ಒಬ್ಬ ಹೂಡಿಕೆದಾರರಾಗಿ ಅನ್ನಪೂರ್ಣೆಯ ಪಾತ್ರ

ಬದಲಾವಣೆಯ ಹೆಜ್ಜೆ, ಥ್ರೆಡ್ಆಫ್ಚೇಂಜ್ನಿಂದ ಶೋಭಿತಂ ಸಂಸ್ಥೆಯ ಮೂಲಕ ಫ್ಯಾಷನ್ಡಿಸೈನಿಂಗ್ನಲ್ಲಿ ಅದ್ಭುತ ಕ್ರಾಂತಿ!”

ಎಡಿಟರ್ಸ್ಚಾಯ್ಸ್ ಅವಾರ್ಡ್

ಅಪರ್ಣಾ ತ್ಯಾಗರಾಜನ್‌, ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಒಬ್ಬ ಅಸಾಧಾರಣ ಉದ್ಯಮಿ ಮತ್ತು ಕಾರ್ಯತಂತ್ರದ ಹೂಡಿಕೆದಾರರು/ ಪಾಲುದಾರರಾಗಿ ಗುರುತಿಸಿಕೊಂಡರು. ಅಪರ್ಣಾ ಜಾಗತಿಕವಾಗಿ ಮಾನ್ಯತೆ ಪಡೆದ ಎಥ್ನಿಕ್‌ ಫ್ಯಾಷನ್‌ ಬ್ರಾಂಡ್‌ ಆದ ಶೋಭಿತಂನ ಸಹ ಸಂಸ್ಥಾಪಕಿ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ. ಶೋಭಿತಂ ಗಿಲ್ ಮತ್ತು ಕೇರ್‌ ಫೌಂಡೇಶನ್‌ ನ ಸಂಸ್ಥಾಪಕಿ ಮತ್ತು ಒಬ್ಬ ಪ್ರಮುಖ ಏಂಜ್‌ ಹೂಡಿಕೆದಾರರಾಗಿದ್ದಾರೆ.

ತಂತ್ರಜ್ಞಾನ, ಫ್ಯಾಷನ್‌ ಮತ್ತು ಸಾಮಾಜಿಕ ಉದ್ದೇಶಗಳನ್ನು ಸಂಯೋಜಿಸುವ ಮೂಲಕ ಬದಲಾವಣೆಯ ಕಡೆಗೆ ಅಪರ್ಣಾರ ಮುನ್ನಡೆ ಅತ್ಯಂತ ಶ್ಲಾಘನೀಯ. ಅಪರ್ಣಾರ ಈ ಮುನ್ನಡೆ ಹಾಗೂ ಬದ್ಧತೆಯನ್ನು ಪ್ರೋತ್ಸಾಹಿಸಲು ಗೃಹಶೋಭಾ ಅವರಿಗೆ ಗೃಹಶೋಬಾ ಇನ್ಸ್ ಪೈರ್‌ ಆವಾರ್ಡ್ಸ್ ನಲ್ಲಿ, ಎಡಿಟರ್ಸ್‌ ಚಾರ್ಯ್‌ ಅವಾರ್ಡ್‌ ನೀಡಿ ಗೌರವಿಸಿದೆ.

