ಚಿನ್ನದಲ್ಲಿ ಹೂಡಿಕೆ ನಿಜಕ್ಕೂ ಲಾಭಕರವೋ ಅಲ್ಲವೋ, ತಿಳಿಯೋಣವೇ….?
ಚಿನ್ನದಲ್ಲಿ ಹೂಡಿಕೆ ಮಾಡುವುದು ಸರಿಯೋ ತಪ್ಪೋ ಎಂಬುದು ನಿಮ್ಮ ಹಣಕಾಸಿನ ಪರಿಸ್ಥಿತಿ ಹಾಗೂ ರಿಸ್ಕ್ ಎದುರಿಸುವ ನಿಮ್ಮ ಸಹನಶೀಲತೆಗೆ ಒಂದು ಸವಾಲಾಗಿದೆ. ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು, ಅದರಿಂದ ಎದುರಿಸಬೇಕಾದ ರಿಸ್ಕ್ ಏನೇನು ಎಂದು ಪರಾಮರ್ಶಿಸಿ. ಹಾಗಾಗಿ ಈ ಕುರಿತು ನಿಮ್ಮ ಹಣಕಾಸು ಸಲಹೆಗಾರರ ಕಿವಿಮಾತುಗಳನ್ನು ಕೇಳಿ. ಆರ್ಥಿಕ ತಜ್ಞರ ಪ್ರಕಾರ ಒಟ್ಟು ಪೋರ್ಟ್ ಪೋಲಿಯೋದ ಕೇವಲ 10%-15% ಮಾತ್ರ ಚಿನ್ನದಲ್ಲಿ ಹೂಡಿಕೆ ಮಾಡಬೇಕು. ಯಾವುದೇ ಸಂಕಟದ ಪರಿಸ್ಥಿತಿ ಎದುರಾದರೂ, ಚಿನ್ನದಲ್ಲಿನ ಹೂಡಿಕೆ ನಿಮ್ಮ ಪೋರ್ಟ್ ಪೋಲಿಯೋಗೆ ಸ್ಥಿರತೆ ನೀಡಬಲ್ಲದು. ಆದರೆ ದೀರ್ಘಾವಧಿಗೆ ಇದು ನಿಮ್ಮ ಪೋರ್ಟ್ ಪೇಲಿಯೋದ ರಿಟರ್ನ್ಸ್ ಕಡಿಮೆ ಮಾಡಬಹುದು.
ಬಂಗಾರ ಎಂದಿದ್ದರೂ ದುಬಾರಿ ಎಂಬುದು ಗೊತ್ತಿರುವ ವಿಷಯ. ಇದು ನಿಜಕ್ಕೂ ಒಂದು ಪ್ರತಿಷ್ಠೆಯ, ಸಾಂಸ್ಕೃತಿಕ ಪ್ರತೀಕವಾಗಿದೆ. ಮುಖ್ಯವಾಗಿ ಇದರ ಉಪಯೋಗ ಆಭರಣ ತಯಾರಿಸಲು, ಹೂಡಿಕೆ ರೂಪದಲ್ಲಿ ಮಾಡಲಾಗುತ್ತದೆ. ಇದೀಗ ಇಷ್ಟೆಲ್ಲ ಹೊಸ ಹಣಕಾಸಿನ ಸಾಧನಗಳು ಲಭ್ಯವಿರುವಾಗ, ಬಂಗಾರದ ಹೊಳಪು ಮೊದಲಿಗಿಂತಲೂ ತುಸು ಡಲ್ ಆಗಿದೆ. ಬಹುತೇಕ ಜನರಿಗೆ ಈ ಸಂದಿಗ್ಧ ಎದುರಿಸಲೇ ಬೇಕಾಗುತ್ತದೆ, ಅದು ಯಾವುದೆಂದರೆ, ಚಿನ್ನದಲ್ಲಿ ಮತ್ತೆ ಈ ವರ್ಷ ಹೂಡಿಕೆ ಮಾಡಬೇಕೇ ಬೇಡವೇ? ಎಂಬುದು.
