ಒಂದು ಕಾಲದಲ್ಲಿ ಜಗತ್ತನ್ನೇ ಸೆಳೆದ

ಒಂದು ಕಾಲದಲ್ಲಿ ನಮ್ಮ ಮನೆಯ ಅಡುಗೆಮನೆಯೇ ಒಂದು ಪುಟ್ಟ ಮಸಾಲೆ ಕಾರ್ಖಾನೆ! ಅಲ್ಲಿ ಮಿಕ್ಸರ್‌ನ ಸದ್ದು ಇರಲಿಲ್ಲ. ಪ್ಯಾಕೆಟ್‌ಗಳನ್ನು ಹರಿದು ಪುಡಿ ಮಾಡುವ ಆತುರವಿರಲಿಲ್ಲ. ರೆಡಿಮೇಡ್ ಸಾಂಬಾರ್ ಪುಡಿ, ಇನ್‌ಸ್ಟಂಟ್ ರಸಂ ಪುಡಿ, ಗರಂ ಮಸಾಲಾ ಎಂಬ ಬಣ್ಣಬಣ್ಣದ ಪ್ಯಾಕೆಟ್‌ಗಳ ಸಾಲುಗಳಿರಲಿಲ್ಲ. ಅದರ ಬದಲು… ಒಂದು ಮೂಲೆಯಲ್ಲಿ ಸಾರಿನ ಪುಡಿ, ಹುಳಿ ಪು
ಭಾರತೀಯ ಮಸಾಲೆ ಎಂದರೆ ಜಗತ್ತಿಗೇ ಒಂ ದು ಅದ್ಭುತ!
ಭಾರತದ ಇತಿಹಾಸದಲ್ಲಿ ಮಸಾಲೆಗಳಿಗೆ ಅಪಾರ ಮಹತ್ವವಿದೆ. ಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಜೀರಿಗೆ, ಧನಿಯಾ, ಅರಿಶಿನ, ಮೆಂತ್ಯೆ ಮುಂತಾದ ಮಸಾಲೆಗಳು ಶತಮಾನಗಳಿಂದಲೇ ಭಾರತದ ವ್ಯಾಪಾರದ ಪ್ರಮುಖ ಉತ್ಪನ್ನಗಳಾಗಿದ್ದವು. ವಿಶೇಷವಾಗಿ ಕರಿಮೆಣಸು ಮತ್ತು ದಕ್ಷಿಣ ಭಾರತದ ಇತರ ಸುವಾಸನೆಯ ಮಸಾಲೆಗಳು ವಿದೇಶಿ ವ್ಯಾಪಾರಿಗಳನ್ನು ಭಾರತದತ್ತ ಸೆಳೆದವು. ಭಾರತೀಯ ಮಸಾಲೆಗಳಿಗಾಗಿ ಅರಬ್ ವ್ಯಾಪಾರಿಗಳು, ಯುರೋಪಿನ ವ್ಯಾಪಾರಿಗಳು ಹಾಗೂ ನಂತರ ಪೋರ್ಚುಗೀಸ್, ಡಚ್, ಫ್ರೆಂಚ್ ಮತ್ತು ಬ್ರಿಟಿಷ್ ಶಕ್ತಿಗಳು ಭಾರತಕ್ಕೆ ಬಂದವು.
ಹೀಗಾಗಿ ಮಸಾಲೆಗಳೇ ಭಾರತದ ಮೇಲೆ ನಡೆದ ಎಲ್ಲ ವಿದೇಶಿ ದಾಳಿಗಳಿಗೆ ಏಕೈಕ ಕಾರಣ ಎನ್ನುವುದು ಇತಿಹಾಸವನ್ನು ಅತಿಯಾಗಿ ಸರಳೀಕರಿಸಿದ ಮಾತಾಗುತ್ತದೆ. ಆದರೆ ಭಾರತದ ಮಸಾಲೆ ವ್ಯಾಪಾರವು ಜಗತ್
ನಮ್ಮ ತಾಯಂದಿರ ಅಡುಗೆ ಮನೆಯೇ ಒಂದು ಪ್ರಯೋಗಾಲಯ!

ನಮ್ಮ ಹಿಂದಿನ ತಲೆಮಾರಿನ ಹೆಂಗಸರು ಅಡುಗೆ ಮಾಡುತ್ತಿದ್ದರು ಎಂದರೆ ಅದು ಕೇವಲ ಹೊಟ್ಟೆ ತುಂಬಿಸುವ ಕೆಲಸವಾಗಿರಲಿಲ್ಲ. ಅದು ಒಂದು ಕಲೆ. ಒಂದು ವಿಜ್ಞಾನ. ಒಂದು ಸಂಪ್ರದಾಯ. ಒಂದು ಕುಟುಂಬದ ಆರೋಗ್ಯದ ಜವಾಬ್ದಾರಿ. ಮಸಾಲೆ ಪುಡಿ ಮಾಡುವ ದಿನವೂ ಹಾಗೆಯೇ! ನಾಳೆ ಶುಕ್ರವಾರ… ಮಸಾಲೆ ಮಾಡೋಣ. ಮಂಗಳವಾರ ಒಳ್ಳೆಯ ದಿನ. ಇವತ್ತೇ ಎಲ್ಲ ಪದಾರ್ಥ ತಂದು ಒಣಗಿಸೋಣ.
ಎಂದು ಶುಭ ದಿನ ನೋಡಿಕೊಂಡು ಕೆಲಸ ಆರಂಭಿಸುತ್ತಿದ್ದರು. ಅಂಗಡಿಗೆ ಹೋಗಿ ಯಾವುದೋ ಪ್ಯಾಕೆಟ್ ತೆಗೆದುಕೊಂಡು ಬರುವುದಲ್ಲ. ಒಳ್ಳೆಯ ಗುಣಮಟ್ಟದ ಒಣ ಮೆಣಸಿನಕಾಯಿ, ಧನಿಯಾ,
ಬಿಸಿಲಿನಲ್ಲೂ ಒಂದು ಮಮತೆ ಇತ್ತು
ಮಸಾಲೆ ಪದಾರ್ಥಗಳನ್ನು ತಂದು ಸ್ವಚ್ಛವಾಗಿ ಆರಿಸಿ, ತೊಳೆದು, ಚೆನ್ನಾಗಿ ಒಣಗಿಸಿ, ಮನೆಯ ಅಂಗಳದಲ್ಲಿ ಬಿಸಿಲಿಗೆ ಹರಡುತ್ತಿದ್ದರು. ಆ ದೃಶ್ಯವೇ ಒಂದು ನೆನಪು. ಬಿಳಿ ಬಟ್ಟೆಯ ಮೇಲೆ ಹರಡಿದ ಧನಿಯಾ ಬೀಜಗಳು… ಪಕ್ಕದಲ್ಲಿ ಒಣಗುತ್ತಿದ್ದ ಮೆಣಸಿನಕಾಯಿಗಳು… ಇನ್ನೊಂದು ಕಡೆ ಜೀರಿಗೆ… ಮತ್ತೊಂದು ಕಡೆ ಮೆಂತ್ಯೆ… ಮನೆಯ ಮಕ್ಕಳು ಅದರ ಹತ್ತಿರ ಹೋಗದಂತೆ ಅಮ್ಮನ ಎಚ್ಚರಿಕೆ! ಅದನ್ನು ಮುಟ್ಟಬೇಡ… ಚೆ
ನಂತರ ಬರುತ್ತಿತ್ತು ಹದವಾಗಿ ಹುರಿ ಯುವ ಕಲೆ
ಒಣಗಿದ ಪದಾರ್ಥಗಳನ್ನು ಹಾಗೆಯೇ ಪುಡಿ ಮಾಡುತ್ತಿರಲಿಲ್ಲ. ಯಾವ ಪದಾರ್ಥವನ್ನು ಎಷ್ಟು ಹುರಿಯಬೇಕು? ಯಾವುದನ್ನು ಮೊದಲು ಹುರಿಯಬೇಕು? ಯಾವುದನ್ನು ಕೊನೆಯಲ್ಲಿ ಸೇರಿಸಬೇಕು? ಎಷ್ಟು ಉರಿ ಇರಬೇಕು? ಇವೆಲ್ಲವೂ ಅಮ್ಮ-ಅಜ್ಜಿಯರಿಗೆ ಅನುಭವದಿಂದಲೇ ಗೊತ್ತಿತ್ತು. ಒಂದು ಪದಾರ್ಥ ಸ್ವಲ್ಪ ಹೆಚ್ಚಾಗಿ ಹುರಿದರೂ ರುಚಿ ಬದಲಾಗುತ್ತದೆ. ಒಂದು ಪದಾರ್ಥ ಕಡಿಮೆ ಹುರಿದರೂ ಅದರ ಸುವಾಸನೆ ಬರುವುದಿಲ್ಲ. ಅಳತೆಯೇ ಇರದ ಅಳತೆ!
ಬೀಸುವ ಕಲ್ಲಿನ ಸದ್ದಿನಲ್ಲೂ ಸಂಗೀ ತವಿತ್ತು
ಇಂದು ಮಿಕ್ಸರ್‌ನ ಒಂದು ಗುಂಡಿ ಒತ್ತಿದರೆ ಸಾಕು. ಆದರೆ ಹಿಂದೆ? ಬೀಸುವ ಕಲ್ಲು! ಕೈಯಿಂದ ತಿರುಗಿಸುತ್ತಾ ಮಸಾಲೆಗಳನ್ನು ಪುಡಿ ಮಾಡುವುದು. ಒಂದು ಕಡೆ ಕಲ್ಲಿನ ಸದ್ದು… ಇನ್ನೊಂದು ಕಡೆ ಅಡುಗೆ ಮನೆಯ ಮಾತುಕತೆ… ಮಕ್ಕಳ ಆಟ… ಅಂಗಳದಲ್ಲಿ ಒಣಗುತ್ತಿದ್ದ ಮಸಾಲೆಗಳ ಪರಿಮಳ… ಇವೆಲ್ಲವೂ ಸೇರಿ ಮನೆಯ ವಾತಾವರಣವನ್ನೇ ಬದಲಿಸುತ್ತಿದ್ದವು.
ನಂತರ ಕಾಲ ಬದಲಾಯಿತು. ಬೀಸುವ ಕಲ್ಲಿನ ಜಾಗವನ್ನು ಫ್ಲೋರ್ ಮಿಲ್‌ಗಳು ಪಡೆದುಕೊಂಡವು. ಆದರೂ ಮನೆಯ ಮಸಾಲೆ ಮನೆಯದ್ದೇ!
ಫ್ಲೋರ್ ಮಿಲ್ಲಿನಲ್ಲೂ ನಮ್ಮ ಅಮ್ಮಂ ದಿರ ಜಾಣ್ಮೆ!
ಇಲ್ಲಿ ಒಂದು ಕುತೂಹಲಕಾರಿ ಸಂಗತಿ. ಮಸಾಲೆಗಳನ್ನು ಫ್ಲೋರ್ ಮಿಲ್ಲಿಗೆ ಕಳುಹಿಸಿದಾಗ, ಪುಡಿ ಅಲ್ಲಿ ಉಳಿಯಬಾ
ನಂತರ ಅದನ್ನು ಮನೆಗೆ ತಂದು ಸ್ವಲ್ಪ ಹೊತ್ತು ನೆರಳಿನಲ್ಲಿ ಒಣಗಿಸಿ, ಗಾಳಿ ಆಡದ ಡಬ್ಬಿಯಲ್ಲಿ ಸಂಗ್ರಹಿಸುತ್ತಿದ್ದರು. ಇಂದು ಇದನ್ನು ನೆನಪಿಸಿಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದು ಕಾಳು ಮಸಾ
ದೊಡ್ಡ ಡಬ್ಬಿಯಿಂದ ಸಣ್ಣ ಡಬ್ಬಿಗೆ…

ಎಲ್ಲಾ ಮಸಾಲೆಗಳನ್ನು ದೊಡ್ಡ ಡಬ್ಬಿಯಲ್ಲಿ ತುಂಬಿಟ್ಟುಕೊಂಡು ಪ್ರತಿದಿನ ಅದನ್ನು ತೆರೆದು ಬಳಸುತ್ತಿರಲಿಲ್ಲ.
ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿಸಿಕೊಳ್ಳುತ್ತಿದ್ದರು. ಸಾರಿನ ಪುಡಿಗೆ ಒಂದು ಡಬ್ಬಿ. ಹುಳಿ ಪುಡಿಗೆ ಇನ್ನೊಂದು. ಮೆಣಸಿನ ಪುಡಿ ಮತ್ತೊಂದು. ಚಟ್ನಿ ಪುಡಿ ಇನ್ನೊಂದು. ವಾಂಗೀಬಾತ್ ಪುಡಿ… ಪಲ್ಯದ ಪುಡಿ… ಮೆಂತ್ಯದ ಪುಡಿ… ಹೀಗೆ ಅಡುಗೆ ಮನೆಯ ಒಂದು ಮೂಲೆಯೇ ಮಸಾಲೆಗಳ ಪುಟ್ಟ ಗ್ರಂಥಾಲಯ!
ಒಂದೇ ಪುಡಿಯಿಂದ ಎಷ್ಟೊಂದು ರುಚಿ ಗಳು!
ಇಂದಿನ ಪ್ಯಾಕೆಟ್ ಸಂಸ್ಕೃತಿಯಲ್ಲಿ ಬಹಳಷ್ಟು ಬಾರಿ ನಾವು ಸಾಂಬಾರ್ ಪುಡಿ ಎಂದರೆ ಒಂದು ನಿರ್ದಿಷ್ಟ ರುಚಿಯನ್ನು ನಿರೀಕ್ಷಿಸುತ್ತೇವೆ. ಆದರೆ ಹಿಂದಿನ ದಿನಗಳಲ್ಲಿ ಪ್ರತಿ ಮನೆಯ ಸಾಂಬಾರ್‌ಗೇ ತನ್ನದೇ ಆದ ರುಚಿ ಇತ್ತು. ಅಮ್ಮನ ಸಾಂಬಾರ್ ರುಚಿ ಬೇರೆ
ಏಕೆಂದರೆ ಮಸಾಲೆಯ ಪ್ರಮಾಣವೂ, ಹುರಿಯುವ ವಿಧಾನವೂ, ಪದಾರ್ಥಗಳ ಗುಣಮಟ್ಟವೂ ಮನೆಯವರ ಅನುಭವಕ್ಕೆ ಅನುಗುಣವಾಗಿ ಬದಲಾಗುತ್ತಿತ್ತು. ಅದಕ್ಕೇ ಅಡುಗೆಗೆ ಒಂದು ಮನೆಯ ರುಚಿ ಇತ್ತು.
ಚಕ್ಲಿ, ಕೋಡುಬಳೆ, ತೇಂಗೊಳಲು… ಇವೆ ಲ್ಲವೂ ಮನೆಯಲ್ಲೇ!
ಹಬ್ಬ ಬಂತೆಂದರೆ ಅಂಗಡಿಗೆ ಹೋಗಿ ಪ್ಯಾಕೆಟ್ ಖರೀದಿಸುವ ಪದ್ಧತಿ ಎಲ್ಲೆಡೆ ಇರಲಿಲ್ಲ. ಮನೆಗೆ ಬೇಕಾದ ಚಕ್ಲಿ ಹಿಟ್ಟು, ಕೋಡುಬಳೆ ಹಿ
ಅಡುಗೆ ಪುಸ್ತಕ ಓದದೆ ಅಡುಗೆ ವಿಶ್ ವವಿದ್ಯಾಲಯದಿಂದ ಪದವಿ ಪಡೆದವರಂತೆ!
ಆದರೆ ಕಾಲ ಬದಲಾಯಿತು…
ಮನೆಯ ಹೆಂಗಸರು ಈಗಲೂ ಅಡುಗೆ ಮಾಡುತ್ತಾರೆ. ಆದರೆ ಅವರ ಜೀವನಶೈಲಿ ಬದಲಾಗಿದೆ. ಅಂದು ಮನೆಯ ಕೆಲಸ, ಮಕ್ಕಳ ಪಾಲನೆ ಮತ್ತು ಅಡುಗೆ ಮುಖ್ಯವಾಗಿದ್ದರೆ, ಇಂದು ಮಹಿಳೆಯರು ಶಿಕ್ಷಣ, ಉದ್ಯೋಗ, ವೃತ್ತಿ, ವ್ಯಾಪಾರ, ಕಚೇರಿ—ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ.
ಸಮಯದ ಅಭಾವ ನಿಜ. ಅದಕ್ಕಾಗಿಯೇ ರೆಡಿಮೇಡ್ ಮಸಾಲೆ ಪುಡಿಗಳು ಅನಿವಾರ್ಯವಾಗಿರುವ ಕುಟುಂಬಗಳೂ ಇವೆ. ಇದು ತಪ್ಪು ಎಂದು ಹೇಳಲಾಗುವುದಿಲ್ಲ. ಆದರೆ ಸಮಸ್ಯೆ ರೆ
ಮಸಾಲೆ ಡಬ್ಬಿಗಳ ಜಾಗದಲ್ಲಿ ಪ್ಯಾಕೆ ಟ್ಗಳು!
ಇಂದು ಅಂಗಡಿಗೆ ಹೋದರೆ… ಅಚ್ಚ ಖಾರದ ಪುಡಿ! ಜೀರಿಗೆ ಪುಡಿ! ಧನಿಯಾ ಪುಡಿ! ರಸಂ ಪುಡಿ! ಸಾಂಬಾರ್ ಪುಡಿ! ಗರಂ ಮಸಾಲಾ! ಚಾಟ್ ಮಸಾಲಾ! ಬಿರಿಯಾನಿ ಮಸಾಲಾ! ಎಂದು ನೂರಾರು ಬಗೆಯ ಪ್ಯಾಕೆಟ್‌ಗಳು. ಒಂದು ಪ್ಯಾಕೆಟ್ ಹರಿದುಬಿಟ್ಟರೆ ಅಡುಗೆ ಸಿದ್ಧ! ಸಮಯ ಉಳಿಯುತ್ತದೆ. ಶ್ರಮ ಉಳಿಯುತ್ತದೆ. ಆದರೆ… ಏನೋ ಒಂದು ಕಳೆದುಹೋದಂತೆ ಅನಿ
ರುಚಿ ಮಾತ್ರವಲ್ಲ, ನೆನಪುಗಳೂ ಕಳೆ ದುಹೋಗುತ್ತಿವೆ
ಹಿಂದೆ ಅಡುಗೆ ಮನೆಯಲ್ಲಿದ್ದ ಮಸಾಲೆಯ ಪರಿಮಳವೇ ಮನೆಯ ಗುರುತಾಗಿತ್ತು. ಬೆಳಗ್ಗೆ ಅಮ್ಮ ಮಸಾಲೆ ಹುರಿಯುತ್ತಿದ್ದರೆ ಮನೆಯ ಹೊರಗಿರುವವರಿಗೂ, ಇವತ್ತು ಮನೆಯಲ್ಲಿ
ಇಂದು ಅದೇ ಅಡುಗೆ ಮನೆಯೊಳಗೆ ಪ್ಯಾಕೆಟ್ ತೆರೆದಾಗ ಬರುವ ಪರಿಮಳ. ಅದು ರುಚಿಯಾಗಿರಬಹುದು. ಅನು
ಅಮ್ಮನ ಕೈರುಚಿಗೆ ಕಾರಣ ಮಸಾಲೆಯಷ್ ಟೇ ಅಲ್ಲ
ನಮ್ಮ ಅಮ್ಮಂದಿರು ಅಡುಗೆ ಮಾಡುವಾಗ ಒಂದು ವಿಷಯವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿದ್ದರು. ಮನೆಯವರು ತೃಪ್
ತವರುಮನೆಯ ರುಚಿಯ ಕೈಪಿಡಿ

ಒಂದು ಕಾಲದಲ್ಲಿ ಮದುವೆಗೆ ಮುನ್ನವೇ ಅಮ್ಮ–ಅಜ್ಜಿಯರು ಮಗಳಿಗೆ ಸಾರು, ಹುಳಿ, ವಾಂಗೀಬಾತ್, ಚಟ್ನಿ ಹಾಗೂ ಮೆಂತ್ಯದ ಪುಡಿಗಳ ಅಳತೆ ಮತ್ತು ತಯಾರಿ ವಿಧಾನಗಳನ್ನು ಕಲಿಸುತ್ತಿದ್ದರು. ಮರೆತುಹೋಗದಂತೆ ಮಗಳು ಅವನ್ನೆಲ್ಲ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದಳು. ಅದು ಸಾಮಾನ್ಯ ಅಡುಗೆ ಪುಸ್ತಕವಲ್ಲ—ತವರುಮನೆಯ ರುಚಿ, ಅಮ್ಮನ ಕೈಬರಹ ಮತ್ತು ಅಜ್ಜಿಯ ಅನುಭವಗಳನ್ನು ಹೊತ್ತ ನೆನಪಿನ ಕೈಪಿಡಿ. ಮದುವೆಯಾದಾಗ ಬಟ್ಟೆ-ಬರೆಗಳ ಜೊತೆಗೆ ಆ ಪುಸ್ತಕವೂ ಮಗಳ ಹೊಸ ಮನೆಗೆ ತೆರಳುತ್ತಿತ್ತು.
ಫೋನ್‌ನಿಂದ ಪ್ಯಾಕೆಟ್ ಮಸಾಲೆಗಳವರೆಗೆ…

ಕಾಲ ಬದಲಾದಂತೆ ಅಮ್ಮ–ಮಗಳ ನಡುವಿನ ಅಡುಗೆ ಪಾಠವೂ ಬದಲಾಯಿತು. ಮಗಳು ಬೇರೆ ಊರಿನಲ್ಲಿದ್ದರೂ, “ಅಮ್ಮಾ, ಇದಕ್ಕೆ ಎಷ್ಟು ರವೆ?”, “ನೀವು ಮಾಡುವ ಹಾಗೆ ಗೊಜ್ಜು ಬರ್ತಿಲ್ಲ, ಏನು ಮಾಡಲಿ?” ಎಂಬ ಪ್ರಶ್ನೆಗಳಿಗೆ ಫೋನ್‌ನಲ್ಲೇ ಅಮ್ಮ ಉತ್ತರಿಸುತ್ತಿದ್ದಳು. ತವರುಮನೆಯಿಂದ ಮರಳುವಾಗ ಸಾರಿನ ಪುಡಿ, ಹುಳಿ ಪುಡಿ, ವಾಂಗೀಬಾತ್ ಮಸಾಲೆ, ಪುಳಿಯೋಗರೆ ಗೊಜ್ಜು, ಹಬ್ಬದ ತಿಂಡಿಗಳು ಮಗಳಿಗಾಗಿ ಅಮ್ಮನ ಪ್ರೀತಿಯ ಪೊಟ್ಟಣಗಳಾಗಿ ಬರುತ್ತಿದ್ದವು. ಆದರೆ ಇಂದು ರೆಡಿಮೇಡ್ ಮಸಾಲೆ ಪ್ಯಾಕೆಟ್‌ಗಳು ಅಡುಗೆಯನ್ನು ಸುಲಭಗೊಳಿಸಿವೆ. ಸಮಯ ಉಳಿದರೂ, ಅವುಗಳ ಜೊತೆಗೆ ನಿಧಾನವಾಗಿ ಕಣ್ಮರೆಯಾಗುತ್ತಿರುವುದು ಮನೆಯ ಮಸಾಲೆ ತಯಾರಿಸುವ ಪರಂಪರೆ ಮಾತ್ರವಲ್ಲ, ಅಮ್ಮ–ಮಗಳ ನಡುವಿನ ಆ ಆತ್ಮೀಯ ಅಡುಗೆ ಮಾತುಕತೆಗಳೂ ಹೌದು.
ಉಳಿಸಿಕೊಳ್ಳಬೇಕಾದ ರುಚಿಯ ಪರಂಪರೆ
ಅಮ್ಮಾ, ಆ ಪುಡಿ ಹೇಗೆ ಮಾಡಬೇಕು? ಎಂದು ಕೇಳುವ ಮಗಳು, ನಾಳೆ ಬಾ, ನಿನಗೆ ಹೇಳಿಕೊಡುತ್ತೇನೆ ಎನ್ನುವ ಅಮ್ಮ, ಮದುವೆಯ ಮುನ್ನ ಅಜ್ಜಿ ಹೇಳಿಕೊಡುವ ಅಳತೆಗಳು—ಇವೆಲ್ಲವೂ ಇಂದು ನೆನಪುಗಳಾಗುತ್ತಿವೆ. ಪ್ಯಾಕೆಟ್ ಮಸಾಲೆಗಳು ಅಡುಗೆಮನೆಯನ್ನು ಪ್ರವೇಶಿಸಿದರೂ, ತವರುಮನೆಯ ರುಚಿ ಮತ್ತು ಅದರ ಹಿಂದಿನ ಪ್ರೀತಿಯನ್ನು ಅವು ಎಂದಿಗೂ ಬದಲಾಯಿಸಲಾರವು. ಆದ್ದರಿಂದ ಅಮ್ಮ–ಅಜ್ಜಿಯರ ಹಳೆಯ ಪಾಕವಿಧಾನಗಳನ್ನು ಬರೆಯುವುದು, ಕಲಿಯುವುದು ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಅಡುಗೆ ಸಂಸ್ಕೃತಿಯನ್ನು ಉಳಿಸುವ ಸುಂದರ ಮಾರ್ಗವಾಗಿದೆ.
ಹಾಗಾದರೆ ಹಳೆಯದನ್ನೆಲ್ಲ ಬಿಟ್ಟುಬಿ ಡಬೇಕೇ?
ಖಂಡಿತ ಇಲ್ಲ. ಆಧುನಿಕ ಜೀವನ ಬೇಕು. ಸಮಯ ಉಳಿಸುವ ಸಾಧನಗಳೂ ಬೇಕು. ರೆಡಿಮೇಡ್ ಮಸಾಲೆಗಳೂ ಕೆಲವೊಮ್ಮೆ ಅಗತ್ಯ. ಆದರೆ ಅದರ ಜೊತೆಗೆ ನಮ್ಮ ಹಳೆಯ ಜ್ಞಾನವನ್ನೂ ಉಳಿಸಿಕೊಳ್ಳಬೇಕು. ವರ್ಷಕ್ಕೆ ಕನಿಷ್ಠ ಒಂದೆರಡು ಬಾರಿ ಮನೆಯಲ್ಲೇ:
- ಸಾರಿನ ಪುಡಿ
- ಹುಳಿ ಪುಡಿ
- ಚಟ್ನಿ ಪುಡಿ
- ವಾಂಗೀಬಾತ್ ಪುಡಿ
- ಪಲ್ಯದ ಪುಡಿ
- ಮೆಂತ್ಯದ ಹಿಟ್ಟು,
- ಪುಳಿಯೋಗರೆ ಗೊಜ್ಜು,
ಮುಂತಾದವುಗಳನ್ನು ತಯಾರಿಸಬಹುದು. ಮನೆಯ ಅಜ್ಜಿ-ಅಮ್ಮಂದಿರಿಂದ ಹಳೆಯ ಅಳತೆಗಳನ್ನು ಕೇಳಿ ಬರೆಯಬಹುದು. ಒಂದು ಸೇರು ಅಕ್ಕಿಗೆ ಇ
ಮಸಾಲೆ ಡಬ್ಬಿ ಎಂದರೆ ಒಂದು ಸಂಸ್ಕೃ ತಿಯ ಪೆಟ್ಟಿಗೆ

ನಮ್ಮ ಅಡುಗೆ ಮನೆಯಲ್ಲಿ ಇರುತ್ತಿದ್ದ ಆ ಮಸಾಲೆ ಡಬ್ಬಿಗಳನ್ನು ನಾವು ಕೇವಲ ಅಡುಗೆ ಸಾಮಗ್ರಿಗಳೆಂದು ನೋಡಬಾರದು. ಅವುಗಳೊಳಗೆ ಇತ್ತು— ಅಮ್ಮನ ಶ್ರಮ, ಅಜ್ಜಿಯ ಅನು
ಒಂದು ಕಾಲದಲ್ಲಿ ಮಸಾಲೆಗಾಗಿ ಜಗತ್ತು ಭಾರತಕ್ಕೆ ಬಂದಿತ್ತು…
ಭಾರತದ ಮಸಾಲೆಗಳಿಗೆ ಜಗತ್ತು ಮಾರುಹೋಗಿತ್ತು. ಆ ಮಸಾಲೆಗಳ ಪರಿಮಳ ನಮ್ಮ ಮನೆಗಳ ಅಡುಗೆಮನೆಯಲ್ಲೂ ತುಂಬಿತ್ತು. ಆದರೆ ಇಂದು ವಿಚಿತ್ರ ಪರಿಸ್ಥಿತಿ. ಭಾರತದ ಮಸಾಲೆಗಳೇ ಜಗತ್
ಒಂದು ಕಾಲದಲ್ಲಿ ಅಮ್ಮ ತನ್ನ ಕೈಯಿಂದ ಮಸಾಲೆ ಹುರಿದು ಪುಡಿ ಮಾಡುತ್ತಿದ್ದಳು. ಇಂದು ಮಗಳು ಆ ಮಸಾಲೆಯ ಪ್ಯಾಕೆಟ್ ಖರೀದಿಸಿ ಮನೆಗೆ ತರುತ್ತಾಳೆ. ಇದು ತಪ್ಪಲ್ಲ. ಆದರೆ ಆ ಪ್ಯಾಕೆಟ್ ತೆರೆದಾಗ… ಅದರೊಳಗೆ ಅಮ್ಮನ ನೆನಪು ಇ
ವರ್ಷಕ್ಕೆ ಒಂದು ದಿನವಾದರೂ ಮನೆಯವರು ಎಲ್ಲರೂ ಸೇರಿ ಮಸಾಲೆ ತಯಾರಿಸೋಣ. ಮಕ್ಕಳಿಗೆ ತೋರಿಸೋಣ. ಅಮ್ಮನಿಂದ ಕಲಿಯೋಣ. ಅಜ್ಜಿಯಿಂದ ಕೇಳೋಣ.ಏಕೆಂದರೆ ನಾಳೆ ನಮ್ಮ ಮಕ್ಕಳಿಗೆ, ನಮ್ಮ ಅಮ್ಮ ಮಾಡುತ್ತಿದ್
ನಮ್ಮ ಬಳಿ ಕೇವಲ ಒಂದು ಹಳೆಯ ನೆನಪು ಮಾತ್ರ ಉಳಿಯಬಾರದು. ಆ ಪರಿಮಳವನ್ನೇ ಮತ್ತೆ
ಅಂತೂ…
ಮಸಾಲೆ ಡಬ್ಬಿಗಳು ಕೇವಲ ಡಬ್ಬಿಗಳಲ್ಲ





