ಬಿಹಾರದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಪೊಲೀಸ್ ಸೇವೆಯಲ್ಲಿ ಮುನ್ನಡೆಯಲು, ಶಿಸ್ತು ಕಾಯ್ದುಕೊಳ್ಳುವುದು ಅತ್ಯಗತ್ಯ. ನಿಮ್ಮ ಕೆಲಸಕ್ಕೆ ಸದಾ ಬೆಲೆ ಕೊಡಿ….
ಐಪಿಎಸ್ ಅಧಿಕಾರಿ ಮಂಜರಿ ಜಾರೂಹಾರ್ ರವರ ಜೀವನ ಎಂತಹವರಿಗಾದರೂ ಸ್ಛೂರ್ತಿ ನೀಡಬಲ್ಲದು. ಮೂಲತಃ ಬಿಹಾರದವರಾದ ಮಂಜರಿ ಜಾರೂಹಾರ್ ಮದುವೆಯ ನಂತರ ತಮ್ಮ ಅತ್ತೆಮನೆಯಲ್ಲಿ ಬಹಳಷ್ಟು ನೋವುಗಳನ್ನು ಅನುಭವಿಸಬೇಕಾಯಿತು. ಅದೆಲ್ಲದರ ಹೊರತಾಗಿಯೂ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಬಿಹಾರದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ದೇಶದ ಐದನೇ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು.
ನೀವು ಪಾಟ್ನಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಆನರ್ಸ್ ಪಡೆದಿದ್ದೀರಿ. ನಿಮ್ಮ ಶಿಕ್ಷಣ ನೀವು ಐಪಿಎಸ್ ಅಧಿಕಾರಿಯಾಗಲು ಹೇಗೆ ಸಹಾಯ ಮಾಡಿತು?
ನೀವು ಏನು ಓದುತ್ತೀರಿ ಎಂಬುದು UPSC ಯಂತಹ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ನೀವು ಹೇಗೆ ಕಾರ್ಯ ನಿರ್ವಹಿಸುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ.
ನಾನು UPSCಗೆ ತಯಾರಿ ನಡೆಸಲು ಪ್ರಾರಂಭಿಸಿದಾಗ, ನನಗೆ ಏನು ಓದಬೇಕು ಅಥವಾ ಯಾವುದರ ಮೇಲೆ ಗಮನಹರಿಸಬೇಕು ಎಂಬುದು ತಿಳಿದಿರಲಿಲ್ಲ. ಪರೀಕ್ಷೆಗೆ ಒಂದು ರೂಪುರೇಷೆ ಇರುತ್ತದೆ. ಅದಕ್ಕಾಗಿ, ನಾನು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ನನ್ನ ಕುಟುಂಬದ ಜನರಿಂದ ಸಹಾಯವನ್ನು ಕೋರಿದೆ. ಆ ಸಮಯದಲ್ಲಿ ದೆಹಲಿಯ ಕರೋಲ್ ಬಾಗ್ ನಲ್ಲಿರುವ ರಾವ್ ಸ್ಟಡಿ ಸರ್ಕಲ್ ನ ರಾವ್ ಸಾಹೇಬ್ ರಿಂದ ನನಗೆ ಸಾಕಷ್ಟು ಬೆಂಬಲ ದೊರಕಿತು. ಅವರು ಪಠ್ಯಕ್ರಮದ ಹೊರತಾಗಿಯೂ ಅಧ್ಯಯನ ಮಾಡುವ ಸಲಹೆಗಳನ್ನು ಹೇಗೆ ನೀಡಿದ್ದರೋ, ನಾನು ಅದನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದೆ. ಆ ಸಮಯದಲ್ಲಿ, UPSCಗೆ ತಯಾರಿ ನಡೆಸುವಾಗ, ನಾನು ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಆನರ್ಸ್ ನಲ್ಲಿ ಪದವಿಯನ್ನು ಸಹ ಪೂರ್ಣಗೊಳಿಸಿದೆ. ನನ್ನ ಕಾಲೇಜು ಪಠ್ಯಕ್ರಮ ಮತ್ತು UPSC ಇಂಗ್ಲಿಷ್ ಪಠ್ಯಕ್ರಮ ಬಹುತೇಕ ಒಂದೇ ಆಗಿರುವುದರಿಂದ ಇದು ನನಗೆ ತುಂಬಾ ಸಹಾಯಕವಾಯಿತು.
UPSC ನಂತಹ ಕಠಿಣ ಪರೀಕ್ಷೆಗೆ ತಯಾರಿ ನಡೆಸುವಾಗ ಎದುರಾಗು ದೊಡ್ಡ ಸವಾಲು ಯಾ ಇದು ತುಂಬಾ ಕಷ್ಟಕರವಾದ ಪರೀಕ್ಷೆ. ನನ್ನ ಕುಟುಂಬ ಸದಾ ನನ್ನ ಬೆಂಬಲಕ್ಕೆ ನಿಂತಿತು. ನಾನು ಮನಸ್ಸಿಟ್ಟು ಓದಲು ಬಹಳ ಪ್ರೋತ್ಸಾಹ ನೀಡಿದರು. ಈ ಬಗ್ಗೆ ನನಗೆ ಬಹಳ ಖುಷಿ ಇದೆ. ನಾನು ದೃಢ ಸಂಕಲ್ಪ ಹೊಂದಿದ್ದ ಬಗ್ಗೆ ನನಗೆ ಸಂತೋಷವಿದೆ. ನನ್ನ ನಿರ್ಧಾರದ ಬಗ್ಗೆ ನನಗೆ ಎಂದಿಗೂ ಸಂದೇಹವಿರಲಿಲ್ಲ. ನಾನು ಅಂತಹ ಸವಾಲಿನ ಪರೀಕ್ಷೆಗೆ ತಯಾರಿ ನಡೆಸಲು ಏಕೆ ಪ್ರಾರಂಭಿಸಿದೆ ಎಂದು ನನಗೆ ಎಂದಿಗೂ ಅನ್ನಿಸಲಿಲ್ಲ. ಹೌದು, ಅದು ಕಠಿಣ ಮತ್ತು ಬಹಳಷ್ಟು ಕಠಿಣ! ತುಂಬಾ ಪರಿಶ್ರಮದ ಅಗತ್ಯವಿದೆ ಎಂದು ನನಗೆ ತಿಳಿದಿತ್ತು. ಅದನ್ನು ನಾನು ಮಾಡಿದೆ.
ನಾನು ದಿನಕ್ಕೆ 16 ಗಂಟೆಗಳ ಕಾಲ ಅಧ್ಯಯನ ಮಾಡಿದೆ. ಈ ಪರೀಕ್ಷೆಗೆ ಅಥವಾ ಜೀವನದ ಯಾವುದೇ ಪರೀಕ್ಷೆಗೆ ಶಿಸ್ತು ಬಹಳ ಮುಖ್ಯ. ಬಾಲ್ಯದಿಂದಲೇ ನನ್ನನ್ನು ಬಹಳ ಶಿಸ್ತಿನಿಂದ ಬೆಳೆಸಲಾಗಿತ್ತು. ನಾವು ಮೂವರು ಸಹೋದರಿಯರಿದ್ದು, ನಮಗೆ ನಮ್ಮ ದೈನಂದಿನ ದಿನಚರಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ಕಲಿಸಲಾಗಿತ್ತು. ಈ ಪಾಠವನ್ನು ಮನೆಯಲ್ಲಿಯೇ ನಮ್ಮಲ್ಲಿ ಬೆಳೆಸಲಾಯಿತು ಮತ್ತು ಅದು ನನಗೆ ಬಹಳ ಸಹಾಯಕವಾಯಿತು ಎಂದು ಸಾಬೀತಾಗಿದೆ.

ನಿಮ್ಮ ಅನುಭವದಲ್ಲಿ, ಪೊಲೀಸ್ ಸೇವೆಯಲ್ಲಿ ಮುಂದುವರಿಯಲು ಯಾವ ರೀತಿಯ ವ್ಯಕ್ತಿತ್ವ ಬಹಳ ಮುಖ್ಯವಾಗಿರುತ್ತದೆ?
