ಮಹಾಭಾರತದ ಅನುಶಾಸನ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಜನಿಗೆ ಪಿತೃ ಪಕ್ಷದ ನಿಯಮಗಳನ್ನು ತಿಳಿಸುವಾಗ ಹೇಳಿದರು. ಪಿತೃ ಕಾರ್ಯದಲ್ಲಿ ಸಣ್ಣ ತಪ್ಪು ಆಗಬಾರದು. ಪಿತೃಗಳು ಕಾಗೆ ರೂಪದಲ್ಲಿ ಬಂದು ಅನ್ನವನ್ನು ಸ್ವೀಕರಿಸುತ್ತಾರೆ ಕಾಗೆಯನ್ನು ತೃಪ್ತಿ ಪಡಿಸಿದರೆ ಪಿತೃಗಳು ತೃಪ್ತರಾಗುವರು ಎಂದಾಗ, “ಪಿತಾಮಹ” ಪಿತೃ ಕಾರ್ಯದಲ್ಲಿ ಕಾಗೆಗಳಿಗೆ ಯಾಕಿಷ್ಟು ಮಹತ್ವ ಎಂದು ಯುಧಿಷ್ಠಿರ ಕೇಳಿದನು, ಪಿತಾಮಹ ಹೇಳುತ್ತಾ ನಮ್ಮ ಧರ್ಮ ಶಾಸ್ತ್ರದಲ್ಲಿ ಕಾಗೆಗಳಿಗೆ ವಿಶೇಷ ಮಹತ್ವ ಕೊಟ್ಟಿದ್ದಾರೆ.
ತ್ರೇತಾಯುಗದಲ್ಲಿ ದೇವತೆಗಳು ಲಂಕಾದೀಶ ರಾವಣನಿಗೆ ಹೆದರುತ್ತಿದ್ದರು. ಇದೆ ಕಾಲದಲ್ಲಿದ್ದ ಇಕ್ವ್ಷಾಕು ವಂಶದ “ಮರುತ್ತ ರಾಜನು” ಒಮ್ಮೆ ದೊಡ್ಡ ಯಾಗವನ್ನು ಹಮ್ಮಿಕೊಂಡನು. ಯಾಗದ ಹವಿಸ್ಸನ್ನು ಸ್ವೀಕರಿಸಲು ದೇವಾನು ದೇವತೆಗಳೆಲ್ಲ ಯಾಗಕ್ಕೆ ಬಂದರು. ಸ್ವಲ್ಪ ಹೊತ್ತಿಗೆ ರಾವಣನು ಯಾಗ ಮಂಟಪಕ್ಕೆ ಬಂದನು. ಅವನನ್ನು ನೋಡಿ ಹೆದರಿದ ದೇವಾನು ದೇವತೆಗಳು. ತಕ್ಷಣ ಪ್ರಾಣಿ- ಪಕ್ಷಿಗಳ ರೂಪ ಧರಿಸಿದರು. ಪಿತೃ ಲೋಕದ ಅಧಿಪತಿಯಾದ ಯಮ ‘ಕಾಗೆ’ ರೂಪ ಧರಿಸಿದನು.
ಯಾಗ ಮುಗಿದ ಮೇಲೆ ತನ್ನ ರಹಸ್ಯ ಕಾಪಾಡಲು ಕಾರಣವಾದ ಕಾಗೆಗೆ ಯಮನು ಒಂದು ವರವನ್ನು ಕರುಣಿಸುತ್ತಾನೆ. ಕಾಗೆ ನಿನಗೆ “ಭೂಮಿಯಲ್ಲಿ ಯಾವುದೇ ವ್ಯಕ್ತಿ ಅನ್ನ ಹಾಕಿ ಅದನ್ನು ನೀನು ಸ್ವೀಕರಿಸಿದರೆ, ನನ್ನ ಲೋಕದಲ್ಲಿರುವ ಅನ್ನ ಕೊಟ್ಟ ವ್ಯಕ್ತಿಯ ಪಿತೃಗಳಿಗೆ ತೃಪ್ತಿ ಉಂಟಾಗಲಿ” ಎಂಬ ವರವನ್ನು ಕೊಟ್ಟನು.
ವೈದಿಕ ಮಾಡುವಾಗ ಪಿತೃ ರೂಪದಲ್ಲಿರುವ ಕಾಗೆಗಳಿಗೆ ಅನ್ನದ ಪಿಂಡ ಪ್ರಧಾನ ಮಾಡಿ ಅದನ್ನು ಕಾಗೆ ತಿಂದು ಆ ಮೂಲಕ ಪಿತೃಗಳಿಗೆ ಸೇರು ವಂತಾಯ್ತು. ಅಂದಿನಿಂದ ಕಾಗೆಯನ್ನು ಯಮನ ಸಂಕೇತವೆಂದು ಕರೆಯುತ್ತಾರೆ.

ಕಾಗೆಗಳು ಮನೆಯ ಸುತ್ತ ಸುತ್ತಾಡಿದರೆ ಅಥವಾ ಕಾಗೆಗಳನ್ನು ನೋಡಿ ದರೆ ಪಿತೃಗಳು ಎಂದು ಹೇಳುತ್ತಾರೆ. ಪಿತೃಪಕ್ಷದಲ್ಲಿ ಕಾಗೆಗಳಿಗೆ ಆಹಾರ ಕೊಡದಿದ್ದರೆ ಪಿತೃಗಳು ಕೋಪಿಸಿಕೊಳ್ಳುತ್ತಾರೆ.
ಇದರಿಂದ ಅನೇಕ ಸಮಸ್ಯೆಗಳನ್ನು ಬರುತ್ತವೆ ಎಂದು ಹೇಳುತ್ತಾರೆ. ಕಾಗೆ ಆಹಾರ ಸೇವಿಸಿದರೆ ಪಿತೃಗಳು ತೃಪ್ತಿಯಾಗುತ್ತಾರೆ, ಅವರು ಸಂತುಷ್ಟರಾದರೆ ಕುಟುಂಬದ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ ಎಂಬ ಮಾತಿದೆ. ಕಾಗೆಗಳ ವಿಶಿಷ್ಟ ಗುಣಗಳು ಎಂದರೆ ಇವು ಮನುಷ್ಯರು ವಾಸಿಸುವ ಜಾಗದಲ್ಲಿ ವಾಸಿಸುತ್ತವೆ. ಕಾಗೆಯ ಬಳಗ ಎಂಬಂತೆ, ಕಾಗೆಗಳು ಆಹಾರ ಸಿಕ್ಕರೆ ಬಳಗವನ್ನೆಲ್ಲ ಕೂಗಿ ಕರೆದು ಹಂಚಿ ತಿನ್ನುತ್ತವೆ. ಕೋಗಿಲೆಗೆ ‘ಪರಪುಟ್ಟ’ ಎನ್ನುತ್ತಾರೆ ಕಾರಣ ಕಾಗೆ ತನ್ನ ವೈರಿಯಾದ ಕೋಗಿಲೆಯ ಮರಿಗಳನ್ನು ಸಾಕಿ ಸಲಹುತ್ತದೆ.
ಕಾಗೆ ಶನಿವಾಹನ. ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲವನ್ನು ಶನಿ ನಿರ್ಣಯ ಮಾಡುತ್ತಾನೆ ಎಂಬ ಅಭಿಪ್ರಾಯವಿದೆ. ಇನ್ನೊಂದು ವಿಶೇಷ ಅಂದರೆ ಕಾಗೆ ಪುಟ್ಟ ಮಕ್ಕಳಿಗೆ ಹೆದರುವುದಿಲ್ಲ ಅವುಗಳ ಕೈಯಲ್ಲಿರುವ ತಿಂಡಿ ಕಿತ್ತುಕೊಂಡು ಹೋಗುತ್ತ ವೆ. ಏಕೆಂದರೆ ನಿಷ್ಕಲ್ಮಶ ಮನಸ್ಸುಳ್ಳ ಪುಟ್ಟ ಮಕ್ಕಳ ಕೈಯಲ್ಲಿರುವ ಆಹಾರ ಶ್ರೇಷ್ಠ ಎಂಬುದು ಅದಕ್ಕೆ ತಿಳಿದಿದೆ.
ಸಾಧಾರಣವಾಗಿ ಸೂರ್ಯಾಸ್ತದ ನಂತರ ಮನುಷ್ಯರು ಆಹಾರ ಸೇವಿಸು ವಂತಿಲ್ಲ. ಆದರೆ ಸೇವಿಸುತ್ತಾರೆ. ಆದರೆ ಕಾಗೆಗಳು ಸೂರ್ಯಾಸ್ತದ ನಂತರ ಆಹಾರ ಸೇವಿಸುವುದಿಲ್ಲ. ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕೂಗಿ ಕೂಗಿ ಕರೆದು ಎಲ್ಲರನ್ನು ಎಬ್ಬಿಸುವ ಏಕೈಕ ಪಕ್ಷಿ ಕಾಗೆ. ಪಿತೃ ಪಕ್ಷದಲ್ಲಿ ಇಡುವ ಅನ್ನವನ್ನು ಕಾಗೆಗಳು ತಿನ್ನಲು ಬರದೆ ಹೋದರೆ ಹಸು ಗಳಿಗೆ ಅಥವಾ ನಾಯಿಗಳಿಗೆ ಕಾಗೆಗಳ ಹೆಸರಿನಲ್ಲಿ ಕೊಡುತ್ತಾರೆ.
ಪಿತೃ ಗಳಿಗೆ ನೀಡುವ ಆಹಾರವನ್ನು ‘ಪಂಚಬಲಿ’ ಎಂದು ಕರೆಯುತ್ತಾರೆ. ಈ ಪಂಚ ಬಲಿಯನ್ನು ಪಿತೃಗಳ ಹೆಸರಿನಲ್ಲಿ ಕಾಗೆ- ಹಸು- ನಾಯಿ- ಇರುವೆ ಮತ್ತು ದೇವರಿಗೆ ಇಡಬೇಕು ಎಂಬ ಶಾಸ್ತ್ರಇದೆ. ಪಕ್ಷ ಮಾಸದಲ್ಲಿ ಶ್ರಾದ್ಧ ಕಾರ್ಯ, ತರ್ಪಣ, ಪಿಂಡ ಪ್ರದಾನ ಮುಂತಾದ ಕಾರ್ಯಗಳನ್ನು ಮಾಡು ವ ಮೂಲಕ ಕಾಗೆಗಳಿಗೆ ಆಹಾರ ಇಡುತ್ತಾರೆ. ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ವಿಚಾರಗಳು.
ಶ್ರಾದ್ಧ ದಲ್ಲಿ ಶ್ರದ್ಧೆ :- ಒಮ್ಮೆ ನರ್ಮದಾ ತೀರದಲ್ಲಿ ಬ್ರಾಹ್ಮಣರು ಯಜ್ಞ ವೇದಿಕೆಯಲ್ಲಿ ಕುಳಿತು ಶ್ರಾದ್ಧ ದ ವಿಧಿ ವಿಧಾನವನ್ನು ಆರಂಭಿಸಿದರು. ದೀಪದ ಬೆಳಕಿನಲ್ಲಿ ನದಿ ತೀರದ ನೀರಿನ ಕಲರವ, ಗಾಳಿಯಲ್ಲಿ ಹರಡಿದ ಹೋಮದ ಘಮ ಎಲ್ಲಾ ಕಡೆ ಹರಡಿತ್ತು. ಬ್ರಾಹ್ಮಣರೆಲ್ಲ ಬಹಳ ಸಂಭ್ರ ಮದಿಂದ ಕಾರ್ಯ ಮಾಡುತ್ತಿದ್ದರು. ಅನ್ನವನ್ನು ಸಿದ್ಧ ಮಾಡಿ ಪಿಂಡ ಇಟ್ಟರು.
ಆದರೆ ಒಂದೇ ಒಂದು ಕಾಗೆ ಬರಲಿಲ್ಲ. ಎಲ್ಲರ ಕಣ್ಣಿನಲ್ಲಿ ಗೊಂದಲ, ಮನಸ್ಸಿನಲ್ಲಿ ಆತಂಕ ಮೂಡಿತು. ಬಹಳ ಹೊತ್ತಾಯ್ತು ನಮ್ಮ ಪಿತೃಗಳು ತೃಪ್ತರಾಗಿಲ್ಲವೇ? ಎಂದು ಚಿಂತಿಸಿದರು. ಆಗ ಅಲ್ಲಿಗೆ ಬಂದ ಒಬ್ಬ ಋಷಿ ಹೇಳಿದರು ನೀವು ಮಾಡುತ್ತಿರುವ ಶ್ರಾದ್ಧದಲ್ಲಿ ವೈಭವಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದೀರಿ. ನೀವು ಶ್ರದ್ಧೆ ಹಾಗೂ ಭಕ್ತಿ ಯಿಂದ ಪ್ರಾರ್ಥನೆ ಮಾಡಿದರೆ ಮಾತ್ರ ಕಾಗೆಗಳು ಬಂದು ಸ್ವೀಕರಿಸುವ ವು. ಶ್ರಾದ್ಧ ಮಾಡುವುದು ಅಂದರೆ ಆಡಂಬರವಾಗಲಿ ಜನಗಳ ಹೊಗಳಿ ಕೆಗಾಗಿ ಅಲ್ಲ.
ಕಾಗೆ ಕೊಟ್ಟ ಕಿರುಕುಳ:- ಕಾಶಿ ಕ್ಷೇತ್ರದಲ್ಲಿ ಒಬ್ಬ ಗೃಹಸ್ಥ ಹಿರಿಯರ ಶ್ರಾದ್ಧ ಮಾಡದೆ ನಿತ್ಯದ ಕೆಲಸ ಮಾಡುವುದರಲ್ಲಿ ನಿರತನಾಗಿದ್ದ. ಒಂದು ದಿನ ಅವನ ಮನೆಯ ಮುಂದಿನ ಮಾಡಿನ ಮೇಲೆ ಒಂದು ಕಾಗೆ ಬಂದು ಕುಳಿತು ಎಡೆಬಿಡದೆ ಕಿರುಚ ತೊಡಗಿತು. ಎಷ್ಟು ಓಡಿಸಿದರೂ ಅದು ಮತ್ತೆ ಮತ್ತೆ ಬಂದು ಕಿರುಚುತ್ತಿತ್ತು. ಅವನ ಮನಸ್ಸಿನ ಶಾಂತಿ ಕದಡಿತು.
ಆ ಮನುಷ್ಯ ಕೋಪದಿಂದ ಕಾಗೆ ಮೇಲೆ ಕಲ್ಲು ಎಸೆದನು. ಕಲ್ಲು ತಾಕಿದ ಕಾಗೆ ದೂರ ಓಡಿ ಹೋಯಿತು. ಅದೇ ದಿನ ರಾತ್ರಿ ಅವನ ಕನಸಿನಲ್ಲಿ ಪಿತೃಗಳು ಪ್ರತ್ಯಕ್ಷರಾಗಿ, ನೀನು ನಮ್ಮನ್ನು ಮರೆತುಬಿಟ್ಟೆ ನಾವು ಕಾಗೆ ರೂಪದಲ್ಲಿ ನೆನಪಿಸಲು ಬಂದೆವು ಆದರೆ ಓಡಿಸಿ ಬಿಟ್ಟೆ ಎಂದರು.
ನಿದ್ದೆ ಯಿಂದ ಎದ್ದಾಗ ಅವನಿಗೆ ಆಶ್ಚರ್ಯದ ಜೊತೆ ಮಾಡಿದ ತಪ್ಪಿಯನ್ನು ಅರಿವಾಯಿತು. ಮತ್ತೆ ಅವನು ಕ್ರಮದಂತೆ ಶ್ರಾದ್ದ ಮಾಡಿ ಕಾಗೆಗೆ ಅನ್ನ ಅರ್ಪಿಸಿದಾಗ ಕಾಗ ಶಾಂತವಾಗಿ ಬಂದು ಅನ್ನ ಸ್ವೀಕರಿಸಿತು. ಒಮ್ಮೊಮ್ಮೆ ಕಾಗೆಗಳು ಕೊಡುವ ಕಿರುಕುಳು ಪಿತೃ ಕಾರ್ಯದ ಎಚ್ಚರಿಕೆ ಆಗಿರ ಬಹು ದು.
ಇನ್ನೊಮ್ಮೆ ಹೀಗೆ ಒಬ್ಬ ರಾಜ ಹಿರಿಯರ ಶ್ರಾದ್ಧ ಮಾಡಿ ಸಿದ್ಧಪಡಿಸಿದ ಅನ್ನವನ್ನು ಕಾಗೆಗಳಿಗೆ ಇಟ್ಟಾಗ ಅವು ಬಂದು ತಿಂದವು. ಹಾಗೆ ಹೋಗುತ್ತಿ ದ್ದ ಒಬ್ಬ ವ್ಯಕ್ತಿ ಏನು ಮೂಢನಂಬಿಕೆಯೋ, ಕಾಗೆಗಳು ಬಂದು ತಿಂದರೆ ಏನು ಪ್ರಯೋಜನ, ಇದರ ಬದಲು ಹಸಿದವನಿಗೆ ಅನ್ನ ಕೊಟ್ಟರೆ ಎಷ್ಟೊ ಪುಣ್ಯ ಬರುತ್ತದೆ ಎಂದನು.
ಅದಕ್ಕೆ ರಾಜ ಹೇಳಿದ, ನೀನು ಕಾಣುವ ‘ಕಾಗೆ’ ಸಾಮಾನ್ಯವಲ್ಲ ಅದು ಪಿತೃಗಳ ಪ್ರತಿನಿಧಿ. ನಮ್ಮ ಅಹಂಕಾರಕ್ಕೆ ಔಷದ ಮತ್ತು ಮರೆಯಾದ ಋಣಕ್ಕೆ ಸ್ಮರಣೆ ಈ ಕಾಗೆಯ ಮೂಲಕವೇ ಪಿತೃಗಳು ತಮ್ಮ ಆಶೀರ್ವಾದವನ್ನು ತಲುಪಿಸುತ್ತಾರೆ. ಹಿರಿಯರಿಗೆ ಸಲ್ಲಿಸುವ ಗೌರವವನ್ನು ಕಾಗೆ ಮೂಲಕ ಮೂಲಕ ತಲುಪಿಸುತ್ತೇವೆ ಇದನ್ನು ಕೃತಜ್ಞತೆಯ ಬಾಂಧವ್ಯ ಎನ್ನುತ್ತಾರೆ ಎಂಬ ರಾಜನ ಮಾತು ಎಲ್ಲರ ಮನಸ್ಸನ್ನು ಬದಲಾಯಿಸಿತು.
ಆನಂತರ ಎಷ್ಟು ಬದಲಾಯಿ ತೆಂದರೆ, ಕಾಗೆ ಬಂದು ಅನ್ನ ಸ್ವೀಕರಿಸುವುದು ಸಾಮಾನ್ಯ ವಿಷಯವಲ್ಲ. ಅದು ಪಿತೃಗಳ ಸಂಸ್ಕೃತಿ ಹಾಗೆ ಮಾಡುವುದು ನಮ್ಮ ಕರ್ತವ್ಯ ಸ್ಮರಣೆ ಹಾಗೂ ಪೂರ್ವಜರ ಆಶೀರ್ವಾದದ ಸಂಕೇತ. ಕಾಗೆಗಳನ್ನು ತೃಪ್ತಿ ಗೊಳಿಸುವುದು ಪಿತೃಗಳನ್ನು ನೆನೆಸುವ ನೈಜ ವಿಧಾನ.
ಕಾಗೆ ಕೇವಲ ಪಕ್ಷಿಯಲ್ಲ ಅದು ಪಿತೃಗಳೊಂದಿಗೆ ನಮ್ಮನ್ನು ಜೋಡಿಸುವ ಸೇತುವೆ. ಪಕ್ಷ ಮಾಸದಲ್ಲಿ ಕಾಗೆಯ ಬರುವಿಕೆ ಪಿತೃಗಳ ಸಂತೃಪ್ತಿ ಆಶೀರ್ವಾದ ಮತ್ತು ಬದುಕಿನಲ್ಲಿ ಶಾಂತಿ ಎಂಬ ನಂಬಿಕೆ ದೃಢವಾಯಿತು.
ಕಾಕರೂಪೇ ಪಿತೃಯೋಗಃ,
ಕಾಕದ್ವನ್ಯೇ ಪಿತೃ ಸ್ಮೃತಿ,
ಭಾವ ತೃಪ್ತ್ಯಾ ತೃಪ್ತಿರೇಷಾಂ
ಸುಖ ಶಾಂತಿ ಕುಲೇ ಭವೇತ್!!
ಕಾಗೆ ರೂಪದಲ್ಲಿ ಪಿತೃಗಳ ಸಂಪರ್ಕವಿದೆ. ಕಾಗೆಯ ಧ್ವನಿಯಲ್ಲಿ ಅವರ ಸ್ಮರಣೆ, ಶ್ರದ್ಧೆ ಹಾಗೂ ಭಾವದಿಂದ ಅರ್ಪಿಸಿದರೆ, ಪಿತೃಗಳು ತೃಪ್ತರಾಗಿ ಕುಟುಂಬಕ್ಕೆ ಶಾಂತಿ ಸುಖ ಕೊಡುತ್ತಾರೆ.





