ಮಿಲ್ಕ್ ಚಪಾತಿ
ಬೇಕಾಗುವ ಸಾಮಗ್ರಿ :
ಗೋಧಿ ಹಿಟ್ಟು ೨ ಕಪ್, ಮಿಲ್ಕ್ ಪೌಡರ್ ೪ ಚಮಚ, ಸಕ್ಕರೆ ಪುಡಿ ೨ ಚಮಚ, ಉಪ್ಪು ೧/೨ ಚಮಚ, ಹಾಲು ೧ ಕಪ್, ತುಪ್ಪ ಸ್ವಲ್ಪ .
ಮಾಡುವ ವಿಧಾನ :
ಗೋಧಿಹಿಟ್ಟಿಗೆ ಮಿಲ್ಕ್ ಪೌಡರ್, ಸಕ್ಕರೆ, ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಂಡು ಅಗತ್ಯ ಬಿದ್ದಷ್ಟು ಬೆಚ್ಚಗಿನ ಹಾಲನ್ನು ಸೇರಿಸಿ ಚಪಾತಿ ಹಿಟ್ಟನ್ನು ಕಲಸಿ, ಮೇಲೆ ಒಂದು ಚಮಚ ತುಪ್ಪ ಸವರಿ ಹತ್ತು ನಿಮಿಷ ಮುಚ್ಚಿಡಿ. ನಂತರ ಹಿಟ್ಟನ್ನು ಮತ್ತೊಮ್ಮೆ ನಾದಿ. ಸಣ್ಣ ಉಂಡೆಗಳಾಗಿ ಮಾಡಿಕೊಂಡು , ಪ್ರತಿ ಉಂಡೆಯನ್ನು ಲಟ್ಟಿಸಿ ತುಪ್ಪ ಸವರಿ ನಂತರ ೪ ಮಡಿಕೆ ಮಡಿಚಿ ಚೌಕಾಕಾರಕ್ಕೆ ಲಟ್ಟಿಸಿ ಎರಡೂ ಬದಿಗೆ ತುಪ್ಪ ಹಚ್ಚಿ ಬೇಯಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





