ಪ್ರಮೋಟರ್ ಕಾರ್ಯನಿರ್ವಾಹಕ ಅಧ್ಯಕ್ಷರು, ಮೆಟ್ರೋ ಪೊಲೀಸ್
ಹೆಲ್ತ್ ಕೇರ್ ಫೈನಾನ್ಸ್ ನಲ್ಲಿ ಪದವಿ ಪಡೆದ ಅಮೀರಾ ಶಾಹ್ ವೈದ್ಯಕೀಯ ಉದ್ಯಮದಲ್ಲಿ ಮೆಟ್ರೋ ಪೊಲೀಸ್ ಹೆಲ್ತ್ ಕೇರ್ ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು.
ಅಮೀರಾ ಶಾಹ್ ಮೆಟ್ರೋ ಪೊಲೀಸ್ ಹೆಲ್ತ್ ಕೇರ್ ಲಿಮಿಟೆಡ್ ನ ಪ್ರವರ್ತಕರು ಹಾಗೂ ಕಾರ್ಯ ನಿರ್ವಾಹಕ ಅಧ್ಯಕ್ಷೆ. ಅಮೀರಾ ಮೆಟ್ರೋ ಪೊಲೀಸ್ ನ್ನು ಭಾರತ ಮತ್ತು ಆಫ್ರಿಕಾದಾದ್ಯಂತ ಎರಡನೇ ಅತಿದೊಡ್ಡ ರೋಗ ನಿರ್ಣಯ ಸರಪಳಿಯಾಗಿ ನಿರ್ಮಿಸಿದ್ದಾರೆ. ಮೆಟ್ರೋ ಪೊಲೀಸ್ ಡಯಾಗ್ನೋಸ್ಟಿಕ್ಸ್ ಇಂದು ಭಾರತದ 700ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಮೀರಾರ ಅಸಾಧಾರಣ ಕೌಶಲ್ಯ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ, ಅವರು 2021ರ ಹೆಲ್ತ್ ಕೇರ್ ನಲ್ಲಿ `ವರ್ಷದ ಉದ್ಯಮಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಪ್ರಶಸ್ತಿಯನ್ನು ಪಡೆದ ಕೇವಲ ಮೂವರು ಮಹಿಳೆಯರಲ್ಲಿ ಒಬ್ಬರು ಹಾಗೂ ಅತ್ಯಂತ ಕಿರಿಯರು ಎಂಬ ಹೆಗ್ಗಳಿಕೆ ಅಮೀರಾ ಶಾಹ್ ರಿಗೆ ಸಲ್ಲುತ್ತದೆ. ಅಲ್ಲದೆ ಅವರನ್ನು ಪೇರ್ಬ್ಸ್ ಏಷ್ಯಾ `ಏಷ್ಯಾದ ಶಕ್ತಿಶಾಲಿ ಉದ್ಯಮಿ’ ಎಂದು ಹೆಸರಿಸಿದೆ ಹಾಗೂ ಬಿಸ್ ನೆಸ್ ಟುಡೇ ಮತ್ತು ಫಾರ್ಚೂನ್ ಇಂಡಿಯಾ ವ್ಯವಹಾರದಲ್ಲಿ 50 ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಅಮೀರಾ ಶಾಹ್ ಒಬ್ಬರು ಎನ್ನಲಾಗಿದೆ.
ಅಮೀರಾ ಆಸ್ಟ್ರಿನ್ ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಫೈನಾನ್ಸ್ ಪದವೀಧರೆ ಹಾಗೂ ಹಾರ್ವರ್ಡ್ ಬಿಸ್ ನೆಸ್ ಸ್ಕೂಲ್ ನಲ್ಲಿ ಮಾಲೀಕ/ ಅಧ್ಯಕ್ಷ ನಿರ್ವಹಣಾ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿನಿ.
ಇಂದು ನಾವು ಅಮೀರಾರ ಶಿಕ್ಷಣ ಹಾಗೂ ವೃತ್ತಿ ಪಯಣದ ಬಗ್ಗೆ ಮಾತುಕತೆ ನಡೆಸೋಣ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಸ್ಛೂರ್ತಿ ದೊರೆಯುತ್ತದೆ ಎಂಬ ಆಶಯದೊಂದಿಗೆ ಅವರ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
ನಿಮ್ಮ ಕುಟುಂಬ ಹಾಗೂ ಶೈಕ್ಷಣಿಕ ವಿಷಯಗಳ ಬಗ್ಗೆ ತಿಳಿಸಬಹುದೇ?
ನನ್ನ ಬಾಲ್ಯ ಬಹಳ ಅದ್ಭುತವಾಗಿತ್ತು. ನನ್ನ ಪೋಷಕರಿಬ್ಬರೂ ವೈದ್ಯರು. ಅವರು ಶಿಕ್ಷಣ ಹಾಗೂ ಕಠಿಣ ಪರಿಶ್ರಮದ ಮೇಲೆ ಬಹಳ ನಂಬಿಕೆ ಇಟ್ಟರು. ಅವರು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೂ ಕೆಲಸ ಮಾಡುತ್ತಿದ್ದರು ಎಂಬುದನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ಅವರು ನನ್ನನ್ನು ಸಹ ಅದೇ ನೀತಿ ಹಾಗೂ ಮೌಲ್ಯಗಳೊಂದಿಗೆ ಬೆಳೆಸಿದರು.
ಬಾಲ್ಯದಿಂದಲೂ ನನಗೆ ಮೂರು ಮೌಲ್ಯಗಳನ್ನು ಕಲಿಸಲಾಯಿತು. ಅವೆಂದರೆ ಶಿಕ್ಷಣ, ಕಠಿಣ ಪರಿಶ್ರಮ ಹಾಗೂ ನಮ್ರತೆ. ಇದಲ್ಲದೆ ನನ್ನ ಪೋಷಕರು ಎಂದಿಗೂ ಹುಡುಗ ಮತ್ತು ಹುಡುಗಿಯರ ನಡುವೆ ವ್ಯತ್ಯಾಸವನ್ನು ತೋರಿಸಲಿಲ್ಲ. ಹುಡುಗರನ್ನು ಕೈಬಿಡಬೇಕು ಆದರೆ ಹುಡುಗಿಯರನ್ನು ರಕ್ಷಿಸಬೇಕು ಅಥವಾ ಹುಡುಗಿಯರು ಮದುವೆಯಾಗಿ ಹೋಗುತ್ತಾರೆ ಎಂದು ಹುಡುಗರಿಗೆ ಮಾತ್ರ ಹೆಚ್ಚಿನ ಶಿಕ್ಷಣ ನೀಡಬೇಕು ಎಂಬುದನ್ನು ಎಂದಿಗೂ ಒಪ್ಪುವುದಿಲ್ಲ ಎನ್ನುತ್ತಿದ್ದರು.
