ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಗೃಹಶೋಭಾ ಎಂಪವರ್ ಹರ್ ಇವೆಂಟ್’ನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ, ಕಳೆದ ತಿಂಗಳು ಜುಲೈ 25 ರಂದು ಈ ಕಾರ್ಯಕ್ರಮವನ್ನು ಬೆಂಗಳೂರಿನ ಲಲಿತ್ ಅಶೋಕ್‌ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ಆಗಮಿಸಿದ್ದ 200ಕ್ಕೂ ಹೆಚ್ಚಿನ ಮಹಿಳಾ ಪ್ರೇಕ್ಷಕರು ಬಹು ಉತ್ಸಾಹದಿಂದ ಇವೆಂಟ್ ನಲ್ಲಿ ಭಾಗವಹಿಸಿದರು.
ಗೃಹಶೋಭಾದ ಮುಖ್ಯ ಗುರಿ ಮಹಿಳಾ ಸಶಕ್ತೀಕರಣ. ಇದನ್ನೇ ಪ್ರಧಾನವಾಗಿ ನೆರವೇರಿಸಲು ದೇಶವಿಡೀ ಈ `ಎಂಪವರ್ ಮೆಂಟ್ ಹರ್’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಆ್ಯಂಕರ್ ಸಮೀರಾ ಖಾನ್ ಕಾರ್ಯಕ್ರಮದ ರೂಪುರೇಷೆ ವಿವರಿಸುತ್ತಾ, ಎಲ್ಲಾ ಅತಿಥಿಗಳನ್ನೂ ಅಭಿನಂದಿಸುತ್ತಾ, ಎಲ್ಲಾ ಪಾರ್ಟ್ ನರ್ಸ್ ಹಾಗೂ ಸ್ಪಾನ್ಸರ್ಸ್ ರನ್ನು ಪರಿಚಯಿಸಿದರು.

ಏಷ್ಯನ್ ಪೇಂಟ್ಸ್ : ಹೋಮ್ ಡೆಕೋರ್ ಪಾರ್ಟ್ ನರ್
ಕಿಸ್ನಾ ಡೈಮಂಡ್ ಗೋಲ್ಡ್ ಜ್ಯೂವೆಲರಿ : ಜ್ಯೂವೆಲರಿ ಪಾರ್ಟ್‌ನರ್
ಸಿಲ್ಕ್ ಪ್ಯೂರಿಟಿ ಪಾರ್ಟ್ ನರ್ : ಸಿಲ್ಕ್ ಮಾರ್ಕ್
ಹೆಲ್ತ್ ಕೇರ್ ಪಾರ್ಟ್ ನರ್ : ಮಿರರ್
ಅಫಿಶಿಯಲ್ EV ಪಾರ್ಟ್ ನರ್ : ಆ್ಯಂಪೇರ್
ಚಿಟ್ ಫಂಡ್ ಪಾರ್ಟ್ ನರ್ : MSIL ಚಿಟ್ಸ್
ಅಸೋಸಿಯೇಟ್ ಸ್ಪಾನ್ಸರ್ : ಮೈಸೂರು ಸ್ಯಾಂಡಲ್ ಸೋಪ್ಸ್
ಇವೆಂಟ್ ನ ಆರಂಭದಲ್ಲಿ ಡೆಲ್ಲಿ ಪ್ರೆಸ್ ಗ್ರೂಪ್ ನ ಚೀಫ್ ಆಪರೇಟಿಂಗ್ ಆಫೀಸರ್ ಶೈಲೇಶ್ ಶ್ರೀವಾಸ್ತವ್, ವುಮನ್ ಎಂಪವರ್ ಮೆಂಟ್ ಕಮ್ಯುನಿಟಿ ಬಿಲ್ಡಿಂಗ್ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಡೆಲ್ಲಿ ಪ್ರೆಸ್ ಪರವಾಗಿ ಸಭಿಕರಿಗೆ ಮಹಿಳಾ ಸಶಕ್ತೀಕರಣದ ಸಂದೇಶವನ್ನು ನೀಡಿದರು. ಈ ಇವೆಂಟ್ ಗೆ ಆಧುನಿಕ ನಟಿ ಸಾತ್ವಿಕಾ ಆಗಮಿಸಿದ್ದು, ಸಭಾಸದರಲ್ಲಿ ಹೊಸ ರೋಮಾಂಚನ ಉಂಟು ಮಾಡಿತ್ತು. ಎಲ್ಲರಿಗೂ ಕೈ ಬೀಸುತ್ತಾ, ಸಭಿಕರನ್ನು ಅಭಿನಂದಿಸಿದ ಆಕೆ, ಕಾರ್ಯಕ್ರಮದ ಶುಭಾರಂಭಕ್ಕೆ ನಾಂದಿ ಹಾಡಿದರು.
