ಬೆಂಗಳೂರು ಎಂದರೆ ಇಂದು ಐಟಿ, ಸ್ಟಾರ್ಟ್ಅಪ್, ಮಾಲ್ಗಳು, ಮೆಟ್ರೋ ಮತ್ತು ಎತ್ತರದ ಕಟ್ಟಡಗಳ ನಗರ. ಆದರೆ ಈ ಆಧುನಿಕ ನಗರದ ಹೃದಯದಲ್ಲಿ ಇನ್ನೂ ಕೆಲವು ಪ್ರದೇಶಗಳು ನೂರಾರು ವರ್ಷಗಳ ವ್ಯಾಪಾ
ಅರಳೇಪೇಟೆ ಎಂದರೇನು? ಕಾಟನ್ಪೇಟೆ ಎಂಬ ಹೆಸರು ಹೇಗೆ ಬಂತು?
ಇಂದು ಬಹುತೇಕ ಜನರಿಗೆ Cottonpet ಎಂಬ ಹೆಸರು ಪರಿಚಿತ. ಆದರೆ ಅದರ ಹಳೆಯ ಹೆಸರು ಅರಳೇಪೇಟೆ ಎಂದಾಗಿದ್ದು, ಅಚ್ಚಕನ್ನಡದಲ್ಲಿ ಕನ್ನಡದಲ್ಲಿ ಅರಳೆ ಎಂದರೆ ಹತ್ತಿ ಎಂದಾಗಿದ್ದು, ಪೇಟೆ ಎಂದರೆ ಮಾರುಕಟ್ಟೆ ಅಥವಾ ವ್ಯಾಪಾರ ಸ್ಥಳವಾಗಿದ್ದು, ಹತ್ತಿಯನ್ನು ಮಾರುವ ಸ್ಥಳವೇ ಅರಳೇ ಪೇಟೆಗಾಗಿದೆ. ನಂತರ ದಿನಗಳಲ್ಲಿ ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿದ ಬ್ರಿಟೀಷರು ಹತ್ತಿ ಪೇಟೆಯನ್ನು ಅಂಗ್ಲ ಭಾಷೆ ತರ್ಜುಮೆ ಮಾಡಿ Cottonpet ಎಂದ ನಂತರ ಜನರ ಮನಸ್ಸಿನಲ್ಲಿ ಅದೇ ಹೆಸರು ಉಳಿದು ಹೋದರೂ, ಇಂದಿಗೆ ಬೆಂಗಳೂರಿನ ಹಿರಿಯ ನಾಗರೀಕರು ಆ ಪ್ರದೇಶವನ್ನು ಆರಳೇ ಪೇಟೆ ಎಂದು ಕರೆಯುವುದನ್ನು ರೂಢಿಯಲ್ಲಿಟ್ಟು ಕೊಂಡಿರುವುದು ಸಂತಸದ ವಿಷಯವಾಗಿದೆ.
ಅರಳೇಪೇಟೆ ಹುಟ್ಟಿದ್ದು ಹೇಗೇ?
ಇದಕ್ಕೆ ಉತ್ತರ ಹುಡುಕಬೇಕಾದರೆ ನಾವು ಸುಮಾರು 16ನೇ ಶತಮಾನದ ಬೆಂಗಳೂರಿಗೆ
ಯಾವ ವಸ್ತು ಬೇಕೋ, ಆ ವಸ್ತುವಿನ ಪೇ ಟೆಗೆ ಹೋಗಬೇಕು.
- ಅಕ್ಕಿ – ಅಕ್ಕಿಪೇಟೆ
- ಧಾನ್ಯ – ತರಗುಪೇಟೆ
- ಬಳೆ ಮತ್ತು ಸಂಗೀತ ವಾದ್ಯಗಳು – ಬಳೆಪೇಟೆ
- ಬಟ್ಟೆ – ಚಿಕ್ಕಪೇಟೆ/
- ಬೆಳ್ಳಿ–ಚಿನ್ನದ ವ್ಯಾಪಾರ – ನಗರ್ತಪೇಟೆ
- ಉಪ್ಪು – ಉಪ್ಪಾರಪೇಟೆ
- ಹತ್ತಿ – ಅರಳೇಪೇಟೆ
ಇದು ಆ ಕಾಲದ ಅತ್ಯಂತ ಪರಿಣಾಮಕಾರಿ ವೃತ್ತಿ ಆಧಾರಿತ ನಗರ ಯೋ
ಇಂದಿನ ನಗರದಲ್ಲಿ ಒಂದು ವಸ್ತುವನ್ನು ಖರೀದಿಸಲು ನಗರದ ಯಾವುದೇ ಭಾಗಕ್ಕೆ ಹೋಗಬಹುದು. ಆದರೆ ಹಿಂದಿನ ಪೇಟೆ ಬೆಂಗಳೂರಿನಲ್ಲಿ ವ್ಯಾಪಾರವೇ ನಗರವನ್
ಅರಳೇಪೇಟೆಯಲ್ಲಿಯೂ ಇದೇ ರೀತಿಯ ವ್ಯವಸ್ಥೆ ಬೆಳೆದಿತ್ತು. ಹತ್ತಿ, ಹತ್ತಿ ನೂಲು ಮತ್ತು ಸಂಬಂಧಿತ ವಸ್ತುಗಳ ವ್ಯಾಪಾರಕ್ಕೆ ಈ ಪ್ರದೇಶ ಪ್ರಮುಖ ಕೇಂದ್ರವಾಯಿತು. 18ನೇ ಶತಮಾನದಲ್ಲಿಯೇ ಬೆಂಗಳೂರು ಪ್ರಮುಖ ಉತ್ಪಾದನಾ ಮತ್ತು ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿನ ಮಾರುಕಟ್ಟೆಗಳ ಸಂಪರ್ಕ ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ದೂರದ ಪ್ರದೇಶಗಳಿಗೂ ಇತ್ತು.
ಹತ್ತಿಯೇ ಏಕೆ ಇಷ್ಟು ಮುಖ್ಯವಾಗಿತ್ ತು?

ಇದು ಅರಳೇಪೇಟೆಯ ಕಥೆಯ ಪ್ರಮುಖ ಭಾಗ. ಆ ಕಾಲದಲ್ಲಿ ಇಂದಿನಂತೆ ಪವರ್ಲೂಮ್, ಸಿಂಥೆಟಿಕ್ ಫೈಬರ್ ಅಥವಾ ದೊಡ್ಡ ಟೆಕ್ಸ್ಟೈಲ್ ಕಾರ್ಖಾನೆಗಳಿರಲಿಲ್ಲ. ಹತ್ತಿ ಕೃಷಿ
ಕೋಟೆಯೊಳಗಿನ ಸಣ್ಣ ಪಟ್ಟಣದಿಂದ ಬೆಳೆ ದ ಪೇಟೆ
ಹಳೆಯ ಬೆಂಗಳೂರು ಒಂದು ದೊಡ್ಡ ಮಹಾನಗರವಾಗಿರಲಿಲ್ಲ. ಕೆಂಪೇಗೌಡರ ಕೋಟೆಯ ಸುತ್ತಲೂ ಸಣ್ಣ ಪಟ್ಟಣದಂತೆ ಮಾರುಕಟ್ಟೆಗಳು ಬೆಳೆಯುತ್ತಿದ್ದವು. ಚಿಕ್ಕಪೇಟೆ, ದೊ
ಅರಳೇ ಪೇಟೆಯ ಸುತ್ತಲೂ ಆರಂಭವಾದ ಬೆಂಗಳೂರಿನ ದೊಡ್ಡ ದೊಡ್ಡ ಜವಳಿ ಕಾರ್ಖಾನೆಗಳು
ಹೀಗೆ ಅರಳೇ ಪೇಟೆಯಲ್ಲಿ ಹತ್ತಿ ಸುಲಭವಾಗಿ ಸಿಗುತ್ತಿದ್ದ ಕಾರಣ ಇದರ ಸುತ್ತಮುತ್ತಲಿನ ಪ್ರದೇಶದಲ್ಲೇ ನಂತರದ ದಿನಗಳಲ್ಲಿ ಬೆಂಗಳೂರಿನ ಪ್ರಖ್ಯಾತ ಗಿರಣಿಗಳಾದ ಬಿನ್ನಿಮಿಲ್ಸ್, ರಾಜಾ ಮಿಲ್ಸ್, ಮಿನರ್ವ ಮಿಲ್ಸ್, ರಾಮ್ ಕುಮಾರ್ ಮಿಲ್ಸ್, ಟಿಆರ್ ಮಿಲ್ಸ್, ಸುಭಧ್ರಾ ಮಿಲ್ಸ್, ಚಂದ್ರಾ ಸ್ಪಿನ್ನಿಂಗ್ ಮತ್ತು ವೀವಿಂಗ್ ಮಿಲ್ಗಳೆಲ್ಲವೂ ಆರಂಭವಾಗಿ ಬೆಂಗಳೂರು ದೇಶದ ಪ್ರಮುಖ ಜವಳಿ ಉತ್ಪಾದನಾ ನಗರವಾಗಿ ಬೆಳೆಯುವುದರಲ್ಲಿ ಸಹಕಾರಿಯಾಗಿತ್ತು.
ಕಾಟನ್ಪೇಟೆಯ ಮತ್ತೊಂದು ವಿಶೇಷತೆ – ಹಳೆಯ ಮನೆಗಳ ಜಗತ್ತು
ಆ ಸಮಯದಲ್ಲಿಯೂ ಈ ಪ್ರದೇಶದಲ್ಲಿ 150 ವರ್ಷಕ್ಕೂ ಹಳೆಯ
ವ್ಯಾಪಾರ ಮಾತ್ರವಲ್ಲ, ಕೈಗಾರಿಕೆಯೂ ಇತ್ತು
ಅರಳೇಪೇಟೆಯ ಸುತ್ತಮುತ್ತ ಹತ್ತಿ ಮತ್ತು ಬಟ್ಟೆಯ ವ್ಯಾಪಾರದ ಜೊತೆಗೆ ಕೈಮಗ್ಗ ಮತ್ತು ಸಣ್ಣ ಉತ್ಪಾದನಾ ಚಟುವಟಿಕೆಗಳೂ ಬೆಳೆದವು. ಹಳೆಯ ಬೆಂಗಳೂರಿನ ಪೇಟೆ ಪ್ರದೇಶಗಳಲ್ಲಿ ವೃತ್ತಿ ಮತ್ತು ಸಮುದಾಯಗಳ ಆಧಾರದ ಮೇಲೆ ವಾಸಸ್ಥಾನ ಹಾಗೂ ವ್ಯಾಪಾರ ಪ್ರದೇಶಗಳು ರೂಪುಗೊಂಡಿದ್ದವು. ಇದರಿಂದ ವ್ಯಾಪಾರ, ಉತ್ಪಾದನೆ ಮತ್ತು ವಾಸಸ್ಥಾನ—ಮೂರೂ ಒಂದೇ ಪ್ರದೇಶದಲ್ಲಿ ಬೆರೆತುಹೋಗಿದ್ದವು ಅದರ ಪರಿಣಾಮವಾಗಿ ಬೆಳಗ್ಗೆ ಅಂಗಡಿಗಳು ತೆರೆಯುತ್ತಿದ್ದವು, ಗೋದಾಮುಗಳಲ್ಲಿ ಸರಕು ಇಳಿಯುತ್ತಿತ್ತು, ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದರು, ವ್ಯಾಪಾರಿಗಳು ಬೆಲೆ ನಿಗದಿಪಡಿಸುತ್ತಿದ್ದರು, ಎತ್ತುಬಂಡಿಗಳಲ್ಲಿ ಸರಕು ಸಾಗುತ್ತಿತ್ತು. ಇದು ಒಂದು ಮಾರುಕಟ್
ಅರಳೇಪೇಟೆಯ ಗರಡಿಮನೆಗಳ ಪರಂಪರೆ

ಕಾಟನ್ಪೇಟೆಯ ಇತಿಹಾಸದಲ್ಲಿ ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ ಗರಡಿ ಮನೆಗಳು. ಹಳೆಯ ಪೇಟೆ ಪ್ರದೇಶಗಳಲ್ಲಿ ಕುಸ್ತಿ ಮತ್ತು ದೈಹಿಕ ತರಬೇತಿಯ ಗರಡಿಮನೆಗಳು ಪ್ರಮುಖ ಸಾಮಾಜಿಕ ಸಂಸ್ಥೆಗಳಾಗಿದ್ದವು.
ಅರಳೇಪೇಟೆಯಲ್ಲಿರುವ ಹಳೆಯ ಗರಡಿಮನೆಗಳ ಪರಂಪರೆ ಇಂದಿಗೂ ಈ ಪ್ರದೇಶದ ಸಾಂಸ್ಕೃತಿಕ ನೆನಪಿನ ಭಾಗವಾಗಿದೆ. ಒಂದು ಸ್ಥಳೀಯ ಇತಿಹಾಸ ದಾಖಲೆಯ ಪ್ರಕಾರ, ಅರಳೇಪೇಟೆಯ ಹಳೆಯ ಗರಡಿಮನೆಗಳಲ್ಲಿ ಒಂದನ್ನು 1680ರ ಸುಮಾರಿಗೆ ಸ್ಥಾಪಿಸಲಾಗಿತ್ತು ಎಂಬ ಪರಂಪರೆ ಇದೆ. ಈ ನಿರ್ದಿಷ್ಟ ದಿನಾಂಕವನ್ನು ದೃಢೀಕರಿಸುವ ಪ್ರಾಥಮಿಕ ದಾಖಲೆ ಸಿಗದಿರುವುದರಿಂದ ಅದನ್ನು ಸ್ಥಳೀಯ ಇತಿಹಾಸದ ಪರಂಪರೆಯಾಗಿ ನೋಡುವುದು ಸೂಕ್ತ. ಇಂದಿಗೂ ಹಳೆ ಅರಳೇಪೇಟೆ ಗರಡಿಮನೆ
ಬ್ರಿಟಿಷರ ಕಾಲದಲ್ಲಿ ಏನಾಯಿತು?
1799ರಲ್ಲಿ ಟಿಪ್ಪು ಸುಲ್ತಾನರ ಮರಣದ ನಂತರ ಬೆಂಗಳೂರು ಬ್ರಿಟಿಷರ ಪ್ರಭಾವಕ್ಕೆ ಒಳಪಟ್ಟಿತು. ನಂತರ ಕ್ಯಾಂಟೋನ್ಮೆಂಟ್ ಮತ್ತು ಪೇಟೆ ಎಂಬ ಎರಡು ವಿಭಿನ್ನ ನಗರ ಲೋಕಗಳು ಸ್ಪಷ್ಟವಾಗಿ ರೂಪುಗೊಂಡವು. ಒಂದು ಕಡೆ ವಿಶಾಲ ರಸ್ತೆಗಳು, ಬಂಗಲೆಗಳು ಮತ್ತು ಉದ್ಯಾನಗಳಿದ್ದ ಕ್ಯಾಂಟೋನ್ಮೆಂಟ್. ಇನ್ನೊಂದು ಕಡೆ ಕಿರಿದಾದ ಗಲ್ಲಿಗಳು, ಮಾರುಕಟ್ಟೆಗಳು, ದೇವಾಲಯಗಳು, ಮಸೀದಿಗಳು ಮತ್ತು ಸಣ್ಣ ವ್ಯಾಪಾರಿಗಳಿಂದ ಕೂಡಿದ ಪೇಟೆ. ಅರಳೇಪೇಟೆಯೂ ಈ ಹಳೆಯ ಪೇಟೆ ನಗರದ ಭಾಗವಾಗಿಯೇ ಮುಂದುವರಿಯಿತು. ಬ್ರಿಟಿಷರ ಕಾಲದಲ್ಲಿ Cottonpet ಎಂಬ ಹೆಸರು ಹೆಚ್ಚು ಪ್ರಚಲಿತಕ್ಕೆ ಬಂತು.
ಕಾಟನ್ಪೇಟೆ ಮತ್ತು ಬೆಂಗಳೂರಿನ ವ್ಯಾಪಾರ ಸಾಮ್ರಾಜ್ಯ
![]()
ಬೆಳಗಿನ ಜಾವಕ್ಕೆಲ್ಲಾ ವಿವಿಧ ಊರಿಗಳಿಂದ ಎತ್ತುಬಂಡಿಗಳಲ್ಲಿ ಈ ಗಲ್ಲಿಗಳೊಳಗೆ ಹತ್ತಿಯ ಮೂಟೆಗಳನ್ನು ತಂದು ಹತ್ತಿ ವ್ಯಾಪಾರದ ಅಂಗಡಿಗಳ ಮುಂದೆ ಇಳಿಸಲಾಗುತ್ತಿತ್ತು. ವ್ಯಾಪಾರಿಗಳು ಅಂಗಡಿ ತೆರೆದ ನಂತರ ಸರಕು ಪರಿಶೀಲಿಸಿ ಅವುಗಳನ್ನು ಖರೀದಿ ತಮ್ಮ ಗೋದಾಮುಗಳಲ್ಲಿ ಹತ್ತಿಯನ್ನು ಜೋಡಿಸಿಡುತ್ತಿದ್ದರು. ಸ್ವಲ್ಪ ಸಮಯದ ನಂತರ ಅದೇ ಅಂಗಡಿಗಳಿಗೆ ಸುತ್ತ ಮುತ್ತಲಿನ ಪೇಟೆಯಲ್ಲಿನ ವಿವಿಧ ಕೈಮಗ್ಗದ ಗ್ರಾಹಕರು ಬಂದು ತಮಗೆ ಬೇಕಾದಷ್ಟು ಹತ್ತಿಯನ್ನು ಖರೀಧಿಸಿ ಸಣ್ಣ ಪ್ರಮಾಣದ್ದಾಗಿದ್ದಲ್ಲೀ ಕೂಲಿಗಳ ಸಹಾಯದಿಂತ ತೆದೆದುಕೊಂಡು ಹೋಗುತ್ತಿದ್ದರೆ, ಇನ್ನೂ ಸ್ವಲ್ಪ ಹೆಚ್ಚಿನದ್ದಾಗಿದ್ದರೆ, ತಳ್ಳುವ ಕೈಗಾಡಿಗಳ ಮೂಲಕ ಮತ್ತು ಅದಕ್ಕಿಂತಲೂ ಹೆಚ್ಚಾಗಿದ್ದಲ್ಲೇ ಮತ್ತೆ ಎತ್ತಿನ ಬಂಡಿಗಳ ಮೂಲಕ ತೆಗೆದುಕೊಂಡು ಹೋಗುವ ಮೂಲಕ ಅಗಲವಾಗಿರದ ಸಣ್ಣ ಸಣ್ಣ ಗಲ್ಲಿ ರಸ್ತೆಗಳಿದ್ದರೂ ದೊಡ್ಡ ವ್ಯಾಪಾರದ ಕೇಂದ್ರವಾಗಿತ್ತು.
ಬೆಂಗಳೂರಿಗೆ ರೈಲ್ವೇ ಬಂದ ನಂತರ ಬದಲಾದ ಕಾಟನ್ಪೇಟೆಯ ವ್ಯಾಪಾರ ವಹಿವಾಟು
ಈ ಮೊದಲು ದೂರದ ಊರಿನಿಂದ ಎತ್ತಿನಗಾಡಿಗಳ ಮೂಲಕ ಕಾಟನ್ ಪೇಟೆಗೆ ಬರುತ್ತಿದ್ದ ಸಾಮಾನು ಸರಂಜಾಮುಗಳು ಬರುತ್ತಿದ್ದವು. ಆದರೆ 1864ರಲ್ಲಿ ಬೆಂಗಳೂರಿಗೆ ರೈಲ್ವೆ ಸಂಪರ್ಕ ಬಂದು ಬೆಂಗಳೂರು–ಮದ್ರಾಸ್ ರೈಲು ಸಂಪರ್ಕ ಆರಂಭವಾದ ನಂತರ ಎರಡೂ ನಗರಗಳ ನಡುವೆ ಜನರ ಸಂಚಾರ ಹಾಗೂ ನಗರದ ವ್ಯಾಪಾರ ಇತಿಹಾಸದಲ್ಲಿ ಮಹತ್ವದ ತಿರುವನ್ನು ಪಡೆಯಿತು.
ಈ ಕಾಟನ್ಪೇಟೆಯ ಪಶ್ಚಿಮ ಭಾಗದಲ್ಲಿಯೇ ಬಹಳ ಸಮೀಪದಲ್ಲೇ ರೈಲ್ವೇ ನಿಲ್ದಾಣಕ ಇದ್ದ ಕಾರಣ, ಕಾಟನ್ ಪೇಟೆಯ ವ್ಯಾಪಾರಕ್ಕೆ ಬಹಳ ಅನುಕೂಲವಾಯಿತು. ರೈಲಿನಿಂದ ಬಂದ ಸರಕುಗಲನ್ನು ತಾತ್ಕಾಲಿಕವಾಗಿ ಸಂಗ್ರಹಿಸಿ ನಂತರ ಲಾರಿಗಳು/ಗಾಡಿಗಳ ಮೂಲಕ ನಗರಕ್ಕೆ ಸಾಗಿಸಲು ಸರಕು ಕೇಂದ್ರವೊಂದನ್ನು ಆರಂಭಿಸಿ ಅದಕ್ಕೆ ಗೂಡ್ಸ್ ಶೆದ್ (Goods Shed) ಎಂದು ಕರೆಯಲಾರಂಭಿಸಿದ್ದು ನಂತರ ಆ ರಸ್ತೆ Goods Shed Road ಎಂದೇ ಪ್ರಖ್ಯಾತವಾಯಿತು.
ಕಾಟನ್ಪೇಟೆಯ ದೇವಾಲಯಗಳು ಮತ್ತು ಧಾ ರ್ಮಿಕ ಜೀವನ

ವ್ಯಾಪಾರದ ಜೊತೆಗೆ ಧಾರ್ಮಿಕ ಜೀವನವೂ ಪೇಟೆಯ ಅವಿಭಾಜ್ಯ ಅಂಗವಾಗಿತ್ತು. ಕಾಟನ್ಪೇಟೆಯಲ್ಲಿ ಲಕ್ಷ್ಮೀನಾರಾಯಣ,
ಪೇಟೆ ಸಂಸ್ಕೃತಿ ಇಂದಿಗೂ ಏಕೆ ಜೀವಂ ತವಾಗಿದೆ?
ಹಳೆಯ ಪೇಟೆಗಳ ವಿಶೇಷತೆಯೇ ಇದು. ನಗರ ಬದಲಾಗುತ್ತದೆ. ಸರಕು ಬದಲಾಗುತ್ತದೆ. ವ್ಯಾಪಾರದ ವಿಧಾನ ಬದಲಾಗುತ್ತದೆ. ಆದರೆ ಪೇಟೆಯ ಸಾಮಾಜಿಕ ಜೀವನ ಸಂಪೂರ್
ಅರಳೇಪೇಟೆಯಲ್ಲಿದ್ದ ಸಾಂಪ್ರದಾಯಿಕ ಕನ್ನಡ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಸ್ತಕದ ಅಂಗಡಿಗಳು

ಅರಳೇಪೇಟೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ಹಲವಾರು ದಶಕಗಳಿಂದ ಕನ್ನಡ ಸಾಹಿತ್ಯ ಮತ್ತು ಧಾರ್ಮಿಕ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಅಂಗಡಿಗಳಿಗೆ ಪ್ರಸಿದ್ಧವಾಗಿದೆ. ಅಂತಹ ಅಂಗಡಿಗಳಲ್ಲಿ ಪ್ರಮುಖವಾಗಿ ಗೀತಾ ಬುಕ್ ಹೌಸ್, ಸಾಹಿತ್ಯ ಭಂಡಾರ, ಸಾಧನಾ ಪ್ರಕಾಶನ ಟಿ. ಎನ್. ಕೃಷ್ಣಶೆಟ್ಟಿ ಆಂಡ್ ಸನ್ಸ್ ಪುಸ್ತಕದ ಅಂಗಡಿಗಳಲ್ಲಿ ವೈದಿಕ/ಧಾರ್ಮಿಕ, ಜ್ಯೋತಿಷ್ಯ ಹಾಗೂ ಸಾಹಿತ್ಯ ಪುಸ್ತಕಗಳಿಗೆ ಹೆಸರುವಾಸಿಯಾಗಿದೆ.
ಅರಳೇಪೇಟೆ/ಕಾಟನ್ ಪೇಟೆಯಲ್ಲಿದ್ದಂತಹ ಸಣ್ಣ ಮತ್ತು ದೊಡ್ಡ ಹೋಟೆಲ್ಲುಗಳು
ಈಗಾಗಲೇ ತಿಳಿದಿರುವಂತೆ ಅರಳೇಪೇಟೆ, ಅಕ್ಕಿಪೇಟೆ, ಬಳೇಪೇಟೆ, ಚಿಕ್ಕಪೇಟೆ, ತಿಗಳರಪೇಟೆ, ಕುಂಬಾರಪೇಟೆ, ಸುಲ್ತಾನ್ಪೇಟೆ ಮುಂತಾದ ಪ್ರದೇಶಗಳು ಸಣ್ಣ ಸಣ್ಣ ಗಲ್ಲಿಗಳ ಕಿರಿದಾದ ರಸ್ತೆಯಿದ್ದ ಪ್ರದೇಶವಾದ್ದರಿಂದ ಅಲ್ಲಿ ಈಗಿನಂತೆ ದೊಡ್ಡ ಹೋಟೆಲ್ಲುಗಳ ಭರಾಟೆ ಇರಲಿಲ್ಲ. ದೊಡ್ಡ ಜಾಹೀರಾತು ಫಲಕಗಳಿಲ್ಲದೆ ಒಂದು ಹೋಟೆಲ್ನ ರುಚಿ ಚೆನ್ನಾಗಿದ್ದರೆ ಅದರ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿತ್ತು. ಅಲ್ಲಿ ಮಟನ್ ಪಲಾವ್ ಚೆನ್ನಾಗಿರುತ್ತದೆ. ಅಲ್ಲಿ ಬೆಳಗಿನ ಜಾವವೇ ಬಿರಿಯಾನಿ ಸಿಗುತ್ತದೆ, ಅಲ್ಲಿನ ಇಡ್ಲಿ-ವಡೆ ಒಮ್ಮೆ ತಿಂದರೆ ಮರೆಯಲಾಗಲ್ಲ ಎಂಬ ಮಾತುಗಳೇ ಆಗಿನ ಕಾಲದ ಜಾಹೀರಾತುಗಳಾಗಿ ಗಲ್ಲಿಯೊಳಗಿನ ಸಣ್ಣ ಪುಟ್ಟ ಹೋಟೆಲ್ಗಳನ್ನು ಹುಡುಕೊಂಡು ಬಂದು ತಿಂದು ಹೋಗುತ್ತಿದ್ದರು. ಮರದ ಮೇಜು, ಉದ್ದನೆಯ ಬೆಂಚು, ಸ್ಟೀಲ್ ಅಥವಾ ಅಲ್ಯೂಮಿನಿಯಂ ತಟ್ಟೆ, ಬಾಳೆ ಎಲೆ, ದೊಡ್ಡ ಪಾತ್ರೆಯಲ್ಲಿ ಕುದಿಯುತ್ತಿದ್ದ ಸಾಂಬಾರ್, ಬದಿಯಲ್ಲಿ ಚಟ್ನಿ ಮತ್ತು ಅಡುಗೆಮನೆಯಿಂದ ಬರುತ್ತಿದ್ದ ಮಸಾಲೆಯ ವಾಸನೆಗಳೇ ಪ್ರಮುಖ ಆಕರ್ಷಣೆಯಾಗಿದ್ದು, ಅಂದಿನ ಕಾಲದಲ್ಲಿದ್ದ ಕೆಲವು ಪ್ರಸಿದ್ಧ ಹೋಟೆಲ್ಲುಗಳೆಂದರೆ,
- ಶ್ರೀ ಗೋವಿಂದರಾವ್ ಮಿಲಿಟರಿ ಹೋಟೆಲ್ (SG Rao’s / New Govind Rao Military Hotel) : ಇದು ಈ ಪ್ರದೇಶದ ಅತ್ಯಂತ ಐತಿಹಾಸಿಕ ಹೋಟೆಲ್ಗಳಲ್ಲಿ ಒಂದು. 1908ರಲ್ಲಿ ಹಳೆಯ ಅಕ್ಕಿಪೇಟೆಯಲ್ಲಿ ಆರಂಭವಾಗಿದ್ದು, ಮಟನ್ ಪಲಾವ್/ಬಿರಿಯಾನಿ, ಕೀಮಾ, ರಾಗಿ ಮುದ್ದೆ ಮುಂತಾದವುಗಳಿಗೆ ಪ್ರಸಿದ್ಧವಾಗಿತ್ತು. ನಾಲ್ಕು ತಲೆಮಾರುಗಳಿಂದ ಗ್ರಾಹಕರು ಬರುತ್ತಿದ್ದರಂತೆ.
- ಶಿವಾಜಿ ಮಿಲಿಟರಿ ಹೋಟೆಲ್ : 1924ರಲ್ಲಿ ಆರಂಭವಾದಂತಹ ಕಾಟನ್ಪೇಟೆ ಸೇರಿದಂತೆ ಹಳೆಯ ಬೆಂಗಳೂರಿನ ಮಿಲಿಟರಿ ಹೋಟೆಲ್ ಪರಂಪರೆಯ ಪ್ರಮುಖ ಹೆಸರಾಗಿತ್ತು.
- ರಂಗಣ್ಣ ಮಿಲಿಟರಿ ಹೋಟೆಲ್ : 1960ರ ದಶಕದಲ್ಲಿ ಆರಂಭವಾದ ಕಾಟನ್ಪೇಟೆಯ ಸುತ್ತಮುತ್ತಲಿನ ಹಳೆಯ ಮಾಂಸಾಹಾರಿ ಹೋಟೆಲ್ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಟನ್ ಬಿರಿಯಾನಿ ಮತ್ತು ಸಾಂಪ್ರದಾಯಿಕ ಮಿಲಿಟರಿ ಹೋಟೆಲ್ ಊಟಕ್ಕೆ ಹೆಸರಾಗಿತ್ತು.
- ಗಜಲಕ್ಷ್ಮಿ ಭವನ (Gajalaxmi Bhavan): ಇದು 1956ರ ಬೆಂಗಳೂರಿನ ಅಧಿಕೃತ/ಪ್ರವಾಸಿ ಮಾರ್ಗದರ್ಶಿ ದಾಖಲೆಯಲ್ಲೇ ನಗರದ ಪ್ರಮುಖ ಭಾರತೀಯ ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದಂತಹ ಸಸ್ಯಾಹಾರಿ ಹೋಟೆಲ್ ಆಗಿತ್ತು.
ಇಂದು ಕಾಟನ್ಪೇಟೆ ಹೇಗಿದೆ?
ಇಂದು ಕಾಟನ್ಪೇಟೆ ಹಳೆಯ ಹತ್ತಿ ಮಾರುಕಟ್ಟೆಯ ರೂಪದಲ್ಲಿಲ್ಲ. ಆದರೆ ವ್ಯಾಪಾರದ ಸ್ವಭಾವ ಮಾತ್ರ ಸಂಪೂರ್ಣವಾಗಿ ಮಾಯವಾಗಿಲ್ಲ. ಇಲ್ಲಿ ಇಂದು
- ಬಟ್ಟೆ ಮತ್ತು ಜವಳಿ ವ್ಯಾಪಾರ
- ಸಗಟು ವ್ಯಾಪಾರ
- ಕಾಗದದ ಅಂಗಡಿಗಳು
- ಧಾನ್ಯ ವ್ಯಾಪಾರ
- ಅಗರ್ಬತ್ತಿ ಸಂಬಂಧಿತ ಸಣ್ಣ ಕೈಗಾರಿಕೆಗಳು
- ಗೋದಾಮುಗಳು
- ಸಣ್ಣ ಮತ್ತು ಮಧ್ಯಮ ವ್ಯಾಪಾರ ಸಂಸ್ಥೆಗಳು
- ಹಳೆಯ ಮನೆಗಳು
- ಧಾರ್ಮಿಕ ಕೇಂದ್ರಗಳು
- ಹಳೆಯ ಗರಡಿಮನೆಗಳ ಪರಂಪರೆ
ಇವೆಲ್ಲವೂ ಒಂದೇ ನಗರ ಜಾಲದಲ್ಲಿ ಕಾಣುತ್ತವೆ. 2001ರಲ್ಲಿಯೇ ಕಾಟನ್ಪೇಟೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಕಾಗದದ ಮಾರ್ಟ್ಗಳು, ಅಗರ್ಬತ್ತಿ ಕಾರ್ಖಾನೆಗಳು, ಬಟ್ಟೆ ಮಿಲ್ಗಳು ಮತ್ತು ಧಾನ್ಯ ಬಜಾರ್ಗಳು ಇಲ್ಲಿ ಸಕ್ರಿಯವಾಗಿದ್ದವು ಎಂದು ದಾಖಲಾಗಿದೆ. ಇಂದಿಗೂ ಕಾಟನ್ಪೇಟೆ ಮೇನ್ ರೋಡ್
ಅರಳೇಪೇಟೆಯಿಂದ ಇಂದಿನ ಕಾಟನ್ಪೇಟೆ ವರೆಗೆ – ಬದಲಾಗದ ಆತ್ಮ
ಸುಮಾರು ಐದು ಶತಮಾನಗಳ ನಗರ ಬದಲಾವಣೆಯನ್ನು ಕಾಟನ್ಪೇಟೆ ತನ್ನೊಳಗೆ ಕಂಡಿದೆ. ಕೆಂಪೇಗೌಡರ ಬೆಂಗಳೂರು → ಮೈ
ಕೊನೆಯ ಮಾತು ಕಾಟನ್ಪೇಟೆ ಒಂದು ಪೇ ಟೆ ಅಲ್ಲ—ಬೆಂಗಳೂರಿನ ಜೀವಂತ ಇತಿಹಾಸ
ಇಂದು ನಾವು ಕಾಟನ್ಪೇಟೆಯ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಾಗ,ಬೇಸರಿಸಿಕೊಂಡರೂ ಒಂದು ಕಾಲದಲ್ಲಿ ಇದೇ ಗಲ್ಲಿಗಳಲ್ಲಿ ಒಮ್ಮೆ ಹತ್ತಿಯ ಮೂಟೆಗಳು ರಾಶಿಯಾಗಿದ್ದವು. ಇದೇ ಪೇಟೆಯಲ್ಲಿ ವ್ಯಾಪಾರಿಗಳು ದೂರದ ಊರುಗಳಿಂದ ಬಂದು ವ್ಯವಹಾರ ಮಾಡುತ್ತಿದ್ದರು. ಇದೇ ಪ್ರದೇಶದ ಸುತ್ತಮುತ್ತ ಕೈಮಗ್ಗದ ಕೆಲಸ ನಡೆಯುತ್ತಿತ್ತು. ಇದೇ ಪೇಟೆಯಲ್ಲಿ ದೇವಾಲಯದ ಗಂಟೆ, ಮಾರುಕಟ್ಟೆಯ ಗದ್ದಲ ಮತ್ತು ಗರಡಿಮನೆಯ ಕುಸ್ತಿ ಸದ್ದು ಒಂದೇ ಸಮಯದಲ್ಲಿ ಕೇಳಿಬರುತ್ತಿತ್ತು. ಮತ್ತು ಇದೇ ಪೇಟೆ ಬೆಂಗಳೂರಿನ ಆರ್ಥಿಕ ಹೃದಯವಾಗಿ ಹಲವು ಶತಮಾನಗಳ ಕಾಲ ತನ್ನ ಪಾತ್ರ ನಿರ್ವಹಿಸಿತು. ಆದ್ದರಿಂದ ಅರಳೇಪೇಟೆ ಅಥವಾ ಕಾಟನ್
ಹಳೆಯ ಅರಳೇಪೇಟೆಯ ಹತ್ತಿಯ ಮೂಟೆಗಳು
ಒಂದು ಸಾಲಿನಲ್ಲಿ ಹೇಳುವುದಾದರೆ ಅಂದು ಅರಳೇಪೇಟೆ, ಹತ್ತಿಯನ್ನು ಮಾರು





