅರ್ಧ ಬೆಂದಾಗ ರುಬ್ಬಿದ ಮಸಾಲೆ, ಚಿಟಿಕೆ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಸಾಲೆಯ ಹಸಿ ವಾಸನೆ ಹೋಗುವವರೆಗೆ ಸುಮಾರು ೫ ನಿಮಿಷ ಸಣ್ಣ ಉರಿಯಲ್ಲಿಇಟ್ಟು ಕೈಯಾಡುತ್ತಿರಿ . ನಂತರ ಕಡೆದ ಮೊಸರನ್ನು ನಿಧಾನವಾಗಿ ಬೆರೆಸಿ, ಉರಿ ಆರಿಸಿ, ಸಾಸಿವೆ, ಇಂಗಿನ ಒಗ್ಗರಣೆ ಕೊಡಿ.

ಕಾವ್ಯಾ ಭಾರದ್ವಾಜ್ 

Kavyaa Bharadwaj (4)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