ಹುಡುಗರು ಹಾಗೂ ಹುಡುಗಿಯರು ಇಬ್ಬರೂ ಒಂದೇ ರೀತಿಯ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಅವರಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು ನಮ್ಮ ಕೆಲಸ ಎಂದು ಅವರು ಹೇಳುತ್ತಿದ್ದರು. ನಾನು 7-8 ದಿನಗಳ ಪಾದಯಾತ್ರೆಗೆ ಹೋಗುತ್ತಿದ್ದಾಗ, ನನ್ನ ಪೋಷಕರು ಎಂದಿಗೂ ನನ್ನನ್ನು, `ನೀನು ಹೇಗೆ ಹೋಗ್ತೀಯಾ? ನಿನಗೆ ಏನಾದರೂ ತೊಂದರೆಯಾಯಿತೆ? ನಿನಗೆ ರಕ್ಷಣೆ ಬೇಕೇ ಎಂದಾಗಲೀ ಅಥವಾ ಹುಡುಗರು ಸಹ ಬರುತ್ತಿದ್ದಾರೆ,” ಎಂದೂ ಸಹ ಎಂದಿಗೂ ಹೇಳಿಲ್ಲ ಎಂಬುದು ನನಗೆ ನೆನಪಿದೆ. ಅದಕ್ಕೆ ಬದಲಾಗಿ ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು ಹಾಗೂ ನನ್ನಲ್ಲಿ ಸಂಪೂರ್ಣ ನಂಬಿಕೆ ಇಟ್ಟರು.
ನಿಮ್ಮ ಶಾಲಾ ಶಿಕ್ಷಣವನ್ನು ಎಲ್ಲಿ ಪೂರೈಸಿದಿರಿ ಹಾಗೂ ಉನ್ನತ ಶಿಕ್ಷಣ ಪಡೆಯಲು ಯಾವಾಗ ನಿರ್ಧಾರ ತೆಗೆದುಕೊಂಡಿರಿ?
ನಾನು ಮುಂಬೈನ ಎಚ್.ಆರ್. ಕಾಲೇಜಿನಿಂದ ನನ್ನ 12ನೇ ತರಗತಿ ಹಾಗೂ ಕಾಮರ್ಸ್ ಪದವಿಯನ್ನು ಪೂರ್ಣಗೊಳಿಸಿದೆ. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಾದಲ್ಲಿ ಅರ್ಜಿ ಸಲ್ಲಿಸಿದೆ. ನನ್ನ ಸ್ವಂತ ಶ್ರಮದಿಂದ ನಾನು ಪ್ರವೇಶ ಪಡೆದೆ. ನನ್ನ ಪೋಷಕರು ನನ್ನ ಮೊದಲ ವರ್ಷದ ಶುಲ್ಕ ಪಾವತಿಸಿದರು. ನಂತರ ನನಗೆ ಅಲ್ಲಿ ವಿದ್ಯಾರ್ಥಿ ವೇತನ ಮತ್ತು ಕೆಲಸ ದೊರೆಯಿತು. ಇದು ನನಗೆ ಸ್ವಾವಲಂಬಿಯಾಗಲು ಹಾಗೂ ಮುಂದಿನ ಮೂರು ವರ್ಷಗಳ ಕಾಲ ನನ್ನ ಖರ್ಚುಗಳನ್ನು ನಾನೇ ಭರಿಸಲು ಅವಕಾಶ ಮಾಡಿಕೊಟ್ಟಿತು. ನನ್ನ ಹೆತ್ತವರ ಬಳಿ ನನ್ನ ಪೂರ್ಣ ಶುಲ್ಕ ಪಾವತಿಸಲು ಹಣವಿತ್ತು. ಆದರೆ ಸ್ವಾತಂತ್ರ್ಯದ ಭಾವನೆ ನನ್ನನ್ನು ನಾನು ನೋಡಿಕೊಳ್ಳಲು ಪ್ರೇರೇಪಿಸಿತು. ಯಾವುದೇ ಹುಡುಗಿಗೆ ಸ್ವತಂತ್ರ ಭಾವನೆ ಬಹಳ ಮುಖ್ಯ. ಏಕೆಂದರೆ ಹೆಣ್ಣುಮಕ್ಕಳಿಗೆ ಯಾವಾಗಲೂ ತಂದೆ ತಮ್ಮನ್ನು, ನಂತರ ಸಹೋದರ, ತದನಂತರ ಆಕೆ ಗಂಡ ನೋಡಿಕೊಳ್ಳುತ್ತಾನೆ ಎಂದು ಕಲಿಸಲಾಗುತ್ತದೆ. ಆದರೆ ನಮ್ಮ ಸ್ವಂತ ಕಾಲಿನ ಮೇಲೆ ಹೇಗೆ ನಿಲ್ಲಬೇಕೆಂದು ನಮಗೆ ಎಂದಿಗೂ ಕಲಿಸುವುದಿಲ್ಲ. ಆದರೆ ನಾವು ಸ್ವಾವಲಂಬಿಗಳಾಗಲು ಆತ್ಮವಿಶ್ವಾಸ ಪಡೆದಾಗ, ಅದು ನಾನು ನಂಬಲಾಗದಷ್ಟು ಸಹಾಯವಾಗಿರುತ್ತದೆ. ಜೀವನದಲ್ಲಿ ನಿಮಗೆ ಬೇರೆಯರ ಅಗತ್ಯವಿಲ್ಲ ಎಂದಲ್ಲ, ಆದರೆ ನಿಮಗೆ ಪ್ರೀತಿ ಹಾಗೂ ವಿಶ್ವಾಸ ಬೇಕು. ಆದ್ದರಿಂದ ಸ್ವತಂತ್ರರಾಗಿದ್ದದ್ದು ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಬಹಳ ಯಶಸ್ವಿಗೊಳಿಸಿತು.

ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಹೆಚ್ಚು ಗಮನಹರಿಸಬೇಕಾದ ವಿಷಯಗಳು ಯಾ ಪ್ರತಿಷ್ಠಿತ ಕಾಲೇಜಿಗಿಂತ ವಿದ್ಯಾರ್ಥಿ ತನ್ನ ವಿಷಯದ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ನನ್ನ ಹಿಂದಿನ ಜೀವನವನ್ನೇ ನಾನು ನೋಡಿಕೊಳ್ಳುವುದಾದರೆ, ನನ್ನ ಶಾಲೆಯಲ್ಲಿ ಯಾರು ಟಾಪರ್ ಗಳಾಗಿದ್ದರೋ ಅವರು ಜೀವನದಲ್ಲಿ ಅತ್ಯುತ್ತಮರೆಂದು ಕಂಡುಹಿಡಿಯಲು ನನಗೆ ಸಾಧ್ಯವಾಗುತ್ತದೆಯೇ? ಅದಕ್ಕೆ ಉತ್ತರ ಇಲ್ಲ. ಇಂದಿನ ಕಾಲೇಜು ಟಾಪರ್ ಗಳೂ ಉತ್ತಮರಲ್ಲ. ಏಕೆಂದರೆ ನಾವು ಶಾಲೆ ಮತ್ತು ಕಾಲೇಜಿನಿಂದ ಪಡೆಯುವ ಶಿಕ್ಷಣವೇ ಅಡಿಪಾಯ. ಆದರೆ, ನಮ್ಮ ಯಶಸ್ಸು ಇತರ ಹಲವು ಅಂಶಗಳಿಂದ ಬರುತ್ತದೆ. ನಮ್ಮ ಬುದ್ಧಿವಂತಿಕೆ, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕೌಶಲ್ಯಗಳು ಮುಖ್ಯವಾಗುತ್ತವೆ. ಹಾಗೆಯೇ ನಮ್ಮ ಮೌಲ್ಯಗಳು, ಪರಸ್ಪರ ಕೌಶಲ್ಯಗಳು, ತಂಡದ ನಿರ್ವಹಣೆ, ಜನರೊಂದಿಗೆ ಬೆರೆಯುವುದು, ಕುಟುಂಬದ ಸಂಬಂಧಗಳು ಬಹಳ ಮುಖ್ಯ. ಉದಾಹರಣೆಗೆ, ಯಾರಾದರೂ ತಮ್ಮ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಎಂಜಿನಿಯರ್ ಆಗಬಹುದು. ಆದರೆ ಎಂಜಿನಿಯರ್ ಮುಖ್ಯಸ್ಥರಾಗಲು ಅವರ ಶೈಕ್ಷಣಿಕ ಮತ್ತು ತಂಡದ ನಿರ್ವಹಣೆ ಅತ್ಯಗತ್ಯ. ಕೌಶಲ್ಯಗಳು, ಸಂಬಂಧಗಳು, ಬುದ್ಧಿವಂತಿಕೆ, ಶಿಸ್ತು ಕೂಡ ಅಗತ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಹಾಗೂ ವ್ಯಕ್ತಿತ್ವದ ಮೇಲೆ ಗಮನಹರಿಸಬೇಕು. ಜೀವನದ ಅನುಭವ ಪಡೆಯಬೇಕು. ಶೈಕ್ಷಣಿಕತೆಯನ್ನು ಬಲಪಡಿಸುವುದರ ಜೊತೆಗೆ ಕೌಶಲ್ಯ ಅಭ್ಯಾಸ ಮತ್ತು ಪರಸ್ಪರ ಕೌಶಲ್ಯಗಳಿಗೆ ಹೆಚ್ಚಿನ ಗಮನ ನೀಡಬೇಕು.
ಮ್ಯಾನೇಜ್ ಮೆಂಟ್ ಅಧ್ಯಯನದ ನಂತರ ವೃತ್ತಿಯನ್ನು ಆಯ್ಕೆ ಮಾಡುವಾಗ ಯಾವ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಅಥವಾ ಯಾವುದನ್ನು ಪರಿಗಣಿಸಬೇಕು?
ವೃತ್ತಿಜೀವನವನ್ನು ನಿರ್ಧರಿಸುವಾಗ ವಿದ್ಯಾರ್ಥಿಗಳು ತಮ್ಮ ಆಸೆಗಳ ಜೊತೆಗೆ ತಮ್ಮ ಸಾಮರ್ಥ್ಯಗಳನ್ನು ಪರಿಗಣಿಸಬೇಕು. ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ಎಂಜಿನಿಯರಿಂಗ್ ಮುಂದುವರಿಸಲು ಬಯಸಬಹುದು. ಆದರೆ ಮೊದಲು ನೀವು ಎಂಜಿನಿಯರಿಂಗ್ ಕೌಶಲ್ಯಗಳನ್ನು ಹೊಂದಿದ್ದೀರ ಎಂದು ಪರಿಗಣಿಸಿ. ಅಲ್ಲದೆ, ನೀವು ಆ ವೃತ್ತಿಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡಿಕೊಳ್ಳಿ. ನೀವು 50 ಅಥವಾ 60 ವರ್ಷಗಳ ಕಾಲ ಅದೇ ಕೆಲಸವನ್ನು ಮಾಡಿಲಿದ್ದರೆ, ನೀವು ಅದನ್ನು ಆನಂದಿಸಬೇಕು. ಇಲ್ಲದಿದ್ದರೆ, ಅದು ನಿಮಗೆ ಬೇಸರ ಎನಿಸಿಬಿಡುತ್ತದೆ. ಇದು ನಿಮ್ಮ ವೃತ್ತಿಜೀವನದಲ್ಲಿ ಪ್ರಮುಖ ಸವಾಲಾಗಿ ಪರಿಣಮಿಸಬಹುದು.
