ಇವರು ಭಾರತದ ಪ್ರಪ್ರಥಮ ಫೀಮೇಲ್ ಹಿಪ್ ಹಾಪ್ ಕ್ರೂ ಆದದ್ದು ಹೇಗೆ???
ನಿಕಿತಾ ಸಕ್ಸೇನಾ ವೈಲ್ಡ್ ವೈಲ್ಡ್ ವಿಮೆನ್ ಎದುರಿಸಿದ ಸಂಘರ್ಷ ಅಂತಿಂಥದ್ದಲ್ಲ! ಇವರು ಸಮಾಜದ ಎಲ್ಲಾ ಕಟ್ಟುಪಾಡುಗಳನ್ನೂ ಮೀರಿ, ಮಿಥ್ಯೆಗಳ ಕೈಬಿಟ್ಟು, ತಮ್ಮದೇ ಒಂದು ಸದೃಢ ಐಡೆಂಟಿಟಿ ಪಡೆದುಕೊಂಡದ್ದು ಹೇಗೆ…..?
“ಸರಿ, ಇದೀಗ ರೆಕಾರ್ಡಿಂಗ್ ಶುರುವಾಯಿತು,” ಎನ್ನುತ್ತಾ ನಾನು ನನ್ನ ರೆಕಾರ್ಡರ್ ಆನ್ ಮಾಡಿದೆ, ಆಗ ಅಲ್ಲಿದ್ದ ಏಳು ಮಂದಿ ಯುವತಿಯರಲ್ಲಿ ಒಬ್ಬಾಕೆ, ಇತರರನ್ನು ಸಾವಧಾನವಾಗಿ ಇರುವಂತೆ ಎಚ್ಚರಿಸಿದಳು. `ಇದೀಗ ನಾವೆಲ್ಲರೂ ಮಾತನಾಡಿ ಉತ್ತರಿಸಬೇಕು, ತುಸು ಜೋಪಾನ!’ ಎಂದು ಆಕೆ ನಸುನಗುತ್ತಾ ನುಡಿದಳು. ಎಲ್ಲರೂ ಈ ನಕಲಿ ಎಚ್ಚರಿಕೆ ಗಮನಿಸಿ ಜೋರಾಗಿ ನಕ್ಕರು. ಅವರ ಆ ನಗು ನಮ್ಮ ಎಲ್ಲಾ ಕಡೆ ಪ್ಲೇಟುಗಳ ಕರ್ಕಶ ಧ್ವನಿಯಲ್ಲಿ ಬೆರೆತುಹೋಯಿತು.
ನಾನು ಮಧ್ಯ ದೆಹಲಿಯ ಒಂದು ರೆಸ್ಟೋರೆಂಟ್‌ನಲ್ಲಿ ವೈಲ್ಡ್ ವೈಲ್ಡ್ ವಿಮೆನ್ ತಂಡದ ಸದಸ್ಯರ ಜೊತೆ ಮಾತುಕಥೆ ನಡೆಸಿದ್ದೆ. ಇವರು ಮುಂಬೈನ 8 ಪರ್ಫರ್ಮ್ಸೆನ ಒಂದು ಗುಂಪಿನ ಸದಸ್ಯರು. ತಮ್ಮನ್ನು ತಾವು ಭಾರತದ ಮೊಟ್ಟಮೊದಲ ಆವ್ ಫೀಮೇಲ್ ಹಿಪ್ ಹಾಪ್ ಕಿಕ್ಟಿವ್ ಎನ್ನುತ್ತಾರೆ. ಸಂದರ್ಶನ ಶುರುವಾಗಿತ್ತು, ಅವರು ತಮ್ಮ ಕಥೆಯ ದಿಕ್ಕನ್ನು ಆರಂಭಿಸಿದ್ದರು. `ಉತ್ತಮ ಮಹಿಳೆ’ ಎನಿಸಿಕೊಳ್ಳಬೇಕಾದರೆ ನಮ್ಮ ದೇಶದಲ್ಲಿ ಮೊದಲ ಷರತ್ತು ಸದಾ ಮೌನಕ್ಕೆ ಮೊರೆಹೋಗಬೇಕು. ಅದನ್ನು ಮೂಲತಃ ವಿರೋಧಿಸುವುದೇ ಯುವತಿಯರ ಹೋರಾಟ.
ಕಳೆದ ಅಕ್ಟೋಬರ್ ತಿಂಗಳ ಮೊದಲ ವಾರದ ಒಂದು ಮಧ್ಯಾಹ್ನ ನಾನು ಇವರನ್ನು ಭೇಟಿಯಾದೆ. ಆಗ ಅವರು ತಮ್ಮ ಸೌಂಡ್ ಚೆಕ್ ಪೂರ್ತಿ ಮಾಡಿದ್ದರು. ಆ ಸಂಜೆ ಅವರು ದೆಹಲಿಯ ಸುಂದರ ನರ್ಸರಿಯೊಂದರಲ್ಲಿ ಪ್ರದರ್ಶನ ನೀಡಲಿದ್ದರು, ಅದು 16ನೇ ಶತಮಾನದ ಐತಿಹಾಸಿಕ ನಾಟಕದ ಭಾಗವಾಗಿತ್ತು. ಅದರ 10 ಮಂದಿ ಕಲಾವಿದರು, ಈ ತಂಡದವರೇ ಆಗಿದ್ದರು. ಅವರು ಕಿರಣ್ ನಾಡರ್ ಮ್ಯೂಸಿಯಂ ಆನ್ ಆರ್ಟ್ಸ್ ನ ಮ್ಯೂಸಿಕ್ ಫೆಸ್ಟಿವ್ `ವಾಯ್ಸೇಜ್ ಆಫ್ ಡೈವರ್ಸಿಟಿ’ಯಲ್ಲಿ ಪ್ರದರ್ಶನ ನೀಡಲಿದ್ದರು. ಈ ಫೆಸ್ಟಿವ್ ನ್ನು ಕರ್ನಾಟಿಕ್ ಗಾಯಕರಾದ ಲೇಖಕ, ಆ್ಯಕ್ಟಿವಿಸ್ಟ್ ಟಿ.ಎಂ. ಕೃಷ್ಣಾ ಕ್ಯೂರೆಟ್ ಮಾಡಿದ್ದರು.
ತುಸು ವಿಶ್ರಾಂತಿಗೆಂದು ಈ ಯುವತಿಯರು ಅಲ್ಲಿನ ಹುಲ್ಲು ಹಾಸಿನ ಮೇಲೆ ಕುಳಿತಾಗ, ನಾವು ಪರಸ್ಪರ ಪರಿಚಯ ಪಡೆದುಕೊಂಡೆ. ಅವರ ಆತ್ಮೀಯತೆ ಕಂಡು ಮೂಕಳಾಗಿದ್ದೆ. ಅವರಲ್ಲಿ ಒಬ್ಬಾಕೆ ದೂರುತ್ತಾ ಹೇಳಿದಳು, “ಇಲ್ಲಿ ಬಲು ಸೆಖೆ.” ಅದಕ್ಕೆ ಮತ್ತೊಬ್ಬಾಕೆ, “ಅಷ್ಟೊಂದು ಸೂಕ್ಷ್ಮ ಆಗಬಾರದು,” ಎಂದಳು.
ವೈಲ್ಡ್ ವೈಲ್ಡ್ ವಿಮೆನ್ ತಂಡದಲ್ಲಿ ಐವರು ರಾಂಪರ್ಸ್ ಸಹ ಇದ್ದಾರೆ. ಇರಲ್ಲಿ ಇಬ್ಬರು ತಂಡದ ಸಂಸ್ಥಾಪಕಿಯರು : ಅಶ್ವಿನಿ ಹಿರೇಮಠ, ಈಕೆಯ ಸ್ಟೇಜ್ ನೇಮ್ `ಕ್ರಾಂತಿನಾರಿ.’ ಪ್ರೀತಿ . ಸುತಾರ್, ಈಕೆ ಹ್ಯಾಶ್ ಟ್ಯಾಗ್ ಪ್ರೀತಿ ಎಂದೇ ಪ್ರಸಿದ್ಧಳು. ಬಾಕಿ ಸದಸ್ಯರೆಂದರೆ ಜ್ಯಾಕ್ವಿಲಿನ್ ಲುಕಾಸ್, ಈಕೆ ಲಾ. ಕ್ವೀನ್ ಆದರೆ, ಪ್ರತೀಕ ಇವ್ಯಾಂಜೆಲಿನ್ ಪ್ರಭುವಾಣಿ, ಪ್ರತೀಕಾ ಹೆಸರಲ್ಲಿ ಪರ್ಫಾರ್ಮ್ ಮಾಡುತ್ತಾಳೆ. ಶೃತಿ ರಾತ್ ಯಾ ಮಹಿಳೆ. ಇವರಲ್ಲಿ ಮತ್ತೊಬ್ಬಳು ಡ್ಯಾನ್ಸರ್ ದೀಪಾ ಸಿಂಗ್ ಯಾ ಫ್ಲಾರಾ, ಮತ್ತೊಬ್ಬಳು ಮುಗ್ಧಾ ಮಾಂಡೋಕರ್. ಈಕೆ ಬೀಗ್‌ಎಂದೇ ಪ್ರಸಿದ್ಧಳು. ಸ್ಟೇಟ್ ಬೋರ್ಡರ್ ಶೃತಿ ಭೋಂಸ್ಲೆ ಹಾಗೂ ಗ್ರಾಫಿಟಿ ಆರ್ಟಿಸ್ಟ್ ಗೌರಿ ಗಣಪತ್ ದಾಬೋಲ್ಕರ್. ಇವರೆಲ್ಲರೂ 20-30ರೊಳಗಿನವರು.
2020ರಲ್ಲಿ ಈ ಸಂಸ್ಥೆ ಸ್ಥಾಪಿತಗೊಂಡ ಮೇಲೆ, 5 ಸಿಂಗಲ್ ಟ್ರಾಕ್ಸ್ ಮುಗಿಸಿದ್ದಾರೆ. ಮೂವರು ಇನ್ನಿತರ ಕಲಾವಿದರ ಸಹಕಾರದಿಂದ ಬೇರೆ 3 ಟ್ರಾಕ್ಸ್ ಮುಗಿಸಿದ್ದಾರೆ. ತಮ್ಮ ಪರ್ಫಾರ್ಮೆನ್ಸ್ ಮೂಲಕ ಈ ಯುವತಿಯರು ಸಾದಾಸೀದಾ ಸೀರೆಯಲ್ಲೇ ವೇದಿಕೆ ಏರುತ್ತಾರೆ, ಒಮ್ಮೊಮ್ಮೆ ಲುಂಗಿಯಲ್ಲೂ ಕಾಣಿಸುತ್ತಾರೆ. ಇವರು ಅಪಾರ ಶ್ರದ್ಧೆ, ಆತ್ಮವಿಶ್ವಾಸದಿಂದ ವೇದಿಕೆ ಮೇಲೆ ಪ್ರದರ್ಶನ ನೀಡುತ್ತಾರೆ. ಇವರ ಹಾಡುಗಳು ಕನ್ನಡ, ತಮಿಳು, ಮರಾಠಿ, ಹಿಂದಿ, ಇಂಗ್ಲಿಷ್ ನಲ್ಲಿ ಇರುತ್ತವೆ. ಇದರಲ್ಲಿ ವೈಯಕ್ತಿಕ ಹಾಗೂ ರಾಜಕೀಯದ ವಿಷಯ ಬೆರೆತಿರುತ್ತವೆ.

ಸಾಮಾಜಿಕ ಮಾನ್ಯತೆಗಳಿಗೆ ಸವಾಲು
ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಫುಡ್ ಫೆಸ್ಟಿವಲ್ `ಸೌತ್ ಸೈಡ್ ಸ್ಟೋರಿ’ಯಲ್ಲಿ ಆ್ಯಂಕರ್ ವೈಲ್ಡ್ ವೈಲ್ಡ್ ವಿಮೆನ್ ಬ್ಯಾಂಡ್ ನ ಹೆಸರು ಘೋಷಿಸುತ್ತಿದ್ದಂತೆ, ಇಡೀ ಸ್ಟೇಡಿಯಂ ಜಬರ್ದಸ್ತ್ ಸದ್ದು ಮಾಡಿತು. `ಇವರ ಪ್ರದರ್ಶನ ಅಲ್ಲಿನ ವಾತಾವರಣವನ್ನು ಒಂದು ಮಹೋತ್ಸವವಾಗಿ ಬದಲಾಯಿಸಿತು. ಇವರ `ಫುಲ್ ಪವರ್’ ಪರ್ಫಾರ್ಮೆರ್ನ್ಸ್ ವೀಕ್ಷಕರನ್ನು ಅಕ್ಷರಶಃ ಕಟ್ಟಿಹಾಕಿತ್ತು,’ ಎಂದು ಈ ಕುರಿತಾಗಿ ಲೇಖಕ ಅರಣ್ಯ ಫುಡ್ ಔಟ್ ಲುಕ್ ಪತ್ರಿಕೆಯಲ್ಲಿ ಬರೆದಿದ್ದರು.