ಹೋಮ್ ಡೆಕೋರ್ ಇಂಟಿರೀಯರ್ಸ್ ಸೆಶನ್ : ಈ ಸೆಶನ್ ನಲ್ಲಿ ಸಭಿಕರಿಗೆ ಗೃಹಾಲಂಕಾರದ ಕುರಿತಾಗಿ ಸಾದ್ಯಂತರವಾಗಿ ವಿವರಿಸಿದ ಅಂಬಿಕಾ ಮೂಡಪಲ್ಲಿ, ಗೃಹಿಣಿ/ಉದ್ಯೋಗಸ್ಥ ವನಿತೆ ತನ್ನ ಮನೆಯ ಗೃಹಾಲಂಕಾರದ ಕುರಿತಾಗಿ ಎಷ್ಟೆಲ್ಲ ಆತಂಕ ಪಟ್ಟುಕೊಳ್ಳುತ್ತಾಳೆ, ಅದನ್ನು ಹೇಗೆ ಸರಳವಾಗಿ ನಿವಾರಿಸಿಕೊಳ್ಳಬಹುದು ಎಂದು ತಮ್ಮ ಹಲವು ದಶಕಗಳ ಅನುಭವವನ್ನು ವಿವರಿಸಿದರು. ಡಿಸೈನರ್ ಸ್ಪಾಟ್ ಇವರ ಅವಾರ್ಡ್ ವಿನ್ನಿಂಗ್ ಇಂಟೀರಿಯರ್ ಆರ್ಕಿಟೆಕ್ಚರ್ ಫರ್ಮ್ ಆಗಿದ್ದು, ಬೆಂಗಳೂರು ಇನ್ನಿತರ ಹಲವು ಮಹಾನಗರಗಳ ಬೃಹತ್ ಕಟ್ಟಡ, ಮನೆಗಳ ಒಳಾಂಗಣ ವಿನ್ಯಾಸಕ್ಕೆ ಖ್ಯಾತರಾಗಿದ್ದಾರೆ. ಇವರು ಸಭಿಕರೊಂದಿಗೆ ಬಹಳಷ್ಟು ಬ್ಯೂಟಿ ಡೆಕೋರ್ ಐಡಿಯಾಗಳನ್ನು ಹಂಚಿಕೊಂಡು, ಹಲವು ಅಮೂಲ್ಯ ಸಲಹೆಗಳನ್ನು ನೀಡಿದರು. ಇದನ್ನು ಎಲ್ಲರೂ ಸುಲಭವಾಗಿ ತಮ್ಮ ಬಜೆಟ್ ನಲ್ಲಿ ಮ್ಯಾನೇಜ್ ಮಾಡಬಹುದು. ನಂತರ ಗೃಹಾಲಂಕರಾದ ಕುರಿತಾದ ಸಭಿಕರ ಎಲ್ಲಾ ಸಂದೇಹಗಳನ್ನು ನಿವಾರಿಸಿದರು.

ನಂತರ ಈ ಸೆಶನ್ ಕೊನೆಯಲ್ಲಿ ರಾಯಲ್ ಪ್ಲೇ ಏಷ್ಯನ್ ಪೇಂಟ್ಸ್ ನ ಎಗ್ಸಿಕ್ಯುಟಿವ್ ಸಾಲೋಮನ್ ವೇದಿಕೆಗೆ ಬಂದು, ಏಷ್ಯನ್ ಪೇಂಟ್ಸ್ ರಾಯ್ ನ ನ್ಯೂ ಲಗ್ಶುರಿ ಟೆಫ್ಲಾನ್ ಸರ್ಫೇಸ್ ಟೆಕ್ನಾಲಜಿ ಕುರಿತಾಗಿ ವಿವರಿಸಿ, 8 ವರ್ಷಗಳ ವಾರಂಟಿ ಬಗ್ಗೆಯೂ ತಿಳಿಸಿದರು. ಜೊತೆಗೆ ಪೇಂಟ್ಸ್ ಕುರಿತ ಕುತೂಹಲಕರ ರಸಪ್ರಶ್ನೆಗಳಿಗೆ ಉತ್ತರಿಸಿದ ಹಲವಾರು ಹೆಂಗಸರಿಗೆ ಮನಮೋಹಕ ಉಡುಗೊರೆ ವಿತರಿಸಿದರು.
