ಚಿಕ್ಕವನಿದ್ದಾಗಿನಿಂದ ಇವತ್ತಿನವರೆಗೂ ಅಮ್ಮ ಹೇಳುತ್ತಿದ್ದ ಒಂದು ಮಾತು ಮಾತ್ರ ಎಂದಿಗೂ ಬದಲಾಗಲಿಲ್ಲ…

“ಹಾಗೆ ಮಾಡ್ಬೇಡ… 4 ಜನ ಏನು ಅಂದುಕೊಳ್ತಾರೆ!”

ಹೊಸ ಡ್ರೆಸ್ ಹಾಕಿದ್ರೂ… “4 ಜನ ಏನು ಅಂದುಕೊಳ್ತಾರೆ?”

ಜೋರಾಗಿ ನಕ್ಕರೂ… “4 ಜನ ಏನು ಅಂದುಕೊಳ್ತಾರೆ?”

ಹಾಡು ಹಾಡಿದ್ರೂ… “4 ಜನ ಏನು ಅಂದುಕೊಳ್ತಾರೆ?”

ಕಾಲೇಜು ಬಿಟ್ಟು ಮನೆಗೆ ಬರುವಾಗ 1sec ಲೇಟ್ ಬಂದರೂ… “4 ಜನ ಏನು ಅಂದುಕೊಳ್ತಾರೆ?”

indian-happy-rural-family-village-260nw-2456446353

ಒಮ್ಮೆ ತಮಾಷೆಗೆ ಕೇಳಿದೆ… “ಅಮ್ಮಾ… ಈ 4 ಜನ ಯಾರು? ಅವರ ಹೆಸರು-ವಿಳಾಸ ಕೊಡು… ಒಮ್ಮೆ ಭೇಟಿಯಾಗಿ ಬರ್ತೀನಿ!”

ಆ ದಿನದಿಂದ ಇವತ್ತಿನವರೆಗೂ ಹುಡುಕುತ್ತಿದ್ದೇನೆ… ಆದರೆ ಆ ನಾಲ್ಕು ಜನ ಮಾತ್ರ ಎಲ್ಲೂ ಸಿಕ್ಕಿಲ್ಲ!

ಆಶ್ಚರ್ಯ ಏನೆಂದರೆ… ನಮ್ಮ ಸಂತೋಷದಲ್ಲಿ ಅವರು ಕಾಣಿಸುವುದಿಲ್ಲ… ನಮ್ಮ ಕಷ್ಟದಲ್ಲಿ ಅವರು ನೆರವಾಗುವುದಿಲ್ಲ… ಸಾಲ ತೀರಿಸುವುದಿಲ್ಲ… ಬಿಲ್ ಕಟ್ಟುವುದಿಲ್ಲ… ಆದರೂ ನಮ್ಮ ಜೀವನದ ಪ್ರತಿಯೊಂದು ನಿರ್ಧಾರದಲ್ಲೂ ಅವರಿಗೇ ದೊಡ್ಡ ಸ್ಥಾನ!

ಹಾಗಾಗಿ ಒಂದು ನಿರ್ಧಾರ ಮಾಡಿದ್ದೇನೆ…

ಇನ್ನು ಮುಂದೆ ಆ “4 ಜನ”ಗಾಗಿ ಅಲ್ಲ… ನಮ್ಮ ಮನಸ್ಸಿಗೆ ನೆಮ್ಮದಿ ಕೊಡುವ, ನಮ್ಮವರಿಗಾಗಿ ಬದುಕೋಣ!

ಇನ್ನೂ ಯಾರಿಗಾದರೂ ಆ 4 ಜನ ಸಿಕ್ಕಿದ್ರೆ… ದಯವಿಟ್ಟು ನನಗೂ ಪರಿಚಯ ಮಾಡಿಸಿ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