ಈ ತಂಡದ ಪಂಕ್ತಿಗಳು ಬಲು ಪ್ರಭಾವಶಾಲಿ. ಏಕೆಂದರೆ ಅವರು ಪಾರಪಂರಿಕ ಸೌಂದರ್ಯ ಶಾಸ್ತ್ರದಲ್ಲಿ ಫಿಟ್ ಆಗುವುದಿಲ್ಲ. ಏಕೆಂದರೆ `ಇವರು ಮುಂಬೈನ ಸ್ಲಾಂಗ್‌ತಂತಮ್ಮ ಪ್ರಾದೇಶಿಕ ರೂಪಕ ಹಾಗೂ ಪಾಪ್ ಸಂಸ್ಕೃತಿಯನ್ನು ಬೆರೆಸಿ, ಆಯಾ ಸಂದರ್ಭಕ್ಕೆ ತಕ್ಕಂತೆ ಇವರು ಸಂಗೀತವನ್ನು ತಮ್ಮ ವಾಸ್ತವಿಕ ಅನುಭವಗಳೊಂದಿಗೆ ಬೆಸೆದೇ ಹೇಳುತ್ತಾರೆ, ಇದನ್ನು ಇಂದಿನ ಯುವಪೀಳಿಗೆ ಸುಲಭವಾಗಿ ಗ್ರಹಿಸುತ್ತದೆ,’ ಎಂದು ಅರಣ್ಯ ಬರೆಯುತ್ತಾರೆ.
ಸಂಗೀತ, ಪಾಪ್ ಸಂಸ್ಕೃತಿಯ ಪ್ರಕಾಶನದ ರೋಲಿಂಗ್ ಸ್ಟೋನ್ ಇಂಡಿಯಾದ ಪತ್ರಕರ್ತ ಅನುರಾಗ್ ಟಗಟ್ ಬರೆಯುತ್ತಾರೆ, “ ವೈಲ್ಡ್ ವೈಲ್ಡ್ ವಿಮೆನ್ ತಂಡದ ವೈಶಿಷ್ಟ್ಯತೆ ಇರುವುದೇ ಅವರ ಹಾಡುಗಳಲ್ಲಿ! ಇದು ಭಾವೈಕ್ಯತೆಯಲ್ಲಿ ಅವರ ಶಕ್ತಿಯ ಹುಡುಕಾಟದ ಸಂಕೇತ, ದೇಹದ ಕುರಿತಾಗಿ ಸಕಾರಾತ್ಮಕ ಯೋಜನೆ ಹೊಂದಲು, ಮಹಿಳೆಯರಾದ ಕಾರಣ ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಸಾಮಾಜಿಕ ಮಾನ್ಯತೆಗಳಿಗೆ ಸವಾಲು ಒಡ್ಡಲು ಹಾಗೂ ತಮ್ಮ ಗೆಲುವಿನ ಸಂಭ್ರಮಾಚರಣೆ ಹಂಚಿಕೊಳ್ಳಲು ಬಯಸುತ್ತಾರೆ.”
ಇವರ ವೈಶಿಷ್ಟ್ಯ ಇವರ ಅನುಭವಗಳ ವಿಭಿನ್ನ ಮೂಸೆಯಲ್ಲಿ ಪ್ರಬುದ್ಧಗೊಂಡಿದೆ. “ನಾವು ಇಷ್ಟೊಂದು ಜನ ಇರುವುದರಿಂದ, ಪ್ರತಿಯೊಬ್ಬರೂ ತಂತಮ್ಮ ನಿಲುವು, ತಂತಮ್ಮ ದೃಷ್ಟಿಕೋನ, ತಂತಮ್ಮ ಸಮಸ್ಯೆಗಳಿಂದ ವ್ಯಸ್ತರಾಗಿದ್ದಾರೆ,” ಎನ್ನುತ್ತಾರೆ ಕ್ರಾಂತಿನಾರಿ.
“ಇದು ಸಂದರ್ಭದ ದೃಷ್ಟಿಯಿಂದ ಬಲು ಮಹತ್ವಪೂರ್ಣ. ರಾಜಕೀಯದ ರೂಪದಲ್ಲೂ ಹೆಚ್ಚು ಪ್ರಾಧಾನ್ಯತೆ ಹೊಂದಿದೆ. ಆದರೆ ನಮಗೆ ಮಾತ್ರ ಇದು ನಮ್ಮ ದೈನಂದಿನ ಬವಣೆಯ ಬದುಕಿನ ಒಂದು ಭಾಗವೇ ಆಗಿದೆ.”
ವೈಲ್ಡ್ ವೈಲ್ಡ್ ವಿಮೆನ್ ತಂಡದ ಸಂಗೀತ ಎರಡನ್ನೂ ನಿಭಾಯಿಸುತ್ತದೆ. ಒಂದು ಕಡೆ ಪಾರಂಪರಿಕ ಚಿಂತನೆಗೆ ಸವಾಲು ಒಡ್ಡುತ್ತದೆ, ಇನ್ನೊಂದು ಕಡೆ ಖುಷಿ ಮತ್ತು ಸಂತಸದ ಲಹರಿ ಹರಡುತ್ತದೆ, `ನಾವು ಮುಕ್ತವಾಗಿ ಮುನ್ನುಗ್ಗುತ್ತೇವೆ, ಯಾವುದೇ ಅಂಜಿಕೆ ಇಲ್ಲದೆ ಮಾತುಗಳನ್ನು ಅಭಿವ್ಯಕ್ತಿಗೊಳಿಸುತ್ತೇವೆ. ಯಾವುದೇ ಅಡೆತಡೆ ಇಲ್ಲದೆ, ಆಕಾಶದತ್ತ ಸಾಗುವ ದಾರಿ ಹಿಡಿದು ವೈಲ್ಡ್ ವೈಲ್ಡ್ ವಿಮೆನ್ ಹೆಸರಿನಿಂದ ನಮ್ಮನ್ನು ಗುರುತಿಸುತ್ತಾರೆ!’ ಇದು ಅವರ ಟೈಟ್ ಟ್ರಾಕಿನ ಪಂಕ್ತಿಗಳು. ಅವರು ತಮ್ಮ ಹಾಡುಗಳಲ್ಲಿ `ಸಮಾಜದಲ್ಲಿ ನಾವೆಂದೂ ಡೊಂಕು ಸಾಮು ಹೊಡೆಯುವುದಿಲ್ಲ, ಎದೆ ಸೆಟೆಸಿ ಮುನ್ನುಗ್ಗುತ್ತೇವೆ, ನಮಗೆ ಸರಿಸಾಟಿ ಯಾರು?’ ಎಂದು ತಂಡಕ್ಕೆ ನಾಯಕಿಯಾಗಿ ಇತರ ಕೋರಸ್ ಜೊತೆ ಗಟ್ಟಿಯಾಗಿ `ಗೇಮ್ ಫ್ಲಿಪ್’ ಹಾಡಿನ ಸಾಲುಗಳಲ್ಲಿ ರೂಢಿವಾದದ ವಿರುದ್ಧ ದನಿಯೆತ್ತಿ, ಜಜ್ ಮೆಂಟ್ಸ್ ನಿಂದ ಸಮಾಜ ಮುಕ್ತವಾಗಲಿ ಎಂಬ ಸಂದೇಶ ಇದೆ.
“ಒಮ್ಮೊಮ್ಮೆ ನೀವು ವೀಕ್ಷಕರನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಾರ್ಯಕ್ರಮಕ್ಕೆ ಬಂದ ಹುಡುಗರು ಮಜ ಪಡೆಯುತ್ತಾ, ಡ್ಯಾನ್ಸ್ ಮೂಲಕ ಎಂಜಾಯ್ ಮಾಡುತ್ತಿರುತ್ತಾರೆ. ಆದರೆ ಈ ಹಾಡಿನ ಸಂದೇಶದಲ್ಲಿ, ಅವರ ಲೋಪದೋಷಗಳ ಕುರಿತು ಹೇಳಲಾಗುತ್ತಿದೆ ಎಂಬುದು ಅವರಿಗೆ ಅರಿವಾಗುತ್ತಿದೆಯೇ?” ಎಂದು ವ್ಯಂಗ್ಯಾಗಿ ಕೇಳುತ್ತಾರೆ ಹ್ಯಾಶ್ ಟ್ಯಾಗ್ ಪ್ರೀತಿ. ಮೊದಲು ಈ ತಂಡಕ್ಕೆ ಹಿಪ್ ಹಾಪ್ ಸಮುದಾಯದ ಕೆಲವು ಗಂಡಸರಿಂದ ಅಟೆನ್ಶನ್ ಸಿಗುತ್ತಿರಲಿಲ್ಲ. ಆ ಆತಂಕ ಕ್ರಮೇಣ ದೂರವಾಯಿತು.
“ಈ ಪ್ರಶ್ನೆ ನಮ್ಮೆಲ್ಲರ ತಲೆಯಲ್ಲಿ ಕೊರೆಯುತ್ತಿತ್ತು. ಅವರು ನಮ್ಮನ್ನು ಗುರುತಿಸುತ್ತಾರೆಯೇ?” ಪ್ರತೀಕಾ ಕೇಳುತ್ತಾಳೆ. ನಂತರ ಈ ತಂಡಕ್ಕೆ ಈ ತರಹದ ಯಾವುದೇ ಸಂದೇಹಗಳಿಲ್ಲ.
ಮಹಿಳೆ ವೈಲ್ಡ್ ವೈಲ್ಡ್ ವಿಮೆನ್ ತಂಡದ ಸಂಗೀತವನ್ನು ಸಂಕ್ಷಿಪ್ತವಾಗಿ ಬಣ್ಣಿಸಿದ್ದಾರೆ, “ಇದು ಹೆಂಗಸರಿಗಾಗಿ, ಹೆಂಗಸರಿಂದ, ಹೆಂಗಸರ ಕಾರ್ಯಕ್ರಮವಾಗಿದೆ!”
ಕಳೆದ ಕೆಲವು ವರ್ಷಗಳಿಂದ ವೈಲ್ಡ್ ವೈಲ್ಡ್ ವಿಮೆನ್ ಸಂಘಟನೆಯ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. 2024ರ ಒಂದು ವರ್ಷದಲ್ಲೇ ಈ ಗ್ರೂಪ್ ಇಡೀ ಭಾರತದಾದ್ಯಂತ 75ಕ್ಕೂ ಹೆಚ್ಚು ಶೋ ನೀಡಿದೆ. ಈ ವರ್ಷದ ಆರಂಭದಲ್ಲಿ ಈ ತಂಡ ಜರ್ಮನಿಯಲ್ಲಿ ಒಂದು ಫೆಸ್ಟಿವ್ ನಲ್ಲಿ ಭಾಗವಹಿಸಿ ತಮ್ಮ ಅಂತಾರಾಷ್ಟ್ರಿಯ ಡೆಬ್ಯೂ ಸಹ ಪಡೆದುಕೊಂಡಿದ್ದಾರೆ. ಕೇರಳದ ಒಂದು ಶೋನಲ್ಲಿ, “ಸಭಿಕರ ಗುಂಪು ಎಷ್ಟು ದಟ್ಟವಾಗುತ್ತಿತ್ತು ಎಂದರೆ ಜನಜಾತ್ರೆ ಎಂದೇ ಹೇಳಬಹುದಿತ್ತು…..” ಎಂದು ಮಹಿಳೆ ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಇವರು ಹೇರ್ ಸೀರಂ ಬ್ರಾಂಡ್ ಲಿವಾನ್‌ಫ್ಯಾಷನ್ ಬ್ರಾಂಡ್ಸ್ ಝೂಡಿೂ ಹಾಗೂ ಟ್ರೂಬ್ರೌನ್ ಜೊತೆ ಮಾರ್ಕೆಟಿಂಗ್ ನಲ್ಲೂ ಭಾಗೀದಾರರಾಗಿದ್ದಾರೆ.
ಅನನ್ಯ ಕಥೆ ವೈಲ್ಡ್ ವೈಲ್ಡ್ ವಿಮೆನ್ ತಂಡದ ಒಂದು ಹಾಡಿನ ಗೇಮ್ ಫ್ಲಿಪ್ ನ ಸಣ್ಣ ಇನ್ ಸ್ಟಾಗ್ರಾಂ ರೀಲ್ ನ್ನು 1.55 ಕೋಟಿಗೂ ಅಧಿಕ ವೀಕ್ಷಕರು ಗಮನಿಸಿದ್ದಾರೆ, 12 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಲಾ. ಕ್ವೀನ್ ಸಂಗೀತ ದಿಗ್ಗಜರಾದ .. ರೆಹಮಾನ್ ಸಂತೋಷ್ ನಾರಾಯಣನ್ ರನ್ನು ಭೇಟಿಯಾದಾಗ, ಅವರೂ ಸಹ ಆ ರೀಲ್ಸ್ ನೋಡಿರುವುದಾಗಿ ಹೇಳಿದರಂತೆ.
“ಆಹಾ… `ವಾಹ್…. ಕ್ಯಾ ಬಾತ್ ಹೈ!’ ಎನ್ನುವಂಥ ಸಂದರ್ಭವದು,” ಎನ್ನುತ್ತಾರೆ ಸಾ. ಕ್ವೀನ್. ಮಾರ್ಚ್ ನಲ್ಲಿ ಈ ತಂಡ ಆಸ್ಕರ್ ವಿಜೇತರಾದ ಮ್ಯೂಸಿಕ್ ಕಂಪೋಸರ್.. ಕೀರವಾಣಿಯವರ ಜೊತೆಗೂ ಒಂದು ಕಚೇರಿಯಲ್ಲಿ ಪಾಲ್ಗೊಂಡರು. ಇವರ ತಂಡಕ್ಕೆ ಅಂಥ ದಿಗ್ಗಜರಿಂದ ಸಂಗೀತದ ಮಾರ್ಗದರ್ಶನ ಲಭಿಸಿದೆ.