ಇಲ್ಲಿ ಮುಖ್ಯವಾಗಿ ನಾವು ಗುರುತಿಸಬೇಕಾಗಿರುವುದು, ಚಿನ್ನದಲ್ಲಿ ಹೂಡಿಕೆ ಮಾಡುವುದು ಎಂದರೆ, ಚಿನ್ನದ ಪಾರಂಪರಿಕ ಮಹತ್ವದ ಹೊರತಾಗಿ, ಅದರಲ್ಲಿ ಹೂಡಿಕೆ ಮಾಡುವ ಮೊದಲು, ಅದನ್ನು ಸರಿಯಾಗಿ ಪರೀಕ್ಷಿಸಬೇಕಾದುದು ಅತ್ಯಗತ್ಯ. ಆಗ ಮಾತ್ರ ಅಗತ್ಯಕ್ಕೆ ತಕ್ಕಂತೆ, ಅದನ್ನು ನಾವು ಹೊರ ತೆಗೆದು ಬಳಸಿಕೊಳ್ಳಬಹುದು. (ಅಂದರೆ ನಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಅಡ ಇಡುವುದು ಅಥವಾ ಮಾರುವುದು ಇತ್ಯಾದಿ). ಈ ರೀತಿ ಚಿನ್ನದ ಹೂಡಿಕೆಯನ್ನು ನಿಮ್ಮ ಮೊದಲ ಸಂಬಳದಿಂದಲೇ ಆರಂಭಿಸಬಹುದು. ನಮ್ಮ ಬಳಿ ಬಹಳಷ್ಟು ಹಣ ಸಂಗ್ರಹಗೊಂಡಾಗ ಮಾತ್ರ ನಾವು ಹೂಡಿಕೆ ಮಾಡಬಹುದು ಎಂದುಕೊಳ್ಳಬಾರದು. ಚಿನ್ನದ ಹೂಡಿಕೆಯಲ್ಲಿ ದೊಡ್ಡ ಲೆಕ್ಕಶಾಸ್ತ್ರದ ಅಗತ್ಯವೇನೂ ಇಲ್ಲ, 1, 2, 4, 5 ಗ್ರಾಂ ಲೆಕ್ಕದಲ್ಲಿ ಚಿನ್ನದ ನಾಣ್ಯಗಳು ಸಿಗುತ್ತವೆ.
ಹೂಡಿಕೆದಾರರಿಗೆ ಸಿಗುವ ಲಾಭಗಳು
ಚಿನ್ನದಲ್ಲಿ ಉತ್ಕೃಷ್ಟ ಲಿಕ್ವಿಡಿಟಿ ಇದೆ. ಏಕೆಂದರೆ ಈ ದುಬಾರಿ ಲೋಹಕ್ಕಾಗಿ ವಿಶ್ವವಿಡೀ ಒಂದು ಎಸ್ಟಾಬ್ಲಿಶ್ಡ್ ಮಾರುಕಟ್ಟೆ ಇದ್ದೇ ಇದೆ.
ಕಾಲಕ್ಕೆ ಅನುಸಾರ, ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇರುತ್ತದೆ. ಹೀಗಾಗಿ ಇದು ಧನ ಸಂರಕ್ಷಣೆ ಮಾಡಲು ಒಂದು ಅತ್ಯುತ್ತಮ ಆಯ್ಕೆ ಆಗಿರುತ್ತದೆ.
ಚಿನ್ನ ಎಂಬುದು ಇನ್ ಫ್ಲೇಶನ್ ಹಾಗೂ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳ ವಿರುದ್ಧ ಒಂದು ಅತ್ಯುತ್ತಮ ರಕ್ಷಣಾ ಸಾಧನವಾಗಿದೆ. ಈ ದುಬಾರಿ ಲೋಹ ಅನಿಶ್ಚಿತತೆಗಳ ಸಂದರ್ಭದಲ್ಲಿ, ತನ್ನ ಮೌಲ್ಯ ಉಳಿಸಿಕೊಳ್ಳಲು ಸದಾ ಸರ್ವದಾ ಪ್ರಸಿದ್ಧವಾಗಿದೆ. ಹೀಗಾಗಿಯೇ ಇದು ಒಂದು ಬುದ್ಧಿವಂತಿಕೆಯ ಹೂಡಿಕೆ ಮಾರ್ಗ ಎಂದು ಜನಪ್ರಿಯವಾಗಿದೆ.