ಆದ್ದರಿಂದ ನಿಮಗೆ ಖುಷಿ ನೀಡುವಂಥ ವೃತ್ತಿಜೀವನವನ್ನು ಆರಿಸಿಕೊಳ್ಳಿ ಹಾಗೂ ಅದಕ್ಕೆ ನಿಮ್ಮ ಸಂಪೂರ್ಣ ಗಮನ ನೀಡಿ, ಕಠಿಣ ಪರಿಶ್ರಮ ಹಾಕಿ. ಎರಡನೇಯದಾಗಿ, ನೀವು ಕಾಲೇಜಿಗೆ ಹೋದಾಗ ನಿಮ್ಮನ್ನು ಶೈಕ್ಷಣಿಕ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಬೇಡಿ. ನಿಮ್ಮ ಇತರ ಕೌಶಲ್ಯಗಳ ಮೇಲೆ ಕೆಲಸ ಮಾಡಿ ಹಾಗೂ ಅನುಭವ ಪಡೆಯಿರಿ. ಸ್ನೇಹಿತರನ್ನು ಮಾಡಿಕೊಳ್ಳಿ, ಸಂಬಂಧಗಳನ್ನು ಬೆಳೆಸಿಕೊಳ್ಳಲು ಕಲಿಯಿರಿ. ಇತರರೊಂದಿಗೆ ಸಂವಹನ ನಡೆಸಿ. ಇಲ್ಲದಿದ್ದರೆ ನೀವು ಬಯಸುವ ಕೆಲಸವನ್ನು ಮಾಡಲು ಕಲಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶೈಕ್ಷಣಿಕ ವಿಷಯಗಳ ಜೊತೆ ಅನುಭವ ಹಾಗೂ ಸಾಮಾಜಿಕವಾಗಿ ಬೆರೆಯುವ ಗುಣಗಳನ್ನು ಕಲಿತುಕೊಳ್ಳಿ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ.
ಹೆಲ್ತ್ ಕೇರ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸುವ ಮತ್ತು ಉದ್ಯಮಿಯಾಗುವುದರ ಬಗ್ಗೆ ಮಾಹಿತಿ ತಿಳಿಸಬಹುದೇ?
ಮೆಟ್ರೋ ಪೊಲೀಸ್ ಮೊದಲು ಮೆಟ್ರೋ ಪೊಲೀಸ್ ಕೂಡ ಆಗಿರಲಿಲ್ಲ. ಅದು ಡಾ. ಸುಶೀಲ್ ಶಾಹ್ ಲ್ಯಾಬ್, ಅತ್ಯುತ್ತಮ ಗುಣಮಟ್ಟದ ಸೇವೆಗೆ ಖ್ಯಾತಿ ಹೊಂದಿದ್ದ ಲ್ಯಾಬ್ ಆಗಿತ್ತು. ಆದರೆ ನಾನು ಆ ಬಗ್ಗೆ ಯೋಚಿಸಿದೆ. ಎಲ್ಲಾ ರೋಗಿಗಳಿಗೆ ಪ್ರಯೋಜನವಾಗುವಂತೆ ಭಾರತದಾದ್ಯಂತ ಈ ಉತ್ತಮ ಕೆಲಸವನ್ನು ಯಾಕೆ ಮಾಡಬಾರದು? ಉತ್ತಮ ಗುಣಮಟ್ಟ ಸೇವೆಗಳೊಂದಿಗೆ ಲಾಭದಾಯಕ ವ್ಯವಹಾರವನ್ನು ನಾವು ಹೇಗೆ ಮಾಡಬಹುದು? ಎಂಬ ಪ್ರಶ್ನೆಯೂ ಮೂಡಿತು. ಇದಲ್ಲದೆ, ವೈದ್ಯರು ಹೊಂದಿರುವ ವೈದ್ಯಕೀಯ ಉದ್ಯಮದ ಜ್ಞಾನದ ಕೊರತೆ ನನಗಿತ್ತು. ಆದ್ದರಿಂದ, ಆರಂಭದಲ್ಲಿ ವೈದ್ಯರೊಂದಿಗೆ ಸಂಪರ್ಕ ಸಾಧಿಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಬಿಸ್ ನೆಸ್ ಮಾಡುವ ನನ್ನ ಪ್ರತಿಭೆ ಹಾಗೂ ಉತ್ಸಾಹವನ್ನು ಗಮನಿಸಿ ಅವರು ನನಗೆ ಸಾಕಷ್ಟು ಬೆಂಬಲ ನೀಡಿದರು. ಅದರ ನಂತರ, ನಾನು ಯೂನಿಟ್ ಎಕನಾಮಿಕ್ಸ್, ಗುಣಮಟ್ಟದ ನಿರ್ವಹಣಾ ತಂತ್ರಗಳು, ಬಿಸ್ ನೆಸ್ ಸ್ಕೂಲ್ ನಲ್ಲಿ ಕಲಿತ ವಿಷಯಗಳನ್ನು ಇಲ್ಲಿ ಅಳವಡಿಸಿಕೊಂಡೆ. ಅವರು ಮೆಟ್ರೋ ಪೊಲೀಸ್ ನ್ನು ನಿರ್ಮಿಸಲು ತಮ್ಮ ಸಮಯವನ್ನು ಮೀಸಲಿಟ್ಟರು ಹಾಗೂ ಖಾಸಗಿ ಅಭ್ಯಾಸವನ್ನು ಮೆಟ್ರೋ ಪೊಲೀಸ್ ಹೆಲ್ತ್ ಕೇರ್ ಎಂಬ ದೊಡ್ಡ ಸಂಸ್ಥೆಯಾಗಿ ಪರಿವರ್ತಿಸಿದರು.
ಒಬ್ಬ ಉದ್ಯಮಿಯ ಜರ್ನಿಯಲ್ಲಿ ಯಾವ ರೀತಿಯ ತೊಂದರೆ, ಅಡೆತಡೆಗಳು ಎದುರಾಗುತ್ತವೆ ಹಾಗೂ ಅವುಗಳನ್ನು ಎದುರಿಸಿ ಒಬ್ಬ ಯಶಸ್ವಿ ಉದ್ಯಮಿಯಾಗುವುದು ಹೇಗೆ?