ಪರ್ಸನಲ್ ಗ್ರೋಥ್ ಕಾನ್ಛಿಡೆನ್ಸ್ ಸೆಶನ್ : ಈ ಸೆಶನ್ ನಲ್ಲಿ ಗೀತಾ ಎಚ್. ಶೆಟ್ಟಿ, ಗ್ರೂಮಿಂಗ್ ಗುರುಕಲ್ ಪ್ರೈ.ಲಿ.ನ MD ಹಾಗೂ ಸಂಸ್ಥಾಪಕಿ, ಮಹಿಳೆಯರ ಪರ್ಸನಲ್ ಗ್ರೋಥ್, ಗ್ರೂಮಿಂಗ್, ಅದರ ಮಹತ್ವದ ಕುರಿತಾಗಿ ಸಾದ್ಯಂತರವಾಗಿ ವಿವರಿಸಿ, ಬಂದಿದ್ದ ಅತಿಥಿಗಳ ಆತ್ಮವಿಶ್ವಾಸ ಹೆಚ್ಚಿಸಿದರು. ತಮ್ಮ ಇನ್ ಸ್ಪೈರಿಂಗ್ ಸಂವಾದದಿಂದ ಅತಿಥಿಗಳನ್ನು ಮೋಟಿವೇಟ್ ಮಾಡಿದರು.

ತಮ್ಮ ಐಡಿಯಾಗಳನ್ನು ಅವರೊಂದಿಗೆ ಹಂಚಿಕೊಂಡು, ಅವರ ಕಾನ್ಛಿಡೆನ್ಸ್ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಈ ರೀತಿ ಬಂದಿದ್ದ ಮಹಿಳೆಯರಿಗೆ ತಮ್ಮ ಜೀವನದಲ್ಲಿ ಮುಂದಿನ ಪರ್ಸನಲ್ ಗ್ರೋಥ್, ಗ್ರೂಮಿಂಗ್ ನಿಂದ ತಾವು ಕಂಡ ಕನಸು ನನಸಾಗಿಸಿಕೊಳ್ಳಲು ಉನ್ನತ ಸಲಹೆಗಳನ್ನು ನೀಡಿದರು.
ಮಿರರ್ ಸೆಶನ್ : ಮಹಿಳೆಯರ ಆರೋಗ್ಯದ ಕುರಿತಾಗಿ ಪರ್ಸನಲ್ ಕೇರ್ ತೆಗೆದುಕೊಳ್ಳುವ ತಂಡವಾಗಿ ಮಿರರ್ ನ ಆಶಾ, ಡಾ. ಸ್ಮಿತಾ ಮತ್ತಿತರರು ಸ್ತ್ರೀ ಸ್ವಾಸ್ಥ್ಯ ಸಮಸ್ಯೆಗಳು, ಅದರಲ್ಲೂ ಮುಟ್ಟಂತ್ಯ, ಮೆನೋಪಾಸ್ ನ ಸೈಡ್ ಎಫೆಕ್ಟ್ ಇತ್ಯಾದಿಗಳ ಬಗ್ಗೆ ವಿವರವಾಗಿ ತಿಳಿಸಿದರು.

ಇದರ ಸಂಸ್ಥಾಪಕ ಸಂಚಿತ್, ಹೆಂಗಸರ ಈ ಸಮಸ್ಯೆಗಳ ನಿವಾರಣೆಗಾಗಿ ತಮ್ಮ ಮಿರರ್ ಕಮ್ಯುನಿಟಿ ಸದಸ್ಯರಾಗಿ ಸಲಹೆ ಪಡೆಯಲು ತಿಳಿಸಿದರು.
ಸಿಲ್ಕ್ ಮಾರ್ಕ್ ಸೆಶನ್ : ಸೆಂಟ್ರಲ್ ಸಿಲ್ಕ್ ಬೋರ್ಡ್ ನ ವತಿಯಿಂದ ಹಿರಿಯ ಅಧಿಕಾರಿ ಹೇಮಾಶ್ರೀ ರೇಷ್ಮೆ ಸೀರೆಗಳಲ್ಲಿ `ಸಿಲ್ಕ್ ಮಾರ್ಕ್’ನ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ಕಕೂನ್ ನಿಂದ ಸೀರೆಯ ನೇಯ್ಗೆಯವರೆಗೆ ವಿವರಿಸಿದ ಅವರು, ಗ್ರಾಹಕರು ರೇಷ್ಮೆ ಸೀರೆ ಕೊಳ್ಳುವಾಗ ಅದರ ಗುಣಮಟ್ಟದ ಖಚಿತತೆಯ ಬಗ್ಗೆ ಗ್ಯಾರಂಟಿ ಹೊಂದಲು, `ಸಿಲ್ಕ್ ಮಾರ್ಕ್’ ಲೇಬಲ್ ಇರುವಂಥ ಮಳಿಗೆಯಿಂದಲೇ ಕೊಳ್ಳಬೇಕು ಎಂದು ತಿಳಿಸಿಕೊಟ್ಟರು. ಜೊತೆಗೆ ಸ್ವಾರಸ್ಯಕರ ರಸಪ್ರಶ್ನೆ ಕೇಳಿ, ಸಭಿಕರಿಗೆ ಅನೇಕ ಉಡುಗೊರೆ ಹಂಚಿದರು.
ಭರತನಾಟ್ಯದ ಸೆಶನ್ : ಆ ನಂತರ ಶಾಸ್ತ್ರೀಯ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಭರತನಾಟ್ಯದ ಈ ಮೇರು ಪ್ರದರ್ಶನವನ್ನು ಶಾಸ್ತ್ರೀಯ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಸುಮಾ ಪ್ರಭು, ತಮ್ಮ ಮಗಳು ಅದಿತಿ ಪ್ರಭು ಜೊತೆ ಅದ್ಭುತವಾಗಿ ಪ್ರದರ್ಶಿಸಿದರು.

ಮೊದಲು ಗಣೇಶ ಸ್ತುತಿ, ನಂತರ ಭೂದೇವಿ, ಶಿವ, ಸರಸ್ವತಿ ಹಾಗೂ ಕೊನೆಯದಾಗಿ ಅಷ್ಟದಿಕ್ಪಾಲಕರಿಗೆ ನೃತ್ಯಾಂಜಲಿಯನ್ನು ಅರ್ಪಿಸಿ, ಪ್ರೇಕ್ಷಕರಿಂದ ಪ್ರಚಂಡ ಕರತಾಡನ ಗಿಟ್ಟಿಸಿದರು.
ಕೆರಿಯರ್, ಲೀಡರ್ ಶಿಪ್ ಮೋಟಿವೇಶನ್ ಸೆಶನ್ : ಮುಂದಿನ ಸೆಶನ್ ನಲ್ಲಿ ಎಂಟ್ರಪ್ರಿನರ್ ಶಿಪ್ ನಲ್ಲಿ ಮೇರು ಸಾಧನೆ ಮಾಡಿದಂಥ ಸ್ವಪ್ನಾ ಅರುಣ್, ಅತಿಥಿಗಳಿಗೆ ತಮ್ಮ `ಮದರ್ ಹುಡ್ ಫುಡ್ಸ್’ ಕಂಪನಿ ನಡೆದುಬಂದ ಬಗೆಯನ್ನು ವಿವರಿಸಿದರು. ಒಬ್ಬ ಸಾಮಾನ್ಯ ಗೃಹಿಣಿ, 3 ಮಕ್ಕಳ ತಾಯಿಯಾಗಿ ಈ ಕಂಪನಿ ಆರಂಭಿಸಿದ ಈಕೆ ತಮ್ಮ ಕನಸನ್ನು ನನಸಾಗಿಸಿಕೊಂಡ ಬಗ್ಗೆ, ಅದಕ್ಕಾಗಿ ತಾವು ಒಂದು ಸಣ್ಣ ಗ್ಯಾರೇಜ್ ನಿಂದ ಆರಂಭಿಸಿ, ಇಂದು ಬೆಂಗಳೂರಿನ ಕುಂಬಳಗೋಡಿನಲ್ಲಿ ಪ್ರಧಾನವಾಗಿ ಬೆಳೆದು ಬಂದ ಬಗ್ಗೆ ತಿಳಿಸಿದರು.

ಇಷ್ಟರಲ್ಲಿ ಹೈದರಬಾದ್, ಮುಂಬೈ, ಪ್ಯಾನ್ ಇಂಡಿಯಾ ರೀಚ್ ಆಗಲಿದ್ದಾರೆ. ಸಾಧಾರಣ ದೋಸೆ, ಇಡ್ಲಿ ಬ್ಯಾಟರ್ ನಿಂದ ಆರಂಭಿಸಿ, ಇಂದು ಸಾವಿರಾರು ಬಗೆಯ ಫುಡ್ ಐಟಂ ಸಪ್ಲೈ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ತಾನು ಕಾಣುವ ಕನಸನ್ನು ನನಸಾಗಿಸಲು ಹೇಗೆ ಶ್ರಮಿಸಬೇಕು ಎಂದು ಸಭಿಕರಿಗೆ ಮನವರಿಕೆ ಮಾಡಿಕೊಟ್ಟು, ಆ ಕುರಿತ ಅವರ ಸಂದೇಹಗಳನ್ನು ನಿವಾರಿಸಿದರು.
ಗ್ಲಾಮರಸ್ ಸಾತ್ವಿಕಾ : ಇಡೀ ಕಾರ್ಯಕ್ರಮಕ್ಕೆ ಹೈಲೈಟ್ ಆಗಿ ಆಧುನಿಕ ನಟಿ ಸಾತ್ವಿಕಾ ಆಗಮಿಸಿದಾಗ, ಪ್ರೇಕ್ಷಕರು ಪ್ರಚಂಡ ಕರತಾಡನದಿಂದ ಬರಮಾಡಿಕೊಂಡರು. ಈಕೆ ಇಡೀ ಇವೆಂಟ್ ಪೂರ್ತಿ ಹಾಜರಿದ್ದು, ಪ್ರಮುಖ ಸೆಲೆಬ್ಸ್ ಗೆ ನೆನಪಿನ ಕಾಣಿಕೆ ವಿತರಿಸಿದರು.

`ರೋಸ್’ ಚಿತ್ರದಿಂದ ತಮ್ಮ ಜರ್ನಿ ಆರಂಭಿಸಿ ಇತ್ತೀಚಿನ `ಮೋಡ ಕವಿದ ವಾತಾವರಣ’ ಚಿತ್ರದವರೆಗಿನ ಅನುಭವ ಹಂಚಿಕೊಂಡು, ಪ್ರೇಕ್ಷಕರೊಂದಿಗೆ ನೂರಾರು ಸೆಲ್ಛಿಗಳಿಂದ ಸಂಭ್ರಮಿಸಿದರು.
ಕಿಸ್ನಾ ಡೈಮಂಡ್ ಗೋಲ್ಡ್ ಜ್ಯೂವೆಲರಿ ಲಕ್ಕಿ ಡ್ರಾ : ಕಿಸ್ನಾ ಡೈಮಂಡ್ ಗೋಲ್ಡ್ ಜ್ಯೂವೆಲರಿ ಪರವಾಗಿ, ಏರಿಯಾ ಆಪರೇಶನ್ ಮ್ಯಾನೇಜರ್ ಸಿ. ರವಿಕುಮಾರ್ ಬಂದು ಮಾತನಾಡಿ, ಒಂದು ಲಕ್ಕಿ ಡ್ರಾ ಏರ್ಪಡಿಸಿದರು. ವಿಜೇತರನ್ನು ನಟಿ ಸಾತ್ವಿಕಾ ಲಕ್ಕಿ ಡ್ರಾ ಮೂಲಕ ಆರಿಸಿದರು. ವಿಜೇತರಿಗೆ ಡೈಮಂಡ್ ಪೆಂಡೆಂಟ್ ಬಂಪರ್ ಬಹುಮಾನವಾಗಿ ದೊರಕಿತು.

ಇದಾದ ನಂತರ ಅತಿಥಿಗಳೆಲ್ಲರೂ ಗ್ರಾಂಡ್ ಲಂಚ್ ಸೇವಿಸಿ, ಅಪಾರ ಉಡುಗೊರೆ ತುಂಬಿದ್ದ ಗುಡೀ ಬ್ಯಾಗ್ ಸ್ವೀಕರಿಸಿ, ಸಂತಸದಿಂದ ವಿದಾಯ ಕೋರಿದರು. ಒಟ್ಟಾರೆ ಗೃಹಶೋಭಾ ಎಂಪವರ್ ಹರ್ ಇವೆಂಟ್ ಬಹಳ ಯಶಸ್ವಿಯಾಗಿ ನೆರವೇರಿತು.
– ಪ್ರತಿನಿಧಿ





