ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಬುಧವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಅಧಿಕೃತ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕಿದ್ದಾರೆ.
ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರ ಖಾತೆಯನ್ನು ಬದಲಾಯಿಸಲಾಗಿದೆ. ಈ ಮುಂಚೆ ಮುನಿಯಪ್ಪ ಅವರಿಗೆ ಆಹಾರ ಖಾತೆ ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.
ಇನ್ನು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಆದರೆ ಇದೀಗ ಅವರಿಗೆ ಅರಣ್ಯ ಖಾತೆ ನೀಡಲಾಗಿದೆ.
ಯಾರಿಗೆ ಯಾವ ಖಾತೆ?
ಲಕ್ಷ್ಮಣ ಸವದಿ- ಸಹಕಾರ ಇಲಾಖೆ
ರಾಮಲಿಂಗರೆಡ್ಡಿ-ಅರಣ್ಯ
ಕೆ.ಹೆಚ್.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ
ಸಂತೋಷ್ ಲಾಡ್- ಕಾರ್ಮಿಕ ಇಲಾಖೆ
ಯು.ಟಿ.ಖಾದರ್-ಆರೋಗ್ಯ ಮತ್ತು ಕಲ್ಯಾಣ ಇಲಾಖೆ, ವಕ್ಫ್
ಶಿವರಾಜ್ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ
ಎಚ್.ಸಿ.ಬಾಲಕೃಷ್ಣ-ಪೌರಾಡಳಿತ
ಕೆ.ಎಸ್.ಬಸವಂತಪ್ಪ-ಮುಜರಾಯಿ, ಮೀನುಗಾರಿಕೆ
ಎನ್.ಚಲುವರಾಯಸ್ವಾಮಿ- ಜಲಸಂಪನ್ಮೂಲ ಇಲಾಖೆ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಎಸ್.ಎಸ್.ಮಲ್ಲಿಕಾರ್ಜುನ್- ಗಣಿ ಮತ್ತು ಭೂವಿಜ್ಞಾನ ಇಲಾಖೆ
ಬಿ.ನಾಗೇಂದ್ರ-ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ
ಸಿ.ಪುಟ್ಟರಂಗಶೆಟ್ಟಿ-ಪಶು ಸಂಗೋಪನಾ ಇಲಾಖೆ, ರೇಷ್ಮೆ
ಟಿ.ರಘುಮೂರ್ತಿ-ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ
ರಿಜ್ವಾನ್ ಅರ್ಷದ್-ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ರುದ್ರಪ್ಪ ಲಮಾಣಿ- ಸಕ್ಕರೆ ಮತ್ತು ಜವಳಿ
ಶಿವಲಿಂಗೇಗೌಡ-ಅಬಕಾರಿ ಖಾತೆ
ವಿಜಯಾನಂದ ಕಾಶಪ್ಪನವರ್-ಸಣ್ಣ ಕೈಗಾರಿಕೆ
ಜಮೀರ್ ಅಹ್ಮದ್ ಖಾನ್-ವಸತಿ
ಅಜಯ್ ಸಿಂಗ್-ಸಣ್ಣ ನೀರಾವರಿ, ಐಟಿ ಬಿಟಿ