ಸಂಸ್ಥಾಪಕಿಯಾಗುವ ಮುನ್ನ ಅವರ ಪಯಣ

ಮದ್ರಾಸ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಅಪ್ಲಿಕೇಶನ್‌ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಅಪರ್ಣಾ ತಮ್ಮ ಎಂಜಿನಿಯರಿಂಗ್‌ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಂಡ ಅಪರ್ಣಾ, ಅಮೆರಿಕಾದ ಸಿಯಾಟ್‌ ಮತ್ತು ಸಿಲಿಕಾನ್‌ ವ್ಯಾಲಿಯಲ್ಲಿ ಮೈಕ್ರೋಸಾಫ್ಟ್ ನಲ್ಲಿ ಏಳು ವರ್ಷಗಳಿಗೂ ಹೆಚ್ಚು ಕಾಲ ಟೆಕ್‌ ಲೀಡ್‌ ಪಾತ್ರ ನಿರ್ವಹಿಸಿದರು. ಬಿಂಗ್‌, ಎಂಎಸ್‌ಎನ್‌, ಫೇಸ್‌ ಬುಕ್‌ ಇಂಟಿಗ್ರೇಶನ್‌ ಮತ್ತು ಡೈನಾಮಿಕ್ಸ್ ಎಎಕ್ಸ್ ನಂತಹ ಉತ್ಪನ್ನಗಳಲ್ಲಿ ಅವರು ಸಂಪೂರ್ಣ ಕೊಡುಗೆ ನೀಡಿದರು. ಜೊತೆಗೆ ಇ-ಕಾಮರ್ಸ್‌, ಸಾಫ್ಟ್ ವೇರ್‌ ಅಭಿವೃದ್ಧಿ ಮತ್ತು ಜಾಗತಿಕ ಬ್ರಾಂಡ್ ನಿರ್ಮಾಣದಲ್ಲಿನ ಅವರ ಪರಿಣತಿಯು ಭವಿಷ್ಯದಲ್ಲಿ ಫ್ಯಾಷನ್‌ ತಂತ್ರಜ್ಞಾನಕ್ಕೆ ಬಲವಾದ ಅಡಿಪಾಯವನ್ನು ಸಿದ್ಧಪಡಿಸಿತು.

ಶೋಭಿತಂ ಬ್ರಾಂಡ್

ಮಹಿಳಾ ಉದ್ಯಮಶೀಲತೆಯ ಚಾಂಪಿಯನ್‌ ಆಗಿ, ಅವರು ತಮ್ಮ ಪತಿಯೊಂದಿಗೆ ಬಿಟ್ಸ್ ಪಿಲಾನಿಯಲ್ಲಿ ಮಹಿಳಾ ಉದ್ಯಮಶೀಲತೆಗಾಗಿ ಶೋಭಿತಂ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಜೊತೆಗೆ, ಕಾಲೇಜು ದಿನಗಳಿಂದಲೇ ಮಹಿಳಾ ಉದ್ಯಮಿಗಳಿಗೆ ಪೋಷಣೆ ಮತ್ತು ಬೆಂಬಲ ದೊರಕಲಿ ಎಂಬ ಉದ್ದೇಶದಿಂದ ಅಪರ್ಣಾ ಕೇಂದ್ರದ ಸ್ಥಾಪನೆಗಾಗಿ 1 ಕೋಟಿ ದೇಣಿಗೆ ನೀಡಿದ್ದಾರೆ. ಅಪರ್ಣಾರ ಈ ಕೊಡುಗೆಯು ಮಹಿಳಾ ಉದ್ಯಮಿಗಳನ್ನು ಪ್ರೇರೇಪಿಸುವ ಅವರ ನಿಷ್ಠೆ ಹಾಗೂ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ಇಂದು ಶೋಭಿತಂ, ವಿಶ್ವ ಮಟ್ಟದಲ್ಲಿ ಸುಂದರ, ಕೈಗೆಟುಕುವ ಮತ್ತು ಪ್ರಪಂಚದಾದ್ಯಂತ ಲಭ್ಯವಿರುವ ಒಂದು ಬ್ರಾಂಡ್‌ ನ್ನು ನಿರ್ಮಿಸುತ್ತಿದೆ. ಭಾರತದ 24 ಸಮೂಹಗಳು ಮತ್ತು 640ಕ್ಕೂ ಹೆಚ್ಚು ನುರಿತ ನೇಕಾರರು ಮತ್ತು ಕುಶಲಕರ್ಮಿಗಳೊಂದಿಗೆ ಸೇರಿ ಶೋಭಿತಂ ವಿಶಿಷ್ಟ ವಿನ್ಯಾಸಗಳನ್ನು ತಯಾರಿಸುತ್ತದೆ. ವಿಶ್ವ ದರ್ಜೆಯ ಆನ್‌ ಲೈನ್‌ ಪ್ಲಾಟ್‌ ಫಾರ್ಮ್ ಗಳ ಮೂಲಕ, ಕಳೆದ 3 ವರ್ಷಗಳಲ್ಲಿ ತನ್ನ ಶುದ್ಧ ರೇಷ್ಮೆ, ಬೆಲೆಗಳು ಮತ್ತು 5 ಸ್ಟಾರ್‌ ಸೇವೆಯಿಂದ ಶೋಭಿತಂ 12 ಪಟ್ಟು ಪ್ರಗತಿ ಸಾಧಿಸಿದೆ ಮತ್ತು 45ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಸೇವೆಯನ್ನು ಒದಗಿಸಿದೆ.

