ನಮ್ಮ ದೇಶ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವಂತಹ ರಾಷ್ಟ್ರ, ಸದ್ಯಕ್ಕೆ ನಮ್ಮ ದೇಶ 28 ರಾಜ್ಯ ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಅಧಿಕೃತವಾಗಿ 15 ಭಾಷೆಗಳು ಎಂದು ಘೋಷಿಸಲ್ಪಟ್ಟಿದ್ದರೂ ಸಾವಿರಾರು ಭಾಷೆ ಮತ್ತು ಉಪಭಾಷಿಗರನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ಹಾಗಾಗಿ ಇದು ಒಂದು ದೇಶ ಎನ್ನುವುದಕ್ಕಿಂತಲೂ ಒಂದು ಉಪಖಂಡ ಎಂದರೂ ಉತ್ರ್ಪೇಕ್ಷೇಯೇನಲ್ಲ. ಇಷ್ಟೊಂದು ಭಾಷೆಗಳು ಇರುವ ಈ ದೇಶದಲ್ಲಿ ಆದಕ್ಕೆ ಅನುಗುಣವಾಗಿ ಸಂಪ್ರದಾಯ, ಸಂಸ್ಕೃತಿ, ಆಹಾರ ಪದ್ದತಿ ಮತ್ತು ಜೀವನ ಶೈಲಿಯು ವಿಭಿನ್ನವಾಗಿದೆ. ಹಾಗಾಗಿಯೇ ಬಹುತೇಕ ಭಾರತೀಯರು ದೇಶ ವಿದೇಶಗಳಿಗೆ ಹೋದಾಗ, ಆ ಪ್ರದೇಶಗಳಲ್ಲಿ ತಮ್ಮ ಶೈಲಿಯ ಆಹಾರ ಸಿಗುವ ಸ್ಥಳಗಳನ್ನು ಹುಡುಕುತ್ತಾರೆ. ಅದಕ್ಕಾಗಿಯೇ ಬಹು ಪಾಕ ಪದ್ದತಿಯ (multi cuisine) ಹೋಟೆಲ್ಗಳು ಎಲ್ಲಾ ಕಡೆಯಲ್ಲಿಯೂ ಇದ್ದು ಸುಮಾರು ಮೂರ್ನಾಲ್ಕು ಭಾರತೀಯ ಆಹಾರ ಶೈಲಿಯನ್ನು ಉಣಬಡಿಸುತ್ತದೆ.

ಇಡೀ ದೇಶದ ಎಲ್ಲಾ 28 ರಾಜ್ಯಗಳ ಆಹಾರಗಳನ್ನು ಅಯಾಯಾ ರಾಜ್ಯಗಳ ಬಾಣಸಿಗರೇ ತಯಾರಿಸಿ ಒಂದೇ ಸ್ಥಳದಲ್ಲಿ ಸಿಗಬಹುದೇ ಎಂದು ನೋಡುತ್ತಿದ್ದಾಗ ಕಣ್ಣಿಗೆ ಬಿದ್ದದ್ದೇ, ದೆಹಲಿಯ ಕನಾಟ್ ಪ್ಲೇಸ್ ನ ಅರ್ಡರ್ 2.1 ರೆಸ್ಟೋರೆಂಟಿನ ಯುನೈಟೆಡ್ ಇಂಡಿಯಾ ಥಾಲಿ. ಹೆಸರಿಗೆ ತಕ್ಕಂತೆಯೇ ಭಾರತದ ಆಹಾರಗಳ ವೈವಿಧ್ಯತೆಯನ್ನು ಭಾರತದ ನಕ್ಷೆಯ ಆಕಾರದಲ್ಲಿರುವ ತಟ್ಟೆಯಲ್ಲಿ ಉಣಬಡಿಸುವುದನ್ನು ನೋಡುವ ಮೊದಲ ನೋಟದಲ್ಲಿಯೇ ಮನಸೂರೆಗೊಳ್ಳುತ್ತದೆ. ಭಾರತದ ಭೂಪಟ ಆಕಾರದ ಈ ತಟ್ಟೆಯಲ್ಲಿ ಆಯಾಯಾ ರಾಜ್ಯಗಳ ಜಾಗದಲ್ಲಿ ಅಲ್ಲಿಯ ಆಹಾರ ಸಂಸ್ಕೃತಿ ಬಿಂಬಿಸುವ ಖಾದ್ಯಗಳನ್ನು ಜೋಡಿಸಿರುವುದನ್ನು ಕಣ್ತುಂಬಿಸಿಕೊಳ್ಳುತ್ತಿದ್ದಂತೆಯೇ, ಬಾಯಿಯಲ್ಲಿ ನೀರೂರುತ್ತಲ್ಲದೇ, ಹೊಟ್ಟೆಯೂ ತುಂಬಿ ಹೋಗುತ್ತದೆ ಎಂದರೂ ತಪ್ಪಾಗಲಾರದು.