ವೇದಿಕೆ ಬಿಟ್ಟಿಳಿದಾಗ ಈ ಹೆಂಗಸರೆಲ್ಲ ಒಡಹುಟ್ಟಿದರಂತೆ ಆತ್ಮೀಯರಾಗಿಬಿಡುತ್ತಾರೆ. ಮಹತ್ವಾಕಾಂಕ್ಷಿಗಳಾಗಿ ಇರುವುದರ ಜೊತೆ ಈ ತಂಡಕ್ಕೆ ಆತ್ವವಿಶ್ವಾಸ ಹೆಚ್ಚು. ಇವರುಗಳ ವಿವಿಧ ಅನುಭವಗಳಲ್ಲಿ ಅಡಗಿದೆ ಈ ತಂಡದ ಧೀಶಕ್ತಿ. ಇವರಲ್ಲಿ ಅನೇಕ ಯುವತಿಯರು ಆರ್ಥಿಕ ಸಂಕಷ್ಟ, ಕೌಟುಂಬಿಕ ವಿರೋಧ, ಸಾಮಾಜಿಕ ನಿರ್ಲಕ್ಷ್ಯಕ್ಕೆ ಗುರಿಯಾದರು. ಮುಂಬೈನ ವಿವಿಧ ಪ್ರಾಂತ್ಯಗಳಲ್ಲಿ ಬೆಳೆದು ಬಂದ ಈ ಯುವತಿಯರು, ತಮ್ಮ ನಗರದ ವೈವಿಧ್ಯಮಯ ಕಥೆಗಳ ಬಗ್ಗೆ ಹೇಳುತ್ತಾರೆ. ಇವರ ರಾಜಕೀಯ ತಿಳಿವಳಿಕೆ ಇದೀಗ ಇನ್ನೂ ವಿಕಸಿತಗೊಳ್ಳುತ್ತಿದೆ. ಎಷ್ಟೋ ಸಲ ಇವರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಇಷ್ಟಾದರೂ ಸಹ ಇವರುಗಳು ತಮ್ಮ ಸಾಮೂಹಿಕತೆಯಲ್ಲಿ ಐಕ್ಯತೆ ಬಿಟ್ಟುಕೊಡುವುದಿಲ್ಲ.
ಡ್ಯಾನ್ಸರ್ ಬೀಗ್‌ಮೊದಲು ಬೇರಾವುದೋ ಹಿಪ್ ಹಾಪ್ ಗ್ರೂಪಿನ ಭಾಗವಾಗಿದ್ದರು. ಆಕೆಗೆ ಈ ತಂಡ ಸಹಾಯಹಸ್ತ ನೀಡಿ, ತಮ್ಮ ಗುಂಪಿಗೆ ಸೇರಿಸಿಕೊಂಡು, ಕಳೆ ಹೆಚ್ಚಿಸಿಕೊಂಡಿದೆ. ಆಕೆ ಈ ತಂಡಕ್ಕೆ ಸೇರಿ, `ಇಲ್ಲಿ ನಾನು ಹೆಚ್ಚು ಸುರಕ್ಷತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿದ್ದೇನೆ,’ ಎಂದು ಹೆಮ್ಮೆಪಡುತ್ತಾರೆ. ಗ್ರಾಫಿಟಿ ಕಲಾವಿದೆ ಗೌರಿ ಸಹ ಹಿಂದೆ ಬೇರೊಂದು ಹಿಪ್ ಹಾಪ್ ತಂಡದಲ್ಲಿದ್ದರು, ಅಲ್ಲಿ ಗಂಡಸರೇ ಹೆಚ್ಚು.
“ಇಲ್ಲಿ ನನಗೆ ನನ್ನ ಅಸಲಿ ಐಡೆಂಟಿಟಿ ಸಿಕ್ಕಿದೆ, ಓಪನ್ ಮೈಂಡೆಡ್ ಆಗಿ ಐಡಿಯಾ ಹಂಚಿಕೊಳ್ಳುವ ಸ್ವಾತಂತ್ರ್ಯವಿದೆ,” ಎನ್ನುತ್ತಾರೆ.
“ಇಲ್ಲಿ ನಾವು ಜೊತೆ ಜೊತೆಗೆ ಕುಣಿಯುತ್ತೇವೆ, ಹಾಡುತ್ತೇವೆ, ನೋವುನಲಿವು ಹಂಚಿಕೊಳ್ಳುತ್ತೇವೆ. ಜಗಳ ಆಡಿದರೂ ಮತ್ತೊಂದು ಘಳಿಗೆಯಲ್ಲಿ ಅದನ್ನು ಮರೆತು ಒಂದಾಗುತ್ತೇವೆ,” ಎನ್ನುತ್ತಾರೆ ಲಾ. ಕ್ವೀನ್, “ಯಾರಿಗೆ ಏನೇ ತೊಂದರೆ ಇದ್ದರೂ, ಪರಸ್ಪರ ಹೆಗಲು ಕೊಟ್ಟು ಅವರ ಆ ತೊಂದರೆ ನಿವಾರಿಸುವುದೇ ನಮ್ಮೆಲ್ಲರ ಮೊದಲ ಗುರಿ, ಇಲ್ಲಿ ಯಾರೂ ಯಾರನ್ನೂ ಜಜ್ ಮಾಡುವುದಿಲ್ಲ!”
ಈ ತಂಡ ಶುರುವಾದ ಹೊಸತರಲ್ಲಿ ಅಂದ್ರೆ 2020ರಲ್ಲಿ ಈ ತಂಡದ ಸಂಸ್ಥಾಪಕ ಸದಸ್ಯೆಯರಾದ ಕ್ರಾಂತಿನಾರಿ ಹಾಗೂ ಹ್ಯಾಶ್ ಟ್ಯಾಗ್ ಪ್ರೀತಿಯವರ ಭೇಟಿ ಆಯಿತು. ಅದು ಹಿಪ್ ಹಾಪ್ ಕಲಾವಿದರಿಗೆಂದೇ ಆಯೋಜಿಸಲಾಗಿದ್ದ ಒಂದು ಅನೌಪಚಾರಿಕ ಜೆಮ್ ಸೆಶನ್ ಆಗಿತ್ತು. ಮೊದಲ ಭೇಟಿ ನಂತರ ತಕ್ಷಣವೇ ಇವರಿಬ್ಬರೂ ಸಮಾನ ಅಭಿರುಚಿಯಿಂದಾಗಿ ಒಂದಾಗಿ ಬೆರೆತರು.
“ಬಹಳ ವರ್ಷಗಳ ಪರಿಚಯ ಇರುವಂತೆ ನಮ್ಮಿಬ್ಬರಿಗೂ ಅನಿಸಿತು. ಒಂದೇ ಕ್ಷಣದಲ್ಲಿ ನಾವೆಲ್ಲ ಒಂದೇ ಎಂಬ ಫೀಲಿಂಗ್ ದೃಢವಾಯಿತು,” ಎಂದು ಪ್ರೀತಿ ನೆನಪಿಸಿಕೊಳ್ಳುತ್ತಾರೆ. ಅವರ ಈ ಆಕಸ್ಮಿಕ ಭೇಟಿ ಇಂಥ ದೊಡ್ಡ ತಂಡದ ರಚನೆಗೆ ನಾಂದಿಯಾಯಿತು.

ಗಂಡಸರಿಗೆ ಸವಾಲು
ಈ ರೀತಿ ಭಾರತದಲ್ಲಿ ಹಿಪ್ ಹಾಪ್ ಅತಿ ವೇಗವಾಗಿ ಬೆಳೆಯತೊಡಗಿತು. ಹಿಂದಿನ ಪಾರಂಪರಿಕ ರೂಢಿವಾದ ಬಿಟ್ಟು ಇದು ಮುಂದುವರಿಯಿತು. ಸ್ತ್ರೀ ವಿರೋಧಿ, ಮಧುಮಾನ್ಯತೆ, ಹಣಕ್ಕಾಗಿ ಹಪಾಹಪಿಯಂಥ ಮೌಢ್ಯ ಬಿಟ್ಟು ಕ್ರಾಂತಿಕಾರಿ ಹೆಜ್ಜೆ ಹಾಕಿತು. ಇಡೀ ದೇಶದ ಎಷ್ಟೋ ರಾಪರ್ ಗಳು, ವಿವಿಧ ಸರಹದ್ದುಗಳ ಸಮುದಾಯದಿಂದ ಬಂದರು, ಈ ಹಿಪ್ ಹಾಪ್ ಗೆ ಹೊಸ ದಿಕ್ಕು ತೋರಿಸಿದರು. ಇವರ ಸಂಗೀತ ಅತಿ ಬುದ್ಧಿವಂತಿಕೆ, ಆಕರ್ಷಣೆ, ಪ್ರಯೋಗಾತ್ಮಕ ಆಗಿತ್ತು. ಈ ಮೂಲಕ ಇವರು ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಿ, ಅಧಿಕಾರಬದ್ಧ ಕೇಂದ್ರಗಳಿಗೆ ಸವಾಲು ಒಡ್ಡುವುದರಲ್ಲೂ ಹಿಂಜರಿಯುತ್ತಿರಲಿಲ್ಲ. ಇಷ್ಟಾದರೂ ಸಹ ಹಿಪ್ ಹಾಪ್ ಗ್ರೂಪ್ಸ್ ನ್ನು ದೊಡ್ಡ ಮಟ್ಟದಲ್ಲಿ ಹೋಲಿಸಿ ಹೇಳುವಾಗ, ಅದು ಗಂಡಸರ ಸಾಮ್ರಾಜ್ಯ ಎಂದೇ ಬಣ್ಣಿಸಲಾಗುತ್ತದೆ. ಈ ಕುರಿತಾಗಿ ಕ್ರಾಂತಿನಾರಿ, “ಹುಡುಗರ ತಂಡದಲ್ಲಿ ಅಲ್ಲೋ ಇಲ್ಲೋ ಬೆರಳೆಣಿಕೆಯಷ್ಟು ಮಾತ್ರ ಹುಡುಗಿಯರು ಇರುತ್ತಿದ್ದರು. ಅವರುಗಳು ಹಿಪ್ ಹಾಪ್ ನಲ್ಲಿ ಪಾಲ್ಗೊಳ್ಳ ಬಯಸಿದರೂ, ಆ ತಂಡದ ಗಂಡಸರು ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಇದು ಹೆಣ್ಣಿನ ಕೆರಿಯರ್ ಅಲ್ಲ ಬಿಡಿ, ಮದುವೆ ಆಗಿ ಮೂಲೆ ಸೇರಿ, ಎಂಬ ಧೋರಣೆ ಅವರದಾಗಿತ್ತು.
“ಹಾಗೆಂದು ಗಂಡು ಕಲಾವಿದರು ಹೆಂಗಸರಿಗೆ ಸಹಾಯ ಮಾಡುತ್ತಲೇ ಇರಲಿಲ್ಲ ಅಂತೇನಲ್ಲ. ಆದರೆ ಮೊದಲಿನಿಂದಲೂ ಇಂಥ ಪೂರ್ವಾಗ್ರಹ ಪೀಡಿತ ವಿಚಾರಗಳು ಅವರ ತಲೆಗೇರಿಬಿಡುತ್ತಿತ್ತು. ಕೇವಲ ಕೆಲವು ದಿನಗಳ ಟೈಂಪಾಸಿಗಷ್ಟೇ ಈ ಹೆಂಗಸರು ಇದನ್ನು ಕಲಿತು, ನಂತರ ಅಡುಗೆಮನೆ ಸೇರುತ್ತಾರೆ ಎಂಬ ತಿರಸ್ಕಾರ ಅವರಲ್ಲಿತ್ತು. ಹೆಂಗಸರದೇ ಒಂದು ಗುಂಪಾಗಿ ದುಡಿಯುವ ಅವಕಾಶ ಬಹಳ ಕಡಿಮೆ ಇತ್ತು.”
ಒಮ್ಮೊಮ್ಮೆ ಸಹಕಲಾವಿದರಾದ ಗಂಡಸರು ಈ ಹೆಂಗಸರಿಗೆ ಒಂದಿಷ್ಟು ಸಹಾಯ ಮಾಡಿದ್ದೂ ಇದೆ, ಅವರೊಂದಿಗೆ ದುಡಿದವರು ಹಾಗೆ ಹೇಳಿದ್ದಾರೆ. “ಎಷ್ಟೋ ಜನ ನನಗೆ ಸಹಾಯ ಮಾಡಿದ್ದಾರೆ,” ಎನ್ನುತ್ತಾರೆ ಮಹಿಳೆ. ಅಂಥ ಹಳೆಯ ಪ್ರಸಂಗ ನೆನೆಯುತ್ತಾ ಆಕೆ, “ಅವರುಗಳು ಅದರ ಅರ್ಥ ಹೀಗೆ ವಿವರಿಸುತ್ತಿದ್ದರು, ಅಂದ್ರೆ ಬೀಟ್ಸ್ ಹೇಗೆ ತೆಗೆದುಕೊಳ್ಳೋದು ಅಂತ, ಹೀಗೆ ಬರಿ ಹಾಗೆ ಬರಿ ಎಂದೆಲ್ಲ ಆದೇಶಿಸುತ್ತಿದ್ದರು,” ಎನ್ನುತ್ತಾರೆ.
ಇದರ ಪ್ರಭಾವವಾಗಿ ಮಹಿಳಾ ರಾಂಪರ್ಸ್ ಬರೆಯುವ ಶೈಲಿ, ವಿಷಯಗಳು ಸಹ ಕ್ರಮೇಣ ಬದಲಾದವು. ಪ್ರೀತಿ ಈ ಕುರಿತು ಹೇಳುತ್ತಾರೆ, “ಅವರನ್ನು ಕಂಡು ನಾವು ಪ್ರೇರಿತರಾಗುತ್ತಿದ್ದೆವು. ಆದರೆ ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ಹೆಣ್ತನ ಮರೆಯುತ್ತಿದ್ದೆವು. ನಿಧಾನವಾಗಿ ನಾವು ಗಂಡಸರ ಶೈಲಿಯತ್ತಲೇ ವಾಲುತ್ತಿದ್ದೆವು.”
“ಹೌದು, ಬಿಲ್ ಕುಲ್ ಫುಲ್ ಗ್ಯಾಂಗ್ ಸ್ಟರ್ ರ್ಯಾಪ್ ತರಹ,” ಎನ್ನುತ್ತಾರೆ ಮಹಿಳೆ.