ಇಂದು ನಾವು ಫಿಸಿಕಲ್ ಗೋಲ್ಡ್ (ನಾಣ್ಯ, ಆಭರಣ) ಜೊತೆ ಡಿಜಿಟಲ್ ಗೋಲ್ಡ್ ನಲ್ಲೂ ಹೂಡಿಕೆ ಮಾಡಬಹುದಾಗಿದೆ. ಇವೆರಡರಲ್ಲೂ ನಮಗೆ ಉತ್ತಮ ರಿಟರ್ನ್ಸ್ ಸಿಗುತ್ತವೆ. ಆನ್ ಲೈನ್ ಗೋಲ್ಡ್ ನಲ್ಲಿ ಹೂಡಿಕೆಯ ಕೆಲವು ಬಾಂಡ್ ನಂಥ ಗೋಲ್ಡ್ ಎಕ್ಸ್ ಚೇಂಜ್ ಟ್ರೆಂಡೆಡ್ ಫಂಡ್, ಸಾರೆನ್ ಗೋಲ್ಡ್ ಬ್ಯಾಂಡ್, ಗೋಲ್ಡ್ ಮ್ಯೂಚುಯೆಲ್ ಫಂಡ್ ಇತ್ಯಾದಿಗಳಿವೆ.
ಚಿನ್ನ ಎಂಬುದು ಹೂಡಿಕೆಗೆ ಅತಿ ಪೂರಕ ಅಂಶ ಎಂಬುದು ನಿಜವಾದರೂ, ನಾವು ಇದರ ಸಕಾರಾತ್ಮಕ ಅಂಶಗಳಿಂದ ಬಚಾವಾಗಲು, ಸರಿಯಾಗಿ ಯೋಚಿಸಿ, ವಿಚಾರಿಸಿ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಸಹ ನೆರವಾಗುತ್ತದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ರಿಸ್ಕ್ ಫ್ಯಾಕ್ಟರ್ಸ್ ಕಡೆಯೂ ನಾವು ಎಚ್ಚರದಿಂದಿರಬೇಕು.
ಚಿನ್ನ ನಮಗೆ ಆದಾಯ ಯಾವ ಲಾಭಾಂಶ ಉತ್ಪನ್ನ ತಂದುಕೊಡುವುದಿಲ್ಲ ಹಾಗೂ ಇದರ ಬೆಲೆ ಬಹುತೇಕ ಮಾರುಕಟ್ಟೆಯ ಧಾರಣೆಯನ್ನು ಆಧರಿಸಿರುತ್ತದೆ.
ಬಡ್ಡಿಯ ದರಗಳು, ಕೇಂದ್ರೀಯ ಬ್ಯಾಂಕ್ ನೀತಿಗಳು ಹಾಗೂ ಜಾಗತಿಕ ಆರ್ಥಿಕ ಸ್ಥಿತಿಗಳ ಕಾರಣ ಆಕಸ್ಮಿಕ ಏರಿಳಿತಗಳ ಅಧೀನದಿಂದಾಗಿ, ಇದರ ಬೆಲೆ ಅತ್ಯಧಿಕ ಅಸ್ಥಿರ ಆಗುವ ಸಾಧ್ಯತೆಗಳಿವೆ.
ಮೇಕಿಂಗ್ ಯಾ ಡಿಸೈನಿಂಗ್ ಶುಲ್ಕಗಳ ಕಾರಣ ಚಿನ್ನದ ಖರೀದಿ ಬೆಲೆ ಬಲು ದುಬಾರಿ ಆದೀತು.
ಸುರಕ್ಷತೆ ಹಾಗೂ ಇನ್ ಶ್ಯೂರೆನ್ಸ್ ನ ಅವಶ್ಯಕತೆಗಳಿಗೆ ತಕ್ಕಂತೆ ಸ್ಟೋರೇಜ್ ಕಾಸ್ಟ್ ಅನ್ವಯವಾಗುತ್ತದೆ.
