ಒಬ್ಬ ಹೂಡಿಕೆದಾರರಾಗಿ ಅನ್ನಪೂರ್ಣೆಯ ಪಾತ್ರ
``ಬದಲಾವಣೆಯ ಹೆಜ್ಜೆ, ಥ್ರೆಡ್ ಆಫ್ ಚೇಂಜ್ ನಿಂದ ಶೋಭಿತಂ ಸಂಸ್ಥೆಯ ಮೂಲಕ ಫ್ಯಾಷನ್ ಡಿಸೈನಿಂಗ್ ನಲ್ಲಿ ಅದ್ಭುತ ಕ್ರಾಂತಿ!''
ಎಡಿಟರ್ಸ್ ಚಾಯ್ಸ್ ಅವಾರ್ಡ್
ಅಪರ್ಣಾ ತ್ಯಾಗರಾಜನ್, ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಒಬ್ಬ ಅಸಾಧಾರಣ ಉದ್ಯಮಿ ಮತ್ತು ಕಾರ್ಯತಂತ್ರದ ಹೂಡಿಕೆದಾರರು/ ಪಾಲುದಾರರಾಗಿ ಗುರುತಿಸಿಕೊಂಡರು. ಅಪರ್ಣಾ ಜಾಗತಿಕವಾಗಿ ಮಾನ್ಯತೆ ಪಡೆದ ಎಥ್ನಿಕ್ ಫ್ಯಾಷನ್ ಬ್ರಾಂಡ್ ಆದ ಶೋಭಿತಂನ ಸಹ ಸಂಸ್ಥಾಪಕಿ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ. ಶೋಭಿತಂ ಗಿಲ್ ಮತ್ತು ಕೇರ್ ಫೌಂಡೇಶನ್ ನ ಸಂಸ್ಥಾಪಕಿ ಮತ್ತು ಒಬ್ಬ ಪ್ರಮುಖ ಏಂಜ್ ಹೂಡಿಕೆದಾರರಾಗಿದ್ದಾರೆ.
ತಂತ್ರಜ್ಞಾನ, ಫ್ಯಾಷನ್ ಮತ್ತು ಸಾಮಾಜಿಕ ಉದ್ದೇಶಗಳನ್ನು ಸಂಯೋಜಿಸುವ ಮೂಲಕ ಬದಲಾವಣೆಯ ಕಡೆಗೆ ಅಪರ್ಣಾರ ಮುನ್ನಡೆ ಅತ್ಯಂತ ಶ್ಲಾಘನೀಯ. ಅಪರ್ಣಾರ ಈ ಮುನ್ನಡೆ ಹಾಗೂ ಬದ್ಧತೆಯನ್ನು ಪ್ರೋತ್ಸಾಹಿಸಲು ಗೃಹಶೋಭಾ ಅವರಿಗೆ ಗೃಹಶೋಬಾ ಇನ್ಸ್ ಪೈರ್ ಆವಾರ್ಡ್ಸ್ ನಲ್ಲಿ, ಎಡಿಟರ್ಸ್ ಚಾರ್ಯ್ ಅವಾರ್ಡ್ ನೀಡಿ ಗೌರವಿಸಿದೆ.
ಸಂಸ್ಥಾಪಕಿಯಾಗುವ ಮುನ್ನ ಅವರ ಪಯಣ
ಮದ್ರಾಸ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಅಪರ್ಣಾ ತಮ್ಮ ಎಂಜಿನಿಯರಿಂಗ್ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಬಳಸಿಕೊಂಡ ಅಪರ್ಣಾ, ಅಮೆರಿಕಾದ ಸಿಯಾಟ್ ಮತ್ತು ಸಿಲಿಕಾನ್ ವ್ಯಾಲಿಯಲ್ಲಿ ಮೈಕ್ರೋಸಾಫ್ಟ್ ನಲ್ಲಿ ಏಳು ವರ್ಷಗಳಿಗೂ ಹೆಚ್ಚು ಕಾಲ ಟೆಕ್ ಲೀಡ್ ಪಾತ್ರ ನಿರ್ವಹಿಸಿದರು. ಬಿಂಗ್, ಎಂಎಸ್‌ಎನ್, ಫೇಸ್ ಬುಕ್ ಇಂಟಿಗ್ರೇಶನ್ ಮತ್ತು ಡೈನಾಮಿಕ್ಸ್ ಎಎಕ್ಸ್ ನಂತಹ ಉತ್ಪನ್ನಗಳಲ್ಲಿ ಅವರು ಸಂಪೂರ್ಣ ಕೊಡುಗೆ ನೀಡಿದರು. ಜೊತೆಗೆ ಇ-ಕಾಮರ್ಸ್, ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಜಾಗತಿಕ ಬ್ರಾಂಡ್ ನಿರ್ಮಾಣದಲ್ಲಿನ ಅವರ ಪರಿಣತಿಯು ಭವಿಷ್ಯದಲ್ಲಿ ಫ್ಯಾಷನ್ ತಂತ್ರಜ್ಞಾನಕ್ಕೆ ಬಲವಾದ ಅಡಿಪಾಯವನ್ನು ಸಿದ್ಧಪಡಿಸಿತು.
