– ರಾಘವೇಂದ್ರ ಅಡಿಗ ಎಚ್ಚೆನ್.
ಛತ್ರಪತಿ ಫಿಲ್ಮಂ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಗಣಪತಿ ಪಾಟೀಲ್ ನಿರ್ಮಾಣ ಮಾಡಿರುವ ” ಕೌಟಿಲ್ಯ” ಸೇರಿದಂತೆ ಕೆಲವು ಸಿನಿಮಾ ನಿರ್ದೇಶನ ಮಾಡಿರುವ ಪ್ರಭಾಕರ್ ಶೇರಖಾನೆ ನಿರ್ದೇಶನದ ” ಸಾಮ್ರಾಟ್” ಚಿತ್ರದ ಟೈಟಲ್ ಅನಾವರಣ ಹಾಗೂ ಮೋಷನ್ ಪೋಸ್ಟರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ಚಿತ್ರದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ಅನ್ನು ಮಾಜಿ ಪೋಲಿಸ್ ಅಧಿಕಾರಿ, ನಟ ಬಿ.ಸಿ. ಪಾಟೀಲ್ ಅನಾವರಣ ಮಾಡಿದರು .
ಕೆಲವು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಬಹುದೊಡ್ಡ ಸುದ್ದಿ ಆಗಿದ್ದ ಒಂದು ಪ್ರೇಮ ಪ್ರಕರಣ ಈ ಚಿತ್ರದ ಕಥಾವಸ್ತು. ಹಿಂದೂ ಮುಸ್ಲಿಂ ಧಾರ್ಮಿಕ ಸಂಘರ್ಷ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. ರಕ್ತದಲ್ಲಿ ಬರೆಯಲ್ಪಟ್ಟ ಸಾಮ್ರಾಜ್ಯ ಎನ್ನುವ ಸಬ್ ಟೈಟಲ್ ಚಿತ್ರದ ಕುರಿತು ಕುತೂಹಲ ಮೂಡಿಸಿದೆ.

ನಿರ್ದೇಶಕ ಪ್ರಭಾಕರ್ ಶೇರಖಾನೆ ಅವರೇ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ .ಈ ಮುನ್ನ ‘ ಇನಾಂದಾರ್ ‘ ಚಿತ್ರದ ಮೂಲಕ ಕಾಣಿಸಿಕೊಂದ್ದ ನಟ ರಂಜನ್ ಛತ್ರಪತಿ ‘ ಸಾಮ್ರಾಟ್ ‘ ಚಿತ್ರದ ನಾಯಕ ಆಗಿದ್ದಾರೆ .
‘ಸೋಮು ಸೌಂಡ್ ಇಂಜಿನಿಯರ್’, ‘ಕ್ಯಾಲೆಂಡರ್’ ಖ್ಯಾತಿಯ ನಟಿ ನಿವಿಷ್ಕಾ ಪಾಟೀಲ್ ಈ ಚಿತ್ರದ ನಾಯಕಿ.
ಚಿತ್ರಕ್ಕೆ ಅಜಯ್ ಶ್ರೀನಿವಾಸ ಮೂರ್ತಿ ಸಂಗೀತ ನೀಡಿದ್ದಾರೆ. ಕವಿರತ್ನ ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ಚೇತನ ಕುಮಾರ್ ಸಾಹಿತ್ಯದಲ್ಲಿ ಹಾಡು ಮೂಡಿಬರಲಿದೆ. ಅರುಣ್ ಸುಶೀಲ ಛಾಯಾಗ್ರಹಣ,ಶ್ರಿನಿವಾಸ ಕಲಾಲ್ ಸಂಕಲನ ಚಿತ್ರಕ್ಕಿದೆ. ಆಶಾ ಶೇರಖಾನೆ ಚಿತ್ರದ ಪಾತ್ರವರ್ಗದ ವಸ್ತ್ರ ವಿನ್ಯಾಸ ಮಾಡಿದ್ದಾರೆ.