ಅದರಲ್ಲಿ ಅಡಗಿರಬಹುದಾದ ಸಂಭವನೀಯ ಅಶುದ್ಧಿಗಳು, ಉತ್ಪತ್ತಿ ಶುದ್ಧತೆಯ ಪ್ರಮಾಣಪತ್ರಗಳ ಅವಶ್ಯಕತೆಗಳ ಕಾರಣ, ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರಾಟ ಮಾಡುವುದು ಸುಲಭಕಾರ್ಯ ಆಗಬಾರದು. ಚಿನ್ನದ ಹೂಡಿಕೆಗಾಗಿ ದೊಡ್ಡ ಮೊತ್ತದ ಹಣದ ಅಗತ್ಯವಿದೆ. ಹೀಗಾಗುವಾಗ, ಎಷ್ಟೋ ಸಲ ಹೂಡಿಕೆದಾರರ ಬಳಿ ಅಷ್ಟು ದೊಡ್ಡ ಮೊತ್ತದ ಹಣ ಇರಲಾರದು.
ಚಿನ್ನದ ಬೆಲೆಗಳಲ್ಲಿ ಒಮ್ಮೊಮ್ಮೆ ಇಳಿಕೆ ಸಹ ಕಂಡುಬರುವ ಸಾಧ್ಯತೆಗಳಿವೆ. ಆಗ ಇದರ ಕುರಿತಾದ ನಷ್ಟವನ್ನು ಕೇವಲ ಹೂಡಿಕೆದಾರರು ಮಾತ್ರ ಭರಿಸಬೇಕಾಗುತ್ತದೆ.
ಹೂಡಿಕೆದಾರರು ಫಿಸಿಕಲ್ ಗೋಲ್ಡ್ ನಲ್ಲಿ ಹೂಡಿಕೆ ಮಾಡಿದಾಗ, ಎಷ್ಟೋ ಸಲ ಅವರು ಸೆಕ್ಯುರಿಟಿ ಕುರಿತಾಗಿ ಚಿಂತೆ ಕಾಡುತ್ತದೆ. ಫಿಸಿಕಲ್ ಗೋಲ್ಡ್ ಕಳುವಾಗುವ ಯಾ ಕಳೆದುಹೋಗುವ ಅಪಾಯ ಇದ್ದೇ ಇರುತ್ತದೆ.
ಚಿನ್ನ ಎಂಬುದು ಎಲ್ಲರಿಗೂ ಬಹು ಅಮೂಲ್ಯವಾದುದು. ಹೀಗಿರುವಾಗ ನಕಲಿ ನಾಣ್ಯಗಳನ್ನು ಟಂಕಿಸಬಹುದು ಯಾ ಕೃತಕ ವಜ್ರಗಳು ಅಸಲಿಯೊಂದಿಗೆ ಬೆರೆತು ಹೋಗಬಹುದು. ಆದರೆ ಚಿನ್ನವನ್ನು ಮಾತ್ರ ಅದರ ದುರ್ಲಭ್ಯತೆ ಮತ್ತು ಶುದ್ಧತೆಗಾಗಿ ಮಾತ್ರವೇ ಹೆಚ್ಚು ಮಹತ್ವ ನೀಡಲಾಗುತ್ತದೆ.