ಶೋಭಿತಂ ಗೆದ್ದಿರುವ ಕೆಲವು ಪ್ರಮುಖ ಪ್ರಶಸ್ತಿಗಳು

ಅತ್ಯುತ್ತಮ ಎಥ್ನಿಕ್‌ ಫ್ಯಾಷನ್‌ ಪ್ರಶಸ್ತಿ.

ಕಸ್ಟಮರ್‌ ಎಕ್ಸಿನ್ಸ್ ಪ್ರಶಸ್ತಿ.

ರಿಟೇಲ್ ‌ಸ್ಟಾರ್ಟಪ್‌ ಆಫ್‌ ದಿ ಇಯರ್‌ ಪ್ರಶಸ್ತಿ.

ಶೃಂಗಸಭೆಯ ಶ್ರೇಷ್ಠ ಪ್ರಶಸ್ತಿ (ಪಿನಾಕ್‌ ಅವಾರ್ಡ್‌).

ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು.

ಗ್ರಾಹಕರ ಮೇಲಿನ ಒಲವು ಶೋಭಿತಂ ಅನುಭವದ ಪ್ರಮುಖ ಮೂಲವಾಗಿದೆ. ಇದರ ಝಲಕ್‌ ಅವರ 11000ಕ್ಕೂ ಹೆಚ್ಚು ಗ್ರಾಹಕರಿಂದ 5 ಸ್ಟಾರ್‌ ವಿಮರ್ಶೆಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ.

IMG-6909

ಶೋಭಿತಂ ಗಿಲ್ಕೇರ್ಫೌಂಡೇಶನ್

ತಮ್ಮ ದೇಶಕ್ಕೆ ತನ್ನ ಸಾಮಾಜಿಕ ಕರ್ತವ್ಯವನ್ನು ಪೂರೈಸಲು ಅಪರ್ಣಾ, ಶೋಭಿತಂ ಗಿಲ್‌ಕೇರ್‌ ಫೌಂಡೇಶನ್‌ ನ್ನು ಸ್ಥಾಪಿಸಿದ್ದಾರೆ. ಇದು ಭಾರತದಾದ್ಯಂತ 700ಕ್ಕೂ ಹೆಚ್ಚು ನೇಕಾರರು ಮತ್ತು ಕುಶಲಕರ್ಮಿಗಳ ಕುಟುಂಬಗಳಿಗೆ ಆಹಾರ ಮತ್ತು  ಗೃಹೋಪಯೋಗಿ ಸಾಮಗ್ರಿಗಳ ಜೊತೆಗೆ, ಅವರ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ಸಹ ಒದಗಿಸುತ್ತದೆ. ಇದಲ್ಲದೆ, ಭಾರತದಾದ್ಯಂತ ಅಗತ್ಯವಿರುವವರಿಗೆ ಸಹಾಯ ಮಾಡಲು, ಶೋಭಿತಂ ನಟಿ ವಿದ್ಯಾಬಾಲನ್‌ ರ ಸಹಯೋಗದೊಂದಿಗೆ ಶೋಭಿತಂ ಟ್ರಾನ್ಸ್ ಫಾರ್ಮಿಂಗ್‌ ಲೈನ್ಸ್ ಹಸಿವು ನಿವಾರಣೆಗಾಗಿ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ ಮಾರಾಟವಾದ ಪ್ರತಿಯೊಂದು ಸೀರೆಯಿಂದ ಪಡೆದ ಹಣವನ್ನು ಭಾರತದಲ್ಲಿ ಒಬ್ಬ ಅಗತ್ಯವಿರುವ ವ್ಯಕ್ತಿಗೆ ಆಹಾರ ನೀಡಲು ಬಳಸಲಾಗುತ್ತಿದೆ.