“ಖಂಡಿತಾ ಇಂದು ನಾವು ಅದಲ್ಲ!” ಮಧ್ಯದಲ್ಲಿ ನುಡಿದವರು ಕ್ರಾಂತಿಕಾರಿ.
ಮೊದಲ ಬಾರಿ ಇವರಿಬ್ಬರೂ ಜೆಮ್ ಸೆಶನ್ ನಲ್ಲಿ ಭೇಟಿಯಾದಾಗ, ಇಬ್ಬರೂ ಮಸಾಲೆದೋಸೆ ಮೆಲ್ಲುತ್ತಾ, ತಂತಮ್ಮ ಸಮಸ್ಯೆಗಳನ್ನು ಹಂಚಿಕೊಂಡರಂತೆ. ಬೇರೆಯವರ ಜೊತೆಯಲ್ಲೂ ಇಂಥ ಸಮಸ್ಯೆ ಹಂಚಿಕೊಂಡಿದ್ದರಾದರೂ ಪರಿಹಾರ ಸಿಕ್ಕಿರಲಿಲ್ಲ. ಪ್ರೀತಿ ಹಿಂದೊಮ್ಮೆ ಒಂದು ಆಲ್ ವಿಮೆನ್ ಕ್ರೂ ರಚಿಸುವ ಪ್ರಯತ್ನಪಟ್ಟಿದ್ದರು, ಆದರೆ ಅದು ಯಶಸ್ವಿಯಾಗಿರಲಿಲ್ಲ.
ಇದೀಗ ಇವರಿಬ್ಬರೂ ಕೂಡಿ ಹೆಂಗಸರಿಗೆಂದೇ ವಿಶೇಷ ಸೈಫರ್ ಆಯೋಜಿಸುವ ನಿರ್ಧಾರ ಕೈಗೊಂಡರು. ಒಂದು ಅನೌಪಚಾರಿಕ ವೇದಿಕೆ, ಅಲ್ಲಿ ರಾಂಪರ್ಸ್ ಒಂದುಗೂಡಿ ಓಪನ್ ಆಗಿ, ತತ್ ಕ್ಷಣವೇ ರಚನಾತ್ಮಕ ಪ್ರದರ್ಶನ ನೀಡಬಹುದಾದ ಅವಕಾಶವಿತ್ತರು. “ಮೊದಲೇ ಥಂಡಿ ಸೀಸನ್, ನಮ್ಮ ವಿವೇಕಬುದ್ಧಿ ಕೂಲ್‌ಕಾಮ್ ಆಗಿತ್ತು. ಹೀಗಾಗಿ ಹೇರಳ ಐಡಿಯಾ ಹೊಳೆದವು,” ಎನ್ನುತ್ತಾರೆ ಕ್ರಾಂತಿನಾರಿ. ತಮ್ಮ ಈ ಪ್ರಯಾಸ ಎಲ್ಲರನ್ನೂ ಎಲ್ಲಿಗೆ ಕೊಂಡೊಯ್ಯುತ್ತಲೇ ತಿಳಿಯದು ಎನ್ನುತ್ತಾರೆ. ಆದರೆ ಒಂದಂತೂ ಗ್ಯಾರಂಟಿ ಗೊತ್ತಿತ್ತು.
“ನಾವು ಹುಡುಗರ ಆ ತಂಡ ಬಿಡಲು ನಿಶ್ಚಯಿಸಿದ್ದೆವು. ಅವರ ಮೇಲೆ ಡಿಪೆಂಡೆನ್ಸಿ ಬೇಕಿರಲಿಲ್ಲ,” ಎಂದು ನೆನಪಿಸಿಕೊಂಡು ಹೇಳಿದರಾಕೆ. ಹೀಗೆ ಎಲ್ಲಾ ಪ್ರತಿಭಾನ್ವಿತೆಯರೂ ವೈಲ್ಡ್ ವೈಲ್ಡ್ ವಿಮೆನ್ ತಂಡದಲ್ಲಿ ಒಂದಾಗಿ, ಎಲ್ಲಾ ರಾಂಪರ್ಸ್ ತಂತಮ್ಮ ಪ್ರತಿಭೆ ಪರಿಚಯಿಸುತ್ತಾ, ಪ್ರದರ್ಶನ ಯಶಸ್ವಿಗೊಳಿಸಿದರು. ಇದು ಸಮಾಜಕ್ಕೆ ಅವರ ಅಪಾರ ಶ್ರದ್ಧೆಯ ಕೊಡುಗೆಯಾಗಿತ್ತು. ಈ ರೀತಿ ತಮ್ಮದೇ ಐಡೆಂಟಿಟಿ ಸ್ಥಾಪಿಸಿಕೊಂಡರು.
ಕ್ರಾಂತಿನಾರಿಯ ಬಾಲ್ಯವಲ್ಲ ಆಸ್ಪತ್ರೆಗೆ ಅಲೆದಾಟದಲ್ಲೇ ಆಗಿಹೋಯಿತು. ಆಕೆ ಹೇಳುತ್ತಾರೆ, “7ನೇ ತರಗತಿಯವರೆಗೂ ನಾನು ಎಲ್ಲರ ಹುಡುಗಾಟಿಕೆಗೆ ಗುರಿಯಾಗುತ್ತಿದ್ದೆ. 8ನೇ ತರಗತಿಯಿಂದ ಅಮ್ಮನ ಸಲಹೆಯಂತೆ ಫುಟ್ ಬಾಲ್ ಕಲಿಯತೊಡಗಿದೆ. ನಮ್ಮಮ್ಮ ಹಿಂದೆಲ್ಲ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಪಟು ಆಗಿದ್ದರು. ಈ ರೀತಿ ಮನೆಯಾಚೆ ಆತ್ಮವಿಶ್ವಾಸ ಗಳಿಸಲು ಫುಟ್ಬಾಲ್ ನನಗೆ ನೆರವಾಯಿತು.
“ಆಗ ಬೇರೆ ಆಟಗಾರರು ನನ್ನ ಬಟ್ಲರ್ ಇಂಗ್ಲಿಷ್ ಕಂಡು ಹಾಸ್ಯ ಮಾಡುತ್ತಿದ್ದರು. ಆಗ ಏನು ಮಾಡುವುದೆಂದೇ ಗೊತ್ತಾಗುತ್ತಿರಲಿಲ್ಲ. ನಾನು ಮನೆ ಅಥವಾ ಫ್ರೆಂಡ್ಸ್ ಜೊತೆ ಎಂದೂ ಶುದ್ಧ ಆಂಗ್ಲದಲ್ಲಿ ಮಾತನಾಡುತ್ತಿರಲಿಲ್ಲ. ಅದು ನನ್ನ ಭಾಗದ ಪ್ರಪಂಚದಲ್ಲಿ ಇರಲೇ ಇಲ್ಲ! ಆಗ ಒಬ್ಬ ಸೀನಿಯರ್ ನನಗೆ ಗೈಡ್ ಮಾಡಿದರು. ಆಕೆ ಅಮೆರಿಕನ್ ರಾಂಪರ್ ಎಮಿನೇಮ್ ನ `ಬ್ಯೂಟಿಫುಲ್’ ಹಾಡನ್ನು ಪ್ರಾಕ್ಟೀಸ್ ಮಾಡಿಸಿದರು, ಆ ರೀತಿ ನಾನು ಇದಕ್ಕೆ ಪರಿಚಿತಳಾದೆ.
“ಆ ಹಾಡುಗಳು ಎಷ್ಟು ಪರಿಣಾಮಕಾರಿ ಆಗಿದ್ದ ಎಂದರೆ, ನಾನು ಪ್ರತಿ ಪದ, ಪ್ರತಿ ಪಂಕ್ತಿಯನ್ನೂ ನಿಲ್ಲಿಸಿ ನಿಲ್ಲಿಸಿ ಹಾಡುತ್ತಿದ್ದೆ. ಅದರ ಅರ್ಥ ತಿಳಿದುಕೊಂಡೇ ಮುಂದುವರಿಯುತ್ತಿದ್ದೆ,” ಎನ್ನುತ್ತಾರೆ. ಶಬ್ದದ ಉಚ್ಚಾರಣೆಗೆ ಮುನ್ನವೇ ಅದನ್ನು ಅಭ್ಯಾಸ ಮಾಡುತ್ತಿದ್ದರು. ತನ್ನ ಅನೇಕ ಡೈರಿಗಳಲ್ಲಿ ಆ ಹಾಡುಗಳ ಸವಿವರಣೆ ಬರೆದಿಡುತ್ತಿದ್ದರು. ಹೀಗೆ ಸಂಗೀತದ ಸೆಳೆತ ಆಂಗ್ಲ ಹಾಡುಗಳಲ್ಲಿ ಪರಿಣಿತೆ ಆಗಿಸಿತು. ಈ ರೀತಿ ಹಲವು ಹಿಪ್ ಹಾಪ್ ಕಲಾವಿದರೊಂದಿಗೆ ಬೆರೆತು, ಬ್ರೇಕ್ ಡ್ಯಾನ್ಸ್ ಕಲಿಯುವಂತೆ ಮಾಡಿತು. ಇಲ್ಲಿಂದಲೇ ಆಕೆಗೆ ಮೊದಲ ಸ್ಟೇಜ್ ಹೆಸರು `ಬೀ ಗರ್ಲ್ ಮ್ಯಾ’ ಎಂದಾಯಿತು.
ಈಕೆ ಡಿಸೈನಿಂಗ್ ಕಲಿಯಿಂದು ಮುಂಬೈನಿಂದ ಹೊರ ನಡೆದರು. ನಂತರ ಬಾಂಬೆಯ ಡಿಸೈನ್ ಸೆಂಟರ್ ನಲ್ಲಿ ಸ್ಕಾಲರ್ ರೂಪದಲ್ಲಿ ವಾಪಸ್ಸಾದರು. ನಂತರ ಹೈದರಾಬಾದನಲ್ಲಿ ಮೈಕ್ರೋಸಾಫ್ಟ್ ಎಂಜಿನಿಯರ್ ಆಗಿ ಕೆಲಸ ಮಾಡಲು ಮತ್ತೆ ಹೊರಟರು. ಈ ರೀತಿ ಆಕೆ ತನ್ನಲ್ಲೇ ಏನೋ ಒಂದು ಖಾಲಿತನ ಕಂಡುಕೊಂಡರು. ನಂತರ ತನ್ನದೇ ಸ್ಟೈಲ್ ನಲ್ಲಿ ರಾಂಪ್ ಶೈಲಿ ಕಲಿತರು. ಮುಂಬೈನಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಹಿಪ್ ಹಾಪ್ ಪರಿದೃಶ್ಯಗಳ ಹತ್ತಿರವಾಗಲು, ಆಕೆ ಮುಂಬೈನಲ್ಲೇ ನೌಕರಿ ಕಂಡುಕೊಂಡರು.
ಜೋಶ್‌ಪ್ಯಾಶನ್ ಇದೇ ಸಂದರ್ಭದಲ್ಲಿ ಕ್ರಾಂತಿನಾರಿ ಮೊದಲ ಸಲ ಮುಂಬೈನ ಸ್ವದೇಶಿಯ ಒಂದು ಪೊಲಿಟಿಕ್ ರಾಂಪ್ ಕ್ರೂ ನೋಡಿದರು. ನಾನು ಅಂದುಕೊಂಡಿದ್ದನ್ನೇ ಇವರು ಆಡಿ ತೋರಿಸುತ್ತಿದ್ದಾರೆ ಎಂದು ಗ್ರಹಿಸಿದರು. ಇದನ್ನು ನೋಡಿ ತನ್ನ ಮುಂದಿನ ದಾರಿ ಏನೆಂದು ಆಕೆಗೆ ತಿಳಿಯಿತು. ಹಾಗೆಲ್ಲ ಆಫೀಸಿನಲ್ಲಿ ದುಡಿದು, ಸ್ವದೇಶಿ ರಾಂಪ್ ಕ್ರೂ ಜೊತೆ ಟ್ರೇನಿಂಗ್ ಪಡೆಯುತ್ತಿದ್ದರು. ಇಲ್ಲೇ ಆಕೆ ಅಂಡರ್ ಗ್ರೌಂಡ್ ಓಪನ್ ಮೈಕ್ ಇವೆಂಟ್ಸ್ ಗೆ ಹೋಗತೊಡಗಿದರು. ಅಲ್ಲಿನ ವಿಶೇಷ ಅಂದ್ರೆ, ಯಾರು ಬೇಕಾದರೂ ವೇದಿಕೆ ಹತ್ತಿ ಪ್ರದರ್ಶನ ನೀಡಬಹುದಿತ್ತು. 3 ವರ್ಷಗಳವರೆಗೂ ಅವರ ತಾಯಿತಂದೆಗೆ ಈ ಬಗ್ಗೆ ಗೊತ್ತೇ ಆಗಲಿಲ್ಲ. ಅವರು ನಡುವೆ ಫೋನ್ ಮಾಡಿದರೂ, ಆಫೀಸ್ ಕೆಲಸದಲ್ಲಿ ಬಿಝಿ ಎಂದೇ ಹೇಳುತ್ತಿದ್ದರಂತೆ.
ಇವರ ಫ್ಯಾಮಿಲಿ ಫ್ರೆಂಡ್ ಒಬ್ಬರು ಈಕೆಯ ಕುರಿತು ಪೇಪರ್ ನಲ್ಲಿ ಪ್ರಕಟಗೊಂಡಿದ್ದ ಒಂದು ಲೇಖನ ಗಮನಿಸಿ, ಕ್ರಾಂತಿನಾರಿಯ ಫೋಟೋ, ವಿವರಗಳ ಕುರಿತಾಗಿ ಆಕೆಯ ಹಿರಿಯರಿಗೆ ತಿಳಿಸಿದರು. ಆಕೆಯ ತಾಯಿಯಂತೂ, ಈಕೆ ಮತ್ತೆ ಇಂಥ ಪ್ರದರ್ಶನ ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ನಂತರ ಆಕೆ ಹಿರಿಯರಿಗೆ ಹಲವು ವಿಧದಲ್ಲಿ ತಿಳಿಹೇಳಿದರೂ ಅವರು ಒಪ್ಪಲು ತಯಾರಿರಲಿಲ್ಲ.