ಪೊಲೀಸ್ ಸೇವೆಯಲ್ಲಿ ಮುಂದುವರಿಯಲು ನೀವು ಶಿಸ್ತನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಕೆಲಸಕ್ಕೆ ಬೆಲೆ ಕೊಡಿ. ನಿಮಗೆ ವಹಿಸಲಾದ ಕೆಲಸಗಳನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಪೂರ್ಣಗೊಳಿಸಿ. UPSCಯಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ದೃಢಸಂಕಲ್ಪ ಬಹಳ ಮುಖ್ಯ. ಅದರೊಂದಿಗೆ, ಮಾನಸಿಕ ಆತ್ಮವಿಶ್ವಾಸ ಅಗತ್ಯ. ಆಗಾಗ್ಗೆ ನೀವು ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ.
ನೀವು ಮೈದಾನದಲ್ಲಿದ್ದೀರಿ. ಸಾವಿರಾರು ಜನರು ನಿಮ್ಮನ್ನು ಸುತ್ತುವರಿದಿರುತ್ತಾರೆ. ನೀವೊಬ್ಬ ನಾಯಕನಂತೆ ನಡೆದುಕೊಳ್ಳಬೇಕಾಗುತ್ತದೆ. ನಿಮ್ಮೊಂದಿಗೆ ಬರುವ ಪೊಲೀಸ್ ಪಡೆ ನೀವು ತೆಗೆದುಕೊಳ್ಳುವ ಮುಂದಿನ ನಿರ್ಧಾರದ ನಡೆಯನ್ನು ಕಾಯುತ್ತಿರುತ್ತದೆ. ನೀವು ತತ್ ಕ್ಷಣವೇ ಸರಿಯಾದ ಕ್ರಮ ಕೈಗೊಳ್ಳಬೇಕು. ಅದೇ ಸಮಯದಲ್ಲಿ ನಿಮ್ಮ ಹಿರಿಯ ಮತ್ತು ಕಿರಿಯರನ್ನು ಆ ನಿರ್ಧಾರಕ್ಕೆ ಮಾರ್ಗದರ್ಶನ ಮಾಡಬೇಕು. ಅಂತಹ ಸಮಯದಲ್ಲಿ ನಿಮ್ಮ ಮಾನಸಿಕ ಶಕ್ತಿಯನ್ನು ತೀವ್ರವಾಗಿ ಪರೀಕ್ಷಿಸಲಾಗುತ್ತದೆ. ಆದ್ದರಿಂದ ನೀವು ಖಂಡಿತವಾಗಿಯೂ ಅದರ ಮೇಲೆ ಕೆಲಸ ಮಾಡಬೇಕಾಗುತ್ತದೆ.
ನಿಮ್ಮ ಪ್ರಕಾರ, ಅಧ್ಯಯನದ ಹೊರತಾಗಿ, ಐಪಿಎಸ್ ಆಗಲು ಯಾವ ಅಭ್ಯಾಸಗಳು ಅವಶ್ಯಕ?
ಹಿಂದಿನದಕ್ಕೆ ಹೋಲಿಸಿದರೆ ಪಠ್ಯಕ್ರಮ ಗಮನಾರ್ಹವಾಗಿ ಬದಾಗಿದೆ. UPSC ಸಾಮಾನ್ಯ ಅಧ್ಯಯನ ವಿಷಯ ಇನ್ನು ಮುಂದೆ ಒಂದೇ ಪುಸ್ತಕಕ್ಕೆ ಸೀಮಿತವಾಗಿಲ್ಲ. ಬದಲಾಗಿ ಗಣನೀಯವಾಗಿ ವಿಸ್ತರಿಸಿದೆ. ಆದ್ದರಿಂದ, ನಿಮ್ಮನ್ನು ನೀವು ನವೀಕರಿಸಿಕೊಳ್ಳುವುದು ಬಹಳ ಮುಖ್ಯ. ಪತ್ರಿಕೆಗಳನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಅದನ್ನೂ ಮೀರಿ ನೀವು ಒಂದು ವಿಷಯವನ್ನು ಪ್ರತ್ಯೇಕವಾಗಿ ಆರಿಸಿಕೊಂಡು ಅದರ ಮೇಲೆ ಮುಂಚಿತವಾಗಿ ಗಮನಹರಿಸಬೇಕು. ನಾನು ಈ ಹಿಂದೆ ಸಮಾಜ ವಿಜ್ಞಾನವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿದ್ದೆ. ಆದರೆ ರಾವ್ ಸಾಹಿಬ್ ನನಗೆ ಇತಿಹಾಸವನ್ನು ಅಧ್ಯಯನ ಮಾಡಲು ಸಲಹೆ ನೀಡಿದ್ದರು. ಆದ್ದರಿಂದ ಅದಕ್ಕೆ ನನ್ನನ್ನು ನಾನು ತಯಾರಿ ಮಾಡಿಕೊಂಡೆ.