ಶೋಭಿತಂ ಬ್ರಾಂಡ್
ಮಹಿಳಾ ಉದ್ಯಮಶೀಲತೆಯ ಚಾಂಪಿಯನ್ ಆಗಿ, ಅವರು ತಮ್ಮ ಪತಿಯೊಂದಿಗೆ ಬಿಟ್ಸ್ ಪಿಲಾನಿಯಲ್ಲಿ ಮಹಿಳಾ ಉದ್ಯಮಶೀಲತೆಗಾಗಿ ಶೋಭಿತಂ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಜೊತೆಗೆ, ಕಾಲೇಜು ದಿನಗಳಿಂದಲೇ ಮಹಿಳಾ ಉದ್ಯಮಿಗಳಿಗೆ ಪೋಷಣೆ ಮತ್ತು ಬೆಂಬಲ ದೊರಕಲಿ ಎಂಬ ಉದ್ದೇಶದಿಂದ ಅಪರ್ಣಾ ಕೇಂದ್ರದ ಸ್ಥಾಪನೆಗಾಗಿ 1 ಕೋಟಿ ದೇಣಿಗೆ ನೀಡಿದ್ದಾರೆ. ಅಪರ್ಣಾರ ಈ ಕೊಡುಗೆಯು ಮಹಿಳಾ ಉದ್ಯಮಿಗಳನ್ನು ಪ್ರೇರೇಪಿಸುವ ಅವರ ನಿಷ್ಠೆ ಹಾಗೂ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.
ಇಂದು ಶೋಭಿತಂ, ವಿಶ್ವ ಮಟ್ಟದಲ್ಲಿ ಸುಂದರ, ಕೈಗೆಟುಕುವ ಮತ್ತು ಪ್ರಪಂಚದಾದ್ಯಂತ ಲಭ್ಯವಿರುವ ಒಂದು ಬ್ರಾಂಡ್ ನ್ನು ನಿರ್ಮಿಸುತ್ತಿದೆ. ಭಾರತದ 24 ಸಮೂಹಗಳು ಮತ್ತು 640ಕ್ಕೂ ಹೆಚ್ಚು ನುರಿತ ನೇಕಾರರು ಮತ್ತು ಕುಶಲಕರ್ಮಿಗಳೊಂದಿಗೆ ಸೇರಿ ಶೋಭಿತಂ ವಿಶಿಷ್ಟ ವಿನ್ಯಾಸಗಳನ್ನು ತಯಾರಿಸುತ್ತದೆ. ವಿಶ್ವ ದರ್ಜೆಯ ಆನ್ ಲೈನ್ ಪ್ಲಾಟ್ ಫಾರ್ಮ್ ಗಳ ಮೂಲಕ, ಕಳೆದ 3 ವರ್ಷಗಳಲ್ಲಿ ತನ್ನ ಶುದ್ಧ ರೇಷ್ಮೆ, ಬೆಲೆಗಳು ಮತ್ತು 5 ಸ್ಟಾರ್ ಸೇವೆಯಿಂದ ಶೋಭಿತಂ 12 ಪಟ್ಟು ಪ್ರಗತಿ ಸಾಧಿಸಿದೆ ಮತ್ತು 45ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಸೇವೆಯನ್ನು ಒದಗಿಸಿದೆ.