ಪ್ರಮುಖ ಏಂಜಲ್ ಅಪರ್ಣಾ

ಅಮರಿಕಾ ಮತ್ತು ಭಾರತದ ಅನುಭವಿ ಹೂಡಿಕೆದಾರರಾಗಿ, ಅಪರ್ಣಾ ಇಂಡಿಯನ್‌ ಏಂಜಲ್ಸ್ ಶೋನಲ್ಲಿ ಲೀಡ್‌ ಏಂಜ್‌ ಆಗಿದ್ದರು. ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಪರಿವರ್ತನೆಯ ದೃಷ್ಟಿಕೋನವನ್ನು ಬೆಂಬಲಿಸುವ ಉಪಕ್ರಮದಲ್ಲಿ, ಅಪರ್ಣಾ ಏಂಜಲ್ ಆಗಿ ಅನೇಕ ಉದ್ಯಮಗಳಿಗೆ ಕಾರ್ಯತಂತ್ರದ ಬೆಂಬಲವನ್ನು ನೀಡಿದ್ದಾರೆ ಜೊತೆಗೆ 8 ಭರವಸೆಯ ವಿಶ್ವಾಸಾರ್ಹ ಉದ್ಯಮಗಳು (ಸ್ಟಾರ್ಟಪ್‌) ಉತ್ತುಂಗಕ್ಕೇರಲು ದಾರಿ ಮಾಡಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಇಷ್ಟೇ ಅಲ್ಲ, ಅಪರ್ಣಾ ಡಜನ್‌ ಗಟ್ಟಲೆ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಅವರು ಅನೇಕ ಭರವಸೆಯ ಮಹಿಳಾ ಉದ್ಯಮಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಪ್ರಮುಖ ಏಂಜಲ್ ಹೂಡಿಕೆದಾರರಾಗಿ ಹೊರಹೊಮ್ಮಿದ್ದಾರೆ. ಅವರ ಬದ್ಧತೆಯು ಕೇವಲ ಆರ್ಥಿಕ ನೆರವಿಗೆ ಸೀಮಿತವಾಗಿಲ್ಲ, ಆದರೆ ಅವರು ಈ ನವೀನ ಸ್ಟಾರ್ಟಪ್‌ ಗಳಿಗೆ ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಸಕ್ರಿಯ ಮಾರ್ಗದರ್ಶನ, ಸಹಯೋಗ, ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.

ಅಪರ್ಣಾ ಬಹುಮುಖ ಪ್ರತಿಭೆ. ಅವರು ಒಬ್ಬ ಪ್ರಮುಖ ಹೂಡಿಕೆದಾರರಾಗಿರುವ ಜೊತೆಗೆ, ಶೋಭಿತಂ ಬ್ರಾಂಡ್‌ ಮೂಲಕ ಪ್ರಪಂಚದಾದ್ಯಂತ ಭಾರತೀಯ ಶ್ರೀಮಂತ ಸಂಸ್ಕೃತಿಯ ವಿಶಿಷ್ಟ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಶೋಭಿತಂ ಬ್ರಾಂಡ್ ಮೂಲಕವೇ ಅನೇಕ ನೇಕಾರರು ಮತ್ತು ಕುಶಲಕರ್ಮಿಗಳ ಜೀವನದಲ್ಲಿ ಅನೇಕ ಹೊಸ ಮತ್ತು ಸುಂದರ ಬದಲಾವಣೆಗಳನ್ನು ತರುತ್ತಿದ್ದಾರೆ. ಮತ್ತೊಂದೆಡೆ, ಶೋಭಿತಂ ಗಿಲ್ ಮತ್ತು ಕೇರ್‌ ಫೌಂಡೇಶನ್‌ ಹಾಗೂ ಶೋಭಿತಂ ಟ್ರಾನ್ಸ್ ಫಾರ್ಮಿಂಗ್‌ ಲೈಸೆನ್ಸ್ ಅಭಿಯಾನದ ಮೂಲಕ ಅನೇಕ ಕುಟುಂಬಗಳಿಗೆ ಮೂಲಭೂತ ಸೌಕರ್ಯವನ್ನೂ ನೀಡುತ್ತಿದ್ದಾರೆ. ಅನೇಕ ಮಂದಿ ಹಸಿದವರಿಗೆ ಅನ್ನಪೂರ್ಣೆಯ ರೂಪದ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ.

ರಜನಿ ಪ್ರಸಾದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