ಐಪಿಎಸ್ ಆಗಲು ಬಯಸುವ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳಲ್ಲಿ ಯಾವ ವಿಷಯಗಳಿಗೆ ಗಮನ ಕೊಡಬೇಕು?
ಈಗ ಕಾಲ ಬದಲಾಗಿದೆ. ಹಿಂದೆ ನೀವು ಭವಿಷ್ಯದಲ್ಲಿ ಏನಾಗಬೇಕೆಂದು ನಿರ್ಧರಿಸುವುದು ಕಾಲೇಜು ದಿನಗಳಲ್ಲಿಯೇ ಆಗುತ್ತಿತ್ತು. ಆದರೆ ಈಗ, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ತಮ್ಮ ಭವಿಷ್ಯದ ವೃತ್ತಿಜೀವನವನ್ನು ನಿರ್ಧರಿಸುತ್ತಾರೆ ಮತ್ತು ಇದು ಅತ್ಯಗತ್ಯ. ಹಿಂದಿನದಕ್ಕೆ ಹೋಲಿಸಿದರೆ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಾಗಿದೆ. ಆದ್ದರಿಂದ, ನೀವು ಅಧ್ಯಯನ ಮಾಡುವಾಗಲೇ ನಿಮ್ಮ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ನಿಮ್ಮ ವೃತ್ತಿಜೀವನಕ್ಕೆ ಪ್ರಯೋಜನಕಾರಿಯಾದ ಇತರೆ ಯಾವುದೇ ಕೌಶಲ್ಯವನ್ನು ಕಲಿಯಬೇಕು.
ವೃತ್ತಿಜೀವನದಲ್ಲಿ ನಿಮ್ಮ ನಿರ್ಧಾರವನ್ನು ನೀವು ಪ್ರಶ್ನಿಸಿದ ಸಮಯ ಇತ್ತೇ?
ನನ್ನ ಕಾಲದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯಾಗುವುದು ಒಂದು ಸವಾಲಾಗಿತ್ತು. ಜನರು ನಿಮ್ಮನ್ನು ಮತ್ತು ನಿಮ್ಮ ನಿರ್ಧಾರಗಳನ್ನು ಗೌರವಿಸುತ್ತಿರಲಿಲ್ಲ. ಆದರೆ ನಾನು ಯಾವಾಗಲೂ ನನ್ನ ಕೆಲಸದಲ್ಲಿ ಪ್ರಾಮಾಣಿಕವಾಗಿರುತ್ತೇನೆ. ಇದು ನನಗೆ ತುಂಬಾ ಸಹಾಯಕವಾಯಿತು. ಐಪಿಎಸ್ ಪ್ರೊಬೇಷನರ್ ಗಳಾಗಿ, ನಮಗೆ ಜಿಲ್ಲಾ ಮಟ್ಟದ ತರಬೇತಿ ನೀಡಲಾಯಿತು. ಆದರೆ ಬೊಕಾರೊ ಸ್ಟೀಲ್ ಸಿಟಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಸಿಐಎಸ್‌ಎಫ್ ಮತ್ತು ಸಿಆರ್‌ಪಿಎಫ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುನ ಅನಕಾಶ ನನಗೆ ಸಿಕ್ಕಿತು. ಹೆಚ್ಚುನರಿಯಾಗಿ, ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಪ್ರೊಬೇಷನರ್ ಗಳಿಗೆ ತರಬೇತಿ ನೀಡುವ ಅವಕಾಶ ನನಗೆ ದೊರಕಿತ್ತು.
ಐಪಿಎಸ್ ಆಗುವ ಕನಸು ಕಾಣುತ್ತಿರುವ ಯುವ ಜನಾಂಗ ತಮ್ಮನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು?