ವಿಚಾರವಿಮರ್ಶೆ ನಡೆಸಿ ಹೂಡಿಕೆ ಮಾಡಿ
ಈ ಕುರಿತಾಗಿ ಮ್ಯಾನೇಜರ್ ವಿನಯ್ ವರ್ಮ ಹೇಳುತ್ತಾರೆ, ಹಾಗೆ ನೋಡಿದರೆ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕೆ ಅನೇಕ ಪ್ರಾವಿಶನ್ಸ್ ಇವೆ. ಹೀಗಾಗಿ ಅವುಗಳನ್ನೆಲ್ಲ ಕೂಲಂಕಷವಾಗಿ ವಿಚಾರಿಸಿಯೇ ಹೂಡಿಕೆ ಮಾಡಬೇಕು. ಇವೆಲ್ಲವುಗಳಲ್ಲಿ ಫಿಸಿಕಲ್ ಇನ್ ವೆಸ್ಟ್ ಮೆಂಟ್ ನ್ನು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದರಲ್ಲಿ ಹೂಡಿಕೆದಾರ ತಾನೇ ಖುದ್ದಾಗಿ ಬಂದು ಎಲ್ಲಾ ಮಾಹಿತಿಗಳನ್ನೂ ಪಡೆದು, ಚಿನ್ನ ಖರೀದಿಸುತ್ತಾನೆ. ಏಕೆಂದರೆ ಡಿಜಿಟಲ್ ಗೋಲ್ಡ್ ಖರೀದಿಸಲು ಆನ್ ಲೈನ್ ಜ್ಞಾನವಿರಬೇಕು, ಇದು ಎಲ್ಲರ ಕೈಗೆ ಎಟುಕುವಂಥದ್ದಲ್ಲ. ಅಗತ್ಯ ಬಂದಾಗ ಈ ಡಿಜಿಟಲ್ ನಿಂದ ಹಣ ಬಿಡಿಸಿಕೊಳ್ಳಲು ನಾವು ಬಲು ಹೆಚ್ಚಿನ ಸರ್ಕಸ್ ಮಾಡಬೇಕಾಗುತ್ತದೆ.
ಮತ್ತೆ ಮತ್ತೆ ಅದಕ್ಕಾಗಿ ಹಣಕಾಸು ಸಂಸ್ಥೆಗಳ ಕದ ತಟ್ಟಬೇಕು. ಡಿಜಿಟಲ್ ಗೋಲ್ಡ್ ಮೆಚ್ಯೂರಿಟಿಯ ನಂತರವೇ ವಿತ್ ಡ್ರಾ ಮಾಡಬಹುದಾಗಿದೆ ಯಾ ಹೂಡಿಕೆಯ 5 ವರ್ಷಗಳ ನಂತರವೇ ಅದನ್ನು ಹಿಂಪಡೆಯಬಹುದು.
ಎಲ್ಲಕ್ಕೂ ಮೊದಲು ಪರಿಶುದ್ಧತೆ
ಚಿನ್ನದ ಪರಿಶುದ್ಧತೆ ಕ್ಯಾರೆಟ್ ನಲ್ಲಿ ಅಳೆಯಲಾಗುತ್ತದೆ. ಇದನ್ನು 24 ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. ಇದರಲ್ಲಿ 24 ಕ್ಯಾರೆಟ್ ನ ಚಿನ್ನ ಮಾತ್ರ ಅಪ್ಪಟ ಅಪರಂಜಿ ಎನಿಸುತ್ತದೆ. 18 ಕ್ಯಾರೆಟ್ ಚಿನ್ನದಲ್ಲಿ 18 ಭಾಗ ಚಿನ್ನ, ಇನ್ನುಳಿದ 6 ಭಾಗ ಇತರ ಲೋಹ ಆಗಿರುತ್ತದೆ. ಚಿನ್ನದ ಆಭರಣಗಳ ಕ್ಯಾರೆಟ್, ಅದರ ಬೆಲೆ ಹಾಗೂ ಸ್ಥಾಯಿತ್ವದ ಮೇಲೆ ಮಹತ್ಪಪೂರ್ಣ ಪ್ರಭಾವ ಬೀರುತ್ತದೆ. ಕ್ಯಾರೆಟ್ ಎಷ್ಟು ಹೆಚ್ಚಿರುತ್ತದೋ, ಆ ವಸ್ತುವಿನಲ್ಲಿ ಅಷ್ಟೇ ಹೆಚ್ಚಿನ ಪ್ರಮಾಣದ ಅಪರಂಜಿ ಬಂಗಾರ ಇರುತ್ತದೆ. ಅಸಲಿಗೆ ಶುದ್ಧ ಕ್ಯಾರೆಟ್ ನ ಚಿನ್ನ ಬಲು ಮೃದು ಹಾಗೂ ಇದಕ್ಕೆ ಗೀಚು ತಗುಲುವ ರಿಸ್ಕ್ ಅಧಿಕ.
– ಜಿ. ಸುಮಾ