ಸುಮಾರು 5-10 ಕೆಜಿ ತೂಗಬಹುದಾದ ಈ ಧಾಲಿಯಲ್ಲಿ ಶಾಖಾಹಾರಿ ಮತ್ತು ಮಾಂಸಾಹಾರಿ ಪದ್ದತಿಗಳು ಲಭ್ಯವಿದ್ದು ಮೂರರಿಂದ ನಾಲ್ಕು ಮಂದಿ ಇರುವ ಕುಟುಂಬವರು ಅಚ್ಚು ಕಟ್ಟಾಗಿ ಹೊಟ್ಟೇ ತುಂಬ ತಿನ್ನಬಹುದಾಗಿದೆ. ನಿಜವಾಗಿಯೂ ಬಕಾಸರರಂತೆ ಭಕ್ಷಿಸುವ ಮಂದಿಯಿದ್ದಲ್ಲಿ ಇಬ್ಬರಿಗೆ ಸಾಕಾಗಬಹುದೇನೋ? ಗುಜರಾತ್‌ನ ಢೋಕ್ಲ, ಪಂಜಾಬ್‌ನ ಚನ್ನಾ ಚೋಲೆ, ಬಂಗಾಳದ ರಸಗುಲ್ಲಾ, ಮಹಾರಾಷ್ಟ್ರದ ವಡಾ ಪಾವ್‌, ದಕ್ಷಿಣ ಭಾರತದ ಬಿಸಿ ಬೇಳೆ ಭಾತ್‌, ಇಡ್ಲಿ ವಡೆ ಮುಂತಾದ ಕೆಲವು ಖಾದ್ಯಗಳಲ್ಲದೇ, ಚೌಕಿದಾರ್‌ ಪರೋಟ, ಭಾಂಗ್‌ ಕಿ ಚಟ್ನಿ, ಪುದೀನ ಚಟ್ನಿ, ರಸಂ ಇತ್ಯಾದಿಗಳಿರುತ್ತವೆ.

ಯಾವ ಯಾವ ರಾಜ್ಯದ ಯಾವ ಖಾದ್ಯಗಳು ಆ ದಿನದ ಊಟದ ತಟ್ಟೆಯಲ್ಲಿ ಲಭ್ಯವಿರುತ್ತದೆ ಎಂಬುದನ್ನು ಸುಂದರವಾಗಿ ಮುದ್ರಿಸಿ ಪ್ರಸ್ತುತ ಪಡಿಸುವುದು ನಿಜಕ್ಕೂ ಅಭಿನಂದನೀಯವಾಗಿದೆ.

ಈ ರೆಸ್ಟೋರೆಂಟಿನ ಮಾಲಿಕರಾದ ಶ್ರೀ ಸುವೀತ್ ಕಲ್ರಾ ಮತ್ತು ಶ್ರೀ ಮೇಘ್ ಭಾಟಿಯಾ ಕಲ್ರಾ ಅವರು ಈ ಮೊದಲು ಮೋದಿ ಜೀ 56-ಇಂಚಿನ ಥಾಲಿ ಮತ್ತು ಬಾಹುಬಲಿ ಥಾಲಿಯನ್ನು ಪರಿಚಯಿಸಿದ್ದರು, ಇವರೆಡು ಸಹಾ ದೆಹಲಿಯಲ್ಲಿ ಅತ್ಯಂತ ಪ್ರಖ್ಯಾತವಾದ ಫುಡ್ ಪ್ಲ್ಯಾಟರ್ ಆಗಿದ್ದು ಅದರಲ್ಲಿಯೂ ಸಹಾ ವಿವಿಧ ರಾಜ್ಯಗಳ ಪಾಕ ಪದ್ದತಿಗಳೊಂದಿಗೆ 4 ಜನರಿಗೆ ಅನಿಯಮಿತ ರೋಟ್ಟಿಗಳನ್ನು ಉಣಬಡಿಸುತ್ತಿದ್ದರು.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ಬಾಹುಬಲಿ ಧಾಲಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿ, ಮೊದಲ ಸುತ್ತಿನ ಚುನಾವಣೆಗಳು ಪ್ರಾರಂಭವಾದ ದಿನಾಂಕದಂದು ಯುನೈಟೆಡ್ ಇಂಡಿಯಾ ಥಾಲಿ ಯನ್ನು ಪರಿಚಯಿಸಿದರು. 2019ರ ಏಪ್ರಿಲ್ 11ರಂದು ಭಾರತದ ನಕ್ಷೆಯಂತೆ ರೂಪಿಸಲ್ಪಟ್ಟ ಈ ಥಾಲಿ 28 ಭಾರತೀಯ ರಾಜ್ಯಗಳಿಂದ 28 ವಿಭಿನ್ನ ಆಹಾರ ವಿಶೇಷತೆಗಳೊಂದಿಗೆ 29 ನೇ ಆಹಾರವಾಗಿ ಉಣಬಡಿಸುವ ಚೌಕಿದಾರ್ ಪರಾಥಾ ಎಲ್ಲರ ಮನಸ್ಸನ್ನು ಸೂರೆಗೊಂಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