ಖಂಡಿತ. ಇಂದು ಕೆಲಸ ಮಾಡು ರೀತಿ ಬದಲಾಗುತ್ತಿದೆ. ಆದ್ದರಿಂದ ನೀವು ತಂತ್ರಜ್ಞಾನದಲ್ಲಿ ಹಿಂದುಳಿಯದಿರುವುದು ಬಹಳ ಮುಖ್ಯ. ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನವೀಕೃತವಾಗಿರುವುದರ ಜೊತೆಗೆ, ತಾಂತ್ರಿಕವಾಗಿ ನಿಮ್ಮನ್ನು ನವೀಕೃತವಾಗಿರಿಸಿಕೊಳ್ಳಿ. ಯಾವಾಗಲೂ ಹೊಸದನ್ನು ಕಲಿಯಲು ಸಿದ್ಧರಾಗಿರಿ. ತಂತ್ರಜ್ಞಾನವನ್ನು ಹೇಗೆ ಮತ್ತು ಯಾವಾಗ ಬಳಸಬೇಕೆಂದು ನೀವು ತಿಳಿದಿರಬೇಕು.
ನಿವೃತ್ತಿಯ ನಂತರ ನೀವು ಟಿಸಿಎಫ್, ಎಫ್‌ಐಸಿಸಿಐ ಮತ್ತು ಇತರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದೀರಾ?
ನಾನು ಯಾವಾಗಲೂ ನನ್ನನ್ನು ಕಾರ್ಯನಿರತವಾಗಿರಿಸಿಕೊಳ್ಳಲು ಮತ್ತು ಸಮಾಜದೊಂದಿಗೆ ಸಂಪರ್ಕದಲ್ಲಿರಲು ಇಷ್ಟಪಡುತ್ತೇನೆ. ಅದಕ್ಕಾಗಿಯೇ ನಾನು ನಿವೃತ್ತಿಯ ನಂತರ ಕೆಲಸ ಮಾಡಲಾರದ ವ್ಯಕ್ತಿ ಎಂದು ನನ್ನನ್ನು ಪರಿಗಣಿಸಲಿಲ್ಲ. ನಾನು ಸಾಧ್ಯವಾದಷ್ಟೂ ಜನರಿಗೆ ಸ್ಛೂರ್ತಿ ನೀಡಲು ಪ್ರಯತ್ನಿಸುತ್ತೇನೆ. ಹಿಂದೆ, ನನ್ನನ್ನು ಕಾಲೇಜಿಗೆ, ವಿಶೇಷವಾಗಿ ಹುಡುಗಿಯರ ಕಾಲೇಜಿಗೆ ಉಪನ್ಯಾಸ ನೀಡಲು ಆಹ್ವಾನಿಸಿದಾಗೆಲ್ಲಾ, ಹುಡುಗಿಯರು ಸ್ಛೂರ್ತಿ ಪಡೆಯಲಿ ಎಂಬ ಕಾರಣಕ್ಕೆ ನಾನು ನನ್ನ ಸಮವಸ್ತ್ರವನ್ನು ಧರಿಸಿಕೊಂಡು ಹೋಗುತ್ತಿದ್ದೆ. ಯಶಸ್ಸು ಸಾಧಿಸಲು ಏನು ಮಾಡಬೇಕೆಂಬುದನ್ನು ತಿಳಿಸಿಕೊಡುತ್ತಿದ್ದೆ.
ಇಂದಿನ ಯುವತಿಯರಿಗೆ ನೀವು ನೀಡುವ ಅತ್ಯಂತ ಪ್ರಾಮಾಣಿಕ ಸಲಹೆ ಏನು?
ಇಂದಿನ ಯುವತಿಯರಿಗೆ ನಾನು ಹೇಳುವುದೇನೆಂದರೆ, ಕಷ್ಟಪಟ್ಟು ಕೆಲಸ ಮಾಡಿ. ಶಿಸ್ತನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಿ. ಸಮಾಜದಲ್ಲಿ ಒಟ್ಟಿಗೆ ಬದುಕಿ ಮತ್ತು ನೀವು ಮಾಡುವ ಯಾವುದೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ.