ಮೊದಲನೆಯದಾಗಿ, ವೃತ್ತಿ ಮಾಡುವ ವ್ಯಕ್ತಿ ಹಾಗೂ ಉದ್ಯಮ ನಡೆಸುವ ವ್ಯಕ್ತಿಯ ನಡುವೆ ಅಗಾಧ ವ್ಯತ್ಯಾಸವಿರುತ್ತದೆ. ಉದ್ಯಮಿಗಳಿಗೆ ತಮಗೆ ಹಣ ಎಲ್ಲಿಂದ ಬರುತ್ತದೆ ಎಂದು ತಿಳಿದಿರುವುದಿಲ್ಲ. ಸ್ಥಿರವಾದ ಆದಾಯ ಇರುವುದಿಲ್ಲ ಹಾಗೂ ಅವರು ಅನೇಕ ಭಾವನಾತ್ಮಕ ಏರಿಳಿತಗಳನ್ನು ಎದುರಿಸುತ್ತಾರೆ. ನೂರು ಉದ್ಯಮಿಗಳು ಕೆಲಸ ಮಾಡಿದರೂ, ಅವರೆಲ್ಲರೂ ಯಶಸ್ವಿಯಾಗುವುದಿಲ್ಲ. ಇದು ತುಂಬಾ ಅಪಾಯಕಾರಿ. ಹೆಚ್ಚಿನ ಮಹಿಳಾ ಮತ್ತು ಪುರುಷ ಉದ್ಯಮಿಗಳ ನಡುವೆಯೂ ವ್ಯತ್ಯಾಸವಿದೆ. ಏಕಂದರೆ ಕೆಲವೇ ಕೆಲವು ಪುರುಷರು ಮೌನವಾಗಿ ಬೆಂಬಲ ನೀಡುತ್ತಾರೆ. ಪುರುಷರಿಗಿರುವ ನೆಟ್ ವರ್ಕ್ ವ್ಯವಸ್ಥೆ ಮಹಿಳೆಯರಿಗೆ ಇರುವುದಿಲ್ಲ. ಉದಾಹರಣೆಗೆ, ಒಬ್ಬ ಪುರುಷ ಉದ್ಯಮಿಯಾದಾಗ, ಎಲ್ಲರೂ ಅವನನ್ನು ಶಭಾಷ್ ಎಂದು ಹೊಗಳುತ್ತಾರೆ. `ಚೆನ್ನಾಗಿ ಮಾಡುತ್ತಿದ್ದೀಯ ಮಗನೇ, ನೀನು ಒಳ್ಳೆಯ ಕೆಲಸ ಮಾಡಿದ್ದೀಯ’ ಎಂದು ಬೆನ್ನು ತಟ್ಟುತ್ತಾರೆ. ಆದರೆ ಒಬ್ಬ ಮಹಿಳೆ ಉದ್ಯಮಕ್ಕೆ ಕಾಲಿಟ್ಟರೆ, `ನೀನು ಯಾಕೆ ನಿನ್ನ ಸಮಯ ವ್ಯರ್ಥ ಮಾಡುತ್ತಿದ್ದೀಯ? ಮದುವೆಯ ಬಗ್ಗೆ ಗಮನಹರಿಸು, ನಿನ್ನ ಮಕ್ಕಳ ಬಗ್ಗೆ ಯೋಚಿಸು,’ ಎಂದು ಹೇಳಲಾಗುತ್ತದೆ. ವೃತ್ತಿಯಲ್ಲಿಯೂ ಸಹ, ಅನೇಕ ಹಂತಗಳಲ್ಲಿ ಜನರು ನಿಮ್ಮನ್ನು ಸಮಾನವಾಗಿ ನಡೆಸಿಕೊಳ್ಳುವುದಿಲ್ಲ. ಆದ್ದರಿಂದ ಮಹಿಳೆ ಈ ತಾರತಮ್ಯವನ್ನು ದೌರ್ಬಲ್ಯವೆಂದು ಪರಿಗಣಿಸಬಾರದು.
`ನಾನು ಏಕೆ ಮಹಿಳೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ ಅಥವಾ ನಾನು ಪುರುಷನಾಗಿದ್ದರೆ ಇದನ್ನು ಮಾಡಲು ಸಾಧ್ಯವಾಗುತ್ತಿತ್ತು ಎಂದೂ ಸಹ ನಾನು ಎಂದಿಗೂ ಅಂದುಕೊಳ್ಳಲಿಲ್ಲ.’ ನಮ್ಮ ವಿರುದ್ಧ ತಾರತಮ್ಯ ಮಾಡುವವರು, ಅದು ಅವರ ಸಮಸ್ಯೆ ನನ್ನದಲ್ಲ. ನನ್ನದೇನಿದ್ದರೂ ನನ್ನ ಕೆಲಸದ ಮೇಲೆ ನನ್ನ ಗಮನ ಕೇಂದ್ರೀಕರಿಸುವುದಷ್ಟೇ. ಪ್ರತಿಯೊಬ್ಬ ಮಹಿಳೆಯೂ ಬದುಕಬೇಕು. ತನ್ನ ಕೆಲಸ ಮಾಡಬೇಕು ಹಾಗೂ ಮುನ್ನುಗ್ಗಬೇಕು. ಅವಳು ಹೊಂದಿರಬೇಕಾದ ಮನಸ್ಥಿತಿ ಇದು. ಆಗ ಮಾತ್ರ ಅವಳು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ.
ಇಂದಿನ ಕಾಲದಲ್ಲಿ ಹೊಸ ಸಂಶೋಧನೆಗಳು ಹಾಗೂ ತಂತ್ರಜ್ಞಾನದ ಬಗ್ಗೆ ನಿಮ್ಮನ್ನು ನೀವು ನವೀಕರಿಸಿಕೊಳ್ಳುವುದು ಅಥವಾ ಅಪ್ ಡೇಟ್ ಆಗುವುದು ಎಷ್ಟು ಮುಖ್ಯ?
ಈ ವೃತ್ತಿಯಲ್ಲಿ ನನಗೆ ಹೆಚ್ಚು ಇಷ್ಟವಾಗುವುದು ನಾನು ಕೊಡುವ ಸಮಯ ಹಾಗೂ ಉತ್ತಮ ಫಲಿತಾಂಶಗಳು. ನಾವು ಮಾಡುವ ಕೆಲಸ ಜೀವನ್ಮರಣದ ವಿಷಯವಾಗಿದೆ. ಇದು ಜನರ ಇಡೀ ಜೀವನದ ವಿಷಯವಾಗಿದೆ. ಇಂದು, ಮೆಟ್ರೋ ಪೊಲೀಸ್ ಡಿಎನ್‌ಎ ವಿಶ್ಲೇಷಣೆಯಂತಹ ಹೊಸ ಆಧುನಿಕ ಸಂಶೋಧನೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಧಾರಣೆ ನಮ್ಮ ನಿರಂತರ ಪ್ರಯತ್ನಗಳು. ನಮ್ಮ ವರದಿಗಳು ನಿಖರವಾದ ಫಲಿತಾಂಶಗಳನ್ನು ನೀಡುತ್ತಿವೆ. ವೈದ್ಯರು ಸರಿಯಾದ ಸಮಯದಲ್ಲಿ ರೋಗದ ನಿಜಾದ ಕಾರಣ ಕಂಡುಹಿಡಿಯಲು ಮತ್ತು ರೋಗಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತವೆ. ಜನರು ನಮ್ಮ ಬಳಿಗೆ ಬಂದು, `ನಿಮ್ಮ ಕಾರಣದಿಂದಾಗಿ, ನನ್ನ ತಾಯಿಯ ಕ್ಯಾನ್ಸರ್ ನ್ನು ಸಮಯಕ್ಕೆ ಸರಿಯಾಗಿ ಗುರುತಿಸಲಾಯಿತು ಮತ್ತು ನಾವು ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು,’ ಎಂದು ಹೇಳುತ್ತಾರೆ. `ಮಗುವಿಗೆ ಆಟಿಸಂ ಬರುವ ಹಂತದಲ್ಲಿತ್ತು. ನಾವು ಅವನನ್ನು ಸಮಯಕ್ಕೆ ಸರಿಯಾಗಿ ಉಳಿಸಿಕೊಂಡಿದ್ದೇವೆ,’ ಎಂದು ಕೇಳಿದಾಗ, ನಾವು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದ್ದೇವೆ ಎಂದು ತುಂಬಾ ಹೆಮ್ಮೆಯಾಗುತ್ತದೆ. ನಮಗೆ ಅತ್ಯಂತ ಮುಖ್ಯವಾದ ಜನರ ಕೃತಜ್ಞತೆಯನ್ನು ಸ್ವೀಕರಿಸುವುದು ವಿಶೇಷವಾಗಿ ಹೃದಯಸ್ಪರ್ಶಿಯಾಗಿರುತ್ತದೆ. ನಾವು ಎಷ್ಟೇ ಪ್ರಶಸ್ತಿಗಳನ್ನು ಪಡೆಯುತ್ತಿದ್ದರೂ, ಜನರು ನಮ್ಮನ್ನು ಅಭಿನಂದಿಸುವಾಗ ಹಾಗೂ ನಮ್ಮ ಕೆಲಸವನ್ನು ಮೆಚ್ಚಿದಾಗ ಆಗುವ ಸಂತೋಷ ಅಪ್ರತಿಮವಾಗಿರುತ್ತದೆ.
ಇಂದು ನಾವು ಮೆಟ್ರೋ ನಗರಗಳಲ್ಲಿ ಎಲ್ಲೆಡೆ ಇದ್ದೇವೆ. ಆದರೆ ನಾವಿನ್ನೂ ಗ್ರಾಮೀಣ ಭಾರತದ ಸಣ್ಣ ಊರುಗಳನ್ನು ತಲುಪಿಲ್ಲ. ಆದರೆ ನಿಖರವಾದ ರೋಗ ನಿರ್ಣಯ ಲಭ್ಯವಾಗುವಂತೆ ನಾವು ಶ್ರಮಿಸುವುದನ್ನು ಮುಂದುವರಿಸುತ್ತೇವೆ. ಏಕೆಂದರೆ ಇಂದಿಗೂ ವೈದ್ಯರಿಲ್ಲದ ಅನೇಕ ಕೇಂದ್ರಗಳಿವೆ ಅಥವಾ ವೈದ್ಯರಿರುವ ಕಡೆಗಳಲ್ಲಿಯೂ ಔಷಧಿಗಳ ಕೊರತೆ ಇದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರು ಕಾಯಿಲೆಯಿಂದ ವ್ಯಾಪಕವಾಗಿ ಬಳಲುತ್ತಿದ್ದಾರೆ. ಆದ್ದರಿಂದ ವೈದ್ಯರು ತಮ್ಮ ವರದಿಗಳ ಆಧಾರದ ಮೇಲೆ ಸರಿಯಾದ ಚಿಕಿತ್ಸೆ ಒದಗಿಸಲು ಸಾಧ್ಯವಾಗುವಂತೆ, ನಮ್ಮ ರೋಗ ನಿರ್ಣಯ ಸಾಧನಗಳಲ್ಲಿ ಇಡೀ ದೇಶಕ್ಕೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ.
ಮಹಿಳಾ ಸಬಲೀಕರಣಕ್ಕೆ ಉತ್ತಮ ಶಿಕ್ಷಣ ಎಷ್ಟು ಮುಖ್ಯ?
ಮಹಿಳಾ ಕಾಲೇಜುಗಳು, ಆಕ್ಸ್ ಫರ್ಡ್ ಮತ್ತು ಐಐಎಂಗಳು ಉನ್ನತ ಶಿಕ್ಷಣ ಪಡೆದಿವೆ. ಆದರೆ, ಅವು ಇಡೀ ಶಿಕ್ಷಣ ವ್ಯವಸ್ಥೆಯನ್ನು ಪ್ರತಿನಿಧಿಸುತ್ತವೆ ಎಂದು ನಾನು ಭಾವಿಸುವುದಿಲ್ಲ. ಅವು ಕೇವಲ ಒಂದು ಭಾಗವನ್ನು ಮಾತ್ರ ಪ್ರತಿನಿಧಿಸುತ್ತವೆ. ಶಿಕ್ಷಣ ಮಹಿಳಾ ಜಾಗೃತಿ ಮತ್ತು ಮಾನ್ಯತೆಯೊಂದಿಗೆ ಸಂಯೋಜಿಸಲ್ಪಟ್ಟಾಗ ಮಾತ್ರ ಅದು ನಿಜವಾಗಿಯೂ ಸರಿಯಾದ ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಸಮನಾಗಿರುತ್ತದೆ. ಈಗಲೂ ಸಹ ಹುಡುಗಿಯರನ್ನು, ಉತ್ತಮ ಸಂಬಳ ಪಡೆಯುವ ಪುರುಷರನ್ನು
ಮದುವೆಯಾಗಲು ಮಾತ್ರ ಗಣ್ಯ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ. ಅವರನ್ನು ಒತ್ತಾಯಪೂರ್ವಕವಾಗಿ ಮದುವೆ ಮಾಡಲಾಗುತ್ತದೆ. ಹಣ ಸಂಪಾದಿಸುವುದು ಗಂಡನ ಕೆಲಸ ಮತ್ತು ಅವರು ಮನೆಯಲ್ಲಿಯೇ ಇರಬೇಕು ಎಂದು ಅವರಿಗೆ ಹೇಳಲಾಗುತ್ತದೆ. ಇಲ್ಲದಿದ್ದರೆ, ಗಂಡಂದಿರು ಕೆಲಸ ಮಾಡದಿದ್ದರೆ, ಆಗ ಹುಡುಗಿಯರು ಶಿಕ್ಷಣವನ್ನು ಪಡೆಯದಿದ್ದರೆ, ಹೊರಗೆ ಕೆಲಸ ಮಾಡುವ ಮಾನ್ಯತೆ, ಅನುಭವ ಮತ್ತು ಅರಿವನ್ನು ಪಡೆಯದಿದ್ದರೆ, ಅವರು ಎಂದಿಗೂ ಸಂಪೂರ್ಣವಾಗಿ ಶಿಕ್ಷಣ ಪಡೆಯುವುದಿಲ್ಲ ಮತ್ತು ಸಬಲರಾಗುವುದಿಲ್ಲ.
ಲಿಂಗ ಸಮಾನತೆಯನ್ನು ನೀವು ಹೇಗೆ ನೋಡುತ್ತೀರಿ?
ಮೊದಲು ನಿಮ್ಮ ಮನಸ್ಸಿನಲ್ಲಿ ಸಮಾನತೆ ಇರಬೇಕು. ಗಳಿಸುವುದು ನನ್ನ ಗಂಡನ ಕೆಲಸ ಎಂದು ಹೇಳುವ ಅನೇಕ ಮಹಿಳೆಯರನ್ನು ನಾನು ನೋಡಿದ್ದೇನೆ. ಅವನು ಕೆಲಸ ಮಾಡಬೇಕು, ಅವನು ಹಣ ಸಂಪಾದನೆ ಮಾಡಬೇಕು ಹಾಗೂ ನಾನು ಅದನ್ನು ಮಾಡಬೇಕೆ ಅಥವಾ ಬೇಡವೇ? ಎಂಬುದು ನನ್ನ ಆಯ್ಕೆಯಾಗಿರುತ್ತದೆ. ಆದರೆ ಇದು ಏಕೆ ಹೀಗೆ? ಮೊದಲು ನೀವು ಸಾಂಪ್ರದಾಯಿಕ ಸಂಬಂಧದಲ್ಲಿದ್ದೀರಾ ಅಥವಾ ಆಧುನಿಕ ಸಂಬಂಧದಲ್ಲಿದ್ದೀರಾ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ಸಂಬಂಧದಲ್ಲಿ ನೀವು ಮನೆಯಲ್ಲಿಯೇ ಇರಲು ಬಯಸುತ್ತೀರಿ ಎಂದು ನೀವು ಹೇಳಬಹುದು. ಆದರೆ ಆಧುನಿಕ ಸಂಬಂಧದಲ್ಲಿ ನೀವಿಬ್ಬರೂ ಸಮಾನರು. ಇಬ್ಬರೂ ಕೆಲಸ ಮಾಡುತ್ತಿದ್ದರೆ ಮತ್ತು ಮನೆಯಲ್ಲಿ ಸಮಾನ ಜವಾಬ್ದಾರಿಯನ್ನು ಹಂಚಿಕೊಂಡರೆ ಸಲೀಸಾಗುತ್ತದೆ. ಆದ್ದರಿಂದ, ಹುಡುಗಿಯರು ಮೊದಲು ತಮ್ಮ ಮನಸ್ಸಿನಿಂದ ಲಿಂಗ ಸಮಾನತೆಯ ಅನ್ವೇಷಣೆಯನ್ನು ಪ್ರಾರಂಭಿಸಬೇಕು.
ವೃತ್ತಿ ಆಧಾರಿತ ಮಹಿಳೆಯರು ತಮ್ಮ ಕುಟುಂಬದೊಂದಿಗೆ ತಮ್ಮ ಕೆಲಸನ್ನು ನಿಭಾಯಿಸಬೇಕಾಗುತ್ತದೆ. ನೀವು ಅವರಿಗೆ ಯಾವ ರೀತಿಯ ಸಲಹೆ ನೀಡಲು ಬಯಸುತ್ತೀರಿ?
ಭಾರತದಾದ್ಯಂತ, ಕೇವಲ ಶೇ.18ರಷ್ಟು ಮಹಿಳೆಯರು ಮಾತ್ರ ಸಂಘಟಿತ ಕಾರ್ಯಪಡೆಯಲಿದ್ದಾರೆ. ಆದರೆ ತರಕಾರಿ, ಹಾಲು ಅಥವಾ ಕೃಷಿ ಮಾರಾಟ ಮಾಡುವ ಮಹಿಳೆಯರನ್ನು ನೀವು ನೋಡಿದರೆ, ಶೇ.60 ರಷ್ಟು ಮಹಿಳೆಯರು ಕಾರ್ಯಪಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶೇ.60-70ರಷ್ಟು ಮಹಿಳೆಯರು ಉದ್ಯೋಗದಲ್ಲಿದ್ದಾರೆ. ಗ್ರಾಮೀಣ ಭಾರತದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಏಕೆಂದರೆ ಅವರು ಹೊಲಗಳಲ್ಲಿ ಕೆಲಸ ಮಾಡುತ್ತಿರಬಹುದು, ಸಣ್ಣ ಅಂಗಡಿಗಳನ್ನು ನಡೆಸುತ್ತಿರಬಹುದು ಅಥವಾ ಏನನ್ನಾದರೂ ಮಾರಾಟ ಮಾಡುತ್ತಿರಬಹುದು. ಹಳ್ಳಿಗಳಲ್ಲಿ ಅವರು ಎಲ್ಲಾ ಕೆಲಸಗಳನ್ನೂ ನಿಭಾಯಿಸುತ್ತಾರೆ. ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಅಡುಗೆ ಕೆಲಸ ಮಾಡುತ್ತಾರೆ. ಆದರೆ ಇಲ್ಲಿ ಮೆಟ್ರೋ ನಗರಗಳಲ್ಲಿ ಮಹಿಳೆಯರು ವಿಪರೀತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗೆ ನಾನು ಮದುವೆಯಾಗುತ್ತಿದ್ದೇನೆ, ಆದ್ದರಿಂದ ನಾನು ಕೆಲಸ ಬಿಡುತ್ತೇನೆ. ಆದರೆ ಏಕೆ? ಏಕೆಂದರೆ, ನನ್ನ ಅತ್ತೆ ಮಾವಂದಿರ ಜೊತೆಯಲ್ಲಿ ನಾನು ಮನೆಯಲ್ಲಿ ಇರಬೇಕಾಗುತ್ತದೆ. ನಾನು ಮನೆಯಲ್ಲಿಯೇ ಸಮಯ ಕಳೆಯಬೇಕಾಗುತ್ತದೆ ಎಂಬ ಸಮಜಾಯಿಷಿ ನೀಡುತ್ತಾರೆ. ಆದ್ದರಿಂದ ನಾನು ಅವರಿಗೆ ಹೇಳುತ್ತೇನೆ. ನೀವು ಕೆಲಸ ಬಿಡಬೇಡಿ. ನೀವು ಸ್ವಲ್ಪ ಕೆಲಸ ಮಾಡುತ್ತಲೇ ಇರಿ. ನೀವು ಮಕ್ಕಳನ್ನು ಹೊಂದಲು ಬಯಸಿದರೆ ಅಥವಾ ಮಕ್ಕಳಿಗೆ ಸಮಯ ನೀಡಲು ಬಯಸಿದರೆ, ನೀವು ಅರೆಕಾಲಿಕ ಕೆಲಸ ಮಾಡುತ್ತಿರಿ. ಈಗ ನೀವು 6 ತಿಂಗಳ ಹೆರಿಗೆ ರಜೆ ತೆಗೆದುಕೊಳುತ್ತೀರಿ. ಅದರ ನಂತರ ನೀವು ಪೂರ್ಣ ಸಮಯ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅರೆಕಾಲಿಕ ಕೆಲಸ ಮಾಡಿ. ನೀವು ಸ್ವಲ್ಪವಾದರೂ ನಿಮಗಾಗಿ ಸಮಯ ಮೀಸಲಿಡಿ ಅಥವಾ ಮನೆಯಿಂದಲೇ ಫುಲ್ ಟೈಮ್ ಕೆಲಸವನ್ನೂ ಮಾಡಬಹುದು. ಹೀಗೆ ಯೋಜನೆಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸುವ ಮೂಲಕ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು.
ಕ್ವಿಕ್ ಇಂಟ್ರೊ ಜನ್ಮ
ಸ್ಥಳ : ಮುಂಬೈ
ಶಿಕ್ಷಣ : ಮುಂಬೈನ ಎಚ್.ಆರ್. ಕಾಲೇಜು, ಟೆಕ್ಸಾಸ್ ವಿ.ವಿ.ಯಿಂದ ಪದವಿ, ಯುಎಸ್‌ಎ, ಆನರ್ ಶಿಪ್ ಪ್ರೋಗ್ರಾಂ, ಹಾರ್ವರ್ಡ್ ಬಿಸ್ ನೆಸ್ ಸ್ಕೂಲ್, ಯು.ಕೆ.
ವೃತ್ತಿ : ಮೆಟ್ರೋ ಪೊಲೀಸ್ ಪ್ರವರ್ತಕರು ಹಾಗೂ ಕಾರ್ಯ ನಿರ್ವಾಹಕ ಅಧ್ಯಕ್ಷರು.
ಲರ್ನಿಂಗ್ : ದೊಡ್ಡ ಹೆಸರು ಹೊಂದಿರುವ ಕಾಲೇಜುಗಳ ರೇಸ್ ಗಳಲ್ಲಿ ಸಿಲುಕಿಕೊಳ್ಳಬಾರದು. ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಕೌಶಲ್ಯ ಮತ್ತು ಶಿಸ್ತಿನ ಮೇಲೆ ಕೇಂದ್ರೀಕರಿಸುವ ಮೂಲಕ ಯಾವುದೇ ಉತ್ತಮ ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಬಹುದು.
ದೀರ್ಘಾವಧಿಯ ಆರ್ಥಿಕ ಏರಿಳಿತಗಳನ್ನು ಸಹಿಸಿಕೊಳ್ಳಲು ನೀವು ಸಿದ್ಧರಿದ್ದರೆ ಮಾತ್ರ ನಿಮ್ಮ ಹೊಸ ಸ್ಟಾರ್ಟ್ ಅಪ್ ನ್ನು ಪ್ರಯತ್ನಿಸಿ. ಮೊದಲು ಉತ್ತಮ ಉದ್ಯೋಗ ಪಡೆಯುವ ಮೂಲಕ ನಿಮ್ಮನ್ನು ಸ್ಥಿರಗೊಳಿಸಿಕೊಳ್ಳಿ.
ಶೈಕ್ಷಣಿಕ ಅಂಕಗಳನ್ನು ಸುಧಾರಿಸುವ ಬದಲು ಕೌಶಲ್ಯಗಳನ್ನು ಸುಧಾರಿಸುವ ಮತ್ತು ಮಾನ್ಯತೆ ಪಡೆಯುವ ಕೆಲಸ ಮಾಡಿ.
ಲೈವ್ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವುದು, ನೆಟ್ ವರ್ಕ್ ಗಳನ್ನು ನಿರ್ಮಿಸುವುದು ಮತ್ತು ಸಾರ್ವಜನಿಕವಾಗಿ ಮಾತನಾಡುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಟೆಕ್ಸಾಸ್ ವಿ.ವಿ.ಯಿಂದ ಫೈನಾನ್ಸ್ ಪದವಿ ಪಡೆದಾಗ