ಮತ್ತೊಮ್ಮೆ ಈಕೆಯ ನೆಂಟರೊಬ್ಬರು ಹೆಣ್ಣುಮಕ್ಕಳು ಇಂಥ ರಾಂಪ್ ಹಾಡೋದೇ ಎಂದು ಇವರ ಹಿರಿಯರ ಬಳಿ ದೂರಿದಾಗ, ಸರ್ಕಾರಕ್ಕೆ ಸವಾಲು ಒಡ್ಡುವಂಥ ಸವಾಲು ಈ ಹಾಡಲ್ಲಿದೆ. ಅದನ್ನು ಹಾಡುವವರು ದೇಶದ್ರೋಹಿಗಳು ಎಂದೆಲ್ಲ ದೂರಿದರಂತೆ. ಈ ಮಾತುಗಳು ಇವರನ್ನು ಮಾನಸಿಕವಾಗಿ ಬಹು ಕುಗ್ಗಿಸಿದರೂ, ಹಿಡಿದ ಪಟ್ಟು ಬಿಟ್ಟುಕೊಡಲಿಲ್ಲ.
ಈಕೆಯ ತರಹವೇ ಮಹಿಳೆ ಸಹ ಕೌಟುಂಬಿಕ ಒತ್ತಡಗಳಿಗೆ ಸಿಲುಕಬೇಕಾಯಿತು. ಆಕೆ ವಾಸಿಸುತ್ತಿದ್ದ ವಠಾರದಲ್ಲಿ, ಹೆಣ್ಣು ಕಲಿತು ಒಂದು ಸಾಧಾರಣ ನೌಕರಿ ಸೇರಿದ್ದರೆ ಸಾಕಿತ್ತು, ಇಂಥ ವೇದಿಕೆ ಪ್ರದರ್ಶನ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅಲ್ಲಿನ ವಾತಾವರಣ ತುಂಬಾ ಭಿನ್ನವಾಗಿತ್ತು. ಮುಂದೆ ಹುಡುಗಿ ಈ ತರಹ ವೇದಿಕೆ ಏರಿ ಹಿಪ್ ಹಾಪ್, ರಾಂಪ್ ಗಳ ಬಗ್ಗೆ ಅವರು ಎದುರು ನೋಡಿದವರಲ್ಲ.
ಈಕೆ ಈ ರೀತಿಯ ಪ್ರದರ್ಶನ ಶುರು ಮಾಡಿದಾಗಿನಿಂದ, ತಾಯಿತಂದೆ ಬಲವಾಗಿ ವಿರೋಧಿಸಿದರು. “ನಾನು ಇಡೀ ಮನೆಗೆ ಬ್ಲ್ಯಾಕ್ ಶೀಪ್ ಆಗಿಹೋದೆ,” ಎಂದು ನಗುತ್ತಾ ಹೇಳುತ್ತಾರೆ. ಕ್ರಮೇಣ ಮಹಿಳೆ ಉತ್ತಮ ಕಾರ್ಯಕ್ರಮ ನೀಡತೊಡಗಿದಂತೆ, ತಾಯಿ ತಂದೆ ತಮ್ಮ ಮಗಳ ಬಗ್ಗೆ ಹೆಮ್ಮೆಪಡತೊಡಗಿದರು.
ವೇದಿಕೆ ಮೇಲೆ ಈಕೆ ಬೆಂಕಿಯ ಜ್ವಾಲೆಯಂತೆ ಧಗಧಗಿಸುತ್ತಾ, ಜೋಶ್ ನಲ್ಲಿ ಉಚ್ಚಸ್ಥಾಯಿಯಲ್ಲಿ ಹಾಡುತ್ತಾರೆ. ಕೆಳಗಿಳಿದಂತೆ ಮಾಮೂಲಿ ಹುಡುಗಿ ಆಗಿರ್ತಾರೆ. “ನಾನು ಮೊದಲಿನಿಂದಲೂ ಇಂಟ್ರೋವರ್ಟ್, ಹೀಗಾಗಿ ಮಾತು ಬಹಳ ಕಡಿಮೆ, ಸಂಕೋಚ ಜಾಸ್ತಿ. ಹೀಗೆಯೇ ಸದಾ ಸ್ಟ್ರೇಟ್ ಫಾರ್ವರ್ಡ್ ಆಗಿರ್ತೀನಿ,” ಎನ್ನುತ್ತಾರೆ.
ಇವರ ಹಿನ್ನೆಲೆ ಈಕೆಯನ್ನು ವೈಲ್ಡ್ ವೈಲ್ಡ್ ವಿಮೆನ್ ತಂಡಕ್ಕೆ ಎಳೆತಂದಿತು, ಇತರ ರಾಂಪರ್ಸ್ ಗಿಂತ ಭಿನ್ನವಾಗಿ ನಿಲ್ಲಿಸಿತು. ಪ್ರತೀಕಾ ಹೇಳುತ್ತಾರೆ, “ಅವರ ಕೆಲಸ ಹೆಚ್ಚು ಪರಿಣಾಮಕಾರಿ, ಅಪ್ಪಟ ಅಸಲಿ.”
ಪ್ರತೀಕಾರ ಅನುಭವ ತೀರಾ ವಿಭಿನ್ನವೇನಲ್ಲ. ಬಾಲ್ಯದಿಂದಲೂ ಬಡತನದ ಬೇಗೆ. ಮುಂಬೈನ ನಾನಾ ಭಾಗಗಳಲ್ಲಿ ಬಾಡಿಗೆಮನೆ ವಾಸ. ಅಲ್ಲೆಲ್ಲ ಸಮಾಜದಲ್ಲಿ ನಡೆಯುವ ಹಿಂಸೆ, ದೌರ್ಜನ್ಯ ಗಮನಿಸಿದರು. ಜೀವನ ಬಲು ಸಂಘರ್ಷದಿಂದ ಕೂಡಿತ್ತು. ಇವೆಲ್ಲ ತನ್ನ ಮೇಲೆ ಗಾಢ ಪ್ರಭಾವ ಬೀರಿದ, ಅಂತಾರೆ ಪ್ರತೀಕಾ.
“ಬದಲಾಯಿಸುತ್ತಿರುವ ಪರಿಸ್ಥಿತಿಗಳ ಮಧ್ಯೆ ಸಂಗೀತ ನನ್ನ ಉಸಿರಾಯಿತು. 12ನೇ ವಯಸ್ಸಿನಲ್ಲೇ `ಕ್ರಾನಿಕ್ ಫೆಬಿಯಾ’ ಎಂಬ ಮೆಟಲ್ ಬ್ಯಾಂಡ್ ಸೇರಿ ಬೇಸ್ ಗಿಟಾರ್ ಬಾರಿಸುತ್ತಿದ್ದೆ. ಕೆಲವು ವರ್ಷ ಚರ್ಚೆ ಕಾಯರ್ ಗ್ರೂಪ್ ಜೊತೆಯೂ ದುಡಿದೆ. ಟಿವಿಯಲ್ಲಿ ಹಿಪ್ ಹಾಪ್ ಪ್ರದರ್ಶನ ಕಂಡಾಗೆಲ್ಲ ಅಂಥದ್ದೇ ತಂಡದ ಜೊತೆ ಬೆರೆಯಲು ಮನಸ್ಸಾಯಿತು. ಈ ರೀತಿ ಸಂಗೀತಕಲೆ, ಸ್ಟ್ರಾಂಗ್ ರಾಂಪ್ ಜೊತೆ ಸೇರಿ ಅಮೆರಿಕನ್ ಬ್ಯಾಂಡ್ `ಲಿಂಫಿನ್ ಪಾರ್ಕ್’ನೊಂದಿಗೆ ಬೆರೆತೆ.”

ಸಂಗೀತವೇ ಉಸಿರಾಯಿತು
ಮಾಸ್ ಕಮ್ಯುನಿಕೇಶನ್ಸ್ ನಲ್ಲಿ ಡಿಗ್ರಿ ಗಳಿಸಿದ ನಂತರ, ಪ್ರತೀಕಾ ತನಗೆ ನಿಖರ ಆದಾಯ ನೀಡುವಂಥ ಮ್ಯೂಸಿಕ್ ಗ್ರೂಪ್‌ಹುಡುಕಿದರು. ಅನೇಕ ಬಗೆಯ ನೌಕರಿ ಮಾಡಿದ್ದೂ ಆಯ್ತು ವಾದ್ಯಯಂತ್ರ ಮಾರಾಟಗಾರರು, ಒಂದು ಇವೆಂಟ್ ಕಂಪನಿ, ಒಂದು ಸ್ವತಂತ್ರ ರೆಕಾರ್ಡ್ ಲೇಬಲ್ ಜೊತೆ ದುಡಿದದ್ದಾಯಿತು. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ, ರೆಕಾರ್ಡ್ ಲೇಬಲ್ ಕಂಪನಿಯೂ ಮುಚ್ಚಿಹೋಯಿತು. ಆಗ ಹೊಟ್ಟೆಪಾಡಿಗಾಗಿ ಯಾವುದೋ ರಿಮೋಟ್ ಜಾಬ್ ಮಾಡಿದ್ದಾಯ್ತು.
ಆ ಸಂದರ್ಭದಲ್ಲಿ ಪ್ರತೀಕಾ ದೆಹಲಿಯ ಹಿಪ್ ಹಾಪ್ ಜೋಡಿ `ಸೀಧೆ ಮೋತ್’ ಜೊತೆ ಕಾಲ ಕಳೆಯುತ್ತಿದ್ದರು. ಅವರಲ್ಲಿ ಒಬ್ಬರು ಒಂದು ಹೊಸ ಬಗೆಯ ಬೀಟ್ ಕೇಳಿಸಿದರು. ಆ ಬೀಟ್ ತಾನು ಬಳಸಿಕೊಳ್ಳಬಹುದೇ ಎಂದು ಕೇಳಿದರಂತೆ.
“ಅವರ ಎದುರು ಕುಳಿತು ಅರ್ಧ ಗಂಟೆಯಲ್ಲಿ ಒಂದು ರಾಂಪ್ ಬರೆದು, ಹಾಡಿ ತೋರಿಸಿದೆ! ಇದೇ ನನ್ನ ಮೊದಲ ಹಾಡು. ಅಲ್ಲಿಂದಲೇ ಎಲ್ಲಾ ಶುರುವಾಗಿ ಇಲ್ಲಿಗೆ ಬಂದು ಸೇರುವಂತಾಯ್ತು.”
ಲಾ. ಕ್ವೀನ್ ಗೆ ಸಂಗೀತ ಮೊದಲ ಪರಿಚಯವಾದದ್ದು ಅವರ ತಂದೆಯಿಂದಲೇ. ಅವರ ತಂದೆ ಮೈಕೆಲ್ ಜಾಕ್ಸನ್ ನ ದೊಡ್ಡ ಫ್ಯಾನ್ ಆಗಿದ್ದರು. ಮನೆಯ ಬಳಿಯ ಹಾಗೂ ಶಾಲೆಯಲ್ಲಿನ ಪಠ್ಯೇತರ ಚಟುವಟಿಕೆಗಳಲ್ಲಿ ಈಕೆ ಅಂಥದ್ದೇ ಹಾಡು ಹಾಡುತ್ತಿದ್ದರು.
“ಅಂದಿನಿಂದ ನಾನು ಮೈಕೆಲ್ ಜಾಕ್ಸನ್ ಫ್ಯಾನ್ ಆದೆ. ನಮ್ಮ ಟೀಚರ್ ಪ್ರೋತ್ಸಾಹದಿಂದ ನಾನು ಮುಂದೆ ಸಾರ್ವಜನಿಕ ಕಾರ್ಯಕ್ರಮ ನೀಡುವಂತಾಯಿತು. ಮುಂದೆ ಬೆಳೆದು ಹಿಪ್ ಹಾಪ್ ಲೋಕಕ್ಕೆ ಪಾದಾರ್ಪಣೆ ಆಯಿತು. ಯೂಟ್ಯೂಬ್ ವಿಡಿಯೋಗಳಿಂದ ಇದನ್ನು ಕಲಿತೆ. ನಿಕ್ಕಿ ಮಿನಾಜ್, ತ್ರಿನಿರಾಜ್ಯ ರಾಂಕರ್ ಮುಂತಾದವರಿಂದ ಬಹಳ ಪ್ರಭಾವಿತಳಾದೆ.
“ನಾನು ಹುಡುಗರ ರಾಂಪ ಸಾಂಗ್ಸ್ ಕೇಳುತ್ತಾ ಅವರ ಹಾಗೇ ಪ್ರಾಕ್ಟೀಸ್ ಮಾಡಿದೆ. ಆದರೆ ನಿಕ್ಕಿ ಹಾಡುತ್ತಿದ್ದ ಹಾಡುಗಳು ಭಿನ್ನವಾಗಿದ್ದವು. ನಾನು ಅವರಂತೆಯೇ ಆಗಲು ಬಯಸಿದೆ.”
ಆಕೆ ಹಾಡುಗಳ ಸಾಹಿತ್ಯ ಬರೆದುಕೊಂಡು, ಸತತ ಪ್ರಾಕ್ಟೀಸ್ ಮಾಡತೊಡಗಿದರು. ಹೀಗೇ ಶ್ರಮವಹಿಸಿ, ಬೀಟ್ ಬಾಕ್ಸಿಂಗ್ ಕಲಿತಿದ್ದಾಯಿತು. ಈ ಟೆಕ್ನಿಕ್ ಮುಖಾಂತರ, ಕಲಾವಿದರು ಡ್ರಮ್ ಗೆ ತಕ್ಕ ಧ್ವನಿ ಹೊರಡಿಸುವರು. ಒಂದು ಸಲ ಕ್ಲಾಸಿಗೆ ತಡವಾಗಿ ಬಂದದ್ದಕ್ಕೆ, ಈಕೆಗೆ ಏನಾದರೂ ಪ್ರದರ್ಶನ ನೀಡಲು ಹೇಳಲಾಯಿತು. ಆಗ ಈಕೆ ರಾಂಪ್ ಗಾಯಕಿ ಎಂದು ಎಲ್ಲರಿಗೂ ತಿಳಿಯಿತು. ನಂತರ ಎಲ್ಲರೂ ಆಕೆಯನ್ನು ಆ ಕಲೆ ಕರಗತ ಮಾಡಿಕೊಳ್ಳಲು ಒತ್ತಾಯಿಸಿದರು.
ಹಿಪ್ ಹಾಪ್ ತಂಡದ ಮತ್ತೊಬ್ಬ ಗೆಳತಿ ಈಕೆಯನ್ನು ದಕ್ಷಿಣ ಮುಂಬೈನ ಒಂದು ಬ್ಯಾಂಡ್ ಗೆ ಕರೆತಂದರು. ಅದಕ್ಕೆ ಜಮೈಕಾದ ಪ್ರಸಿದ್ಧ ಕಲಾವಿದ ಬಾಬ್‌ರ್ಮಾಲೆಯ ಹೆಸರಿಡಲಾಗಿತ್ತು. ಅದು `ಬಾಬ್‌ರ್ಮಾಲೆ ಮಂದಿರ’ ಎಂದೇ ಖ್ಯಾತಗೊಂಡಿತ್ತು. ವಾಸ್ತವದಲ್ಲಿ ಅದು ಕಟ್ಟಿಗೆ ಕಬ್ಬಿಣದ ವರ್ಕ್ ಶಾಪ್ ಆಗಿತ್ತು. ಅದರ ಮಾಲೀಕ ಗಿಟಾರ್ ನುಡಿಸುತ್ತಿದ್ದ. ಹರ್ಪಾ ಸಿಂಗ್, ಇಂಥ ಯಂಗ್ ಕಲಾವಿದರನ್ನು ಹೆಚ್ಚು ಪ್ರೋತ್ಸಾಹಿಸುತ್ತಿದ್ದರು.
ಅವರ ಸಹಾಯದಿಂದಾಗಿ ಈ ಲಾ. ಕ್ವೀನ್ ಬ್ರಿಟಿಷ್ ರಾಕ್ ಬ್ಯಾಂಡ್ `ದಿ ಬೀಟ್ಸ್’ ಹಾಗೂ ಸ್ವೀಡಿಶ್ ಪಾಪ್ ಗ್ರೂಪ್`ಎಬ್ಬಾ’ದ ಸಂಗೀತ ಕೇಳಲು ಆರಂಭಿಸಿದರು. ಈಕೆ ಅಲ್ಲಿನ ಇತರ ರಾಂಪರ್ಸ್ ನ್ನೂ ಭೇಟಿ ಆದರು. ಅವರಲ್ಲಿ ಒಬ್ಬಾತ ಹಿಪ್ ಹಾಪ್ ಪ್ರವೀಣ. ಈಕೆ ಆತನೊಂದಿಗೆ ಪ್ರದರ್ಶನ ನೀಡತೊಡಗಿದರು.
ಲಾ. ಕ್ವೀನ್ ರ ತಾಯಿತಂದೆ ಆಕೆ ಯಾವುದಾದರೂ ಉತ್ತಮ ನೌಕರಿ ಸೇರಲಿ ಎಂದು ಬಯಸಿದರು. ಹಾಗೆಯೇ ಆಕೆ ಯಾವುದೋ ಸಣ್ಣಪುಟ್ಟ ನೌಕರಿ ಮಾಡುತ್ತಾ, 6 ವರ್ಷಗಳ ಕಠಿಣ ಶ್ರಮಪಟ್ಟರು. ಬೆಳಗ್ಗೆ 5 ಗಂಟೆಗೇ ಎದ್ದು, 12 ಗಂಟೆಗಳ ಪ್ರಯಾಣ ಮುಗಿಸಿ, 8 ಗಂಟೆಗೆಲ್ಲಾ ರಿಯಲ್ ಎಸ್ಟೇಟ್ ಫರ್ಮ್ ನ ಕೆಲಸವನ್ನು ಮಾಡುತ್ತಿದ್ದರು. ಸಂಜೆ 6 ಗಂಟೆ ನಂತರ, ಮತ್ತೆ 12 ಗಂಟೆ ಪ್ರಯಾಣಿಸಿ, ತನ್ನ ಗ್ರೂಪ್ ಜೊತೆ ಅಭ್ಯಾಸಕ್ಕಾಗಿ ಬರುತ್ತಿದ್ದರು. ನಂತರ 1 ಗಂಟೆ ಕಾಲ ಪ್ರಯಾಣ ಮುಗಿಸಿ ಮನೆ ಸೇರುತ್ತಿದ್ದರು.
“ಅಮ್ಮ ಅಪ್ಪನ ಸಮಾಧಾನಕ್ಕಾಗಿ ಅವರು ಹೇಳಿದ ನೌಕರಿ ಮಾಡುತ್ತಾ, ನನ್ನ ತೃಪ್ತಿಗಾಗಿ ಸಂಜೆ ಮ್ಯೂಸಿಕ್ ಪ್ರಾಕ್ಟೀಸ್ ಮಾಡುತ್ತಿದ್ದೆ. ಇಷ್ಟಾದರೂ ಸಾಧ್ಯವಾಯ್ತಲ್ಲ ಎಂಬುದೇ ದೊಡ್ಡ ತೃಪ್ತಿ!”
ನಂತರ ಕ್ರಮೇಣ ಈಕೆಗೊಂದು ಐಡೆಂಟಿಟಿ ದೊರಕಿದಂತೆ, ಆ ತಂಡದ ಇತರ ಸದಸ್ಯರು ತಾವು ಅಸುರಕ್ಷಿತರೇನೋ ಎಂದು ಭಾವಿಸತೊಡಗಿದರು. ಹೀಗಾಗಿ ಅವರಲ್ಲೊಬ್ಬರು ನೇರವಾಗಿ ಈಕೆಗೆ ಈ ತಂಡ ಬಿಟ್ಟು ಹೊರಡುವಂತೆ ಸೂಚಿಸಿದರು. ಹಾಗಾಗಿ ಆ ತಂಡ ಬಿಟ್ಟು ತನ್ನಷ್ಟಕ್ಕೆ ಸೋಲೋ ಪರ್ಫಾರ್ಮೆನ್ಸ್ ನೀಡುತ್ತಿದ್ದರು, ನಂತರವೇ ವೈಲ್ಡ್ ವೈಲ್ಡ್ ವಿಮೆನ್ ಸೇರಿದರು.
ಅಭ್ಯಾಸ ಆಯಿತು ಪ್ಯಾಶನ್
ಈ ನಡುವೆ ಮತ್ತೊಬ್ಬ ಯುವತಿ ತನ್ನ ಸ್ವರ ಸಾಧನೆಗಾಗಿ ಹೊಸ ಮಾಧ್ಯಮ ಹುಡುಕ ತೊಡಗಿದರು. ಹ್ಯಾಶ್ ಟ್ಯಾಗ್ ಪ್ರೀತಿಗೆ ಹಾಡುಗಳಿಗೆ ಸಾಹಿತ್ಯ ರಚಿಸುವುದು ಸದಾ ಒಂದು ಭಾವನಾತ್ಮಕ ಅಭಿವ್ಯಕ್ತಿಯ ಮಾಧ್ಯಮವಾಯಿತು. ಬೋರ್ಡಿಂಗ್ ಸ್ಕೂಲಿನಲ್ಲಿ ಓದಿನ ಜೊತೆಗೆ ಆಕೆ ಪ್ರತಿ ವಾರ ತನ್ನ ತಾಯಿತಂದೆಗೆ ಪತ್ರ ಬರೆಯಬೇಕಿತ್ತು. ಆಕೆ ತನ್ನ ಬಾಲ್ಯ ಕಳೆದದ್ದೇ ಹಾಗೇ. ಈ ಅಭ್ಯಾಸ ಮುಂದೆ ಡೈರಿ ರೈಟಿಂಗ್ ಗೆ ನಾಂದಿಯಾಯ್ತು. ನಂತರ ಕ್ರಮೇಣ ಆಕೆಗೆ ಈ ರೀತಿಯ ಬರವಣಿಗೆ ಕೇವಲ ಒಂದು ಅಭ್ಯಾಸ ಅಲ್ಲದೆ, ತಾನು ಪ್ಯಾಶನ್ ಆಗಿ ಒಪ್ಪಿಕೊಂಡಿದ್ದೇನೆಂದು ತಿಳಿಯಿತು.
“ನನ್ನ ತಂದೆ ಒಬ್ಬ ವ್ಯಾಪಾರಿ. ಮುಂದೆ ನಾನು ಡಿಗ್ರಿ ಪಡೆದು ಇದೇ ಬಿಸ್ ನೆಸ್ ಮುಂದುವರಿಸುತ್ತೇನೆಂದು ಅವರು ಬಯಸಿದ್ದರು. ಅದರಲ್ಲಿ ಕೆಲಸ ಹಿತಕರ ಎನಿಸುವ ಸೌಲಭ್ಯಗಳಿದ್ದವು, ಜೊತೆಗೆ ಕೆಲವು ನಿಯಮಗಳೂ ಇದ್ದವು. ನಾನು ಬಯಸಿದಂಥ ರಾಂಪ್, ಹಿಪ್ ಹಾಪ್ ಹಾಡುಗಳನ್ನು ಮನೆಯಲ್ಲಿ ಕೇಳುವಂತಿರಲಿಲ್ಲ. ಇದೊಂದು ಸಂಗೀತವೇ? ಎಂದು ವ್ಯಂಗ್ಯವಾಡುತ್ತಿದ್ದರು. ಹೀಗಾಗಿ ಮುಂದೆ ನಾನೊಬ್ಬ ಕಲಾವಿದೆ ಆಗುವೆ ಎಂಬ ನಂಬಿಕೆ ನನಗಿರಲಿಲ್ಲ. ಇರುವುದರಲ್ಲಿಯೇ ತೃಪ್ತಿ ಪಟ್ಟುಕೊಂಡು ಸುಮ್ಮನಿರುತ್ತಿದ್ದೆ.”
ಸುಮಾರು 7 ವರ್ಷಗಳ ಹಿಂದೆ, ಆಕೆ ಮುಂಬೈನ ಹಿಪ್ ಹಾಪ್ ಪ್ರದರ್ಶನಗಳನ್ನು ಕಂಡಾಗ, ತಾನೂ ಮುಂದೆ ಈ ಮಟ್ಟದ ಸಾಧನೆ ಮಾಡಬೇಕೆಂದು ದೃಢ ಸಂಕಲ್ಪ ಕೈಗೊಂಡರು. ತಾನೇ ರಚಿಸಿದ ಸಾಹಿತ್ಯಕ್ಕೆ ಮ್ಯೂಸಿಕ್ ಕಂಪೋಸ್ ಮಾಡತೊಡಗಿದರು.
“ಅದು ಪ್ರಾಕ್ಟಿಕಲ್ ಆಗಿಯೂ ವರ್ಕ್ ಆಗುತ್ತದೆ ಎಂದು ಪ್ರೇಕ್ಷಕರ ಮೆಚ್ಚುಗೆ, ಉತ್ತೇಜನಗಳಿಂದ ಕಂಡುಕೊಂಡೆ. ಈ ಮಟ್ಟಕ್ಕೆ ಬೆಳೆಯಬೇಕೆಂದೇ ನಾನು ಬಯಸುತ್ತಿದ್ದೆ!”
ಪ್ರೀತಿ ಹುಟ್ಟಿ ಬೆಳೆದ ವಾತಾವರಣದಲ್ಲಿ ಎಲ್ಲೆಡೆ ಹೆಂಗಸರೇ ತುಂಬಿದ್ದರು. ಓದಿದ್ದೆಲ್ಲ ಗರ್ಲ್ಸ್ ಸ್ಕೂಲ್ ನಲ್ಲೇ. “ನಾನು ಹಿಪ್ ಹಾಪ್ ನಲ್ಲಿ ಖ್ಯಾತಳಾದಂತೆ, ನಾನೀಗ ಇರುವ ಈ ತಂಡದ ಹುಡುಗಿಯರನ್ನೇ ನಾನು ಹುಡುಕುತ್ತಿದ್ದೆ ಅಲ್ಲವೇ ಎಂದುಕೊಳ್ಳುತ್ತಿದ್ದೆ.
`ದಿಸ್ ಈಸ್ ಫಾರ್ ದಿ ಗರ್ಲ್ಸ ಹೂ ಸಮಝ್ತೆ ಹಿಪ್ ಹಾಪ್……’ ಎಂಬುದೇ ಈಕೆಯ ಮೊದಲ ರಾಂಪ್ ಸಾಂಗ್ ಆಗಿತ್ತು.
ಮೊದಲು ಈಕೆ ರಾಂಪ್ ಸಾಂಗ್ ಹಾಡಲು ಸೇರಿದ್ದ ತಂಡದಲ್ಲಿ ಅನೇಕ ಗಂಡಸರಿದ್ದರು. “ಅಲ್ಲಿ ಎಲ್ಲವೂ ಸರಿಯಾಗಿರಲಿಲ್ಲ… ನಾನು ಅವರೊಂದಿಗೆ ಮುಂದುವರಿಸಿದ ಜರ್ನಿ ಸರಿಯೋ ತಪ್ಪೋ ಗೊತ್ತಾಗಲಿಲ್ಲ. ಈ ಕುರಿತು ಬಹಳ ದಿನ ಸಂದೇಹ ಕಾಡುತ್ತಿತ್ತು.” ಆದರೆ ಈಕೆಯ ಮನದಲ್ಲಿ ಸದಾ ಒಂದು ಕನಸು ತುಂಬಿತ್ತು. ”ಹುಡುಗಿಯರದ್ದೇ ತಂಡದಲ್ಲಿ ನಾನು ಹಾಡಬೇಕೆಂದು ನಿಶ್ಚಯಿಸಿದ್ದೇ. ಅಂತೂ ಆ ಕನಸು ನನಸಾಯಿತು,” ಎನ್ನುತ್ತಾರೆ.
ಜೀವನದ ಉತ್ತಮ ನಿರ್ಣಯಕ್ರಾಂತಿಕಾರಿ. ಕ್ವೀನ್ ಪರಸ್ಪರ ಹಿಪ್ ಹಾಪ್ ನಿಂದ ಬಲ್ಲರು. ಇವರು ಇದಕ್ಕೂ ಮೊದಲೇ ಆಲ್ ವಿಮೆನ್ ಕ್ರೂ ಮುಖಾಂತರ ಪ್ರದರ್ಶನ ನೀಡಿದ್ದರು. ಕ್ರಾಂತಿ ಈಕೆಗೆ ಫೋನ್ ಮಾಡಿದಾಗ, ತಾನು ಪ್ರೀತಿ ಜೊತೆ ಈಗಾಗಲೇ ಸೈಫರ್ ಕುರಿತಾಗಿ ಪ್ಲಾನ್ ಮಾಡಿರುವುದನ್ನು ಹೇಳಿದರು. ಇದಕ್ಕಾಗಿ ಕ್ವೀನ್ ನ್ನು ಕರೆದಾಗ, ಆಕೆಗೆ ಈ ಕುರಿತಾಗಿ ಸ್ವಲ್ಪ ಗೊಂದಲವಿತ್ತು.
ತನ್ನ ಹಳೆಯ ಗ್ರೂಪಿನಿಂದ ಹೊರಬಂದ ನಂತರ, ಮುಂದೇನು ದಾರಿ ಎಂದು ಆಕೆ ಚಿಂತಿಸುತ್ತಿದ್ದರು.
“ಮುಂದೆ ನಾನು ರಾಂಪ್ ನಲ್ಲಿ ಏನಾದರೂ ಸಾಧಿಸಬಲ್ಲೇ ಎಂಬ ಗ್ಯಾರಂಟಿ ಸಹ ಇರಲಿಲ್ಲ,” ಎನ್ನುತ್ತಾರೆ ಕ್ವೀನ್. ಗೆಳತಿಯಿಂದ ಈ ಕುರಿತಾಗಿ ಸಲಹೆ ಪಡೆದು, “ಈ ತಂಡಕ್ಕೆ ಸೇರುವುದಾಗಿ ನಿಶ್ಚಯಿಸಿದ್ದು ನನ್ನ ಜೀವನದ ಅತ್ಯುತ್ತಮ ನಿರ್ಣಯ ಎಂದು ನಂತರ ಸಿದ್ಧವಾಯಿತು,” ಎಂದು ಹೆಮ್ಮೆಪಡುತ್ತಾರೆ.
ಕ್ರಾಂತಿ ಮತ್ತು ಪ್ರೀತಿ ನೆನಪಿಸಿಕೊಳ್ಳುತ್ತಾ ಹೇಳಿದರು, ಆ ಸೈಫರ್ ಗಾಗಿ ಮಾತುಕಥೆ ಹೀಗೇ ನಡೆದಿತ್ತಂತೆ. ಕೆಲವು ಉತ್ತರಗಳು ಅತಿ ಸಣ್ಣ ಹಾಗೂ ಬೇಗ ಬೇಗ ಕೈಗೊಳ್ಳಲಾಗುತ್ತಿತ್ತು. ಯಾವ ಯುವತಿಯರ ಜೊತೆ ಮಾತನಾಡಿದ್ದರೋ, ಅವರು ಬರುತ್ತಾರೋ ಇಲ್ಲವೋ ಸ್ಪಷ್ಟ ಇರಲಿಲ್ಲ. ಆದರೆ ಹೆಚ್ಚಿನ ಪಾಲು ಯುವತಿಯರು ಬಂದರು. 2021ರ ಮಾರ್ಚ್ ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವೈಲ್ಡ್ ವೈಲ್ಡ್ ವಿಮೆನ್ ತಂಡ ತನ್ನ ಮೊದಲ ಸಿಂಗ್ ಆಲ್ಬಂ ರಿಲೀಸ್ ಮಾಡಿತು, ಅದುವೇ `ಐ ಡೂ ಇಟ್ ಫಾರ್ ಹಿಪ್ ಹಾಪ್!’
ಈ ಹಾಡಿನಲ್ಲಿ ಪಾಲ್ಗೊಂಡಿದ್ದ ಎಲ್ಲಾ ರಾಂಪರ್ಸ್ ತಮ್ಮ ಮೂಲ, ಸಂಗೀತದಿಂದ ತಮ್ಮ ಸಂಬಂಧಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಪ್ರೊಡಕ್ಷನ್ ಜವಾಬ್ದಾರಿ ಆ ಕಾಲದ ಪೋಷಕರದು, ಅವರು ಇಂಡಸ್ಟ್ರಿಗೆ ಇನ್ನೂ ಹೊಸಬರಾಗಿದ್ದರು. ಪ್ರತೀಕಾ ತಮ್ಮ ಬಳಿ ಇದ್ದ ಸಾಧನಗಳಿಂದಲೇ ವಿಡಿಯೋ ಶೂಟಿಂಗ್ ಎಡಿಟಿಂಗ್ ನಡೆಸಿದರು.
“ಈ ಸೈಫರ್ ಕುರಿತಾಗಿ ಬಲು ಉತ್ಸಾಹಿತಳಾಗಿದ್ದೆ. ಕೇವಲ ಎರಡೇ ದಿನಗಳಲ್ಲಿ ಈ ವಿಡಿಯೋ ಎಡಿಟ್ ಮಾಡಿ, ಎಲ್ಲರೊಂದಿಗೆ ಹಂಚಿಕೊಂಡಿದ್ದೆ.”
ಅಸ್ಪಷ್ಟ ಆಲೋಚನೆ
ಈ ತಂಡ ತಮ್ಮ ಉತ್ಸಾಹ ಹೆಚ್ಚಿಸಿಕೊಳ್ಳಲು ಒಂದು ಟೀಸರ್ ನ್ನು ಸಹ ಹೊರಡಿಸಿತು. ಅದಾದ ಮೇಲೆ ಒಂದು ಪತ್ರಿಕಾ ಘೋಷಣೆ ಆಯ್ತು. ಇದರಲ್ಲಿ ಈ ತಂಡ ತನ್ನನ್ನು ತಾನು ಭಾರತದ ಮೊಟ್ಟ ಮೊದಲ ಆಲ್ ಫೀಮೇಲ್ ಹಿಪ್ ಹಾಪ್ ಗ್ರೂಪ್ ಎಂದೇ ಬಣ್ಣಿಸಿತು. ಅದು ಹಿಪ್ ಹಾಪ್ ಕಮ್ಯುನಿಟಿಯ ತನ್ನ ಎಲ್ಲಾ ಪರಿಚಿತರೊಂದಿಗೆ ಮತ್ತೊಮ್ಮೆ ಅದಕ್ಕೆ ಪುಷ್ಟಿ ನೀಡಿತು. ತಾವು ಏನನ್ನೂ ಮರೆತಿಲ್ಲ ತಾನೇ ಎಂಬುದಾಗಿ ಆ ಮೂಲಕ ದೃಢಪಡಿಸಿಕೊಂಡಿತು. ಆ ಸಂದರ್ಭದಲ್ಲಿ ತಂಡದ ಯೋಚನೆ ಸ್ಪಷ್ಟವಾಗಿತ್ತು, ಈ ಕುರಿತಾಗಿ ಪ್ರತೀಕಾ ಹೇಳುತ್ತಾರೆ, “ಎಲ್ಲವನ್ನೂ ಸಮಾನವಾಗಿ ನಿಭಾಯಿಸುತ್ತೇವೆ. ಇನ್ನು ಹಿಂದೆ ತಿರುಗುವ ಪ್ರಶ್ನೆಯೇ ಇಲ್ಲ!”
ವೈಲ್ಡ್ ವೈಲ್ಡ್ ವಿಮೆನ್ ತಂಡಕ್ಕೆ ತಕ್ಷಣವೇ ಹಲವಾರು ಪ್ರದರ್ಶನ, ಸಂದರ್ಶನಗಳ ಆಫರ್ ಬಂದಿತು. ಪ್ರತೀಕಾ ಹೇಳುತ್ತಾರೆ, ಯಾರು ತಮ್ಮನ್ನು ಸಂಪರ್ಕಿಸುತ್ತಿದ್ದರೋ, ಅವರಿಗೆ ನಾವು ಸುಸ್ಪಷ್ಟವಾಗಿ ಹೇಳುತ್ತಿದ್ದ ವಿಚಾರವೆಂದರೆ, `ಸದ್ಯಕ್ಕೆ ನಮ್ಮ ಬಳಿ ಒಂದೇ ಹಾಡಿದೆ’ ಅಂತ. ನಂತರ ಈ ತಂಡ ಉಳಿದ 2 ಟ್ರಾಕ್ಸ್ ಸಿದ್ಧಪಡಿಸಿದ `ಗೇಮ್ ಫಿಲ್ಮ್’ `ಉಡ್ಡೂ ಆಜಾದ್’ನ ಪ್ರೊಡಕ್ಷನ್ ಮಾಡಿದರು. 2023ರಲ್ಲಿ `ಗೇಮ್ ಫಿಲ್ಮ್’ ರೀಲ್ಸ್ ವೈರಲ್ ಆದಾಗ, ಅಷ್ಟು ಹೊತ್ತಿಗೆ ಈ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸತೊಡಗಿತು.
ಹೀಗೆ ಮುಂದೆ ಈ ತಂಡಕ್ಕೆ ಹೊಸ ಹೊಸ ಸದಸ್ಯರು ಸೇರ ತೊಡಗಿದರು. ಡ್ಯಾನ್ಸರ್ ಬೀಗ್, ಈಕೆ ಫ್ಲಾರಾರನ್ನು ಮೊದಲೇ ಬಲ್ಲರು. ಈಕೆಯ ಪರಿಚಯ ಈ ತಂಡದಲ್ಲಿ 2021ರಲ್ಲಿ ಆಯ್ತು.
ಕ್ರಾಂತಿ ಮುಂದೆ ಗೌರಿಯನ್ನು ಸಂಪರ್ಕಿಸಿದರು, ಗೌರಿಯನ್ನು ಆಕೆ ಮೊದಲೇ ಬಲ್ಲವರಾಗಿದ್ದರು. ಇವರಿಬ್ಬರೂ ಒಟ್ಟಿಗೆ ದುಡಿದಿದ್ದರು. ಧಾರಾವಿ ಪ್ರದೇಶದ ಸ್ಲಂ ಏರಿಯಾ ಮಕ್ಕಳಿಗೆ ಆ ಮೂಲಕ ಪಾಠ ಹೇಳುತ್ತಿದ್ದರು. ಗೌರಿ ಒಬ್ಬ ಪ್ರತಿಷ್ಠಿತ ಜಿಮ್ನಾಸ್ಟ್. ಆಕೆ ಎಲ್ಲಕ್ಕೂ ಮೊದಲು ಬ್ರೇಕ್ ಡ್ಯಾನ್ಸಿಂಗ್ ನಿಂದ ಹಿಪ್ ಹಾಪ್ ನ್ನೂ ಕಲಿತಿದ್ದರು. ಇದಕ್ಕೆ ಮೊದಲು 1 ವರ್ಷ ಬೇರೆ ತಂಡದಲ್ಲೂ ದುಡಿದಿದ್ದರು. ಆದರೆ ಆಕೆಯ ತಾಯಿತಂದೆಗೂ ಇದು ಇಷ್ಟವಿರಲಿಲ್ಲ. ನಂತರ ಆಕೆ ಮುಂಬೈನ ಸ್ಕೂಲ್ ಆಫ್ ಆರ್ಟ್ಸ್ ನಿಂದ ಡಿಗ್ರಿ ಪಡೆದ ನಂತರ, ಕೆಲಿಗ್ರಾಫಿ, ಟೈಪೊಗ್ರಾಫಿ ಟೆಕ್ನಿಕ್ಸ್ನ್ನು ಗ್ರಾಫಿಟಿಯಲ್ಲಿ ಬಳಸಿಕೊಳ್ಳಲು ಆಸಕ್ತಿ ತೋರಿಸಿದರು. ಆಕೆ ಈಗ ಈ ತಂಡದ ಮೂಲಕ ಸ್ಟೇಜ್ ನಲ್ಲಿನ ಕ್ಯಾನ್ ವಾಸ್ ನಲ್ಲಿ ಲೈವ್ ಪೇಂಟಿಂಗ್ ಮಾಡಬಲ್ಲವರಾಗಿದ್ದಾರೆ.
20ರ ಹರೆಯದ ಶೃತಿ ಈ ತಂಡದ ಅತಿ ಕಿರಿಯ ಸದಸ್ಯೆ. ಆಕೆ 2017ರಲ್ಲಿ ಸ್ಕೇಟ್ ಬೋರ್ಡಿಂಗ್ ನಲ್ಲಿ ಪ್ರವೀಣೆ ಎನಿಸಿದ್ದರು. ಆಕೆ ತನ್ನ ಮನೆ ಬಳಿ ಕೆಲವು ಹುಡುಗರು ಸ್ಕೇಟ್ ಬೋರ್ಡ್ ಆಡುತ್ತಿದ್ದುದನ್ನು ಗಮನಿಸಿದರು. `ಅವರಿಂದ ನಾನು ಈ ಆಟದಲ್ಲಿ ನುರಿತಳಾದೆ,’ ಎನ್ನುತ್ತಾರೆ.
ಅವರಲ್ಲಿ ಒಬ್ಬ ಹುಡುಗ ಶೃತಿಗೆ ಒಂದು ಸೆಕೆಂಡ್ ಹ್ಯಾಂಡ್ ಸ್ಕೇಟ್ ಬೋರ್ಡ್ ನೀಡಿದ. ಅದಾಗಿ 2 ವರ್ಷ ಕಾಲ ಅದರಲ್ಲಿ ಆಕೆ ತಮ್ಮ ಪ್ರತಿಭೆ ಹೊರಹೊಮ್ಮುವಂತೆ ಮಾಡಿದರು. “ಶಾಲೆಗೆ ಚಕ್ಕರ್ ಹೊಡೆದು ಇದರ ಪ್ರಾಕ್ಟೀಸ್ ಗಾಗಿ ಹೋಗುತ್ತಿದ್ದೆ,” ಎನ್ನುತ್ತಾರೆ. ಮನೆಯವರಿಗೆ ಈ ವಿಷಯ ಗೊತ್ತಾದಾಗ, ಆ ಸ್ಕೇಟ್ ಬೋರ್ಡ್ ಕಿತ್ತೆಸೆದರು.
“ಇದೆಲ್ಲ ಹೆಣ್ಣುಮಕ್ಕಳಿಗಲ್ಲ! ಈ ಹುಡುಗರ ಆಟ ನಿನಗೇಕೆ?” ಎಂದೆಲ್ಲ ಬೈದರಂತೆ.
“ಹುಡುಗರು ಏನಾದರೂ ಮಾಡಿಕೊಳ್ಳಲಿ, ನೀನು ನಿನ್ನ ಪಾಠದ ಕಡೆ ನೋಡು! ಇದರಿಂದಾಗಿ ನಿನ್ನ ಕಾಲು ಮುರಿದರೆ, ಮುಂದೆ ನಿನ್ನನ್ನು ಕಟ್ಟಿಕೊಳ್ಳುವವರು ಯಾರು?”
2020ರಲ್ಲಿ ಕೋವಿಡ್ ಹೆಮ್ಮಾರಿಯ ಆಕ್ರಮಣದಿಂದ, ದೇಶದಲ್ಲೆಲ್ಲ ಲಾಕ್ ಡೌನ್ ಘೋಷಿಸಲ್ಪಟ್ಟಿತು. ಅದಾದ ಮೇಲೆ ಶೃತಿ ಧೈರ್ಯವಾಗಿ ಮನೆಬಿಟ್ಟು ಹೊರಬಂದರು. ತನ್ನ ಉಳಿವಿಗಾಗಿ ಮಕ್ಕಳಿಗೆ ಸ್ಕೇಟ್ ಬೋರ್ಡಿಂಗ್ ಕಲಿಸುತ್ತಾ ಸಂಪಾದನೆಗೆ ಇಳಿದರು. ಜೊತೆಗೆ ತಾನೂ ಸಂಗೀತಾಭ್ಯಾಸ ಮಾಡಬೇಕಿತ್ತು.
ಅದಾದ ಒಂದು ವರ್ಷದ ನಂತರ ಶೃತಿ ಮೊದಲ ಸಲ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದರು, ಚಿನ್ನದ ಪದಕ ಪಡೆದರು. ಅದೇ ವರ್ಷ ಆಕೆ ಡಿಸೆಂಬರ್ ನಲ್ಲಿ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸೀನಿಯರ್ ಮಹಿಳಾ ಶ್ರೇಣಿಯಲ್ಲಿ (17ಕ್ಕಿಂತ ಹೆಚ್ಚು) ಮೊದಲ ಸ್ಥಾನ ಪಡೆದರು. ಪೇಪರ್ ನಲ್ಲಿ ಮಗಳ ಫೋಟೋ ಕಂಡ ತಂದೆ ಖುಷಿಪಟ್ಟರು. ಮುಂದೆ ತನಗಾಗಿ ಸ್ಕೋಪ್ ಇದೆಯಾ? ಎಂಬುದು ಈಕೆಯ ದೊಡ್ಡ ಯಕ್ಷಪ್ರಶ್ನೆಯಾಗಿತ್ತು.
ನಂತರ ಶೃತಿಯ ದೃಷ್ಟಿ ಅಂತಾರಾಷ್ಟ್ರೀಯ ಸ್ಪರ್ಧೆಗಳ ಕಡೆ ತಿರುಗಿತು. ಆದರೆ ಮಂಡಿಗೆ ತಗುಲಿದ ಭಾರಿ ಪೆಟ್ಟು ಆಕೆಯ ಕನಸುಗಳನ್ನು ಚದುರಿಸಿತು. ಮತ್ತೆ ಆಕೆ ತನ್ನ ಕುಟುಂಬವನ್ನು ಕೂಡಿಕೊಂಡು, ಈ ಆಟದ ಕುರಿತಾಗಿದ್ದ ತನ್ನ ಒಲವನ್ನು ಬೇರೆ ವಿಧದಲ್ಲಿ ಈಡೇರಿಸಿಕೊಂಡರು.
2023ರಲ್ಲಿ ಕ್ರಾಂತಿಕಾರಿ ಒಂದು ಇನ್ ಫ್ಲೈಟ್ ಪತ್ರಿಕೆಯಲ್ಲಿ ಶೃತಿಯ ಲೇಖನ ಗಮನಿಸಿದರು. ತಕ್ಷಣ ಆಕೆಯನ್ನು ಸಂಪರ್ಕಿಸಿ, ಶೃತಿಯನ್ನು ತಮ್ಮ ತಂಡಕ್ಕೆ ಸೇರಿಕೊಳ್ಳುವಂತೆ ಆಹ್ವಾನಿಸಿದರು.
“ನಾನೇನೋ ಹಳೆಯ ಸ್ಕೇಟ್ ಬೋರ್ಡರ್, ಆದರೆ ನಾನು ಹೆಚ್ಚಾಗಿ ಹೈಲೈಟ್ ಆಗುತ್ತಿರಲಿಲ್ಲ. ಈ ತಂಡಕ್ಕೆ ಸೇರಿದ ನಂತರ ಜನರಿಗೆ ನನ್ನ ಬಗ್ಗೆ ಗೊತ್ತಾಯಿತು. ಹಿಂದೆಲ್ಲ ನನಗೆ ಸ್ಕೇಟ್ ಬೋರ್ಡಿಂಗ್ ನ ಅನೇಕ ಗೆಳೆಯರಿದ್ದರು. ಇದೀಗ ಈ ಸಂಸ್ಥೆ ಸೇರಿದ ಮೇಲೆ ಎಲ್ಲಾ ಹುಡುಗಿಯರೇ ಫ್ರೆಂಡ್ಸ್ ಆಗಿದ್ದಾರೆ,” ಎನ್ನುತ್ತಾರೆ ಶೃತಿ.
ಇದೀಗ ಈ ತಂಡ ತನ್ನ ಭವಿಷ್ಯದ ಕುರಿತಾಗಿ ಚಿಂತೆಯಲ್ಲಿದೆ. ಕ್ರಾಂತಿಕಾರಿ ಗ್ರಾಮೀಣ ಭಾರತದಲ್ಲಿ ಈ ತಂಡದ ಮಾಡೆಲ್ಸ್ ನ್ನು ರಿಪೀಟ್ ಮಾಡಲು ಪ್ರಯಾಸಪಡುತ್ತಿದ್ದಾರೆ. ಇದಕ್ಕಾಗಿ ಆಕೆ `ಸೌಂಡ್ ಆಫ್ ವಿಮೆನ್’ ಹೆಸರಲ್ಲಿ ಒಂದು ಜಾನಪದ ಸಮೂಹದ ರಚನೆಗೆ ತೊಡಗಿದ್ದಾರೆ. ಇದರ ಗುರಿ ಸ್ಥಳೀಯ ಮಹಿಳೆಯರಿಂದ ಸಂಚಾಲಿತ ತಂಡಗಳನ್ನು ನಿರ್ವಹಿಸುವುದಾಗಿದೆ. ಈಗಾಗಲೇ ಅವರು ಉ.ಪ್ರ., ಉತ್ತರಾಖಂಡ ರಾಜ್ಯಗಳಲ್ಲಿ ಈ ಸಂಘಟನೆ ಶುರು ಮಾಡಿಕೊಂಡಿದ್ದಾರೆ.
“ಒಂದು ಕ್ರೂ ಹಾಗೂ ರಾಂಪ್ ರೂಪದಲ್ಲಿ ನಾವು ಸತತ ಮುಂದುವರಿಯುತ್ತಿದ್ದೇವೆ,” ಎನ್ನುತ್ತಾರೆ ಪ್ರತೀಕಾ. ತಂಡದ ಹೆಚ್ಚಿನ ಸದಸ್ಯರು ತಮ್ಮ ಸ್ವತಂತ್ರ ಕೆರಿಯರ್ ನತ್ತಲೂ ಗಮನಹರಿಸುತ್ತಿರುವುದರಿಂದ, ತಮ್ಮ ಪ್ರಾಕ್ಟೀಸ್ ಸೆಶನ್ ನ್ನು ಆನ್ ಲೈನ್ ಮಾಡಿಕೊಂಡಿದ್ದಾರೆ. ಈ ರೀತಿ ವೈಯಕ್ತಿಕ ಆಸೆ, ಸಾಮೂಹಿಕ ಕನಸುಗಳ ನಡುವೆ ಹೊಂದಾಣಿಕೆ ನಡೆಯುತ್ತಿದೆ.
“ನಾವು ಭೇಟಿ ಆದಾಗೆಲ್ಲ, ನಮ್ಮ ಮಾತುಕಥೆ 100% ರಾಂಪ್, ಹಿಪ್ ಹಾಪ್ ಗಳ ಸಂಗೀತದ್ದ ಕುರಿತೇ ಆಗಿರುತ್ತದೆ. ಇದು ಎಲ್ಲರಿಗೂ ಇಷ್ಟದ ವಿಷಯ! ಪ್ರತಿಯೊಬ್ಬರೂ ಮನೆಯಲ್ಲಿದ್ದಾಗ ಅಂದುಕೊಳ್ಳುವುದು ಒಂದೇ ವಿಷಯ. ಮುಂದಿನ ಭೇಟಿ ಬೇಗ ಆಗಬೇಕು. ಎಲ್ಲರೂ ಹೆಚ್ಚಿನ ಪ್ರದರ್ಶನ ನೀಡಬೇಕು,” ಅಂತಾರೆ ಪ್ರತೀಕಾ, ಲಾ. ಕ್ವೀನ್.
ಪ್ರೀತಿ ಈ ಕುರಿತಾಗಿ, “ಎಷ್ಟೋ ಸಲ ನಾನು ರೆಕಾರ್ಡ್ ಮಾಡಿದ್ದ ನಮ್ಮೆಲ್ಲರ ಮಾತುಕಥೆ ಕೇಳಿಸಿಕೊಳ್ಳುತ್ತಾ, ಯಾ ಚರ್ಚೆಯನ್ನು ಮುಂದಿನ ಕಾರ್ಯಕ್ರಮವಾಗಿ ಪ್ರಸ್ತುತಪಡಿಸಬಹುದು ಎಂದು ಯೋಚಿಸುತ್ತೇನೆ. ವೇದಿಕೆಯಲ್ಲಿ ಇಂಥ ಪ್ರದರ್ಶನ ನೀಡುವುದು ನಮ್ಮೆಲ್ಲರ ಕನಸಾಗಿತ್ತು, ಇಂದು ಅದು ನನಸಾಗಿದೆ. ಇನ್ನು ನಾವು ಇದನ್ನು ಬಿಟ್ಟು ಬೇರೆ ಆಲೋಚಿಸುವ ಪ್ರಶ್ನೆಯೇ ಇಲ್ಲ,” ಎನ್ನುತ್ತಾರೆ. ಈ ರೀಲ್ ನ್ನು 15.5 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಹಾಗೂ 1.2 ಮಿಲಿಯನ್ ಲೈಕ್ಸ್ ಬಂದಿವೆ!
ಪರ್ಫಾರ್ಮೆನ್ಸ್ ಮೂಲಕ ಬ್ಯಾಂಡ್ ನ ಸದಸ್ಯರು ಒಮ್ಮೊಮ್ಮೆ ಸೀರೆ ಅಥವಾ ಲುಂಗಿಯಲ್ಲಿ ಬಂದು ವೇದಿಕೆ ಏರುತ್ತಾರೆ. ತುಂಬು ಸ್ವಾಭಿಮಾನ, ಸ್ವತಂತ್ರರಾಗಿ ಅವರು ಮುಂದುವರಿಯುತ್ತಾರೆ. ಕಳೆದ ಕೆಲವು ವರ್ಷಗಳಿಂದ ವೈಲ್ಡ್ ವೈಲ್ಡ್ ವಿಮೆನ್ ಸಂಘಟನೆಯ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. 2024ರ ಒಂದು ವರ್ಷದಲ್ಲೇ ಈ ಗ್ರೂಪ್ ಇಡೀ ಭಾರತದಾದ್ಯಂತ 75ಕ್ಕೂ ಹೆಚ್ಚು ಶೋ ನೀಡಿದೆ.





